ಎದುರುಬದುರಾದರೂ ಮಾಜಿ ಪ್ರೇಮಿಯನ್ನು ನೋಡಿಯೂ ನೋಡದಂತೆ ಮುಂದೆ ಸಾಗಿದ ಬೆಬೋ

By Anusha Kb  |  First Published Feb 21, 2024, 3:56 PM IST

ಕಾರ್ಯಕ್ರಮವೊಂದರಲ್ಲಿ ಎದುರು ಸಿಕ್ಕ ಮಾಜಿ ಪ್ರೇಮಿ ಶಾಹೀದ್ ಕಪೂರ್ ಅವರತ್ತ ನಟಿ ಕರೀನಾ ಕಪೂರ್  ತಲೆ ಎತ್ತಿಯೂ ನೋಡದೇ ಮುಂದೆ ಸಾಗಿದ್ದು ಈ ವೀಡಿಯೋ ಈಗ ವೈರಲ್ ಆಗಿದೆ.


ಮಾಜಿ ಪ್ರೇಮಿಗಳನ್ನು, ಮತ್ತೆ ನೋಡುವುದಕ್ಕೆ ಯಾರೂ ಕೂಡ ಇಷ್ಟಪಡುವುದಿಲ್ಲ, ಅದು ಸೆಲೆಬ್ರಿಟಿಗಳಾದರೂ ಅಷ್ಟೇ ಸಾಮಾನ್ಯರಾದರೂ ಅಷ್ಟೇ ಆದರೆ ಒಂದೇ ಫೀಲ್ಡ್‌ನಲ್ಲಿರುವ ಸೆಲೆಬ್ರಿಟಿಗಳು ಕೆಲವೊಮ್ಮೆ ಅನಿವಾರ್ಯ ಕಾರಣಗಳಿಗೆ ಮೂಡ್ ಹಾಳು ಮಾಡಿಕೊಳ್ಳಬಾರದು ಎಂಬ ಅನಿವಾರ್ಯತೆಯಿಂದ ಮಾಜಿ ಪ್ರೇಮಿಗಳನ್ನು ಮಾತನಾಡಿಸುತ್ತಾರೆ ಸ್ನೇಹಿತರಾಗಿ ಇರುತ್ತಾರೆ. ಆದರೆ ಬಾಲಿವುಡ್ ನಟಿ ಕರೀನಾ ಕಪೂರ್ ಮಾತ್ರ ಸಾಮಾನ್ಯರಂತೆ ಮಾಜಿ ಪ್ರೇಮಿಯನ್ನು ಎಲ್ಲಿಡಬೇಕೋ ಅಲ್ಲೇ ಇಟ್ಟಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ತನ್ನ ಮಾಜಿ ಗೆಳೆಯನತ್ತ ಕಣ್ಣೆತ್ತಿಯೂ ನೋಡದೇ ಮುಂದೆ ಸಾಗಿದ್ದಾರೆ. ಆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ. 

ಕರೀನಾ ಕಪೂರ್ ಹಾಗೂ ಶಾಹೀದ್ ಕಪೂರ್ ಬಾಲಿವುಡ್‌ನ ಒಂದು ಕಾಲದ ಸೂಪರ್ ಹಿಟ್ ಜೋಡಿ, 2004 ಫಿದಾ ಸಿನಿಮಾ ಸೆಟ್‌ನಲ್ಲಿ ಶುರುವಾದ ಇವರ ಈ ಪ್ರೇಮ ಸಂಬಂಧ 2007 ಸೂಪರ್ ಹಿಟ್ ಚಿತ್ರ ಜಬ್ ವಿ ಮೆಟ್ ವರೆಗೆ ಮುಂದುವರೆದು ನಂತರ ಅದೇನಾಯ್ತೋ ಏನೋ ಇಬ್ಬರು ಪರಸ್ಪರ ದೂರಾದರು. ಇವರ ಈ ಬ್ರೇಕಾಪ್‌ ಸಾಕಷ್ಟು ಅಭಿಮಾನಿಗಳಿಗೆ ಬೇಸರ ತರಿಸಿತ್ತು, ನಂತರ 2012ರಲ್ಲಿ ಕರೀನಾ ಸೈಫ್ ಅಲಿ ಖಾನ್‌ರನ್ನ ಮದ್ವೆಯಾಗುವ ಮೂಲಕ ಶಾಹೀದ್ ಕಪೂರ್ ಜೊತೆಗಿನ ತಮ್ಮ ಈ ಪ್ರೇಮ ಸಂಬಂಧಕ್ಕೆ ಪೂರ್ಣ ವಿರಾಮ ಹಾಕಿದ್ದರು. ಆದರೂ ಇಂದಿಗೂ ಇವರ ಲವ್‌ಸ್ಟೋರಿ ಚರ್ಚೆಯಲ್ಲಿದೆ. ಹೀಗಿರುವಾಗ ಕಾರ್ಯಕ್ರಮವೊಂದರಲ್ಲಿ ಈ ಮಾಜಿ ಪ್ರೇಮಿಗಳು ಎದುರುಬದುರಾಗಿದ್ದು, ಹಳೆ ಪ್ರೇಮಿಯನ್ನು ನೋಡಿಯೋ ನೋಡದಂತೆ ಮುಂದೆ ಸಾಗಿದ್ದಾರೆ ಕರೀನಾ.

