ಇತ್ತೀಚಿನ ವರ್ಷಗಳಲ್ಲಿ ಮನುಷ್ಯನ ಜೀವನ ಮೊಬೈಲ್ (Mobile) ಇಲ್ದೆ ಬದುಕೋದೆ ಕಷ್ಟ ಎಂಬಂತಾಗಿದೆ. ಹೀಗಾಗಿಯೇ ಸ್ನಾನಕ್ಕೆ ಹೋಗುವಾಗ್ಲೂ, ಮಲಗುವಾಗ್ಲೂ ಮೊಬೈಲ್ ಒಟ್ಟಿಗೇ ಇರುತ್ತೆ. ಆದ್ರೆ ಮಲಗುವಾಗ ಮೊಬೈಲ್ ಬೆಡ್ ಪಕ್ಕ ಇಟ್ಟುಕೊಳ್ಳೋದ್ರಿಂದ ಸೆಕ್ಸ್ ಲೈಫ್‌ಗೆ (Sex life) ಸಿಕ್ಕಾಪಟ್ಟೆ ತೊಂದ್ರೆಯಿದೆಯಂತೆ ನೋಡಿ.
ಸ್ಮಾರ್ಟ್‌ಫೋನ್‌ಗಳು (Smartphone) ಜೀವನವನ್ನು ತುಂಬಾ ಸುಲಭಗೊಳಿಸಿವೆ. ಕಾಲ್, ಮೆಸೇಜ್ ಮಾಡುವುದರಿಂದ ತೊಡಗಿ ಬ್ಯಾಂಕ್, ಫುಡ್ ಆರ್ಡರ್, ಆನ್‌ಲೈನ್ ಶಾಪಿಂಗ್ ಹೀಗೆ ಎಲ್ಲಾ ಅಗತ್ಯಗಳಿಗೂ ಮೊಬೈಲ್ (Mobile) ಬೇಕೇ ಬೇಕು. ಆದರೆ ಅತಿಯಾಗಿ ಮೊಬೈಲ್ ಬಳಸುವುದು ಒಳ್ಳೆಯದಲ್ಲ ಅಂತ ತಜ್ಞರು ಹೇಳ್ತಿರ್ತಾರೆ. ಇದು ದೈಹಿಕ (Physical) ಹಾಗೂ ಮಾನಸಿಕ (Mental) ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಮೊಬೈಲ್‌ನಲ್ಲಿರುವ ರೇಡಿಯೇಷನ್‌ಗಳು ಮೆದುಳಿಗೆ ಹಾನಿ ಮಾಡುತ್ತದೆ. ಯಾವಾಗ್ಲೂ ಮೊಬೈಲ್‌ನ್ನು ಸ್ಕ್ರಾಲ್ ಮಾಡುವ ಅಭ್ಯಾಸ ಸುಲಭವಾಗಿ ಮೊಬೈಲ್‌ಗೆ ಅಡಿಕ್ಟ್ ಮಾಡಿ ಬಿಡುತ್ತದೆ. ಹಾಗೆಯೇ ಮಲಗುವಾಗ ಮೊಬೈಲ್‌ನ್ನು ಬೆಡ್ (Bed) ಮೇಲಿಡುವ ಅಭ್ಯಾಸ ನಿಮ್ಮ ಲೈಂಗಿಕ ಜೀವನ (Sex life)ವನ್ನೂ ಹಾಳು ಮಾಡುತ್ತೆ ಅನ್ನೋದು ನಿಮ್ಗೆ ಗೊತ್ತಾ ?
ಮೊಬೈಲ್ ಬಳಕೆಯಿಂದ ಲೈಂಗಿಕ ಜೀವನದಲ್ಲಿ ಸಮಸ್ಯೆ
ಮೊರಾಕೊದ ಕಾಸಾಬ್ಲಾಂಕಾದಲ್ಲಿರುವ ಚೀಖ್ ಖಲೀಫಾ ಬೆನ್ ಜಾಯೆದ್ ಅಂತರಾಷ್ಟ್ರೀಯ ವಿಶ್ವವಿದ್ಯಾನಿಲಯ ಆಸ್ಪತ್ರೆಯ ಲೈಂಗಿಕ ಆರೋಗ್ಯ ವಿಭಾಗವು ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ 60 ಪ್ರತಿಶತದಷ್ಟು ಜನರು ಸ್ಮಾರ್ಟ್‌ಫೋನ್‌ಗಳಿಂದ ತಮ್ಮ ಲೈಂಗಿಕ ಜೀವನದಲ್ಲಿ ಸಮಸ್ಯೆಗಳನ್ನು ಹೊಂದಿದ್ದಾರೆಂದು ಒಪ್ಪಿಕೊಂಡಿದ್ದಾರೆ ಎಂದು ಬಹಿರಂಗಪಡಿಸಿದೆ.
ಸೆಕ್ಸ್ ಬಳಿಕ ಮೂತ್ರವಿಸರ್ಜನೆ ಮಾಡಿದ್ರೆ ಪ್ರೆಗ್ನೆಂಟ್ ಆಗೋಲ್ವಾ?
ಸುಮಾರು 600 ಜನರು ಅಧ್ಯಯನದಲ್ಲಿ ಭಾಗವಹಿಸಿದ್ದರು. 92 ಪ್ರತಿಶತದಷ್ಟು ಭಾಗವಹಿಸುವವರು ರಾತ್ರಿಯಲ್ಲಿ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಬಳಸುವುದನ್ನು ಒಪ್ಪಿಕೊಂಡಿದ್ದಾರೆ. ಸ್ಮಾರ್ಟ್‌ಫೋನ್‌ಗಳು 20 ರಿಂದ 45 ವರ್ಷ ವಯಸ್ಸಿನ ವಯಸ್ಕರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಅಧ್ಯಯನವು ಕಂಡುಹಿಡಿದಿದೆ, ಶೇಕಡಾ 60 ರಷ್ಟು ಜನರು ಮೊಬೈಲ್ ಬಳಕೆ ಹೇಗೆ ಲೈಂಗಿಕ ಜೀವನದ ಮೇಲೆ ಪ್ರಭಾವ ಬೀರಿದೆ ಎಂಬುದಾಗಿ ಒಪ್ಪಿಕೊಂಡಿದ್ದಾರೆ.
