ಇಲ್ಲಿ ಬಾಡಿಗೆ ಬಾಯ್‌ಫ್ರೆಂಡ್ ಪಡೆಯಲು ಯುವತಿಯರ ಕ್ಯೂ, ಅಚ್ಚರಿಗೊಳಿಸುತ್ತೆ ಕಾರಣ!

By Chethan Kumar  |  First Published Dec 3, 2024, 7:32 PM IST

ಇಲ್ಲಿನ ಯುವತಿಯರಿಗೆ ಪರ್ಮನೆಂಟ್ ಬಾಯ್‌ಫ್ರೆಂಡ್ ಸಂಖ್ಯೆ ಕಡಿಮೆ ಅಥವಾ ವಿರಳ. ಆದರೆ ಬಹುತೇಕರಿಗೆ ಬಾಡಿಗೆ ಬಾಯ್‌ಫ್ರೆಂಡ್ ಇದ್ದಾರೆ. ಎಷ್ಟು ದಿನ ಬೇಕೋ ಅಷ್ಟು ದಿನ ಬಾಡಿಗೆಗೆ ಸಂಗಾತಿಯನ್ನು ಇಟ್ಟುಕೊಳ್ಳುತ್ತಾರೆ. ಇದಕ್ಕೆ ಕಾರಣವೇನು ಗೊತ್ತಾ?


ವಿಯೆಟ್ನಾಂ(ಡಿ.03) ಏನು ಬೇಕಾದರೂ ಬಾಡಿಗಿಗೆ ಸಿಗುತ್ತೆ. ಡ್ರೆಸ್, ಚಿನ್ನಾಭರಣ, ಕಾರು, ಬೈಕ್, ಮನೆ, ಮನೆಯೊಳಗಿನ ವಸ್ತುಗಳು ಕೂಡ ಬಾಡಿಗೆಗೆ ಸಿಗುತ್ತೆ. ಇದು ಬಾಡಿಗೆ ಜಮಾನ. ಖರೀದಿಸಿ ಇಟ್ಟುಕೊಂಡು ನಿರ್ವಹಣೆ ಮಾಡುವುದಕ್ಕಿಂತ ಬಾಡಿಗೆ ಪಡೆಯುವುದೇ ಲೇಸು ಅನ್ನೋದು ಹಲವರ ಅಭಿಪ್ರಾಯ. ಆದರೆ ಇಲ್ಲಿ ಬಾಡಿಗೆಗೆ ಬಾಯ್‌ಫ್ರೆಂಡ್ ಕೂಡ ಸಿಗ್ತಾರೆ. ಈ ಬಾಡಿಗೆ ಬಾಯ್‌ಫ್ರೆಂಡ್ ಪಡೆಯಲು ಯುವತಿಯರು ಕ್ಯೂ ನಿಲ್ಲುತ್ತಾರೆ. ತಮಗೆ ಎಷ್ಟು ದಿನ ಬೇಕೋ ಎಷ್ಟು ದಿನ ಬಾಡಿಗೆ ಬಾಯ್‌ಫ್ರೆಂಡ್ ಜೊತೆ ಇರುತ್ತಾರೆ. ಬಾಡಿಗೆ ಅವಧಿ ಮುಗಿಯುತ್ತಿದ್ದಂತೆ ಬೇರೆ ಬೇರೆಯಾಗುತ್ತಾರೆ. ಈ ಬಾಡಿಗೆ ಬಾಯ್‌ಫ್ರೆಂಡ್ ಟ್ರೆಂಡ್ ವಿಯೆಟ್ನಾಂನಲ್ಲಿ ಹೆಚ್ಚಾಗಿದೆ. ಯುವತಿರು ಹೇಗಾದರೂ ಮಾಡಿ ಬಾಡಿಗೆ ಬಾಯ್‌ಫ್ರೆಂಡ್ ಪಡೆಯುವ ಕಸರತ್ತು ನಡೆಸುತ್ತಿದ್ದಾರೆ. ಇದಕ್ಕೆ ಕಾರಣವೂ ಬಹಿರಂಗವಾಗಿದೆ.

