ಮಗು ಆಗಿ 5 ದಿನ ಆದ್ಮೇಲೆ ವಿಷ್ಯ ಬಹಿರಂಗ, ಪ್ರೆಗ್ನೆನ್ಸಿ ವಿಷಯಾನೂ ವಿರುಷ್ಕಾ ಗುಟ್ಟಲ್ಲಿಟ್ಟಿದ್ದೇಕೆ?

By Suvarna News  |  First Published Feb 21, 2024, 12:54 PM IST

ಭಾರತದ ಪ್ರಸಿದ್ಧ ಜೋಡಿ ವಿರುಷ್ಕ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ. ಸದ್ದಿಲ್ಲದೆ ಇನ್ನೊಂದು ಮಗುವಿಗೆ ಜನ್ಮ ನೀಡಿದ ಅನುಷ್ಕಾ ಶರ್ಮಾ, ತಾಯ್ತನವನ್ನು ಆನಂದಿಸುತ್ತಿದ್ದಾರೆ. ಲಂಡನ್ ಆಸ್ಪತ್ರೆಯಲ್ಲಿ ಅನುಷ್ಕಾ ಮುದ್ದಾದ ಗಂಡು ಮಗು ಹೆತ್ತಿದ್ದಾರೆ. 
 


ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಭಾರತದ ಅತ್ಯಂತ ಜನಪ್ರಿಯ ಸೆಲೆಬ್ರಿಟಿ ಜೋಡಿ. ಅನುಷ್ಕಾ ಹಾಗೂ ಕೊಹ್ಲಿ ಏನೇ ಮಾಡಿದ್ರೂ ಅದು ಸುದ್ದಿಯಾಗುತ್ತದೆ. ಅವರ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಜನರು ಆಸಕ್ತಿ ಹೊಂದಿರುತ್ತಾರೆ. ಅನುಷ್ಕಾ ಹಾಗೂ ಕೊಹ್ಲಿ ಈಗ ಎರಡನೇ ಮಗುವಿಗೆ ಪಾಲಕರಾಗಿದ್ದಾರೆ. ಅನುಷ್ಕಾ ಎರಡನೇ ಬಾರಿ ಗರ್ಭಧರಿಸಿದ್ದಾರೆ ಎಂಬ ವಿಷ್ಯ ಅಭಿಮಾನಿಗಳಿಗಿರಲಿ ಮಾಧ್ಯಮಗಳಿಗೂ ತಿಳಿದಿರಲಿಲ್ಲ. ಫೆಬ್ರವರಿ ಇಪ್ಪತ್ತರಂದು ವಿರುಷ್ಕಾ, ಅಭಿಮಾನಿಗಳಿಗೆ ಅಚ್ಚರಿಯ ಸುದ್ದಿ ನೀಡಿದ್ದಾರೆ. ಫೆಬ್ರವರಿ 15, 2024ರಂದು ಎರಡನೇ ಮಗುವಿಗೆ ಅನುಷ್ಕಾ ಜನ್ಮ ನೀಡಿರುವುದಾಗಿ ತಿಳಿಸಿದ್ದಾರೆ. ಅನುಷ್ಕಾ ಗಂಡು ಮಗುವಿಗೆ ಜನ್ಮ ನೀಡಿದ್ದು ಅಕಾಯ್ ಎಂದು ಹೆಸರಿಡಲಾಗಿದೆ. ಮೊದಲ ಮಗಳು ಜನವರಿ 2021 ರಲ್ಲಿ ಜನಿಸಿದ್ದು ಅವಳಿಗೆ ವಾಮಿಕಾ ಎಂದು ಹೆಸರಿಟ್ಟಿದ್ದರು. 

