ವಿಚ್ಛೇದನ ಪಡೆದಿದ್ದಾರಂತೆ ಆದ್ರೂ ಒಟ್ಟಿಗೆ ವಾಸಿಸ್ತಾರೆ.! ಟ್ರಿಪ್ ಅದು ಇದು ಅಂತಾ ಮಕ್ಕಳ ಜೊತೆ ಹೋಗ್ತಾರೆ..! ಅದ್ಯಾಕೆ ಡೈವರ್ಸ್ ಮಾಡ್ಕೊಳ್ಬೇಕಿತ್ತು ಮತ್ತೆ ? ಅಂತಾ ಅನೇಕರು ಸೆಲೆಬ್ರಿಟಿ ಜೋಡಿ ನೋಡಿ ಗೊಣಗಿಕೊಳ್ತಿರುತ್ತಾರೆ. ಅವರಿಗೆ ಇದ್ರಲ್ಲಿ ಉತ್ತರವಿದೆ.
ಇತ್ತೀಚಿನ ದಿನಗಳಲ್ಲಿ ವಿದೇಶ (Abroad)ಗಳಲ್ಲಿ ಮಾತ್ರವಲ್ಲ ಭಾರತ (India) ದಲ್ಲೂ ವಿಚ್ಛೇದನ (Divorce)ದ ಪ್ರವೃತ್ತಿ ಹೆಚ್ಚಾಗಿದೆ. ಭಾರತದಲ್ಲಿ ಮದುವೆಗೆ ಹೆಚ್ಚಿನ ಆದ್ಯತೆಯಿತ್ತು. ಆದ್ರೆ ಈಗ ಭಾರತದಲ್ಲೂ ಮದುವೆ ಸಂಬಂಧಕ್ಕೆ ಅರ್ಥವೇ ಬದಲಾಗುತ್ತಿದೆ. ಹಿರಿಯ ದಂಪತಿ ತಮ್ಮ ಕುಟುಂಬ ಮತ್ತು ಮಕ್ಕಳಿಗಾಗಿ ತಮ್ಮ ದಾಂಪತ್ಯ ಕೆಡದಂತೆ ನೋಡಿಕೊಳ್ಳುತ್ತಿದ್ದರು. ಅನೇಕ ಬಾರಿ ದಾಂಪತ್ಯದಲ್ಲಿ ಬಿರುಕು ಮೂಡಿದ್ದರೂ ಮಕ್ಕಳಿಗಾಗಿ ಒಟ್ಟಿಗೆ ಬಾಳ್ವೆ ಮಾಡ್ತಿದ್ದರು. ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಪ್ರೀತಿ ನೀಡುವ ಹಿನ್ನಲೆಯಲ್ಲಿ ಒಂದಾಗಿ ಬಾಳ್ವೆ ನಡೆಸಲು ಮಹತ್ವ ನೀಡುತ್ತಿದ್ದರು. ಈಗಿನ ದಂಪತಿ ಕೂಡ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಲು ಬಯಸುತ್ತಾರೆ. ಅವರಿಗೆ ತಾಯಿ ಮತ್ತು ತಂದೆಯ ಪ್ರೀತಿಯನ್ನು ನೀಡಲು ಬಯಸುತ್ತಾರೆ. ಆದರೆ ಅದೇ ಸಮಯದಲ್ಲಿ ಅವರ ಸ್ವಂತ ಸಂತೋಷವು ಅವರಿಗೆ ಮುಖ್ಯವಾಗಿದೆ. ಹಾಗಾಗಿ ಈಗ ಕೋ-ಪೇರೆಂಟಿಂಗ್ ಟ್ರೆಂಡ್ ಹೆಚ್ಚಾಗಿದೆ. ಇಂದು ನಾವು ಕೋ ಪೇರೆಂಟಿಂಗ್ ಎಂದ್ರೇನು ಹಾಗೂ ಅದರಲ್ಲಿ ಪಾಲಕರು ಏನೇನು ಮಾಡ್ಬೇಕಾಗುತ್ತದೆ ಎಂಬುದನ್ನು ಹೇಳ್ತೇವೆ.
