ಪ್ರೀತಿಸುವ ವ್ಯಕ್ತಿಯನ್ನು ಮರೆಯುವುದು ಕಷ್ಟ. ಹಾಗೆ ಪ್ರೀತಿಯಲ್ಲಾದ ನೋವನ್ನು ಸಹಿಸಲೂ ಸಾಧ್ಯವಿಲ್ಲ. ಒಂದು ಕಡೆ ಪ್ರೀತಿ ಇನ್ನೊಂದು ಕಡೆ ಹಳೆ ನೆನಪು. ಈ ಎರಡರ ಮಧ್ಯೆ ಜೀವನ ಸಾಗಿಸ್ತಿರುವ ಈ ಮಹಿಳೆ ಸಮಸ್ಯೆಗೆ ಪರಿಹಾರಬೇಕಂತೆ.
ಯಾವುದೇ ಸಂಬಂಧ (Relation)ವೂ ಸಂಪೂರ್ಣ ಪರ್ಫೆಕ್ಟ್ (Perfect )ಆಗಿರುವುದಿಲ್ಲ. ಪ್ರತಿಯೊಂದು ಸಂಬಂಧದಲ್ಲೂ ಒಂದಲ್ಲ ಒಂದು ಕೊರತೆ,ಸಮಸ್ಯೆಯಿರುತ್ತದೆ. ಅದೆಲ್ಲವನ್ನೂ ಸರಿದೂಗಿಸಿಕೊಂಡು ಹೋದಾಗ ಮಾತ್ರ ಸಂಬಂಧ ಗಟ್ಟಿಯಾಗುತ್ತದೆ. ದಾಂಪತ್ಯದಲ್ಲೂ ಸಮಸ್ಯೆಗಳು ಸಾಮಾನ್ಯ. ದಂಪತಿ ಮಧ್ಯೆ ಕಾಣಿಸಿಕೊಳ್ಳುವ ಭಿನ್ನಾಭಿಪ್ರಾಯವನ್ನು ಅಲ್ಲಿಯೇ ಬಗೆಹರಿಸಿಕೊಳ್ಳಬೇಕು. ಅದನ್ನು ಎಂದಿಗೂ ಮುಂದುವರೆಸಿಕೊಂಡು ಹೋಗಬಾರದು. ಪರಸ್ಪರ ಇದಕ್ಕೆ ಪರಿಹಾರ ಸಿಕ್ಕಿಲ್ಲವೆಂದಾದ್ರೆ ನೀವು ತಜ್ಞರ ಸಲಹೆ ಪಡೆಯಬಹುದು. ಕೌಟುಂಬಿ ಸಮಸ್ಯೆ ಬಗೆಹರಿಸಲು ಕೌನ್ಸಿಲರ್ ಮೊರೆ ಹೋಗಬಹುದು. ಅವರು ನಿಮ್ಮ ಸಮಸ್ಯೆಯನ್ನು ಆಲಿಸಿ ಅದಕ್ಕೆ ಪರಿಹಾರ ನೀಡುತ್ತಾರೆ.
ಇತ್ತೀಚಿನ ದಿನಗಳಲ್ಲಿ ಜನರು ಕೌನ್ಸಿಲರ್ ಬಳಿ ಹೋಗುವ ಬದಲು ಸಾಮಾಜಿಕ ಜಾಲತಾಣದ ಮೂಲಕ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳುವ ಹಾಗೂ ಪರಿಹಾರ ಕಂಡುಕೊಳ್ಳುವ ಯತ್ನ ನಡೆಸುತ್ತಾರೆ. ಮಹಿಳೆಯೊಬ್ಬಳು ತನ್ನ ಅನುಮಾನವನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾಳೆ. ಮುಂದೇನು ಮಾಡ್ಬೇಕೆಂದು ತಜ್ಞರ ಸಲಹೆ ಕೂಡ ಕೇಳಿದ್ದಾಳೆ. ಆಕೆಯ ಸಮಸ್ಯೆ ಆಲಿಸಿದ ತಜ್ಞರು ಸೂಕ್ತ ಸಲಹೆ ನೀಡಿದ್ದಾರೆ. ಅಷ್ಟಕ್ಕೂ ಆ ಮಹಿಳೆಗೆ ಕಾಡುತ್ತಿರುವ ಪ್ರಶ್ನೆಯೇನು ಎಂಬುದನ್ನು ನಾವಿಂದು ಹೇಳ್ತೇವೆ.
