ದಾಂಪತ್ಯ ಜೀವನಕ್ಕೆ ಸೆಕ್ಸ್ ಮತ್ತೊಂದಿಷ್ಟು ಬಲ ನೀಡುತ್ತದೆ. ಶಾರೀರಿಕ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಾಗ ಅದು ಮದುವೆ ಮುರಿಯಲೂ ಕಾರಣವಾಗಬಹುದು. ಲೈಂಗಿಕ ಜೀವನ ಸುಖಕರವಾಗಿರಬೇಕೆಂದ್ರೆ ಕೆಲ ಸಂಗತಿ ನೆನಪಿಟ್ಟುಕೊಳ್ಬೇಕು.
ಪರಸ್ಪರರ ಇಷ್ಟ – ಕಷ್ಟಗಳನ್ನು ಅರಿತು ಅದಕ್ಕೆ ತಕ್ಕಂತೆ ನಡೆದಾಗ ಮಾತ್ರ ಲೈಂಗಿಕ ಜೀವನ ಸುಖಕರವಾಗಿರಲು ಸಾಧ್ಯ. ದಂಪತಿ ಇಬ್ಬರ ಆಸೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಸಂಗಾತಿ ನಿಮ್ಮಿಷ್ಟಕ್ಕೆ ವಿರುದ್ಧವಾಗಿ ಪ್ರತಿ ಬಾರಿ ನಡೆದಾಗ ಲೈಂಗಿಕ ಜೀವನದಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಇಬ್ಬರ ಮಧ್ಯೆ ವಿನಾಕಾರಣ ಗಲಾಟೆ ಶುರುವಾಗುತ್ತದೆ. ಲೈಂಗಿಕ ಜೀವನದಲ್ಲಿ ತಾನೇ ಸರ್ವಶ್ರೇಷ್ಠ ಎಂಬ ನಿಯಮ ಪಾಲನೆ ನಡೆಯೋದಿಲ್ಲ. ಇದ್ರಿಂದ ಸಮಸ್ಯೆಗಳ ಹುಟ್ಟು ಶುರುವಾಗುತ್ತದೆ. ಎರಡೂ ಕಡೆ ಪ್ರೀತಿ, ವಿಶ್ವಾಸ, ಗೌರವ, ಆಸಕ್ತಿ ಎಲ್ಲವೂ ಇದ್ದಾಗ ಮಾತ್ರ ಲೈಂಗಿಕ ಜೀವನ ಸದಾ ಜೀವಂತವಾಗಿರಲು ಸಾಧ್ಯ. ಲೈಂಗಿಕ ಜೀವನದಲ್ಲಿ ಸಮಸ್ಯೆಯಾಗಲು ನಾನಾ ಕಾರಣವಿದೆ. ಲೈಂಗಿಕ ಜೀವನ ಸುಖವಾಗಿರಬೇಕೆಂದ್ರೆ ನೀವು ಸಣ್ಣಪುಟ್ಟ ವಿಷ್ಯಗಳನ್ನು ಕೂಡ ಲಕ್ಷ್ಯದಲ್ಲಿಟ್ಟುಕೊಳ್ಳಬೇಕು. ಆರಂಭದಲ್ಲಿ ಸಣ್ಣದು ಎನ್ನುವ ಸಮಸ್ಯೆಯೇ ಮುಂದೆ ಹೆಮ್ಮರವಾಗಿ ಬೆಳೆಯುತ್ತದೆ. ಇಬ್ಬರ ಮಧ್ಯೆ ವಿಶ್ವಾಸ, ನಂಬಿಕೆ ಇಲ್ಲವಾಗಿ ಒತ್ತಡ ಮನೆ ಮಾಡುತ್ತದೆ. ನಾವಿಂದು ಬೆಡ್ ರೂಮಿನಲ್ಲಿ ಮಾಡುವ ಯಾವೆಲ್ಲ ತಪ್ಪುಗಳು ನಿಮ್ಮ ದಾಂಪತ್ಯಕ್ಕೆ ಅಡ್ಡಿ ಮಾಡುತ್ವೆ ಎಂಬುದನ್ನು ಹೇಳ್ತೇವೆ.
