ಹತ್ತು ಮಕ್ಕಳ ತಂದೆಗೆ 6 ಮಕ್ಕಳ ತಾಯಿ ಜೊತೆ ಪ್ರೀತಿ, ಮಕ್ಕಳ ಮದುವೆಗೂ ಮುನ್ನ ಪರಾರಿ!

By Chethan Kumar  |  First Published Jul 15, 2024, 3:58 PM IST

ಮಗನ ಮಾತುಕತೆಯಿಂದ ಮಗನ ಪತ್ನಿ ಪೋಷಕರ ಜೊತೆ ಮಾತುಕತೆ ಆರಂಭಗೊಂಡಿದೆ. ಆದರೆ ಈ ಮಾತುಕತೆ ಪ್ರೀತಿಗೆ ತಿರುಗಿದೆ. ಇತ್ತ ಮಗನ ಮದುವೆಗೂ ಮುನ್ನ ಭಾವಿ ಸೊಸೆ ತಾಯಿ ಜೊತೆ ಹುಡುಗನ ಅಪ್ಪ ಪರಾರಿಯಾಗಿದ್ದಾರೆ.
 


ಲಖನೌ(ಜು.15) ಮಗನಿಗೆ ಹೆಣ್ಣು ನೋಡಲು ಕುಟುಂಬ ಸಮೇತ ತೆರಳಿದ್ದಾರೆ. ಆದರೆ ಮಗನಿಗೆ ಹೆಣ್ಣು ನೋಡಿ ಮದುವೆ ಫಿಕ್ಸ್ ಮಾಡುವ ಜೊತೆಗೆ ಅಪ್ಪ ಕೂಡ ಸೆಟ್ ಮಾಡಿಕೊಂಡಿದ್ದಾರೆ. ಹುಡುಗಿ ಬೇರೆ ಯಾರು ಅಲ್ಲ, ತನ್ನ ಮಗನ ಪತ್ನಿಯ ತಾಯಿ. ಮಗನ ಮದುವೆ ಮಾತುಕತೆ, ಶಾಸ್ತ್ರ, ಮಂಟಪ ವಿಚಾರಗಳಿಗೆ ಕರೆ ಮಾಡುತ್ತಾ ಹುಡಗನ ಅಪ್ಪ ಹಾಗೂ ಹುಡುಗಿಯ ತಾಯಿ ನಡುವೆ ಪ್ರೀತಿ ಶುರುವಾಗಿದೆ. ಇತ್ತ ಮಗನ ಮದುವವೆ ಮುನ್ನವೇ ಇವರ ಪ್ರೀತಿ ಗಾಢವಾಗಿದೆ. ಹೀಗಾಗಿ ಮಗನ ಮದುವೆಯಾಗಿ ಸೊಸೆ ಮನೆಗೆ ಬರುವ ಮುನ್ನವೇ ಸೊಸೆ ತಾಯಿ ಜೊತೆ ಹುಡುಗನ ಅಪ್ಪ  ಪರಾರಿಯಾದ ಘಟನೆ ಉತ್ತರ ಪ್ರದೇಶದ ಕಾಸ್‌ಗಂಜ್ ಜಿಲ್ಲೆಯ್ಲಿ ನಡೆದಿದೆ. 

ದೊಡ್ಡ ಕುಟುಂಬ, ಈ ಪೈಕಿ ಒಬ್ಬ ಮಗನಿಗೆ ಮಾತುಕತೆ ಆರಂಭಗೊಂಡಿದೆ. ತಂದೆ ಹಾಗೂ ತಾಯಿ ಮಗನಿಗೆ ಮದುವೆ ಮಾಡಿಸಲು ಹುಡುಗಿ ಹುಡುಕಾಟ ಶುರು ಮಾಡಿದ್ದಾರೆ. ಕೊನೆಗೆ ಒಂದು ಹುಡುಗಿಯ ಫೋಟೋ ಮಗನಿಗೆ ತೋರಿಸಿದಾಗ ಗ್ರೀನ್ ಸಿಗ್ನಲ್ ಸಿಕ್ಕಿದೆ. ಮೇಲ್ನೋಟಕ್ಕೆ ಎಲ್ಲವೂ ಒಕೆ. ಮಗನಿಗೂ ಒಕೆ, ಅತ್ತ ಹುಡುಗಿಗೂ ಒಕೆ. ಹೀಗಾಗಿ ಹುಡುಗಿ ನೋಡುವ ಶಾಸ್ತ್ರ ಫಿಕ್ಸ್ ಮಾಡಿದ್ದಾರೆ.

Tap to resize

Latest Videos

undefined

ಮನೆಗೆ ಸರ್ಕಾರದಿಂದ ಹಣ ಪಡೆದು ಗಂಡನಿಗೆ ಕೈಕೊಟ್ಟು ಪ್ರೇಮಿಗಳ ಜೊತೆ ಮಹಿಳೆಯರು ಎಸ್ಕೇಪ್‌..!