ಕೋ ಪೇರೆಂಟಿಂಗ್(Co-Parenting) ಎಂದರೇನು? : ಅನೇಕ ಕಾರಣಗಳಿಗೆ ದಂಪತಿ ವಿಚ್ಛೇದನದ ನಿರ್ಧಾರ ತೆಗೆದುಕೊಳ್ತಾರೆ. ಇಬ್ಬರೂ ಬೇರೆ ವಾಸಕ್ಕೆ ಮುಂದಾಗ್ತಾರೆ. ಆದ್ರೆ ಒಟ್ಟಿಗೆ ಮಗುವನ್ನು ಬೆಳೆಸಲು ನಿರ್ಧರಿಸುತ್ತಾರೆ. ಮಗುವಿಗೆ ತಾಯಿ ಹಾಗೂ ತಂದೆ ಇಬ್ಬರ ಪ್ರೀತಿ ಸಮನಾಗಿ ಸಿಗಬೇಕೆಂದು ಬಯಸ್ತಾರೆ. ಅದನ್ನು ಕೋ ಪೇರೆಂಟಿಂಗ್ ಎಂದು ಕರೆಯಲಾಗುತ್ತದೆ.
ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ : ಅನೇಕ ಸೆಲೆಬ್ರಿಟಿಗಳು ಇದನ್ನು ಅನುಸರಿಸುತ್ತಿದ್ದಾರೆ. ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ಹೆಸರು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇಬ್ಬರೂ ವಿಚ್ಛೇದನ ಪಡೆದಿದ್ದಾರೆ. ಆದರೆ ಮಕ್ಕಳೊಂದಿಗೆ ಒಟ್ಟಿಗೆ ಪ್ರವಾಸಕ್ಕೆ ಹೋಗುತ್ತಾರೆ ಮತ್ತು ಕುಟುಂಬದಂತೆ ಮನೆಯಲ್ಲಿ ಗುಣಮಟ್ಟದ ಸಮಯವನ್ನು ಕಳೆಯುತ್ತಾರೆ. ಲಾಕ್‌ಡೌನ್‌ನಲ್ಲಿಯೂ ಸಹ, ಸುಸೇನ್ ತನ್ನ ಮಕ್ಕಳಿಗಾಗಿ ಹೃತಿಕ್ ಮನೆಯಲ್ಲಿ ಉಳಿದಿದ್ದರು.
ಕೋ ಪೇರೆಂಟಿಂಗ್ ನಲ್ಲಿ ಪ್ರಣಯಕ್ಕಿಲ್ಲ ಅವಕಾಶ : ಕೋ ಪೇರೆಂಟಿಗ್ ನಲ್ಲಿ ಮಕ್ಕಳ ಪೋಷಣೆ ಮಾತ್ರ ಮುಖ್ಯವಾಗುತ್ತದೆ. ಸಾಮಾನ್ಯವಾಗಿ ವಿಚ್ಛೇದನ ಪಡೆದವರ ಮಕ್ಕಳು ಅನಾಥ ಭಾವನೆ ಅನುಭವಿಸುತ್ತಾರೆ. ತಂದೆ-ತಾಯಿ ಇಬ್ಬರೂ ನನ್ನ ಜೊತೆ ಒಟ್ಟಿಗೆ ಇರಬೇಕೆಂದು ಬಯಸ್ತಾರೆ. ಮಕ್ಕಳ ಈ ಆಸೆಯನ್ನು ಈಡೇರಿಸಲು, ಅವರ ಕೊರತೆ ನೀಗಿಸಲು ಒಟ್ಟಿಗೆ ವಾಸವಾಗ್ತಾರೆಯೇ ಹೊರತು ಆ ದಾಂಪತ್ಯದಲ್ಲಿ ಪ್ರೀತಿ, ಪ್ರಣಯಕ್ಕೆ ಅವಕಾಶವಿರುವುದಿಲ್ಲ. ಇದನ್ನು ಜಾಯಿಂಟ್ ಪೇರೆಂಟಿಂಗ್ ಎಂದೂ ಕರೆಯುತ್ತಾರೆ.
ಇದರಲ್ಲಿ ದಂಪತಿ ಮಗುವನ್ನು ಒಟ್ಟಿಗೆ ನೋಡಿಕೊಳ್ಳುವುದು ಮಾತ್ರವಲ್ಲದೆ ಮಗುವಿನ ಶಿಕ್ಷಣ, ವೈದ್ಯಕೀಯ ಆರೈಕೆ ಮತ್ತು ಇತರ ಪ್ರಮುಖ ನಿರ್ಧಾರಗಳನ್ನು ಒಟ್ಟಿಗೆ ತೆಗೆದುಕೊಳ್ಳುತ್ತಾರೆ. ಅಮೆರಿಕಾದಲ್ಲಿ ಸುಮಾರು ಶೇಕಡಾ 40ರಷ್ಟು ಮಕ್ಕಳು ಕೋ ಪೇರೆಂಟಿಂಗ್ ವಿಧಾನ ಅನುಸರಿಸುತ್ತಿದ್ದಾರೆ.