ಬೆಡ್ ರೂಮಿ (Bedroom) ನ ಲೈಟ್ : ಬೆಡ್ ರೂಮಿನಲ್ಲಿ ಲೈಟ್ (Light) ಇದ್ರೆ ಕೆಲವರಿಗೆ ಇಷ್ಟವಾಗೋದಿಲ್ಲ. ದೇಹದ ಆಕಾರದ ಅಭದ್ರತೆ ಅವರನ್ನು ಕತ್ತಲೆಯ ಸೆಕ್ಸ್ ಗೆ ಪ್ರೋತ್ಸಾಹಿಸುತ್ತದೆ. ಸಂಗಾತಿ ಲೈಟ್ ಆರಿಸುವಂತೆ ಹೇಳಿದಾಗ್ಲೂ ಇನ್ನೊಬ್ಬ ಸಂಗಾತಿ ಅದನ್ನು ಕೇಳದೆ ಹೋದಾಗ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಶುರುವಾಗಬಹುದು. ಸಂಗಾತಿ ಆಸೆಗೆ ನೀವು ಹೊಂದಿಕೊಳ್ಳುವುದು ಮುಖ್ಯ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಮುನ್ನಡೆದಾಗ ಮಾತ್ರ ದಾಂಪತ್ಯ (Marriage) ಗಟ್ಟಿಯಾಗುತ್ತದೆ.
VIRAL VIDEO: ಹುಚ್ಚು ಪ್ರೀತಿ… ಎದೆ ಕೂದಲು ತೆಗೆದು ಬಾಯಫ್ರೆಂಡ್ ಮಾಡಿದ್ದೇನು?
ವೈಯಕ್ತಿಕ ಸ್ವಚ್ಛತೆಗೆ ಮಹತ್ವ : ವೈಯಕ್ತಿಕ ನೈರ್ಮಲ್ಯ ಪ್ರತಿಯೊಬ್ಬರಿಗೂ ಮುಖ್ಯ. ಇದು ಸೋಂಕಿನಿಂದ ನಿಮ್ಮನ್ನು ರಕ್ಷಣೆ ಮಾಡುವುದು ಮಾತ್ರವಲ್ಲ ನಿಮ್ಮ ಲೈಂಗಿಕ ಜೀವನದಲ್ಲಿ ಸುಖ ತರಲು ಸಹಕಾರಿ. ಶಾರೀರಿಕ ಸಂಬಂಧ ಬೆಳೆಸುವ ಮುನ್ನ ನೀವು ಖಾಸಗಿ ಅಂಗಗಳನ್ನು ಸ್ವಚ್ಛಗೊಳಿಸಬೇಕು. ಹಾಗೆಯೇ ಉಗುರುಗಳನ್ನು ಕತ್ತರಿಸಿರಬೇಕು. ನಿಮ್ಮ ಉದ್ದದ ಉಗುರು ಸಂಗಾತಿ ದೇಹಕ್ಕೆ ಹಾನಿ ಮಾಡ್ಬಹುದು. ಖಾಸಗಿ ಅಂಗದಿಂದ ಬರುವ ವಾಸನೆ ಸಂಗಾತಿಯ ಮೂಡ್ ಹಾಳ್ಮಾಡಬಹುದು.
