ಹೈಕೋರ್ಟ್‌ ಮಹತ್ವದ ಆದೇಶ: ಪತಿಗೆ ಕೆಲಸವಿಲ್ಲದಿದ್ದರೂ ವಿಚ್ಛೇದಿತ ಪತ್ನಿಗೆ ಜೀವನಾಂಶ ಕೊಡಲೇಬೇಕು!

By Sathish Kumar KH  |  First Published Nov 11, 2023, 8:22 PM IST

ಜೀವನ ಮಾಡಲು ಇಷ್ಟವಿಲ್ಲವೆಂದು ವಿಚ್ಛೇದನ ನೀಡಿದ ಪತಿಯು ತನಗೆ ದುಡಿಮೆ ಇಲ್ಲವೆಂದ ಕಾರಣಕ್ಕೆ ವಿಚ್ಚೇದಿತ ಪತ್ನಿಗೆ ಜೀವನಾಂಶ ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್‌ ತಿಳಿಸಿದೆ. 


ಬೆಂಗಳೂರು (ನ.11): ತನಗೆ ಪತ್ನಿಯೊಂದಿಗೆ ಜೀವನ ಮಾಡಲು ಇಷ್ಟವಿಲ್ಲವೆಂದು ವಿಚ್ಛೇದನ ನಿಡಿದ ಪತಿಯು ತನಗೆ ದುಡಿಮೆ ಇಲ್ಲ ಎಂಬ ಕಾರಣಕ್ಕೆ ವಿಚ್ಚೇದಿತ ಪತ್ನಿಗೆ ಜೀವನಾಂಶ ಕೊಡುವುದನ್ನು ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್‌ ತಿಳಿಸಿದೆ. 

ಕರ್ನಾಟಕ ಹೈಕೋರ್ಟ್ ನಿಂದ ಕುಟುಂಬ ನಿರ್ವಹಣೆ ಹಾಗೂ ದಾಂಪತ್ಯಕ್ಕೆ ಕುರಿತಂತೆ ಮಹತ್ವದ ಆದೇಶವನ್ನು ಹೊರಡಿಸಲಾಗಿದೆ. ಜೀವನ ಪೂರ್ತಿ ಒಟ್ಟಿಗೆ ಬಾಳ್ವೆ ಮಾಡುವುದಾಗಿ ಮದುವೆಯಾಗಿ ಈಗ ಪತ್ನಿಯೊಂದಿಗೆ ಜೀವನ ಮಾಡಲು ಸಾಧ್ಯವಿಲ್ಲವೆಂದು ವಿಚ್ಛೇದನ ಪಡೆಯುವ ಪತಿರಾಯ, ತನಗೆ ದುಡಿಮೆಯಿಲ್ಲವೆಂದು ಅಥವಾ ಕೆಲಸವಿಲ್ಲವೆಂದು ಜೀವನಾಂಶ ಕೊಡುವುದನ್ನು ನಿರಾಕರಣೆ ಮಾಡುವಂತಿಲ್ಲ. ಹೀಗಾಗಿ, ವಿಚ್ಛೇದಿತ ಪತ್ನಿಗೆ ನೀವು ಹೇಗಾದರೂ ಮಾಡಿ ಜೀವನಾಂಶವನ್ನು ಕೊಡಲೇಬೇಕು ಎಂದು ನ್ಯಾಯಾಲಯ ತಿಳಿಸಿದೆ.

Tap to resize

Latest Videos

ಬೆಂಗಳೂರಲ್ಲಿ ವಾಸಿಸಲು ಯೋಗ್ಯ ಏರಿಯಾ ಯಾವುದು? ಬಹುಜನರ ಆಯ್ಕೆ ಇಲ್ಲಿದೆ ನೋಡಿ..!