ಬಾಡಿಗೆ ಬಾಯ್‌ಫ್ರೆಂಡ್ ವಿಯೆಟ್ನಾಂನ ಪದ್ಧತಿ, ಸಂಪ್ರದಾಯ ಅಲ್ಲ. ಇತ್ತೀಚೆಗೆ ಶುರುವಾದ ಟ್ರೆಂಡ್. ಕಳೆದ ಕೆಲ ವರ್ಷಗಳಿಂದ ಈ ರೀತಿ ಬಾಯ್‌ಫ್ರೆಂಡ್‌ನ ಬಾಡಿಗೆ ರೂಪದಲ್ಲಿ ಪಡೆಯುವ ಪದ್ಧತಿ ಹೆಚ್ಚಾಗಿದೆ. ಅದರಲ್ಲೂ ಪ್ರಮುಖವಾಗಿ ಹೊಸ ವರ್ಷ ಬರುತ್ತಿದ್ದಂತೆ ಬಾಡಿಗೆ ಬಾಯ್‌ಫ್ರೆಂಡ್‌ಗಳಿಗೆ ಬಾರಿ ಬೇಡಿಕೆ. ಯುವತಿಯರು ದುಬಾರಿ ಬೆಲೆ ನೀಡಿ ಬಾಡಿಗೆಗೆ ಬಾಯ್‌ಫ್ರೆಂಡ್ ಪಡೆಯುತ್ತಿದ್ದಾರೆ.

Tap to resize

Latest Videos

ಟೆಕ್ ಕಂಪನಿ ಆಫರ್, ಡೇಟಿಂಗ್ ಮಾಡಿದರೆ 11,650 ರೂ, ಫೋಟೋಗೆ 760 ರೂ ಕ್ಯಾಶ್ ರಿವಾರ್ಡ್!

ಬಾಡಿಗೆ ಬಾಯ್‌ಫ್ರೆಂಡ್‌ಗೆ ಕಾರಣವೇನು?
ವಿಯೆಟ್ನಾಂನಲ್ಲಿ ಬಾಡಿಗೆಗೆ ಸಂಗಾತಿಯನ್ನು ಪಡೆಯುವ ಟ್ರೆಂಡ್ ಹೆಚ್ಚಾಗಲು ಮುಖ್ಯ ಕಾರಣ ಮನೆಯವರ ಒತ್ತಡ. ಹೌದು, ಹೆಣ್ಣುಮಕ್ಕಳು ವಿದ್ಯಾಭ್ಯಾಸ, ವೃತ್ತಿ, ಉದ್ಯಮ ಹೀಗೆ ಮುಂದುವರಿಯುತ್ತಿದ್ದಾರೆ. ಇದರ ನಡುವೆ ಸಮಯಕ್ಕೆ ತಕ್ಕ ಹಾಗೆ ಮದುವೆಯಾಗಿ ಸಂಸಾರ ನಡೆಸುವುದು ವಿಯೆಟ್ನಾಂ ಯುವತಿಯರಿಗೆ ಕಷ್ಟವಾಗುತ್ತಿದೆ. ಮದುವೆಯಾದ ಬಳಿಕ ಸಂಸಾರದ ಜವಾಬ್ದಾರಿ, ವೃತ್ತಿ, ಪೋಷಕರು, ಪತಿಯ ಕುಟುಂಬಸ್ಥರು ಹೀಗೆ ಹೊಂದಿಕೊಂಡು ಹೋಗುವುದು ಕಷ್ಟವಾಗುತ್ತಿದೆ. ಹಾಗಂತ ಮದುವೆ ಮುಂದೂಡಿದರೆ ಪೋಷಕರ ಒತ್ತಡ ಹೆಚ್ಚಾಗುತ್ತಿದೆ.

ವೃತ್ತಿ ನಡುವೆ ಡೇಟಿಂಗ್ ಸಮಯ ಸಿಗುತ್ತಿಲ್ಲ. ಪರ್ಮನೆಂಟ್ ಮದುವೆಯಾದರೆ ಬಳಿಕ ವೃತ್ತಿ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಗಂಡ, ಮಕ್ಕಳು ಹೀಗೆ ನಾಲ್ಕು ಗೋಡೆಗಳ ನಡುವೆ ಉಳಿದು ಬಿಡುತ್ತೇವೆ ಅನ್ನೋ ಭಯ ಹೆಚ್ಚಾಗುತ್ತಿದೆ. ಜೊತೆಗೆ ಮದುವೆ ಬಳಿಕ ಸಂಸಾರದಲ್ಲಿ ಎದರಾಗುತ್ತಿರುವ ಸಮಸ್ಯೆಗಳು ಹೆಚ್ಚಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ವಿಯೆಟ್ನಾಂ ಯುವತಿಯರು ಬಾಡಿಗೆ ಬಾಯ್‌ಫ್ರೆಂಡ್ ಪರಿಹಾರ ಕಂಡುಕೊಂಡಿದ್ದಾರೆ. ಈ ಕುರಿತು 30 ವರ್ಷದ ಯುವತಿ ಮಿನ್ಹುಥು ವಿವರಿಸಿದ್ದಾರೆ.

