ಮಕ್ಕಳನ್ನು (Children) ಪಾಲನೆ ಮಾಡುವುದು ತುಂಬಾ ಕಷ್ಟದ ಕೆಲಸ. ಇದಕ್ಕೆ ಸಾಕಷ್ಟು ತಾಳ್ಮೆ (Patience) ಮತ್ತು ಶ್ರಮ ಬೇಕಾಗುತ್ತದೆ. ಪ್ರತಿಯೊಬ್ಬ ಪೋಷಕರು (Parents) ತಮ್ಮ ಮಗುವನ್ನು ಚೆನ್ನಾಗಿ ಬೆಳೆಸಲು ಬಯಸುತ್ತಾರೆ, ಇದರಿಂದ ಭವಿಷ್ಯ (Future)ದಲ್ಲಿ ಅವನು ಒಳ್ಳೆಯ ವ್ಯಕ್ತಿಯಾಗಬಹುದು ಎಂದು ಆಶಿಸುತ್ತಾರೆ. ಜಪಾನಿನ (Japan) ಮಕ್ಕಳು ವಿಶ್ವದಲ್ಲೇ ಅತ್ಯಂತ ಶಿಸ್ತು ಹೊಂದಿರುವವರು ಎಂದು ಪರಿಗಣಿಸಲಾಗುತ್ತದೆ. ಹಾಗಿದ್ರೆ ಜಪಾನೀ ಪೋಷಕರು ಮಕ್ಕಳನ್ನು ಹೇಗೆ ಬೆಳೆಸ್ತಾರೆ ?
ಪ್ರಪಂಚದಾದ್ಯಂತ ಪೋಷಕರಿಗೆ ಸ್ಫೂರ್ತಿ ನೀಡಬಹುದಾದ ಯಾವುದೇ ದೇಶವಿದ್ದರೆ ಅದು ಜಪಾನ್ ಎಂದು ಪರಿಗಣಿಸಲಾಗುತ್ತದೆ. ಜಪಾನಿನ ಮಕ್ಕಳು ಯಾವುದೇ ವಯಸ್ಸಿನವರಾಗಿರಲಿ, ತಮ್ಮದೇ ಆದ ರೀತಿಯಲ್ಲಿ ಅದ್ಭುತವಾಗಿದ್ದಾರೆ. ಒಂದು ನಿರ್ದಿಷ್ಟ ನಡವಳಿಕೆಯನ್ನು ಹೊಂದಿದ್ದಾರೆ. ಅದು ಅವರನ್ನು ಇತರ ಮಕ್ಕಳಿಗಿಂತ ಭಿನ್ನಗೊಳಿಸುತ್ತದೆ. ನಿಯಮದಂತೆ, ಅವರು ಸಭ್ಯ ಮತ್ತು ಸ್ನೇಹಪರರಾಗಿದ್ದಾರೆ. ಜಪಾನ್‌ನ ಬೀದಿಗಳಲ್ಲಿ ಮಗು ಅಳುವುದನ್ನು ನೀವು ಅಪರೂಪವಾಗಿ ನೋಡುತ್ತೀರಿ. ಅಂತಹ ದೃಶ್ಯ ಅಲ್ಲಿ ಬಹಳ ಅಪರೂಪ. ಇದು ಜಪಾನೀ ಪಾಲನೆಯ ವಿಧಾನವಾಗಿದೆ, ಜಪಾನೀ ಪೋಷಕರು ತಮ್ಮ ಮಕ್ಕಳನ್ನು ಬೆಳೆಸಲು ಮಾಡುವ ಐದು ವಿಷಯಗಳ ಬಗ್ಗೆ ಇಲ್ಲಿ ನಾವು ನಿಮಗೆ ಹೇಳುತ್ತೇವೆ.
