ಹುಡುಗಿಯರಾದರೆ ಏನಾದರೂ ಕೊಡಬಹುದು, ಹುಡಗರಿಗೇನು ಗಿಫ್ಟ್ ಕೊಡೋದು?

By Suvarna NewsFirst Published Jun 14, 2022, 1:11 PM IST
Highlights

ಗಿಫ್ಟ್ ಅಂದ್ಮೇಲೆ ಸ್ವಲ್ಪ ವಿಶೇಷವಾಗಿರ್ಲೇಬೇಕು. ಹುಡುಗಿರಿಗಾದ್ರೆ ಫಟಾಫಟ್ ಗಿಫ್ಟ್ ತೆಗೆದುಕೊಳ್ಬಹುದು. ಈ ಹುಡುಗ್ರ ವಿಷ್ಯ ಬಂದಾಗ ಕನ್ಫ್ಯೂಜ್ ಶುರುವಾಗುತ್ತೆ. ಏನ್ ತಗೋಳೋದು ಎಂಬ ಗೊಂದಲಕ್ಕೆ ಇಲ್ಲಿದೆ ಪರಿಹಾರ.
 

ಫಾದರ್ಸ್ ಡೇ (Fathers Day) ಹತ್ತಿರ ಬರ್ತಿದೆ. ಜೂನ್ 19ರಂದು ವಿಶ್ವ ತಂದೆಯಂದಿರ ದಿನವನ್ನು ಆಚರಿಸಲಾಗ್ತಿದೆ. ತಂದೆಗೆ ಏನು ಉಡುಗೊರೆ (Gift) ನೀಡ್ಬೇಕೆಂಬ ಗೊಂದಲ ಪ್ರತಿಯೊಬ್ಬರಿಗೂ ಇರುತ್ತದೆ. ಸಂಬಂಧದಲ್ಲಿ ತಂದೆಯಾಗಿರಲಿ, ಮಗನಾಗಿರಲಿ, ಪತಿಯಾಗಿರಲಿ ಇಲ್ಲ ಬಾಯ್ ಫ್ರೆಂಡ್ ಆಗಿರಲಿ, ಪುರುಷರಿಗೆ ಉಡುಗೊರೆ ನೀಡೋದು ಸ್ವಲ್ಪ ಕಷ್ಟ. ಮಹಿಳೆಯರಿಗೆ ಹೋಲಿಕೆ ಮಾಡಿದ್ರೆ ಅವರ ಆಯ್ಕೆ ಕಡಿಮೆ. ಹೆಣ್ಮಕ್ಕಳು ಸೌಂದರ್ಯ ಪ್ರಿಯರು. ಹಾಗಾಗಿ ಅವರ ಉಡುಗೊರೆ ಆಯ್ಕೆ ಮಾಡೋದು ಸುಲಭ. ಹಾಗಂತ ಪುರುಷರಿಗೆ ಗಿಫ್ಟ್ ಗಳೇ ಇಲ್ಲವೆಂದಲ್ಲ. ಸೀಮಿತ ಆಯ್ಕೆಗಳಿರುತ್ತವೆ. ನೀವೂ ಪುರುಷರಿಗೆ ಗಿಫ್ಟ್ ನೀಡ್ಬೇಕು ಎನ್ನುವ ಪ್ಲಾನ್ ನಲ್ಲಿದ್ದರೆ ನಾವೊಂದಿಷ್ಟು ಮಾಹಿತಿ ನೀಡ್ತೇವೆ ತಿಳಿದುಕೊಳ್ಳಿ. ಅದನ್ನು ಪಾಲಿಸಿದ್ರೆ ಗಿಫ್ಟ್ ನೀಡೋದು ಸುಲಭವಾಗುತ್ತೆ.  