ನ್ಯಾಯಾಲಯದಲ್ಲಿ ನಡೆದಿದ್ದೇನು? 
ಕಳೆದ 2020ರಲ್ಲಿ ವಿವಾಹ ಆಗಿದ್ದ ದಂಪತಿಯ ದಾಂಪತ್ಯ ಕೆಲವೇ ತಿಂಗಳಲ್ಲಿ ಮುರಿದುಬಿದ್ದಿತ್ತು. ಇದರಿಂದಾಗಿ ಪರಸ್ಪರ ಒಪ್ಫಿಗೆ ಮೇರೆಗೆ ದಂಪತಿ ವಿಚ್ಛೇದನ ಪಡೆದಿದ್ದರು. ಈ ವೇಳೆ ಕುಟುಂಬ ನ್ಯಾಯಾಲಯದಲ್ಲಿ ದಂಪತಿ ಪರಸ್ಪರ ಒಪ್ಪಿದ್ದರಿಂದ ವಿಚ್ಚೇದನವನ್ನು ಊರ್ಜಿತ ಮಾಡಿತ್ತು. ಜೊತೆಗೆ, ಗೃಹಿಣಿಯಾಗಿದ್ದ ಪತ್ನಿಗೆ ಜೀವನ ನಿರ್ವಹಣೆಗೆ ಮಾಸಿಕ 10 ಸಾವಿರ ರೂಪಾಯಿ ಜೀವನಾಂಶ ನೀಡಬೇಕು ಎಂದು ಆದೇಶ ಹೊರಡಿಸಿತ್ತು. ಇದಾದ ನಂತರ ಕೆಲವು ತಿಂಗಳ ಕಾಲ ಜೀವನಾಂಶ ನೀಡಿದ್ದ ಪತಿರಾಯ ನಂತರ ತಾನು ಕೆಲಸಕ್ಕೆ ಹೋಗುವುದನ್ನು ಬಿಟ್ಟು ಮನೆಯಲ್ಲಿದ್ದನು. 

ನಂತರ, ತನಗೆ ಕೆಲಸವಿಲ್ಲದ ಕಾರಣ ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡುವುದರಿಂದ ವಿನಾಯಿತಿ ನೀಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಕುರಿತು ಕುಟುಂಬ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಪತಿರಾಯ ಮೇಲ್ಮನವಿ ಸಲ್ಲಿಕೆ ಮಾಡಿದ್ದರು. ಈ ಪ್ರಕರಣವನ್ನು ವಿಚಾರಣೆ ಮಾಡಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ದುಡಿಮೆಗೆ ಸದೃಢನಾಗಿದ್ದ ವ್ಯಕ್ತಿ ವಿಚ್ಛೇದಿತ ಒತ್ನಿಗೆ ಜೀವನಾಂಶ ನೀಡಲೇಬೇಕು. ಹೀಗಾಗಿ, ಕೆಲಸ ಇಲ್ಲ ಎಂಬ ಕಾರಣಕ್ಕೆ ಜೀವನಾಂಶ ವಿನಾಯ್ತಿ ನೀಡಬೇಕು ಎಂದು ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ವಜಾಗೊಳಿಸಿದ್ದಾರೆ. 

ಬೆಂಗಳೂರಿನ ರಸ್ತೆಗೆ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಹೆಸರು ನಾಮಕರಣ: ಎಲ್ಲಿದೆ ಗೊತ್ತಾ ಈ ರಸ್ತೆ?

ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘನೆ ಮಾಡೊಲ್ಲ: ಪರಸ್ಪರ ವಿಚ್ಛೇದನ ಪಡೆದ ದಂಪತಿಯಲ್ಲಿ ಪತಿರಾಯ ದುಡಿಮೆಗೆ ಅರ್ಹನಾಗಿದ್ದರೂ ಬೇಕಂತಲೇ ಕೆಲಸಕ್ಕೆ ಹೋಗದೇ ಮನೆಯಲ್ಲಿದ್ದು, ವಿಚ್ಛೇದಿತ ಪತ್ನಿಗೆ ಜೀವನಾಂಶ ಕೊಡುವುದರಿಂದ ಮುಕ್ತಿ ಪಡೆಯಲು ಮುಂದಾಗುತ್ತಾರೆ. ಆದರೆ ಇದು ನ್ಯಾಯಸಮ್ಮತವಲ್ಲ. ಆದ್ದರಿಂದ ಕೆಲಸ ಇಲ್ಲದ‌ ಕಾರಣ ಜೀನಾಂಶ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ. ಒಂದು ವೇಳೆ ಜೀವನಾಂಶ ನೀಡಲು ವಿನಾಯಿತಿ ನೀಡಿದರೆ ಸುಪ್ರೀಂ ಕೋರ್ಟ್‌ನ ಆದೇಶ ಉಲ್ಲಂಘನೆ ಮಾಡಿದಂತೆ ಆಗುತ್ತದೆ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

click me!