ಲೈಂಗಿಕ ಜೀವನ ಸರಿಯಾಗಿಲ್ಲ ಎಂದ ಸುಮಾರು 50 ಪ್ರತಿಶತ ಮಂದಿ
ಅಧ್ಯಯನ ವರದಿಯ ಪ್ರಕಾರ, ಸಂದರ್ಶಕರಲ್ಲಿ ಸುಮಾರು 50 ಪ್ರತಿಶತದಷ್ಟು ಜನರು ಸ್ಮಾರ್ಟ್‌ಫೋನ್ ಬಳಕೆಗೆ ಹೆಚ್ಚಿನ ಸಮಯ (Time)ವನ್ನು ಮೀಸಲಿಡುವುದರಿಂದ ತಮ್ಮ ಲೈಂಗಿಕ ಜೀವನದಲ್ಲಿ ಆರಾಮವಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಯುಎಸ್ ಮೂಲದ ಕಂಪನಿಯಾದ ಶ್ಯೂರ್ ಕಾಲ್ ಕಂಪೆನಿ ಕಳೆದ ವರ್ಷ ನಡೆಸಿದ ಮತ್ತೊಂದು ಸಮೀಕ್ಷೆಯು 17 ಪ್ರತಿಶತ ಮಿಲೇನಿಯಲ್‌ಗಳು ಲೈಂಗಿಕ ಸಮಯದಲ್ಲಿ ತಮ್ಮ ಸ್ಮಾರ್ಟ್‌ಫೋ ಬಳಕೆಯಿಂದ ತೃಪ್ತಿಕರವಲ್ಲದ ಲೈಂಗಿಕ ಜೀವನವನ್ನು ಹೊಂದಿದ್ದಾರೆ ಎಂಬುದನ್ನು ತಿಳಿಸಿದೆ.
ಸುಮಾರು ಮುಕ್ಕಾಲು ಭಾಗದಷ್ಟು ಜನರು ರಾತ್ರಿಯಲ್ಲಿ ತಮ್ಮ ಹಾಸಿಗೆಯ ಮೇಲೆ ಅಥವಾ ಪಕ್ಕದಲ್ಲಿ ತಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ಮಲಗುತ್ತಾರೆ ಎಂಬುದು ತಿಳಿದುಬಂದಿದೆ. ಹತ್ತಿರದಲ್ಲಿ ತಮ್ಮ ಫೋನ್ ಇಟ್ಟುಕೊಂಡು ಮಲಗುವವರು ಮೊಬೈಲ್‌ನಿಂದ ದೂರವಿರುವಾಗ ಭಯ ಅಥವಾ ಆತಂಕವನ್ನು ಅನುಭವಿಸುತ್ತಾರೆ.
ಚುಂಬನ ದೇಹದಲ್ಲಿ ರೋಮಾಂಚನ ಉಂಟು ಮಾಡುವುದು ಯಾಕೆ ? ಇಲ್ಲಿದೆ ಯಾರೂ ಹೇಳಿರದ ಸೀಕ್ರೆಟ್
ಲೈಂಗಿಕ ಕ್ರಿಯೆಗಿಂತಲೂ ಮೊಬೈಲ್ ಮೇಲೆ ಹೆಚ್ಚು ಗಮನ
ಡರ್ಹಾಮ್ ವಿಶ್ವವಿದ್ಯಾನಿಲಯದ ಹಿಂದಿನ ಅಧ್ಯಯನ ಮತ್ತು ಕಾಂಡೋಮ್ ತಯಾರಕ ಡ್ಯುರೆಕ್ಸ್‌ನಿಂದ ನಿಯೋಜಿಸಲ್ಪಟ್ಟ ಅಧ್ಯಯನವು ಜನರು ತಮ್ಮ ಪಾಲುದಾರರಿಗಿಂತ ಗ್ಯಾಜೆಟ್‌ಗಳಿಂದ ಮಾರುಹೋಗುವ ಸಾಧ್ಯತೆ ಹೆಚ್ಚು ಎಂದು ಕಂಡುಹಿಡಿದಿದೆ. ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ಮೂರನೇ ಒಂದು ಭಾಗದಷ್ಟು ಜನರು ಒಳಬರುವ ಕರೆಗಳಿಗೆ ಉತ್ತರಿಸಲು ಲೈಂಗಿಕತೆಯನ್ನು ಅಡ್ಡಿಪಡಿಸುವುದನ್ನು ಒಪ್ಪಿಕೊಂಡಿದ್ದಾರೆ. ಸಂದರ್ಶನಗಳನ್ನು ನಡೆಸಿದ ಮಾರ್ಕ್ ಮೆಕ್‌ಕಾರ್ಮ್ಯಾಕ್, ಮಲಗುವ ಕೋಣೆಗೆ ಗ್ಯಾಜೆಟ್‌ಗಳನ್ನು ತೆಗೆದುಕೊಳ್ಳುವುದು "ಸಂಬಂಧಗಳಿಗೆ ಗಂಭೀರವಾದ ವೆಚ್ಚವನ್ನು ಹೊಂದಿದೆ ಎಂದು ಹೇಳಿದರು.