ಪುರುಷರಿಗೆ ಉಡುಗೊರೆ ನೀಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ : 
ಬಜೆಟ್ ನಿರ್ಧಾರ :
ಅಂಗಡಿಗೆ ಹೋದ್ಮೇಲೆ ಯಾವ ಉಡುಗೊರೆ (Gift) ಖರೀದಿ ಮಾಡೋದು ? ಬಜೆಟ್ ಎಷ್ಟು ಎಂದು ಪ್ಲಾನ್ ಮಾಡುವ ಬದಲು ಮೊದಲೇ ಇದನ್ನು ನಿರ್ಧರಿಸಿ. ಉಡುಗೊರೆ ಬಜೆಟ್ ಎಷ್ಟು ? ಹಾಗೆ ನಿಮ್ಮ ಜೊತೆ ಇನ್ನ್ಯಾರಾದ್ರೂ ಬಜೆಟ್ ನಲ್ಲಿ ಪಾಲುದಾರರಾಗ್ತಾರಾ ? ಇದೆಲ್ಲವನ್ನು ನೋಡಿಕೊಳ್ಳಬೇಕು. ಬಜೆಟ್ ನಿರ್ಧಾರವಾದ್ರೆ ಅದಕ್ಕೆ ತಕ್ಕಂತೆ ಉಡುಗೊರೆ ಆಯ್ಕೆ ಮಾಡಬಹುದು. 

Latest Videos

ಯಾವ ಸಂದರ್ಭ?: ಉಡುಗೊರೆ ಬಜೆಟ್ (Budget) ನಿರ್ಧಾರದ ಜೊತೆಗೆ ನೀವು ಯಾವ ಸಂದರ್ಭದಲ್ಲಿ ಉಡುಗೊರೆ ನೀಡ್ತಿದ್ದೀರಿ ಎಂಬುದು ಕೂಡ ಮುಖ್ಯವಾಗುತ್ತದೆ. ಅಂದ್ರೆ ಹುಟ್ಟುಹಬ್ಬ, ಮದುವೆ, ಪ್ರೇಮಿಗಳ ದಿನ, ಸ್ನೇಹಿತರ ದಿನ,  ವಾರ್ಷಿಕೋತ್ಸವ ಇತ್ಯಾದಿ ಸಂದರ್ಭ ಯಾವುದು ಎಂಬುದನ್ನು ನೆನಪಿನಲ್ಲಿಡಿ. ಉಡುಗೊರೆಯನ್ನು ಸಂದರ್ಭಕ್ಕೆ ಅನುಗುಣವಾಗಿ ಆಯ್ಕೆ ಮಾಡಬೇಕು. ಹುಟ್ಟುಹಬ್ಬದಂದು  ನೀವು ಉತ್ತಮ ಪುಸ್ತಕ, ಡೈರಿ (Dairy), ವಾಚ್ (Watch), ಸುಗಂಧ ದ್ರವ್ಯ (Perfume), ಟೈ (Tie), ಪಿನ್ (Pin),  ಶರ್ಟ್ (Shirt), ಮೊಬೈಲ್ ಫೋನ್ (Mobile Pen),  ಪೆನ್, ಸನ್ ಗಾಗಲ್ಸ್ (Sun Goggles), ಬೆಲ್ಟ್ ಇತ್ಯಾದಿಗಳನ್ನು ಉಡುಗೊರೆಯಾಗಿ ನೀಡ್ಬಹುದು. 

ಮದುವೆಯ ಸಂದರ್ಭವಾಗಿದ್ದರೆ, ಪಾತ್ರೆಗಳು, ಸುಗಂಧ ದ್ರವ್ಯ, ಶೋ ವಸ್ತು ಇತ್ಯಾದಿಗಳನ್ನು ನೀಡಬಹುದು ಅಥವಾ ಸೂಟ್‌ಕೇಸ್ ಸಹ ನೀಡಬಹುದು. ಮದುವೆಯ ವಾರ್ಷಿಕೋತ್ಸವದ ಸಂದರ್ಭವಾಗಿದ್ದರೆ, ಪತಿ ಮತ್ತು ಪತ್ನಿ ಇಬ್ಬರಿಗೂ ಉಪಯುಕ್ತವಾಗುವಂತಹ ವಸ್ತುವನ್ನು ಉಡುಗೊರೆಯಾಗಿ ನೀಡಬೇಕು. ಸುಂದರವಾದ ಪೇಂಟಿಂಗ್, ಬೆಡ್‌ಶೀಟ್-ದಿಂಬಿನ ಕವರ್‌ಗಳು, ಗೋಡೆ ಅಥವಾ ಟೇಬಲ್ ಗಡಿಯಾರ, ಶೋಪೀಸ್ ಇತ್ಯಾದಿ. 

ಮಗನ ಮನೆ ಗೃಹಪ್ರವೇಶ, ಸೊಸೆ ಪ್ರೀತಿ ಕಂಡು ಕಣ್ಣೀರಾದ ಅತ್ತೆ!