ಸಮಾನತೆಯ ಪಾಠ
ಸಮಾಜದಲ್ಲಿ ಮೇಲು-ಕೀಳು, ಜಾತಿ-ಧರ್ಮವೆಂಬ ಬೇಧ ಭಾವ ಅದೆಷ್ಟು ವರ್ಷಗಳು ಕಳೆದರೂ ಬದಲಾಗಿಲ್ಲ. ಮಕ್ಕಳಿಗೆ ಚಿಕ್ಕಂದಿನಿಂದಲೇ ಎಲ್ಲರೂ ಸಮಾನರು ಎಂದು ಹೇಳಿಕೊಡುವುದು ಅತೀ ಮುಖ್ಯವಾಗಿದೆ. ಜಪಾನೀ ಪೋಷಕರು ಮಕ್ಕಳಿಗೆ ಸಮಾನತೆಯ ಪಾಠ ಹೇಳಿ ಕೊಡುತ್ತಾರೆ. ಇಲ್ಲಿ ಶಾಲೆಗೆ ಬರುವ ಎಲ್ಲಾ ಮಕ್ಕಳು ತಮ್ಮ ತರಗತಿಯನ್ನು ಸ್ವಚ್ಛಗೊಳಿಸುತ್ತಾರೆ, ಅವರು ಯಾವುದೇ ಕುಟುಂಬಕ್ಕೆ ಸೇರಿದವರಾಗಿರಲಿ ಅದರಲ್ಲಿ ವ್ಯತ್ಯಾಸವಾಗುವುದಿಲ್ಲ. ಜಪಾನ್‌ನಲ್ಲಿ ಮಕ್ಕಳಿಗೆ ಮೊದಲಿನಿಂದಲೂ ಸಮಾನತೆಯ ಪಾಠವನ್ನು ಕಲಿಸಲಾಗುತ್ತದೆ. ಈ ದೇಶದಲ್ಲಿ ಶ್ರೀಮಂತ ಮತ್ತು ಬಡ ಮಕ್ಕಳು ಒಂದೇ ಶಾಲೆಯಲ್ಲಿ ಓದುತ್ತಾರೆ ಮತ್ತು ಒಟ್ಟಿಗೆ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಇಲ್ಲಿ ಪೋಷಕರು ತಮ್ಮ ಮಕ್ಕಳಿಗೆ ವೈಯಕ್ತಿಕ ಲಾಭಗಳನ್ನು ತ್ಯಜಿಸಲು ಕಲಿಸುತ್ತಾರೆ. ಈ ರೀತಿಯಾಗಿ ಅವರು ಸಮಾಜದಲ್ಲಿ ಸಮಾನತೆ ಮತ್ತು ಒಟ್ಟಿಗೆ ವಾಸಿಸುವ ಅಗತ್ಯ ಮೌಲ್ಯಗಳನ್ನು ಕಲಿಯುತ್ತಾರೆ.
Parenting Tips: ಗೇಮಿಂಗ್ ಅಡಿಕ್ಟ್ ಆಗಿರೋ ಮಕ್ಕಳನ್ನು ಸರಿಪಡಿಸುವುದು ಹೇಗೆ ?