Tap to resize

Latest Videos

ಯಶ್​ ಜೊತೆ ಟಾಕ್ಸಿಕ್​ನಲ್ಲಿ ಕರೀನಾ ಕಪೂರ್​ ನಟಿಸ್ತಾ ಇರೋದು ನಿಜನಾ? ನಟಿ ನೀಡಿದ ಅಪ್​ಡೇಟ್​ ಏನು?

ಮುಂಬೈನಲ್ಲಿ ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ಸಮಾರಂಭ ನಡೆಯುತ್ತಿದ್ದು, ಈ ಸಮಾರಂಭಕ್ಕೆ ಬಾಲಿವುಡ್‌ನ ಅನೇಕ ನಟ ನಟಿಯರು ಆಗಮಿಸಿದ್ದಾರೆ. ಅದರಂತೆ ಶಾಹೀದ್ ಕಪೂರ್ ಈಗಾಗಲೇ ಕಾರ್ಯಕ್ರಮಕ್ಕೆ ಆಗಮಿಸಿ ಪಾಪಾರಾಜಿಗಳಿಗೆ  ಫೋಸ್‌ ನೀಡುತ್ತಿದ್ದರೆ, ಆಗ ಅಲ್ಲಿಗೆ ಬಂದ ಕರೀನಾ ತನ್ನ ಮಾಜಿ ಗೆಳೆಯನತ್ತ ತಲೆ ಎತ್ತಿಯೂ ನೋಡದೇ ಮುಂದೆ ಸಾಗಿದ್ದಾರೆ. 

ಈ ವೀಡಿಯೋಗಳು ಈಗ ವೈರಲ್ ಆಗಿದ್ದು, ಶಾಹಿದ್ ಕಪೂರ್ ಸಿನಿಮ ನಿರ್ಮಾಪಕರಾದ ರಾಜ್ ಹಾಗೂ ಡಿಕೆಯವರ ಜೊತೆ ಖುಷಿ ಖುಷಿಯಿಂದ  ಫೋಟೋಗ್ರಾಫರ್‌ಗಳಿಗೆ ಫೋಸ್ ನೀಡುತ್ತಿದ್ದಾರೆ. ಈ ವೇಳೆ ಅಲ್ಲಿಗೆ ಬೆಬೋ ಆಗಮನವಾಗಿದೆ. ಬೆಬೋ ನೋಡುತ್ತಿದ್ದಂತೆ ಶಾಹೀದ್ ಆಕೆಯತ್ತ ನಗು ಚೆಲ್ಲಿದ್ದಾರೆ. ಆದರೆ ಕರೀನಾ ಮಾತ್ರ ಅವನತ್ತ ನೋಡದೇ ವೇಗವಾಗಿ ಮುಂದೆ ಸಾಗಿದ್ದಾರೆ. ಆದರೆ ಶಾಹೀದ್ ಜೊತೆಗಿದ್ದ ಸಿನಿಮಾ ನಿರ್ಮಾಪಕರಾದ ರಾಜ್ ಅವರನ್ನು ನೋಡಿ ಮಂದಹಾಸ ಬೀರಿದ್ದಾರೆ.  ಈ ವೀಡಿಯೋಗೆ ಈಗ ನೆಟ್ಟಿಗರು ತರ ತರಹದ ಕಾಮೆಂಟ್ ಮಾಡ್ತಿದ್ದಾರೆ. 

ಮುಸ್ಲಿಂ ಮದ್ವೆಯಾದ ಕರೀನಾ ಆರಾಧಿಸುವ ಧರ್ಮ ಯಾವುದು? KWK ಶೋದಲ್ಲಿ ರಿವೀಲ್ ಆಯ್ತು ಸತ್ಯ!

ಕೆಲವರು ಶಾಹೀದ್ ಬೆಂಬಲಿಸಿ ಕಾಮೆಂಟ್ ಮಾಡ್ತಿದ್ರೆ ಮತ್ತೆ ಕೆಲವರು ಕರೀನಾರನ್ನ ಬೆಂಬಲಿಸಿದ್ದಾರೆ.   ಕರೀನಾ ನಕ್ಕರೂ  ನಗದೇ ಇದ್ದರೂ ಶಾಹೀದ್‌ಗೆ ಏನು ಬದಲಾಗುವುದಿಲ್ಲ,  ಅವರು ಸದಾ ಕೂಲ್ ಆಗಿರುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಕರೀನಾ ಬಗ್ಗೆ ಶಾಹೀದ್ ನೀಡಿದ ಎಲ್ಲಾ ಕೆಟ್ಟ ಕಾಮೆಂಟ್‌ಗಳ ನಂತರವೂ ಆಕೆ ಶಾಹೀದ್‌ಗೆ ವಿಶ್ ಮಾಡಬೇಕು ಎಂದು ನೀವು ಬಯಸುತ್ತೀರಾ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

 
 
 
 
 
 
 
 
 
 
 
 
 
 
 

A post shared by Snehkumar Zala (@snehzala)

 

click me!