ವ್ಯಕ್ತಿಯ ಆಸಕ್ತಿಗೆ ಅನುಗುಣವಾಗಿ ಉಡುಗೊರೆ : ಇವುಗಳ ಹೊರತಾಗಿ ನೀವು  ವ್ಯಕ್ತಿಯ ಆಸಕ್ತಿಯನ್ನು ತಿಳಿದಿದ್ದರೆ ಅಥವಾ ಅವರಿಗೆ ಏನು ಬೇಕು ಎಂದು  ತಿಳಿದಿದ್ದರೆ  ಅದಕ್ಕೆ ಅನುಗುಣವಾಗಿ ನೀವು ಉಡುಗೊರೆಗಳನ್ನು ಖರೀದಿಸಬಹುದು. ನೀವು ಬಯಸಿದ್ರೆ ಬೆಳ್ಳಿ ನಾಣ್ಯಗಳನ್ನು ಸಹ ನೀಡಬಹುದು.

ಅಗತ್ಯವಿರುವಂತೆ ಉಡುಗೊರೆಗಳನ್ನು ನೀಡಿ : ಚಿಕ್ಕ ವಯಸ್ಸಿನವರಾಗಿದ್ದರೆ ಅವರಿಗೆ ರಾತ್ರಿ ಸೂಟ್, ಕುರ್ತಾ ಪೈಜಾಮ, ಶರ್ಟ್, ಟವೆಲ್ ಸೆಟ್, ಲಂಚ್ ಬಾಕ್ಸ್, ಯಾವುದಾದರೂ ಉತ್ತಮ ಆಟಿಕೆ, ಸ್ಕೂಲ್ ಬ್ಯಾಗ್ ಮುಂತಾದ ಉಡುಗೊರೆಗಳನ್ನು ಖರೀದಿಸಿ. ನಿಮ್ಮ ಬಜೆಟ್ ಹೆಚ್ಚಿದ್ದರೆ ಲ್ಯಾಪ್‌ಟಾಪ್, ಕಂಪ್ಯೂಟರ್, ದುಬಾರಿ ಮೊಬೈಲ್ ಫೋನ್ ಐಪಾಡ್, ದುಬಾರಿ ಮ್ಯೂಸಿಕ್ ಸಿಸ್ಟಮ್, ಎಲ್‌ಸಿಡಿ. ಟಿ.ವಿ. ಇತ್ಯಾದಿಗಳನ್ನೂ ನೀಡಬಹುದು. ಯಾವ ಉಡುಗೊರೆ ನೀಡ್ಬೇಕೆಂಬ ಗೊಂದಲ ನಿಮಗಿದ್ದರೆ ಬ್ಯಾಂಕ್‌ಗಳ ಉಡುಗೊರೆ ಕಾರ್ಡ್‌ಗಳನ್ನು ಸಹ ನೀಡಬಹುದು.

Real story : ಪತಿ, ಇಬ್ಬರು ಬಾಯ್ ಫ್ರೆಂಡ್ಸ್ ಇದ್ರೂ ಸಾಲ್ತಿಲ್ಲ ಈಕೆಗೆ..! ಈತನ ಹಿಂದೆ ಬಿದ್ದಿದ್ದಾಳೆ

ಇದು ಕೊನೆ ಆಯ್ಕೆಯಾಗಿರಲಿ : ಉಡುಗೊರೆ ಯಾವುದು ನೀಡ್ಬೇಕೆಂಬ ಗೊಂದಲ ಇರೋದು ಸಾಮಾನ್ಯ. ವಸ್ತುಗಳು ಹಾಳಾಗುತ್ವೆ, ಹಣ ಪ್ರಯೋಜನಕ್ಕೆ ಬರುತ್ತದೆ ಎಂದು ಕೆಲವರು ನಗದು ನೀಡ್ತಾರೆ. ಆದ್ರೆ  ಯಾವುದೇ ವಿಶೇಷ ಸಂದರ್ಭದಲ್ಲಿ ನಗದು ಲಕೋಟೆಗಳನ್ನು ಕೊನೆಯ ಆಯ್ಕೆಯಾಗಿ ಇರಿಸಿ. ಏಕೆಂದರೆ ಹಣ  ಖರ್ಚಾಗುತ್ತದೆ. ಆದರೆ ವಸ್ತುವನ್ನು ಉಡುಗೊರೆಯಾಗಿ ನೀಡಿದರೆ ಅದರ ನೆನಪು ದೀರ್ಘಕಾಲ ಉಳಿಯುತ್ತದೆ.  

 

click me!