ಡಿವೋರ್ಸ್ ಗಂಡ ಹೆಂಡ್ತಿನ ದೂರ ಮಾಡುತ್ತೆ ಅನ್ನೋದು ಎಲ್ರಿಗೂ ಗೊತ್ತಿರೋ ವಿಷ್ಯ. ಆದ್ರೆ ಈ ಸ್ಲೀಪ್ ಡಿವೋರ್ಸ್ ಮಾತ್ರ ಗಂಡ ಹೆಂಡ್ತಿನ ಒಂದು ಮಾಡುತ್ತಂತೆ. ಅದ್ಹೇಗೆ?
ವರುಣ್ ಮತ್ತು ಸಾಕ್ಷಿ ಲವ್ ಮಾಡಿ ಮದುವೆ ಆಗಿರೋ ಜೋಡಿ. ಮದುವೆ ಆಗೋ ತನಕ ಎಲ್ಲಾ ಚನ್ನಾಗೇ ಇತ್ತು. ಯಾವಾಗ ಲವರ್ಸ್ ಬೆಡ್ ಹಂಚ್ಕೊಳ್ಳೋಕೆ ಶುರು ಮಾಡಿದ್ರೋ ಆವಾಗ ಶುರುವಾಯ್ತು ನೋಡಿ ರಿಯಲ್ ಕಥೆ. ಸಾಕ್ಷಿ ಮಲಗಿದ ಕೆಲವೇ ಕ್ಷಣಕ್ಕೆ ನಿದ್ದೆ ಮಾಡಿ ಬಿಡ್ತಾಳೆ. ವರುಣ್‌ಗೆ ಹಾಗಲ್ಲ, ನಿದ್ದೆ ಬರೋದು ಸ್ವಲ್ಪ ಹೊತ್ತಾದ್ಮೇಲೆ. ಬುದ್ಧಿ ಬಂದ್ಮೇಲೆ ಎಂದೂ ಫ್ರೆಂಡ್ಸ್ ಜೊತೆಗೂ ಬೆಡ್ ಶೇರ್ ಮಾಡಿದವನಲ್ಲ ವರುಣ್. ಈಗ ಪ್ರೀತಿಸಿದ ಹುಡುಗಿ ಸಾಕ್ಷಿ ಜೊತೆ ಬೆಡ್ ಶೇರ್ ಮಾಡೋದ್ರ ಬಗ್ಗೆ ಮೊದಲು ಎಕ್ಸೈಟ್ ಮೆಂಟ್, ಕನಸು ಎಲ್ಲ ಇತ್ತು. ಆದರೆ ಮದುವೆ ಆದ ಮರು ರಾತ್ರಿಯೇ ರಿಯಲ್ ಪ್ರಾಬ್ಲಂ ಶುರುವಾಯ್ತು. ವರುಣ್ ಗೆ ಇನ್ನೇನು ಕಣ್ಣಿಗೆ ನಿದ್ರೆ ಹತ್ತಿತು ಅನ್ನುವಾಗ ಸಾಕ್ಷಿ ನಿದ್ದೆಯಲ್ಲೇ ಜೋರಾಗಿ ಉಸಿರಾಡ್ತಾಳೆ. ಬೇಡ ಬೇಡ ಅಂದ್ರೂ ಆ ಸೌಂಡ್ ಡಿಸ್ಟರ್ಬ್ ಮಾಡುತ್ತೆ. ತಡೆಯಲಾಗದೇ ಇನ್ನೊಂದು ಬದಿ ತಿರ್ಕೊಂಡು ಮಲಗಿ ಕಿವಿನ ದಿಂಬಲ್ಲಿ ಮುಚ್ಚಿ ನಿದ್ದೆ ಹೋಗೋ ಪ್ರಯತ್ನ ಮಾಡಿದ್ರೆ ಮತ್ತೊಂದು ಕ್ಷಣಕ್ಕೆ ಅವಳು ಮಗ್ಗುಲು ಬದಲಾಯಿಸ್ತಾಳೆ. ಆಗ ಕಣ್ಣಿಗೆ ಹತ್ತಿದ ನಿದ್ರೆ ಟೂ ಬಿಡುತ್ತೆ.ಕ್ರಮೇಣ ವರುಣ್‌ಗೆ ನಿದ್ದೆ ಇಲ್ಲದೇ ಮದುವೆ ಅನ್ನೋದು ಶಿಕ್ಷೆ ಥರ ಫೀಲ್ ಆಗುತ್ತೆ.
