ಅಮೇರಿಕದಲ್ಲಿರೋ ಮಾಧುರಿ ದೀಕ್ಷಿತ್ ಮಗನಿಗೆ ಮಸಾಲೆ ಡಬ್ಬ ಕಳಿಸಿದ್ರಂತೆ!

By Suvarna NewsFirst Published Nov 11, 2023, 5:52 PM IST
Highlights

ಹೊಟೇಲ್ ತಿಂಡಿ ಎಷ್ಟೇ ರುಚಿಯಾಗಿದ್ರೂ ಒಂದೆರಡು ದಿನ ಅದನ್ನು ತಿನ್ಬಹುದು. ಪ್ರತಿ ದಿನ ಸೇವನೆ ಮಾಡಿದ್ರೆ ಆರೋಗ್ಯ ಹಾಳಾಗುತ್ತೆ. ಖರ್ಚು ಕೂಡ ಹೆಚ್ಚು. ಇದನ್ನು ನಟಿ ಮಾಧುರಿ ದೀಕ್ಷಿತ್ ಚೆನ್ನಾಗಿ ತಿಳಿದಂತಿದೆ. 
 

ಅಮ್ಮನ ಮನಸ್ಸು ಸದಾ ಮಕ್ಕಳ ಬಗ್ಗೆ ಆಲೋಚನೆ ಮಾಡ್ತಿರುತ್ತದೆ. ಮಗ ಬೆಳೆದು ದೊಡ್ಡವನಾಗಿ ಅವನಿಗೆ ಮಕ್ಕಳಾದ್ರೂ ಪಾಲಕರು ತಮ್ಮ ಮಗನನ್ನು ಇನ್ನೂ ಚಿಕ್ಕವನಂತೆ ನೋಡ್ತಾರೆ. ಇದಕ್ಕೆ ಸೆಲೆಬ್ರಿಟಿ ಮಕ್ಕಳು ಹೊರತಾಗಿಲ್ಲ. ಕೆಲಸದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಮಕ್ಕಳ ಬಗ್ಗೆ ಸೆಲೆಬ್ರಿಟಿಗಳು ಹೆಚ್ಚಿನ ಕಾಳಜಿವಹಿಸುತ್ತಾರೆ. ಮಕ್ಕಳ ಆರೋಗ್ಯ, ಅವರ ಆಹಾರದ ಬಗ್ಗೆ ಸಾಕಷ್ಟು ಗಮನ ಹರಿಸ್ತಾರೆ. ಕೆಲವರು ಮೇಡ್ ಇಟ್ಟು ಮಕ್ಕಳಿಗೆ ಆಹಾರದ ವ್ಯವಸ್ಥೆ ಮಾಡಿದ್ರೆ ಇನ್ನು ಕೆಲವರು ಮಕ್ಕಳಿಗೆ ಅಡುಗೆ ಮಾಡೋದನ್ನು ಕಲಿಸ್ತಾರೆ. ಮಕ್ಕಳಿಗೆ ಅಡುಗೆ ಮಾಡೋದು ಕಲಿಸಿ, ಅವರ ಆಹಾರ ಮತ್ತು ಆರೋಗ್ಯ ಎರಡರ ಬಗ್ಗೆಯೂ ಹೆಚ್ಚು ಗಮನ ಹರಿಸುವ ಸೆಲೆಬ್ರಿಟಿ ಜೋಡಿಯಲ್ಲಿ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಹಾಗೂ ಅವರ ಪತಿ ಡಾಕ್ಟರ್ ಶ್ರೀರಾಮ್ ನೆನೆ ಸೇರಿದ್ದಾರೆ.