ಮಹಿಳೆ ಬಾಳಿನಲ್ಲಿ ಆಗಿದ್ದೇನು? : ಸಾಮಾಜಿಕ ಜಾಲತಾಣದಲ್ಲಿ ಸಮಸ್ಯೆ ಹಂಚಿಕೊಂಡಿರುವ ಮಹಿಳೆ ವಯಸ್ಸು 41 ವರ್ಷ. ಆಕೆಗೆ ಮದುವೆಯಾಗಿದೆ. ಆದ್ರೆ ದಾಂಪತ್ಯ ಮುರಿದು ಬಿದ್ದ ನಂತ್ರ ಆಕೆ ಇನ್ನೊಬ್ಬ ವ್ಯಕ್ತಿ ಜೊತೆ ಸಂಬಂಧದಲ್ಲಿದ್ದಾಳೆ. ಆತನ ವಯಸ್ಸು 46. ಆತನಿಗೆ ಮೂರು ಮಕ್ಕಳು. ಮಗಳ ವಯಸ್ಸು 6 ವರ್ಷ. ಮತ್ತಿಬ್ಬರು ಗಂಡು ಮಕ್ಕಳ ವಯಸ್ಸು 7 ಮತ್ತು 9 ವರ್ಷ. ಮಕ್ಕಳಿಗೆ ತಾಯಿಯಿಲ್ಲ. ದೀರ್ಘಸಮಯದ ಖಾಯಿಲೆಯಿಂದಾಗಿ 8 ತಿಂಗಳ ಹಿಂದೆ ತಾಯಿ ಸಾವನ್ನಪ್ಪಿದ್ದಾಳೆ. ಪತ್ನಿಯನ್ನು ಅತಿಯಾಗಿ ಪ್ರೀತಿ ಮಾಡ್ತಿದ್ದ ವ್ಯಕ್ತಿ 8 ತಿಂಗಳಲ್ಲಿ ಎಲ್ಲವನ್ನೂ ಮರೆತು ಮತ್ತೊಂದು ಸಂಬಂಧ ಬೆಳೆಸಿದ್ದಾನೆ. ಇದೇ ಮಹಿಳೆಗೆ ಕಾಡ್ತಿರುವ ದೊಡ್ಡ ಪ್ರಶ್ನೆಯಾಗಿದೆ.
Cheating Partner: ಸಂಗಾತಿಯಿಂದ ಮೋಸ ಹೋದಿರಾ? ಒಂದು ಕ್ಷಣ ನಿಲ್ಲಿ
ಮಹಿಳೆಯ ಮಾಜಿ ಪತಿ ಆಕೆಗೆ ಹಿಂಸೆ ನೀಡುತ್ತಿದ್ದನಂತೆ. ಪ್ರತಿ ದಿನ ಹೊಡೆಯುತ್ತಿದ್ದ ಪತಿ,ವಿವಾಹೇತರ ಸಂಬಂಧದ ಸುದ್ದಿ ಕೇಳಿ ಮತ್ತಷ್ಟು ಹಿಂಸೆ ನೀಡಿದ್ದಾನೆ. ಹಿಂಸೆ ತಾಳಲಾರದೆ ಮಹಿಳೆ ಪತಿಯಿಂದ ದೂರವಾಗಿದ್ದಾಳೆ.