ಹುಡುಗ, ಆತನ ಪೋಷಕರು ಹಾಗೂ ಆಪ್ತರು ಹುಡುಗಿ ಮನೆಗೆ ತೆರಳಿದ್ದಾರೆ. ಹುಡುಗಿ ನೋಡುವ ಶಾಸ್ತ್ರ ಮುಗಿಸಿದ್ದಾರೆ. ಎಲ್ಲರಿಗೂ ಒಪ್ಪಿಗೆಯಾಗಿದೆ. ಹುಡುಗ ಹಾಗೂ ಹುಡುಗಿ ಒಂದೆರಡು ಮಾತನಾಡಿದ್ದಾರೆ. ಹುಡುಗಿ ನೋಡುವ ಶಾಸ್ತ್ರ ಸಂಪನ್ನಗೊಂಡಿದೆ. ಇದೇ ವೇಳೆ ಮದುವೆ, ಶಾಸ್ತ್ರ, ಮಾತುಕತೆಗಳಿಗೆ ಎರಡೂ ಮನೆಯವರ ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದಾರೆ. ಇತ್ತ ಹುಡುಗ ಹುಡುಗಿ ಕೂಡ ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದಾರೆ.

ಹುಡುಗನ ಅಪ್ಪ ಮದುವೆ ಎಲ್ಲಾ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರ. ಹುಡುಗಿ ನೋಡುವ ಶಾಸ್ತ್ರ ಮುಗಿದ ಬಳಿಕ ಒಂದೆರೆಡು ದಿನದ ಬಳಿಕ ಮುಂದಿನ ಶಾಸ್ತ್ರಕ್ಕಾಗಿ ಹುಡುಗನ ಅಪ್ಪ, ಹುಡುಗಿಯ ತಾಯಿಗೆ ಕರೆ ಮಾಡಿದ್ದಾರೆ. ಬಳಿಕ ಎರಡು ಕುಟುಂಬದ ಶಾಸ್ತ್ರಗಳು ಮದುವೆ ಮಾತುಕತೆ ನಡೆಸಿದ್ದಾರೆ.

ಹುಡುಗನ ಅಪ್ಪ ಹಾಗೂ ಹುಡುಗಿಯ ತಾಯಿ ಮಾತುಕತೆ ಒಂದೆರೆಡು ದಿನಕ್ಕೊಮ್ಮೆ ನಡೆಯುತ್ತಿತ್ತು. ಬಳಿಕ ದಿನಕ್ಕೊಂದು ಬಾರಿಗೆ ತಿರುಗಿತ್ತು. ಮಗನ ಮದುವೆ ಮಾತುಕತೆಯಿಂದ ಹುಡುಗನ ಅಪ್ಪ ಹಾಗೂ ಹುಡುಗಿಯ ತಾಯಿ ನಡುವೆ ಪ್ರೀತಿ ಶುರುವಾಗಿದೆ. ಬಳಿಕ ಮಗನ ಮದುವೆ ಮಾತುಕತೆ ನೆಪದಲ್ಲಿ ಇವರಿಬ್ಬರ ಪ್ರೀತಿ, ಪ್ರಣಯ ಕತೆಗಳು ತೇಲಾಡಿದೆ.

ಹೀಗಾಗಿ ಮಗನ ಮದುವೆಗೆ ಉತ್ತಮ ದಿನಾಂಕ ಮಾತ್ರ ಸಿಗುತ್ತಲೇ ಇರಲಿಲ್ಲ. ಈ ಫೋನ್ ಕಾಲ್‌ನಿಂದ ಇವರಿಬ್ಬರ ಪ್ರೀತಿ ಗಾಢವಾಗಿದೆ. ಮಗನ ಮದುವೆಗೂ ಮೊದಲೇ ಹುಡುಗನ ತಂದೆ ಹಾಗೂ ಹುಡುಗಿಯ ತಾಯಿ ಪರಾರಿಯಾಗಿದ್ದಾರೆ. ಇಬ್ಬರು ನಾಪತ್ತೆಯಾದ ಬೆನ್ನಲ್ಲೇ ಕೋಲಾಹಲ ಸೃಷ್ಟಿಯಾಗಿದೆ. ಇತ್ತ ಹುಡುಗಿ ತಂದೆ ಅಪಹರಣ ದೂರು ನೀಡಿದ್ದಾರೆ.  ಪೊಲೀಸರ ತನಿಖೆ ವೇಳೆ ಇವರಿಬ್ಬರ ಫೋನ್ ಕಾಲ್ ಲಿಸ್ಟ್ ತೆಗೆದಾಗ ಅಚ್ಚರಿಯಾಗಿದೆ. ಪರಾರಿಯಾಗಿರುವ ತಾಯಿಗೆ 6 ಮಕ್ಕಳಿದ್ದರೆ, ಹುಡುಗನ ತಂದಗೆ 10 ಮಕ್ಕಳಿದ್ದಾರೆ.

ಕೈಯಲ್ಲಿ ಮದರಂಗಿ, ಪ್ರೀತಿಸಿದವನೊಂದಿಗೆ ಮದುವೆ ಫಿಕ್ಸ್; ಆದ್ರೂ ನೇಣಿಗೆ ಕೊರಳೊಡ್ಡಿದ ವಧು
 

click me!