
ಗಂಡ ಹೆಂಡ್ತಿ ಜಗಳ ಉಂಡು ಮಲಗೋ ತನ್ಕ ಎನ್ನುವ ಗಾದೆ ಇದೆ. ಆದ್ರೆ ಇಲ್ಲಿ ಗಾದೆಯನ್ನು ಸ್ವಲ್ಪ ಬದಲಿಸಬೇಕು. ಗಂಡ ಹೆಂಡತಿ ಜಗಳ ಹಾಡು ಹೇಳೋ ತನಕ ಅಂತಾಗ್ಬೇಕು. ಇಬ್ಬರು ಕಚ್ಚಾಡಿಕೊಂಡು ಡಿವೋರ್ಸ್ ಗೆ ಅಂತ ಕೋರ್ಟ್ ಮೆಟ್ಟಿಲೇರಿದ ಮೇಲೆ ಮನಸ್ಸು ಬದಲಾಗೋದು ಬಹಳ ಅಪರೂಪ. ಪತಿ – ಪತ್ನಿಯನ್ನು ಒಂದು ಮಾಡೋಕೆ ಕೋರ್ಟ್ (Court) ಸಾಕಷ್ಟು ಪ್ರಯತ್ನ ನಡೆಸುತ್ತೆ. ಇಬ್ಬರ ಮಧ್ಯೆ ಹೊಂದಾಣಿಗೆ ತರುವ ಪ್ರಯತ್ನ ನಡೆಸುತ್ತೆ. ಕೌನ್ಸಿಲಿಂಗ್ (Counselling )ವೇಳೆ ಬೆರಳೆಣಿಕೆಯಷ್ಟು ದಾಂಪತಿ ಮಾತ್ರ ಡಿವೋರ್ಸ್ (Divorce) ಹಿಂದೆ ತೆಗೆದುಕೊಳ್ತಾರೆ. ಈ ಕೇಸ್ ನಲ್ಲಿ ಕೌನ್ಸಿಲಿಂಗ್ ಅವಶ್ಯಕತೆ ಬೀಳಲಿಲ್ಲ. ನ್ಯಾಯಾಧೀಶರು ಬುದ್ದಿ ಹೇಳೋದೂ ಬೇಕಾಗ್ಲಿಲ್ಲ. ಪತಿಯ ಒಂದೇ ಒಂದು ಹಾಡಿಗೆ ಪತ್ನಿ ಮನಸ್ಸು ಬದಲಾಗಿದೆ. ಪತಿ ಜೊತೆ ಜೀವನ ನಡೆಯುವ ಮಹತ್ವದ ನಿರ್ಧಾರಕ್ಕೆ ಬಂದಿದ್ದಾಳೆ. ಈ ವಿಡಿಯೋ ನೋಡಿದ ಜನರು, ದಾಂಪತ್ಯ ಉಳಿಬೇಕು ಅಂದ್ರೆ ಹಾಡು ಕಲಿಬೇಕು ಎನ್ನುತ್ತಿದ್ದಾರೆ. ಅಷ್ಟಕ್ಕೂ ಕೋರ್ಟ್ ನಲ್ಲಿ ಆಗಿದ್ದೇನು?.
ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗ್ತಿರುತ್ತದೆ. ಈಗ ದಂಪತಿ ವಿಡಿಯೋ ಒಂದನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. @VishalMalvi ಹೆಸರಿನ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ಪತಿ ಹಾಡಿದ್ದಾನೆ. ಅವಳು ಮತ್ತೆ ಪ್ರೀತಿಯಲ್ಲಿ ಬೀಳುತ್ತಾಳೆ, ಜೀವನಾಂಶವಿಲ್ಲ ಎಂದು ಶೀರ್ಷಿಕೆ ಹಾಕಲಾಗಿದೆ.
ವಿಡಿಯೋದಲ್ಲಿ ಏನಿದೆ? : ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆದ ವಿಡಿಯೋದಲ್ಲಿ ಪತಿ, ಪತ್ನಿ ನಿಂತಿರೋದನ್ನು ನೋಡ್ಬಹುದು. ಪತ್ನಿ ಮುಖದಲ್ಲಿ ಬೇಸರ ಕಾಣಿಸ್ತಿದೆ. ಪತ್ನಿ ಮುಖ ನೋಡಿ ಪತಿ ಹಾಡು ಹೇಳೋಕೆ ಶುರು ಮಾಡ್ತಾನೆ. ಆತ ಹಾಡು ಕೇಳಿ ಪತ್ನಿ, ಪತಿಯನ್ನು ತಬ್ಬಿಕೊಳ್ತಾಳೆ. ಮಾಹಿತಿ ಪ್ರಕಾರ, ಗಂಡ ಮತ್ತು ಹೆಂಡತಿ ಯಾವುದೋ ಕಾರಣಕ್ಕೆ ಬೇರೆಯಾಗಲು ನಿರ್ಧರಿಸಿದ್ದರು. ಕೋರ್ಟ್ ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ನೀಡಿದ ದಿನಾಂಕದಂದು ಕೋರ್ಟ್ ಗೆ ಹಾಜರಾಗಿದ್ದಾರೆ. ವಿಚಾರಣೆಯಲ್ಲಿ ಇಬ್ಬರೂ ಪಾಲ್ಗೊಂಡಿದ್ದಾನೆ. ವಿಚಾರಣೆ ಮುಗಿದ ಮೇಲೆ ಕೋರ್ಟ್ ನಲ್ಲಿಯೇ ಇದ್ದ ಪತಿ, ಪತ್ನಿ ಮುಂದೆ ನಾ ಸಿಖಾ ತೇರೆ ಬಿನ್ ಜೀನಾ ಹಾಡನ್ನು ಹಾಡಿದ್ದಾನೆ. ಇದನ್ನು ಕೇಳಿ ಹೆಂಡತಿ ಭಾವುಕಳಾಗ್ತಾಳೆ. ವಿಚ್ಛೇದನ ನಿರ್ಧಾರವನ್ನು ಬದಲಿಸ್ತಾಳೆ.
ಸೋಶಿಯಲ್ ಮೀಡಿಯಾ ಕಮೆಂಟ್ : ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಕ್ಕೆ 4.1 ಮಿಲಿಯನ್ ವೀವ್ಸ್ ಸಿಕ್ಕಿದೆ. ಸಾವಿರಾರು ಮಂದಿ ಲೈಕ್ಸ್ ಒತ್ತಿದ್ದಾರೆ. ಅಷ್ಟೇ ಅಲ್ಲ ಕಮೆಂಟ್ ಸೆಕ್ಷನ್ ನಲ್ಲಿ ಭಿನ್ನ ಕಮೆಂಟ್ ಗಳನ್ನು ಕಾಣ್ಬಹುದು. ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಮತ್ತೆ ಕೆಲವರು ಇದು ಫೇಕ್ ಎಂದಿದ್ದಾರೆ. ವಿಚಾರಣೆ ವೇಳೆ ತನಗೆ ಜೀವನಾಂಶ ಸಿಗೋದಿಲ್ಲ ಎನ್ನುವ ವಿಷ್ಯ ಪತ್ನಿಗೆ ಗೊತ್ತಾಗಿದೆ. ಹಾಗಾಗಿ ಪತಿ ಹಾಡು ಹೇಳ್ತಿದ್ದಂತೆ ರಾಜಿ ಮಾಡಿಕೊಂಡಿದ್ದಾಳೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಪತಿಗೆ ಜೀವನಾಂಶ ಉಳಿತು ಎಂದು ಇಬ್ಬೊಬ್ಬರು ಬರೆದಿದ್ದಾರೆ. ನೀವೂ ಹಾಡು ಹೇಳೋದನ್ನು ಕಲಿತುಕೊಳ್ಳಿ. ಹಣ ಉಳಿಯುವ ಜೊತೆಗೆ ವಿಚ್ಛೇದನದಿಂದ ಬಚಾವ್ ಆಗ್ಬಹುದು ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ. ಮೊದಲೇ ಹಾಡು ಹೇಳಿದ್ರೆ ಇಲ್ಲಿಯವರೆಗೆ ಬರೋ ಅವಶ್ಯಕತೆಯೇ ಇರಲಿಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ. ಲಾಯರ್ ಶಾಕ್, ದಂಪತಿ ರಾಕ್ ಎನ್ನುವ ಕಮೆಂಟ್ ಕೂಡ ಬಂದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.