ಅತಿಯಾದ ಮಾತು : ಸಂಭೋಗಕ್ಕಿಂತ ಮೊದಲು ಡರ್ಟಿ ಟಾಕ್ಸ್ ಅಗತ್ಯವೆಂದು ತಜ್ಞರು ಹೇಳ್ತಾರೆ. ಆದ್ರೆ ಅದು ಅತಿಯಾದ್ರೆ ಒಳ್ಳೆಯದಲ್ಲ. ಶಾರೀರಿಕ ಸಂಬಂಧ ಬೆಳೆಸುವ ವೇಳೆ ಹಿತಮಿತ ಮಾತು ಮುಖ್ಯವಾಗುತ್ತದೆ. ಉಳಿದಂತೆ ನೀವು ಆ ಕ್ಷಣವನ್ನು ಎಂಜಾಯ್ ಮಾಡ್ಬೇಕಾಗುತ್ತದೆ. ಸಂಪೂರ್ಣ ಸಮಯ ನೀವು ಮಾತನಾಡ್ತಿದ್ದರೆ ಅದು ಸಂಗಾತಿಗೆ ಇಷ್ಟವಾಗದೆ ಹೋಗ್ಬಹುದು.
ಮಾಜಿ ನೆನಪು : ಸಂಗಾತಿ ಜೊತೆ ಏಕಾಂತದಲ್ಲಿರುವಾಗ ಮಾಜಿ ನೆನಪು ಅನಗತ್ಯ. ಇದು ಸಂಬಂಧವನ್ನು ಹಾಳು ಮಾಡುತ್ತದೆ. ನೀವು ಶಾರೀರಿಕ ಸಂಬಂಧ ಬೆಳೆಸುವ ವೇಳೆ ಅಪ್ಪಿತಪ್ಪಿಯೂ ನಿಮ್ಮ ಮಾಜಿಗಳ ಬಗ್ಗೆ ಮಾತನಾಡಬೇಡಿ. ಈಗಿರುವ ಸಂಗಾತಿಗೆ ಪ್ರಾಮುಖ್ಯತೆ ನೀಡ್ಬೇಕಾಗುತ್ತದೆ. ಸಂಗಾತಿ ಖುಷಿಯಾಗಿರಬೇಕೆಂದ್ರೆ ಮೊದಲು ನೀವು ಖುಷಿಯಾಗಿರಬೇಕು.
Personality Tips: ಹಿಡಿದ ಕೆಲಸವನ್ನ ಬಿಡೋಲ್ಲ ಅಂತೀರಾ? ಕೆಲವೊಮ್ಮೆ ಬಿಟ್ನೋಡಿ, ಅದ್ರಿಂದ ಲಾಭವೇ ಹೆಚ್ಚು
ಗ್ಯಾಜೆಟ್ ನಿಂದ ದೂರವಿರಿ : ಶಾರೀರಿಕ ಸಂಬಂಧ ಬೆಳೆಸುವ ವೇಳೆಯೂ ಮೊಬೈಲ್ ವೀಕ್ಷಣೆ ಮಾಡುವವರಿದ್ದಾರೆ. ಫೋನ್ ಕರೆಗಳನ್ನು ಸ್ವೀಕರಿಸುವವರಿದ್ದಾರೆ. ಇದು ನಿಮ್ಮ ಸಂಗಾತಿ ಸಂತೋಷ, ಮನಸ್ಥಿತಿಯನ್ನು ಹಾಳು ಮಾಡ್ಬಹುದು. ಹಾಗಾಗಿ ಶಾರೀರಿಕ ಸಂಬಂಧ ಬೆಳೆಸುವ ಮುನ್ನ ನೀವು ಗ್ಯಾಜೆಟ್ ನಿಂದ ದೂರವಿರಿ. ಇದು ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಆ ಕ್ಷಣವನ್ನು ನೀವು ಆನಂದಿಸಲು, ಸಂಗಾತಿ ಅಭಿಪ್ರಾಯ ತಿಳಿಯಲು, ಅವರನ್ನು ಅರಿಯಲು ನೆರವಾಗುತ್ತದೆ. ಫೋನ್ ನಲ್ಲಿ ನೀವು ಕಳೆದು ಹೋದ್ರೆ ಸೆಕ್ಸ್ ಯಾಂತ್ರಿಕವಾಗುತ್ತದೆ.