ತಾಯಿ-ಮಗುವಿನ ಸಂಬಂಧದ ಪ್ರಾಮುಖ್ಯತೆ
ಜಪಾನೀಸ್ ಸಂಸ್ಕೃತಿಯಲ್ಲಿ ಕುಟುಂಬವು ಬಹಳ ಮುಖ್ಯವಾಗಿದೆ. ಇಲ್ಲಿ ತಾಯಿ-ಮಗುವಿನ ಸಂಬಂಧವು ವಿಭಿನ್ನವಾಗಿದೆ. ಮಗು ಚಿಕ್ಕದಾಗಿದ್ದಾಗ, ತಾಯಿ ತನ್ನ ಪಾಲನೆಯ ಬಗ್ಗೆ ಹೆಚ್ಚು ಗಮನ ಹರಿಸುತ್ತಾಳೆ. ಸಕಾರಾತ್ಮಕ ಮನೋಭಾವದಿಂದ ಬೆಳೆಯುವ ಮಕ್ಕಳು ಬೆಳೆದಂತೆ ಸಮಸ್ಯೆಗಳನ್ನು ಬೆಳೆಸಿಕೊಳ್ಳುವ ಅಪಾಯ ಕಡಿಮೆ ಎಂದು ಅಧ್ಯಯನಗಳು ತೋರಿಸುತ್ತವೆ. ಈ ದೇಶದ ತಾಯಂದಿರು ವಿಶೇಷವಾಗಿ ಮಕ್ಕಳೊಂದಿಗೆ ಸಮಯ ಕಳೆಯಲು ಸಲಹೆ ನೀಡುತ್ತಾರೆ. ಉತ್ತಮ ಭಾಗವೆಂದರೆ ಇಲ್ಲಿ ಮಗುವನ್ನು 3 ವರ್ಷಕ್ಕಿಂತ ಮುಂಚೆಯೇ ಶಿಶುವಿಹಾರಕ್ಕೆ ಕಳುಹಿಸಲಾಗುವುದಿಲ್ಲ. ಆದ್ದರಿಂದ, ಮಗು ತನ್ನ ತಾಯಿಯೊಂದಿಗೆ ಗರಿಷ್ಠ ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ.
ಮಕ್ಕಳ ಭಾವನೆಗಳಿಗೆ ಗಮನ ಕೊಡುವುದು
ಭಾರತೀಯ ಪೋಷಕರು ಮಕ್ಕಳ ಭಾವನೆಗಳಿಗೆ ಬೆಲೆ ಕೊಡುವುದು ಕಡಿಮೆ. ಮಕ್ಕಳಿಗೆ ಯಾವ ನಿರ್ಧಾರ ತೆಗೆದುಕೊಳ್ಳಬೇಕೆಂದು ಗೊತ್ತಿರುವುದಿಲ್ಲ ಎಂದು ಹೇಳಿ ಎಲ್ಲಾ ನಿರ್ಧಾರವನ್ನು ತಾವೇ ತೆಗೆದುಕೊಳ್ಳುತ್ತಾರೆ. ಮಗಳ ಮೇಲೆ ತಮ್ಮಿಷ್ಟಗಳನ್ನು ಬಲವಂತಾಗಿ ಹೇರುತ್ತಾರೆ. ಆದರೆ ಜಪಾನಿಯರು ಮಕ್ಕಳ ಭಾವನೆಗಳಿಗೆ ಬೆಲೆ ಕೊಡುತ್ತಾರೆ. ಮಕ್ಕಳ ಮಾನಸಿಕ ಮತ್ತು ಭಾವನಾತ್ಮಕ ಸ್ಥಿತಿಗೆ ಗಮನ ಕೊಡುವುದು ಅವರ ದೈಹಿಕ ಗುಣಗಳಷ್ಟೇ ಮುಖ್ಯವಾಗಿದೆ. ಜಪಾನಿನ ಪೋಷಕರು ಇದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಮಗುವನ್ನು ಬೈಯುವುದರ ಜೊತೆಗೆ ತನ್ನ ತಪ್ಪಿನ ಅರಿವಾಗುವಂತೆ ಮಾಡುವುದು ಸಹ ಅಗತ್ಯವೆಂದು ಅವರಿಗೆ ತಿಳಿದಿದೆ, ಆದರೆ ಅದನ್ನು ಕಠಿಣವಾಗಿ ಮಾಡಬಾರದು, ಏಕೆಂದರೆ ಇದು ಮಗುವಿನ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಕ್ಕಳೊಂದಿಗೆ ಅತ್ಯಂತ ಪ್ರೀತಿ ಮತ್ತು ಗೌರವದಿಂದ ಹೇಗೆ ವ್ಯವಹರಿಸಬೇಕೆಂದು ಅವರಿಗೆ ತಿಳಿದಿದೆ.