ಸೆಲೆಬ್ರಿಟಿ (Celebrity) ಅಂದ್ಮೇಲೆ ಮಾಧ್ಯಮಗಳ ಕಣ್ಣು ಅವರ ಮೇಲಿರುತ್ತೆ. ಆದ್ರೆ ಮಾಧ್ಯಮ (Media) ದ ಗಮನ ಮತ್ತು ಊಹಾಪೋಹಗಳನ್ನು ತಪ್ಪಿಸಲು ವಿರುಷ್ಕಾ (Virushka) ಬಯಸಿದ್ದರು. ಅನುಷ್ಕಾ ಮತ್ತು ವಿರಾಟ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ತುಂಬಾ ಗಂಭೀರವಾಗಿದ್ದಾರೆ. ಅವರು  ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. 

Latest Videos

undefined

ವಿರುಷ್ಕಾ ದಂಪತಿ 2ನೇ ಮಗುವಿಗೆ ಅಕಾಯ್ ನಾಮಕರಣ,ಈ ಹೆಸರಿನ ಅರ್ಥವೇನು?

ಎರಡನೇ ಗರ್ಭಧಾರಣೆ ಮುಚ್ಚಿಡಲು ಕಾರಣ : 

ಮಾಧ್ಯಮಗಳ ಒತ್ತಡ: 2020 ರಲ್ಲಿ ಮೊದಲ ಬಾರಿ ಗರ್ಭ ಧರಿಸಿದ್ದ ವೇಳೆ ಅನುಷ್ಕಾ ಹಾಗೂ ಕೊಹ್ಲಿ ಈ ವಿಷ್ಯವನ್ನು ಬಹಿರಂಗಪಡಿಸಿದ್ದರಲ್ಲದೆ, ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದರು. ಅನುಷ್ಕಾ ಹೆರಿಗೆಯಾಗುವವರೆಗೂ ಅವರ ಮೇಲೆ ಮಾಧ್ಯಮದ ಕಣ್ಣಿತ್ತು. ಈ ಬಾರಿ ಮಾಧ್ಯಮಗಳು ಮತ್ತು ಸಾರ್ವಜನಿಕರಿಂದ ಅನಗತ್ಯ ಗಮನ ಮತ್ತು ಒತ್ತಡವನ್ನು ತಪ್ಪಿಸಲು ವಿರುಷ್ಕ ಬಯಸಿದಂತೆ ಕಾಣುತ್ತದೆ. ಆರೋಗ್ಯ ಮತ್ತು ಸಂತೋಷಕ್ಕೆ ಹೆಚ್ಚು ಆದ್ಯತೆ ನೀಡಿದ ಕಾರಣ ಅವರು ಈ ವಿಷ್ಯವನ್ನು ಮುಚ್ಚಿಟ್ಟಿದ್ದರು.

 

 

ಟುಂಬದ ಸಂಪ್ರದಾಯ (Family Ritual) : ಅನುಷ್ಕಾ ಶರ್ಮಾ ಮತ್ತು ವಿರಾಟ್ ವಿಭಿನ್ನ ಹಿನ್ನೆಲೆ ಮತ್ತು ಸಂಸ್ಕೃತಿಯಿಂದ ಬಂದವರು. ಅವರು ತಮ್ಮ ಎರಡನೇ ಗರ್ಭಧಾರಣೆಯ (Second Pregnancy) ಬಗ್ಗೆ ತಮ್ಮ ಕುಟುಂಬದ ಇಚ್ಛೆ ಮತ್ತು ಸಂಪ್ರದಾಯಗಳನ್ನು ಅನುಸರಿಸಿರಬಹುದು. ಅವರು ತಮ್ಮ ಹಿರಿಯರನ್ನು ಸಂಪರ್ಕಿಸಿ ಅವರ ಆಶೀರ್ವಾದ ಮತ್ತು ಸಲಹೆಯನ್ನು ಪಡೆದಿರಬಹುದು. ಗರ್ಭಾವಸ್ಥೆಯನ್ನು ಒಂದು ನಿರ್ದಿಷ್ಟ ಸಮಯ ಅಥವಾ ಘಟನೆಯವರೆಗೆ ರಹಸ್ಯವಾಗಿಡಲು ಬಯಸಿರಬಹುದು.

ಗರ್ಭಾವಸ್ಥೆಯ ಆನಂದ (Feeling the pregnancy) : ಅನುಷ್ಕಾ ಹಾಗೂ ಕೊಹ್ಲಿ ತಮ್ಮ ಎರಡನೇ ಮಗುವಿನ ಆಗಮನವನ್ನು ಶಾಂತವಾಗಿ ಆನಂದಿಸಲು ಬಯಸಿರಬಹುದು. ಇಬ್ಬರೂ ಬ್ಯುಸಿ ಜೀವನದಲ್ಲಿ ಸ್ವಲ್ಪ ವಿಶ್ರಾಂತಿ ಪಡೆದು, ಮಗಳ ಜೊತೆ ಸಮಯ ಕಳೆದಿದ್ದಲ್ಲದೆ ಗರ್ಭಾವಸ್ಥೆ ಸಮಯದಲ್ಲಿ ಶಾಂತವಾಗಿ ಹಾಗೂ ಗೌಪ್ಯವಾಗಿ ಗರ್ಭಧಾರಣೆ ಆನಂದಿಸಲು ಬಯಸಿದ್ದ ಕಾರಣ ಈ ವಿಷ್ಯವನ್ನು ಮುಚ್ಚಿಟ್ಟಿರುವ ಸಾಧ್ಯತೆ ಇದೆ. 

ಅಭಿಮಾನಿ  ಮತ್ತು ಹಿತೈಷಿಗಳಿಗೆ ಅಚ್ಚರಿ ನೀಡಲು : ವಿರುಷ್ಕಾ ಜೋಡಿಯೆಂದ್ರೆ ಅಭಿಮಾನಿಗಳಿಗೆ ಇಷ್ಟ. ಈ ಬಾರಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲು ವಿರುಷ್ಕ ಎರಡನೇ ಗರ್ಭಧಾರಣೆಯನ್ನು ಗೌಪ್ಯವಾಗಿಟ್ಟಿರಬಹುದು. ಲಂಡನ್ ನಲ್ಲಿ ಅನುಷ್ಕಾ ಮಗುವಿಗೆ ಜನ್ಮ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿಯ ಲಂಡನ್ ಫೋಟೋ ವೈರಲ್ ಆಗ್ತಿದೆ.

ಗಂಡು ಮಗುವನ್ನು ಬರಮಾಡಿಕೊಂಡ ವಿರುಷ್ಕಾ ದಂಪತಿ, ವಮಿಕಾ ತಮ್ಮನಿಗೆ ಮುದ್ದಾದ ಹೆಸರು!

ಕೆಟ್ಟ ದೃಷ್ಟಿ (Evil Eye) : ಅನೇಕ ಬಾರಿ ಸೆಲೆಬ್ರಿಟಿಗಳ ಮೇಲೆ ಕೆಟ್ಟ ದೃಷ್ಟಿ ಬೀಳುವ ಸಾಧ್ಯತೆ ಇರುತ್ತದೆ. ಆರೋಗ್ಯಕರ ಎರಡನೇ ಗರ್ಭಧಾರಣೆ ಎಂದಾಗ ಅದ್ರ ಬಗ್ಗೆ ಖುಷಿಪಡುವವರ ಜೊತೆ ಅಸೂಯೆಪಡುವ ಜನರಿದ್ದಾರೆ. ಯಾವುದೇ ತೊಂದರೆ ಆಗದಿರಲಿ ಎನ್ನುವ ಕಾರಣಕ್ಕೂ ವಿರುಷ್ಕ ಈ ವಿಷ್ಯವನ್ನು ಮುಚ್ಚಿಟ್ಟಿರುವ ಸಾಧ್ಯತೆ ಇದೆ.

click me!