ಕೋ ಪೇರೆಂಟಿಂಗ್ ಪ್ರಯೋಜನ : ಕೋ ಪೇರೆಂಟಿಂಗ್ ನಲ್ಲಿ ಯಶಸ್ವಿಯಾದರೆ, ಅದು ಮಕ್ಕಳಿಗೆ ಹಲವು ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತದೆ. ಕೋ ಪೇರೆಂಟಿಂಗ್ ನಲ್ಲಿ ಬೆಳೆಯುವ ಮಕ್ಕಳು ಒಳ್ಳೆ ನಡತೆ ಹೊಂದಿರುತ್ತಾರೆ. ಪೋಷಕರ ಮಧ್ಯೆ ಸದಾ ಗಳವಾಗ್ತಿದ್ದರೆ ಅಥವಾ ಸಿಂಗಲ್ ಪೇರೆಂಟಿಂಗ್ ನಲ್ಲಿ ಮಗು ಬೆಳೆಯುತ್ತಿದ್ದರೆ ಆ ಮಕ್ಕಳಿಗಿಂತ ಕೋ ಪೇರೆಂಟಿಂಗ್ ನಲ್ಲಿ ಬೆಳೆಯುವ ಮಗು ತಂದೆಗೆ ಹೆಚ್ಚು ಹತ್ತಿರವಾಗಿರುತ್ತದೆ.
Parenting Tips: ಪೋಷಕರು ಮಕ್ಕಳ ಜೊತೆ ಹೇಗಿರಬೇಕು ?
ಉತ್ತಮ ಕೋ ಪೇರೆಂಟ್ ಆಗುವುದು ಹೇಗೆ? : ಮಾಜಿ ಪತಿ ಅಥವಾ ಹೆಂಡತಿಯನ್ನು ಕ್ಷಮಿಸಲು ನಿಮಗೆ ಸಾಧ್ಯವಾಗದಿದ್ದರೆ, ನೀವು ಉತ್ತಮ ಕೋ ಪೇರೆಂಟ್ ಆಗಲು ಸಾಧ್ಯವಾಗುವುದಿಲ್ಲ. ನಿಮ್ಮ ಕೋಪವನ್ನು ನಿಮ್ಮ ಸ್ನೇಹಿತರು ಅಥವಾ ಕುಟುಂಬದ ಮೇಲೆ ತೋರಿಸಿ ಆದರೆಕೋ ಪೇರೆಂಟ್ ಮೇಲೆ ಅಲ್ಲ. ಮಗುವಿನ ಉತ್ತಮ ಭವಿಷ್ಯಕ್ಕಾಗಿ ನಿಮ್ಮ ಮಾಜಿ ಜೊತೆಗಿನ ಸಂಬಂಧವನ್ನು ಸುಧಾರಿಸುವ ಕೆಲಸ ಮಾಡಬೇಕು.
ಆರೋಪದಿಂದ ದೂರವಿರಿ : ಯಾವುದಕ್ಕೂ ನಿಮ್ಮ ಮಗುವಿನ ಸಹ-ಪೋಷಕರನ್ನು ಟೀಕಿಸಬೇಡಿ ಅಥವಾ ದೂಷಿಸಬೇಡಿ. ಮಾತನಾಡುವ ಮೊದಲು ಇತರ ವ್ಯಕ್ತಿಯು ನಿಮ್ಮ ಅಭಿಪ್ರಾಯವನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದರ ಕುರಿತು ಯೋಚಿಸಿ.
RELATIONSHIPS: ಪತ್ನಿ ಸತ್ತು 8 ತಿಂಗಳಿಗೇ ಪ್ರೀತಿಗೆ ಬಿದ್ದ ವ್ಯಕ್ತಿ, ಗರ್ಲ್‌ಫ್ರೆಂಡ್‌ಗೆ ಹುಟ್ಟಿತು ಗೊಂದಲ!
ಕಡಿಮೆ ಮಾತನಾಡಿ : ಕೋ ಪೇರೆಂಟ್ ಹೆಚ್ಚು ಮಾತನಾಡುವ ಅಗತ್ಯವಿಲ್ಲ. ಆದರೆ ಮಾತನಾಡುವಾಗ ಸಿಹಿಯಾದ ಮಾತುಗಳನ್ನೇ ಆಡಿ. ಮಕ್ಕಳ ಮುಂದೆ ನೀವಿಬ್ಬರೂ ಜಗಳವಾಡಿದ್ರೆ ಅದು ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ.