Kalaburagi: ಮಂಚಕ್ಕೆ ಕರೆದ ಅಕ್ಕನ ಗಂಡನನ್ನು ಮರ್ಡರ್ ಮಾಡಿಸಿದ ಕಿರಾತಕಿ ನಾದಿನಿ

By Sathish Kumar KH  |  First Published Jan 10, 2024, 3:05 PM IST

ಮನೆಯಲ್ಲಿ ಮುದ್ದಾದ ಹೆಂಡತಿಯಿದ್ದರೂ, ನಾದಿನಿಯನ್ನು ಮಂಚಕ್ಕೆ ಕರೆಯುತ್ತಿದ್ದ ಭಾವನನ್ನೇ ಕೊಲೆಗೈದು ಸೇಡು ತೀರಿಸಿಕೊಂಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.


ಕಲಬುರಗಿ (ಜ.10): ಮನೆಯಲ್ಲಿ ಮುದ್ದಾದ ಹೆಂಡತಿ ಇದ್ದರೂ ಈತನಿಗೆ ಹೆಂಡತಿಯ ಮದುವೆಯಾಗದ ತಂಗಿ (ನಾದಿನಿ) ಮೇಲೆ ಕಣ್ಣು ಬಿದ್ದಿತ್ತು. ತನ್ನ ಹೆಂಡತಿ ಮನೆಯಿಂದ ಹೊರಗೆ ಹೋದಾಗ ಪ್ರತಿನಿತ್ಯ ನಾದಿನಿಯನ್ನು ಮಂಚಕ್ಕೆ ಕರೆಯುತ್ತಿದ್ದನು. ಆದರೆ, ಮದುವೆಗೂ ಮುಂಚೆಯೇ ಪ್ರೀತಿಯಲ್ಲಿ ಬಿದ್ದಿದ್ದ ನಾದಿನಿ, ತನ್ನ ಪ್ರಿಯತಮನೊಂದಿಗೆ ಸೇರಿ ಕಿರುಕುಳ ಕೊಡುತ್ತಿದ್ದ ಅಕ್ಕನ ಗಂಡನನ್ನೇ (ಭಾವ) ಭೀಕರವಾಗಿ ಕೊಲೆ ಮಾಡಿಸಿದ್ದಾಳೆ.

ಹೌದು, ಸ್ವತಃ ನಾದಿನಿಯೇ ತನ್ನ ಅಕ್ಕನ ಗಂಡನನ್ನೇ ಕೊಲೆ ಮಾಡಿಸಿದ ಘಟನೆ ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಓಕಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಡಿ.31 ರಂದು ಈ ಕೊಲೆ ನಡೆದಿದ್ದು, ಪೊಲೀಸರಿಗೆ ಮೃತದೇಹ ಪತ್ತೆಯಾಗಿತ್ತು. ನಿರ್ಜನ ಪ್ರದೇಶದಲ್ಲಿ ಮೃತ ದೇಹ ಸಿಕ್ಕಿದ್ದರಿಂದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿದುಕೊಂಡಿದ್ದರು. ಆದರೆ, ಮೃತದೇಹ ನೋಡಿದರೆ ಅಪಘಾತಕ್ಕಿಂತ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ನಂತರ ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಿದಾಗ ಇದು ಕೊಲೆ ಎಂಬುದು ತಿಳಿದುಬಂದದೆ.

Tap to resize

Latest Videos

undefined

Bengaluru: ಹೊಸ ವರ್ಷದ ಪಾರ್ಟಿಗಾಗಿ 5 ಲಕ್ಷ ಕೊಟ್ಟವನನ್ನೇ ಕೊಲೆಗೈದು ಕಾಡು ಪ್ರಾಣಿಗೆ ತಿನ್ನಲೆಸೆದ ಕಿರಾತಕರು!