ಆದರೆ ವರುಣ್ ಸಾಕ್ಷಿ ವಿಷ್ಯದಲ್ಲಿ ವರ್ಕೌಟ್ ಆಗಿದ್ದು ಸ್ಲೀಪ್ ಡಿವೋರ್ಸ್.
ಸದ್ಯಕ್ಕೀಗ ಈ ಸ್ಲೀಪ್ ಡಿವೋರ್ಸ್ ದಯದಿಂದ ವರುಣ್ ಹ್ಯಾಪಿ ಆಗಿದ್ದಾನೆ. ಅವ್ನು ನೆಮ್ಮದಿಯಾಗಿರೋದು ಕಂಡು ಸಾಕ್ಷಿಯೂ ಖುಷಿ ಆಗಿದ್ದಾಳೆ. ಗಂಡ ಹೆಂಡತಿಯನ್ನ ಡಿವೋರ್ಸ್ ದೂರ ಮಾಡಿದ್ರೆ ಈ ಸ್ಲೀಪ್ ಡಿವೋರ್ಸ್ ಅವರಿಬ್ಬರನ್ನೂ ಹತ್ತಿರ ತಂದಿದೆ. ಅಷ್ಟಕ್ಕೂ ಈ ಸ್ಲೀಪ್ ಡಿವೋರ್ಸ್ ಅಂದ್ರೆ ಏನು ಗೊತ್ತಾ? ಅದಕ್ಕೆ ಉತ್ತರ ಇಲ್ಲಿದೆ.
undefined
ಮದುವೆಯ ನಂತರ ದಂಪತಿ ಹಾಸಿಗೆ ಹಂಚಿಕೊಳ್ಳುವುದು ಸಾಮಾನ್ಯ. ಅವರ ರೊಮ್ಯಾಂಟಿಕ್ ಲೈಫ್ ಶುರುವಾಗೋದೇ ಇಲ್ಲಿಂದ. ಜೊತೆಗೆ ಆದರೆ ಪರಸ್ಪರ ಅರ್ಥಮಾಡಿಕೊಳ್ಳುವ ಅವಕಾಶವನ್ನು ನೀಡುತ್ತದೆ. ಗಂಡ-ಹೆಂಡತಿ ಒಟ್ಟಿಗೆ ಮಲಗಿದರೆ ಆರೋಗ್ಯಕರ ದೈಹಿಕ ಸಂಬಂಧವನ್ನು ಬೆಳೆಸಲು ಸಾಧ್ಯವಾಗುತ್ತದೆ. ಆದರೆ ಕೆಲವೊಮ್ಮೆ ಈ ಜೊತೆಗೆ ನಿದ್ರಿಸೋದೇ ವರುಣ್ ಸಾಕ್ಷಿ ಥರದ ಎಷ್ಟೋ ದಂಪತಿಗೆ ಶಾಪವೂ ಆಗಿದೆ. ಇದಕ್ಕೆ ಸ್ಲೀಪ್ ಡಿವೋರ್ಸ್ ವರವಾಗಿದೆ. ಸಂಗಾತಿ ಜೋರಾಗಿ ಗೊರಕೆ ಹೊಡೆಯುತ್ತಾ ನಿದ್ರಿಸುತ್ತಿರುವಾಗ ಅಥವಾ ತುಂಬಾ ಹೊತ್ತು ಲೈಟ್ ಆನ್ ಆಗಿಡುವ ಅಭ್ಯಾಸದಿಂದಾಗಿ ಇನ್ನೊಬ್ಬ ಸಂಗಾತಿಗೆ ತೊಂದರೆ ಆಗೋದು ತಪ್ಪುತ್ತದೆ.