ಈಗ ಮಹಿಳೆಗೆ ಮೂವರು ಮಕ್ಕಳ ತಂದೆ ಜೊತೆ ಸಂಬಂಧ ಮುಂದುವರೆದಿದೆ. ಆದ್ರೆ ಆ ವ್ಯಕ್ತಿ,ಪತ್ನಿ ಪ್ರೀತಿ ಮರೆಯಲು ತನ್ನ ಆಶ್ರಯ ಪಡೆದಿದ್ದಾನೆ ಎಂಬ ಅನುಮಾನ ಮಹಿಳೆಗೆ ಮೂಡಿದೆ. ಪತ್ನಿ ಸಾವನ್ನಪ್ಪಿ ಇನ್ನೂ 8 ತಿಂಗಳು ಕಳೆದಿಲ್ಲ. ಆಗ್ಲೇ ಆಕೆಯನ್ನು ಮರೆತು ತನ್ನ ಜೊತೆ ಬಂದಿದ್ದಾನೆ. ಅಂದ್ರೆ ಆಕೆಯನ್ನು ಮರೆಯಲು ಮಾತ್ರ ಆತ ತನ್ನನ್ನು ಬಳಸಿಕೊಳ್ತಿದ್ದಾನಾ ಎಂಬ ಅನುಮಾನ ಆಕೆಯದ್ದು.
ಆತನ 6 ವರ್ಷದ ಮಗಳು ಈಕೆಯನ್ನು ತುಂಬಾ ಇಷ್ಟಪಡ್ತಾಳಂತೆ. ಮಗುವಿಗೆ ತಲೆ ಬಾಚುವುದ್ರಿಂದ ಹಿಡಿದು ಅನೇಕ ಕೆಲಸವನ್ನು ಮಹಿಳೆ ಪ್ರೀತಿಯಿಂದ ಮಾಡ್ತಾಳಂತೆ. ಮಕ್ಕಳೆಲ್ಲರಿಗೂ ನನ್ನನ್ನು ಕಂಡ್ರೆ ಇಷ್ಟ. ಆತನೂ ಪ್ರೀತಿ ತೋರಿಸುತ್ತಾನೆ. ಆದ್ರೆ ಆತನ ಪ್ರೀತಿಯಲ್ಲಿ ನನಗೆ ಅನುಮಾನವಿದೆ ಎನ್ನುತ್ತಾಳೆ ಮಹಿಳೆ.
Sex Life : ಸಂಭೋಗದ ವೇಳೆ ಕಾಂಡೋಮ್ ಹರಿಯುತ್ತಾ? ಮಾಡ್ಬೇಡಿ ಈ ತಪ್ಪು
ಇದಕ್ಕೆ ತಜ್ಞರು ಸಲಹೆ ಕೂಡ ನೀಡಿದ್ದಾರೆ. ಪತ್ನಿ ಸತ್ತ 8 ತಿಂಗಳಲ್ಲಿ ಆತ ಎಲ್ಲವನ್ನೂ ಮರೆಯಬಾರದು ಎನ್ನುವ ನಿಯಮವಿಲ್ಲ. ಕೆಲವರು ಈ ವಿಷ್ಯದಲ್ಲಿ ಸ್ಟ್ರಾಂಗ್ ಆಗಿರುತ್ತಾರೆ. ಆದದ್ದನ್ನು ಮರೆತು ಮುಂದೆ ಸಾಗುತ್ತಾರೆ. ನಿಮ್ಮ ಪ್ರೇಮಿ ಕೂಡ ಇವರಲ್ಲಿ ಒಬ್ಬರಾಗಿರಬಹುದು. ನೀವು ಇದಕ್ಕೆ ಖುಷಿಪಡಬೇಕು. ನಿಮ್ಮ ಮನಸ್ಸಿಗೆ ಸಮಾಧಾನವಿಲ್ಲವೆಂದಾದ್ರೆ ನೀವು ಒಮ್ಮೆ ಪ್ರೇಮಿ ಬಳಿ ನಿಮ್ಮ ವಿಷ್ಯವನ್ನು ಪ್ರಸ್ತಾಪಿಸಿ. ಮಾಜಿ ಪತಿಯ ಹಿಂಸೆಯನ್ನು ಆತನ ಮುಂದೆ ಹೇಳಿ. ಆತ ನಿಮಗೆ ಸರಿಯೆನ್ನಿಸುವ ಉತ್ತರ ನೀಡದೆ ಹೋದಲ್ಲಿ, ಆತನ ಜೊತೆಗಿರಬೇಕೋ,ಬೇಡ್ವೋ ಎಂಬ ನಿರ್ಧಾರವನ್ನು ತೆಗೆದುಕೊಳ್ಳಿ ಎಂದಿದ್ದಾರೆ.