ಮಾಧುರಿ ದೀಕ್ಷಿತ್ (Madhuri Dixit) ಬರೀ ನಟನೆಗೆ ಮಾತ್ರವಲ್ಲ, ಒಳ್ಳೆ ಅಮ್ಮ ಎನ್ನಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಗ ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ಮಗನಿಗೆ ಅಗತ್ಯವಿರುವ ಅಡುಗೆ ಕಲಿಸಿದ್ದಾರೆ. ಮಾಧುರಿ ದೀಕ್ಷಿತ್ ಅವರ ಹಿರಿಯ ಮಗ ಅರಿನ್ (Arin) ಸುಮಾರು ಎರಡು ವರ್ಷಗಳಿಂದ ಯುಎಸ್‌ನಲ್ಲಿ ಓದುತ್ತಿದ್ದಾನೆ. ಯುಎಸ್‌ನ ಲಾಸ್ ಏಂಜಲೀಸ್‌ನಲ್ಲಿರುವ ದಕ್ಷಿಣ ಕ್ಯಾಲಿಫೋರ್ನಿಯಾ (California) ವಿಶ್ವವಿದ್ಯಾಲಯದಲ್ಲಿ ಅರಿನ್ ಓದುತ್ತಿದ್ದಾನೆ. ಮಗ ದೂರದಲ್ಲಿದ್ರೂ ಮಾಧುರಿ ದೀಕ್ಷಿತ್ ಹಾಗೂ ಶ್ರೀರಾಮ್ ನೆನೆ ಮಗನ ಬಗ್ಗೆ ಹೆಚ್ಚಿನ ಕಾಳಜಿವಹಿಸುತ್ತಾರೆ.   ಅರಿನ್ ತಂದೆ ಹಾಗೂ ಮಾಧುರಿ ದೀಕ್ಷಿತ್ ಪತಿ ಡಾ. ಶ್ರೀರಾಮ್ ನೆನೆ ಯುಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ಅರಿನ್ ತನ್ನ ತಂದೆ ಯೂಟ್ಯೂಬ್ ಚಾನೆಲ್‌ನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಾರೆ. ನೆನೆ ಅಲ್ಲಿಯೇ ತನ್ನ ಮಗನಿಗೆ ಅಡುಗೆ ಮಾಡೋದನ್ನು ಕಲಿಸುತ್ತಾರೆ. ಅರಿನ್ ಅಡುಗೆ ಮಾಡ್ತಿರುವ ಮೂರ್ನಾಲ್ಕು ವಿಡಿಯೋಗಳನ್ನು ನೀವು ಅವರ ಯುಟ್ಯೂಬ್ ಚಾನೆಲ್ ನಲ್ಲಿ ನೋಡ್ಬಹುದು. ಅದ್ರಲ್ಲಿ ಮಸಾಲಾ ಓಡ್ಸ್, ಖಿಚಡಿ ಸೇರಿದಂತೆ ಅನೇಕ ಖಾದ್ಯಗಳನ್ನು ನೆನೆ ಮಗನಿಗೆ ಕಲಿಸಿದ್ದಾರೆ. ಅರಿನ್ ಗೆ ಮಸಾಲೆ ಡಬ್ಬವನ್ನು ಮಾಧುರಿ ಹಾಗೂ ನೆನೆ ಕಳುಹಿಸಿಕೊಟ್ಟಿದ್ದಾರೆ.  

ಮೈಸೂರಲ್ಲಿ ಶಿಲ್ಪಾ ಶೆಟ್ಟಿ ವೆರೈಟಿ ವೆರೈಟಿ ಮೈಸೂರ್ ಪಾಕ್​ ಸವಿತಿದ್ರೆ ನೋಡೋರ ಬಾಯಲ್ಲಿ ನೀರೋ ನೀರು!

ಮಕ್ಕಳಿಗೆ ಪಾಲಕರು ಏನೇನು ಕಲಿಸ್ಬೇಕು? : 
ಈಗಿನ ದಿನಗಳಲ್ಲಿ ಮಕ್ಕಳು ಬರೀ ಓದು, ಹೆಚ್ಚಿನ ಅಂಕಕ್ಕೆ ತಮ್ಮ ಗಮನ ಹರಿಸುತ್ತಾರೆ. ಪಾಲಕರು ಕೂಡ ಮಕ್ಕಳು ಹೆಚ್ಚಿನ ಅಂಕ ಪಡೆಯಲಿ ಎನ್ನುವ ಕಾರಣಕ್ಕೆ ಸದಾ ಅವರಿಗೆ ಓದುವ ಒತ್ತಡ ಹಾಕ್ತಾರೆ. ಹಾಗಾಗಿ ಅನೇಕ ಮಕ್ಕಳಿಗೆ ಮನೆಯಿಂದ ಹೊರಗೆ ಹೋಗಿ ಚಾಕೋಲೇಟ್ ಖರೀದಿ ಕೂಡ ಬರೋದಿಲ್ಲ. 