ಸ್ತ್ರೀರೋಗ ತಜ್ಞರತ್ರ ಮಾತಾಡ್ವಾಗ ಸಂಕೋಚ ಬೇಡ
ಅಷ್ಟಕ್ಕೂ ಸ್ಲೀಪ್ ಡಿವೋರ್ಸ್ ಅಂದರೆ ದಂಪತಿ ಒಟ್ಟಿಗೆ ವಾಸಿಸುತ್ತಿದ್ದು, ಪ್ರತ್ಯೇಕವಾಗಿ ಮಲಗೋದು. ಅದನ್ನು ನಿದ್ರೆ ವಿಚ್ಛೇದನ ಎಂದು ಕರೆಯಲಾಗುತ್ತದೆ. ಉತ್ತಮ ನಿದ್ರೆ ಪಡೆಯಲು ಹೆಚ್ಚಾಗಿ ದಂಪತಿ ಪ್ರತ್ಯೇಕವಾಗಿ ಮಲಗಲು ಬಯಸುತ್ತಾರೆ. ಪರಿಸ್ಥಿತಿಯನ್ನು ಅವಲಂಬಿಸಿ, ನಿದ್ರೆಯ ವಿಚ್ಛೇದನ ದೀರ್ಘಾವಧಿ ಅಥವಾ ತಾತ್ಕಾಲಿಕವಾಗಿರಬಹುದು. ಆರೋಗ್ಯಕರ ಜೀವನಶೈಲಿಗೆ ಉತ್ತಮ ನಿದ್ರೆ ಬಹಳ ಮುಖ್ಯ. ಆದರೆ ಒಬ್ಬ ಸಂಗಾತಿಯ ಕೆಲವು ಮಲಗುವ ಅಭ್ಯಾಸಗಳು ನಿದ್ರೆಯ ಗುಣಮಟ್ಟವನ್ನು ಹಾಳುಮಾಡುತ್ತದೆ.
ಅಂತಹ ಪರಿಸ್ಥಿತಿಯಲ್ಲಿ ನಿದ್ರೆ(Sleep) ವಿಚ್ಛೇದನದ ಬಗ್ಗೆ ಯೋಚಿಸುವುದು ತಪ್ಪಲ್ಲ ಅಂತಾರೆ ತಜ್ಞರು. ಒಬ್ಬರನ್ನೊಬ್ಬರು ನಿಜವಾಗಿಯೂ ಪ್ರೀತಿಸುತ್ತಿದ್ದರೆ ಈ ಸ್ಥಿತಿಯನ್ನು ಇಬ್ಬರೂ ಇದನ್ನು ಖಂಡಿತವಾಗಿ ಅರ್ಥಮಾಡಿಕೊಳ್ಳುತ್ತಾರೆ.
ಈ ಸ್ಲೀಪ್ ಡಿವೋರ್ಸ್ ನಿಂದ ದಂಪತಿ ತಮ್ಮ ವೈಯಕ್ತಿಕ ಸ್ಪೆಸ್(Space) ಅನ್ನು ಪಡೆಯುತ್ತಾರೆ. ಪ್ರತ್ಯೇಕ ಹಾಸಿಗೆಗಳ ಮೇಲೆ ಮಲಗುವುದು ಉತ್ತಮ ನಿದ್ರೆಗೆ ಕಾರಣವಾಗುತ್ತದೆ. ಆರೋಗ್ಯಕರ ಸಂಬಂಧಕ್ಕಾಗಿ ಒಂದೇ ಹಾಸಿಗೆಯಲ್ಲಿ ಮಲಗುವುದು ಅನಿವಾರ್ಯವಲ್ಲ. ದಂಪತಿ ಪರಸ್ಪರ ಮಲಗದೆ ಸಹ ಅನ್ಯೋನ್ಯತೆಯನ್ನು ಬೆಳೆಸಿಕೊಳ್ಳಬಹುದು.
ಹೀಗಾಗಿ ಬೆಡ್‌ನಲ್ಲಿ ಹೊಂದಾಣಿಕೆ ಸಾಧ್ಯವಿಲ್ಲದ ದಂಪತಿ ಈ ಟೆಕ್ನಿಕ್ ಟ್ರೈ(Try) ಮಾಡಬಹುದು. ಇದರಿಂದ ನಿದ್ರೆ ಚೆನ್ನಾಗಾಗಿ ಇಬ್ಬರ ಆರೋಗ್ಯವೂ ಚೆನ್ನಾಗಿರುತ್ತೆ. ಲೈಫಲ್ಲಿ (Life)ಲವಲವಿಕೆ ಬರುತ್ತೆ.
Valentine Day : 40 ವರ್ಷ ದಾಟಿದ್ಮೇಲೆ ಹೀಗಿರಲಿ ನಿಮ್ಮ ಪ್ರೇಮಿಗಳ ದಿನ