ಇನ್ನು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಲೆಯ ಜಾಡು ಹಿಡಿದವರಿಗೆ ಆತನ ಪತ್ನಿ ಹಾಗೂ ನಾದಿನಿಯ ಮೇಲೆ ಅನುಮಾನ ಬಂದಿದೆ. ನಾದಿನಿಯನ್ನು ಪೊಲೀಸ್‌ ಶೈಲಿಯಲ್ಲಿ ವಿಚಾರನೆ ಮಾಡಿದಾಗ ಕೊಲೆ ಮಾಡಿಸಿರುವ ಬಗ್ಗೆ ಬಾಯಿ ಬಿಟ್ಟಿದ್ದಾಳೆ. ನಮ್ಮ ಭಾವ ಹೆಂಡತಿ ಇದ್ದರೂ ನನ್ನ ಮೇಲೆಕಣ್ಣು ಹಾಕಿದ್ದನು. ನಿತ್ಯವೂ ಅಕ್ಕನ ಗಂಡ ಕಾಡಿಸುತ್ತಿದ್ದರೂ, ಅಕ್ಕನ ಸಂಸಾರ ಹಾಳಾಗಬಾರದು ಎಂದು ಎಲ್ಲವನ್ನೂ ಸಹಿಸಿಕೊಂಡಿದ್ದಳು. ಆದರೆ, ಭಾವನ ಕಿರುಕುಳ ಹೆಚ್ಚಾದಾಗ ಪ್ರಿಯಕರನ ಬಳಿ ಹೇಳಿಕೊಂಡೆ. ಆತ, ನೀವು ಅವರನ್ನು ಹೊರಗೆ ಕರೆದುಕೊಂಡು ಬಾ, ನಂತರ ಕೊಲೆ ಮಾಡೋಣ ಎಂದು ಹೇಳಿದ್ದನು.

ಮಗುವಿನ ಪ್ರಜ್ಞೆ ತಪ್ಪಿಸಲೋಗಿ ಕೊಂದೇಬಿಟ್ಟೆ; ತಪ್ಪೊಪ್ಪಿಕೊಂಡ ಬೆಂಗಳೂರು ಸ್ಟಾರ್ಟಪ್ ಸಿಇಒ ಸುಚನಾ ಸೇಠ್!

ಕೊಲೆಯಾದ ವ್ಯಕ್ತಿ ಅಂಬಾರಾಯ ಪಟ್ಟೇದಾರ ಎಂದು ಗುರುತಿಸಲಾಗಿದೆ. ಕೊಲೆ ಮಾಡಿಸಿದ ನಾದಿನಿ ಅಂಬಿಕಾ ಆರೋಪಿಯಾಗಿದ್ದಾಳೆ. ತನ್ನ ಭಾವನೇ ಕಾಮಕ್ಕಾಗಿ ಕಿರುಕುಳ ನೀಡುತ್ತಿರುವುದನ್ನು ಸಹಿಸದೇ ಅಂಬಿಕಾಳ ಪ್ರಿಯತಮ ರಾಜು ಅಂಬಾರಾಯನನ್ನು ಗ್ರಾಮದ ಹೊರಗೆ ಕರೆದೊಯ್ದು ಕೊಲೆ ಮಾಡಿದ್ದಾನೆ. ಕಮಲಾಪುರ ಪೊಲೀಸರಿಂದ ಅಂಬಿಕಾ , ರಾಜು ಸೇರಿ ಒಟ್ಟು 7 ಜನರನ್ನು ಬಂಧಿಸಲಾಗಿದೆ. ಗೋಳಾ ಗ್ರಾಮದ ರಾಜು ಬುರುಡ, ಅರುಣಕುಮಾರ್ ಹಡಪದ, ಸಾಹೇಬ್ ಪಟೇಲ್, ವಿರೇಶ್ ವಿಭೂತಿ, ಸಿದ್ದಯ್ಯ ಸ್ವಾಮಿ ಬಂಧಿತರು ಆಗಿದ್ದಾರೆ.

click me!