ಈಗಿನ ಸ್ಪರ್ಧಾಯುಗದಲ್ಲಿ ಮಕ್ಕಳಿಗೆ ಓದಿನ ಜೊತೆ ನಿತ್ಯದ ಕೆಲಸವನ್ನು ಕಲಿಸುವುದು ಬಹಳ ಮುಖ್ಯ. ಮಕ್ಕಳು ಅಧ್ಯಯನ ಅಥವಾ ಕೆಲಸಕ್ಕಾಗಿ ಮನೆಯಿಂದ ಹೊರಗೆ ಹೋದಾಗ ಅವರು ಆಹಾರದ ವಿಷ್ಯದಲ್ಲಿ ಬಹಳ ತೊಂದರೆ ಅನೂಭವಿಸುತ್ತಾರೆ. ಅದೇ ಪಾಲಕರು ಮಕ್ಕಳಿಗೆ ಅಡುಗೆ ಕಲಿಸಿದ್ರೆ ಹೆಚ್ಚಿನ ಸಮಸ್ಯೆ ಆಗೋದಿಲ್ಲ. ಮಕ್ಕಳು ಓದು ಅಥವಾ ಕೆಲಸದ ಜೊತೆ ಅಡುಗೆ ತಯಾರಿಸಿ ತಿನ್ನುತ್ತಾರೆ. ಇದು ಅವರ ಆರೋಗ್ಯವನ್ನೂ ಹಾಳು ಮಾಡೋದಿಲ್ಲ. ಹೊಟೇಲ್ ಗೆ ನೀಡುವ ಹಣ ಕೂಡ ಉಳಿಯುತ್ತದೆ. ಮಕ್ಕಳಿಗೆ ದೊಡ್ಡ ದೊಡ್ಡ ಅಡುಗೆ ಕಲಿಸ್ಬೇಕಾಗಿಲ್ಲ. ಅವರು ಸುಲಭವಾಗಿ ಮಾಡಬಹುದಾದ ಮತ್ತು ಬೇಗನ ತಯಾರಾಗುವ ಅಡುಗೆ ಕಲಿಸಿದ್ರೆ ಸಾಕು. 

ಪತ್ನಿ ಗರ್ಭಿಣಿಯಿದ್ದಾಗ ನಟಿಯ ಜೊತೆ ಸಂಬಂಧ ಬೆಳೆಸಿದ್ದ ಸಂಜಯ್​ ಖಾನ್​! ಪತ್ನಿಯ ಶಾಕಿಂಗ್​ ಹೇಳಿಕೆ ವೈರಲ್

ಇದಲ್ಲದೆ ಪಾಲಕರು, ಮನೆಯ ನಿತ್ಯದ ಕ್ಲೀನಿಂಗ್ ಕೆಲಸವನ್ನು ಕಲಿಸಬೇಕು. ಬಟ್ಟೆ ಹಾಗೂ ಸಣ್ಣ ಪಾತ್ರೆ ಕ್ಲೀನಿಂಗ್ ಕೂಡ ಮಕ್ಕಳಿಗೆ ಕಲಿಸಬೇಕಾಗುತ್ತದೆ. ಮನೆಯಿಂದ ಹೊರಗಿರುವ ಮಕ್ಕಳು ಹಣವನ್ನು ಬೇಕಾಬಿಟ್ಟಿ ಖಾಲಿ ಮಾಡ್ತಾರೆ. ಹಾಗಾಗಿ ಪಾಲಕರು, ಮಕ್ಕಳು ಚಿಕ್ಕವರಿರುವಾಗ್ಲೇ ಹಣದ ಮಹತ್ವ, ಹಣದ ಉಳಿತಾಯದಿಂದ ಆಗುವ ಲಾಭವನ್ನು ಮಕ್ಕಳಿಗೆ ತಿಳಿಸಿದ್ರೆ ಅವರು ಮುಂದೆ ಸಮಸ್ಯೆ ಎದುರಿಸೋದಿಲ್ಲ.  

click me!