ಹೊಸ ವರ್ಷ ವಿಯೆಟ್ನಾಂ ಸಂಪ್ರದಾಯದಲ್ಲಿ ಮುಖ್ಯವಾಗಿದೆ. ಈ ವೇಳೆ ವಯಸ್ಸಿಗೆ ಬಂದ ಯುವತಿಯರು ಮದುವೆಯಾಗಿ ಗಂಡನ ಜೊತೆಗೆ ಪೋಷಕರ ಮನೆಗೆ ಬರಬೇಕು. ಆದರೆ ಮದುವೆಯಾದರೆ ಗಂಡ ನಮ್ಮ ಪೋಷಕರ ಮನಸ್ಥಿತಿ, ಕುಟುಂಬಕ್ಕೆ ಹೊಂದಿಕೆಯಾಗುವುದು ಕಡಿಮೆಯಾಗಿದೆ. ಇನ್ನು ಮದುವೆ ಬಳಿಕೂ ಸಮಸ್ಯೆ ಹೆಚ್ಚು. ಇದರಿಂದ ವತ್ತಿಗೂ ಸಮಸ್ಯೆಯಾಗುತ್ತಿದೆ ಎಂದು ಮಿನ್ಹುಥು ಹೇಳಿದ್ದಾರೆ. ಹೀಗಾಗಿ ನಾನು ಬಾಡಿಗೆ ಬಾಯ್‌ಫ್ರೆಂಡ್ ಕರೆದುಕೊಂಡು ಬಂದಿದ್ದೇನೆ. ಅಮೆರಿಕನ್ ಡಾಲರ್ ಮೊತ್ತ ನೀಡಿದ್ದೇನೆ. ನಾನು ಹೇಳಿದಂತೆ, ಪೋಷಕರು ಕೇಳಿದಂತೆ ಕೇಳುತ್ತಾನೆ. ಮರು ಮಾತಿಲ್ಲ. ನನ್ನ ತಾಯಿಗೆ ಅಡುಗೆ ಮಾಡಲು ಸಹಾಯ ಮಾಡುತ್ತಾನೆ. ನಾನೊಬ್ಬಳೆ ಅಲ್ಲ, ನನ್ನ ಕಚೇರಿಯಲ್ಲಿ ಹಲವರು ಹೀಗೆ ಮಾಡಿದ್ದಾರೆ. ಬಹುತೇಕ ಯುವತಿರ ಮೊದಲ ಆಯ್ಕೆ ಇದೀಗ ಬಾಡಿಗೆ ಬಾಯ್‌ಫ್ರೆಂಡ್. ಎಲ್ಲವನ್ನೂ ನಿಭಾಯಿಸಲು ಅನಿವಾರ್ಯಗಿದೆ ಎಂದಿದ್ದಾರೆ. ಈ ಟ್ರೆಂಡ್‌ನಿಂದ ನಮ್ಮ ವೃತ್ತಿ ಮುಂದುವರಿಸಲು, ಪೋಷಕರು, ಮನೆ ನಿಭಾಯಿಸಲು ಸಾಧ್ಯವಾಗುತ್ತಿದೆ. ಆದರೆ ಮದುವೆಯಾದರೆ ಇದು ಸಾಧ್ಯವಾಗುದಿಲ್ಲ. ಆತ ಮನೆಯವರ ಮುಂದೆ, ಸಮಾಜದ ಮುಂದೆ ಪತಿ ರೀತಿ, ಬಾಯ್‌ಫ್ರೆಂಡ್ ರೀತಿ ನಡೆದುಕೊಳ್ಳುತ್ತಾನೆ ಎಂದಿದ್ದಾರೆ.
 

click me!