Parenting An Angry Teen: ಹರೆಯದ ಮಕ್ಕಳು ಕೋಪ ತರಿಸುತ್ತಾರೆಯೇ? ಹೀಗ್ಮಾಡಿ
ಸಾರ್ವಜನಿಕವಾಗಿ ಮಕ್ಕಳನ್ನು ಹೊಗಳುವುದಿಲ್ಲ
ನಾವು ಭಾರತೀಯ ಪೋಷಕರು ನಮ್ಮ ಮಕ್ಕಳನ್ನು ಜನರ ಮುಂದೆ ಹೊಗಳಲು ಇಷ್ಟಪಡುತ್ತೇವೆ. ಮಕ್ಕಳು ಮಾಡಿದ ಸಾಧನೆಗೆ ಇನ್ನಷ್ಟು ವಿಚಾರಗಳನ್ನು ಸೇರಿಸಿ ಎಲ್ಲರಲ್ಲಿ ಹೇಳುತ್ತೇವೆ. ಆದರೆ ಹಲವು ಬಾರಿ ಈ ವಿಚಾರ ಮಕ್ಕಳಲ್ಲಿ ಅಹಂ ಬೆಳೆಯಲು ಕಾರಣವಾಗುತ್ತದೆ. ಆದರೆ ಜಪಾನಿನ ಪೋಷಕರು ಮಕ್ಕಳನ್ನು ಸಾರ್ವಜನಿಕವಾಗಿ ಹೊಗಳುವುದಿಲ್ಲ. ಅವರು ತಮ್ಮ ಮಕ್ಕಳಿಗೆ ಸ್ವತಂತ್ರವಾಗಿರಲು ಕಲಿಸುತ್ತಾರೆ ಮತ್ತು ಜೀವನದಲ್ಲಿ ಮುಂದುವರಿಯಲು ಪ್ರೋತ್ಸಾಹದ ಮಾತುಗಳು ಅಗತ್ಯವೆಂದು ಅವರು ಅಂದುಕೊಳ್ಳುವುದಿಲ್ಲ. ಮಕ್ಕಳು ಶ್ರಮದಿಂದಲೇ ಸಾಧನೆ ಮಾಡಬೇಕೆಂದು ಅವರು ಬಯಸುತ್ತಾರೆ.
ಆರೋಗ್ಯದ ಮಹತ್ವದ ಬಗ್ಗೆ ಮಾಹಿತಿ
ಜಪಾನಿನ ಮಕ್ಕಳು ಹೆಚ್ಚು ಆರೋಗ್ಯವಂತರು ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ. ವಿಶ್ವದ ಆರೋಗ್ಯವಂತ ಮಕ್ಕಳಲ್ಲಿ ಜಪಾನಿನ ಮಕ್ಕಳು ಒಂದನೇ ಸ್ಥಾನದಲ್ಲಿ ನಿಲ್ಲುತ್ತಾರೆ. ಜಪಾನಿನ ಮಕ್ಕಳಿಗೆ ಶಾಲಾ ಊಟಗಳು ತುಂಬಾ ಆಸಕ್ತಿದಾಯಕವಾಗಿರುತ್ತವೆ. ಆರೋಗ್ಯಕ್ಕೆ ಬೇಕಾದ ಎಲ್ಲಾ ಕಾಳುಗಳು, ಧಾನ್ಯಗಳನ್ನು ಸೇರಿಸಿ ಆಹಾರವನ್ನು ತಯಾರಿಸಿ ಕೊಡಲಾಗುತ್ತದೆ. ಜತೆಗೆ ಚಿಕ್ಕಂದಿನಲ್ಲೇ ಮಕ್ಕಳಿಗೆ ಆರೋಗ್ಯ ಚೆನ್ನಾಗಿಟ್ಟುಕೊಳ್ಳಬೇಕೆಂದು ಹೇಳಿ ಕೊಡಲಾಗುತ್ತದೆ.