ಪ್ರೀತಿಸುವ ವ್ಯಕ್ತಿ ಜೊತೆಗಿರಬೇಕೆಂದು ಎಲ್ಲರೂ ಬಯಸ್ತಾರೆ. ಅದು ಸಾಧ್ಯವಾಗದೆ ಹೋದಾಗ ಬೇಸರವಾಗೋದು ಸಹಜ. ಅವರು ಸಂತೋಷವಾಗಿರಲಿ ಅಂತಾ ದುಸ್ತರ ಕೆಲಸಕ್ಕೆ ಇಳಿಯೋದು ಮೂರ್ಖತನ. ಈಗ ಮಾಡಿದ್ದು ನೋಡಿದ್ರೆ ನೀವು ಬೈದುಕೊಳ್ತೀರಿ.
ಪ್ರೀತಿಗಾಗಿ ಜನರು ಏನೆಲ್ಲ ಮಾಡ್ತಾರೆ. ಸಾರ್ವಜನಿಕ ಪ್ರದೇಶದಲ್ಲಿ ಅಥವಾ ಕಾರ್ಯಕ್ರಮದಲ್ಲಿ ಪ್ರಪೋಸ್ ಮಾಡೋದ್ರಿಂದ ಹಿಡಿದು, ರಕ್ತದಲ್ಲಿ ಓಲೆ ಬರೆಯೋದು, ಮೊಬೈಲ್ ಟವರ್ ಮೇಲೆ ಹತ್ತಿ ಪ್ರೇಮ ನಿವೇದನೆ ಮಾಡೋದು ಹೀಗೆ, ಇಷ್ಟವಾದ ಹುಡುಗಿಯನ್ನು ಪಡೆಯಬೇಕು ಎಂದಾಗ ಜನರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಪ್ರೀತಿ ಪಡೆಯಲು ಮುಂದಾಗ್ತಾರೆ. ಇನ್ನು ಆಗ್ಲೇ ಪ್ರೀತಿ ಸಿಕ್ಕಿರುವ ಹುಡುಗ್ರು ಅದನ್ನು ಉಳಿಸಿಕೊಳ್ಳಲು ನಾನಾ ಕಸರತ್ತು ಮಾಡ್ತಾರೆ. ತಮ್ಮ ಹುಡುಗಿ ಎಂದೂ ನಗ್ತಿರಬೇಕು, ಆಕೆ ಬೇಸರ ಮಾಡಿಕೊಳ್ಳಬಾರದು, ಸದಾ ಖುಷಿ, ಸಂತೋಷವಾಗಿರಬೇಕು ಎನ್ನುವ ಕಾರಣಕ್ಕೆ ಅನೇಕ ಹುಡುಗ್ರು ಜೇಬಿನಲ್ಲಿ ಹಣವಿಲ್ಲವೆಂದ್ರೂ ದುಬಾರಿ ಉಡುಗೊರೆ ನೀಡ್ತಾರೆ. ಕೆಲಸದ ಮಧ್ಯೆ ಹುಡುಗಿ ಭೇಟಿಯಾಗಿ ಆಕೆಗೆ ಸಮಯ ನೀಡುವ ಕಸರತ್ತು ಮಾಡ್ತಾರೆ. ಗಂಟೆಗಟ್ಟಲೆ ಫೋನ್ ನಲ್ಲಿ ಮಾತನಾಡ್ತಾರೆ. ಇನ್ನು ಕೆಲ ಹುಡುಗ್ರು ತಮ್ಮ ಹುಡುಗಿ ಖುಷಿಯಾಗಿರಲಿ ಎನ್ನುವ ಕಾರಣಕ್ಕೆ ಚಿತ್ರ – ವಿಚಿತ್ರ ಮಾರ್ಗವನ್ನು ಅನುಸರಿಸುತ್ತಾರೆ.
ಪ್ರೇಮಿಗಳಿಬ್ಬರು ಒಂದೇ ಊರಿನಲ್ಲಿದ್ದಾಗ ಪರಸ್ಪರ ಭೇಟಿಯಾಗೋದು, ಮಾಲ್, ಸಿನಿಮಾ ಅಂತಾ ಸುತ್ತೋದು ಸಾಧ್ಯ. ಅದೇ ಬೇರೆ ಬೇರೆ ಊರಿನಲ್ಲಿದ್ದಾಗ ಇಬ್ಬರ ಭೇಟಿ ಅಪರೂಪವಾಗುತ್ತದೆ. ಫೋನ್, ವಿಡಿಯೋ (Video) ಕಾಲ್ ನಲ್ಲಿಯೇ ಅವರು ಮಾತನಾಡ್ಬೇಕಾಗುತ್ತದೆ. ತುಂಬಾ ದಿನ ಪ್ರೇಮಿ (Lover) ಯಿಂದ ದೂರವಿದ್ದಾಗ ಬೇಸರವಾಗೋದು ಸಹಜ. ಬೇಸರ ಹೋಗಲಾಡಿಸಲು, ಸದಾ ಪ್ರೇಮಿ ತನ್ನ ಜೊತೆಗಿದ್ದಾನೆ ಎನ್ನುವ ಫೀಲ್ ಬರಲಿ ಎನ್ನುವ ಕಾರಣಕ್ಕೆ ಕೆಲವರು ಫೋಟೋ ಸೇರಿದಂತೆ ನೆನಪಿನ ವಸ್ತುಗಳನ್ನು ತಮ್ಮ ಜೊತೆಗಿಟ್ಟುಕೊಳ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ, ತನ್ನ ಪ್ರಿಯತಮೆಗೆ ತನ್ನ ಅಗಲಿಕೆ ನೋವಾಗ್ಬಾರದು ಎನ್ನುವ ಕಾರಣಕ್ಕೆ ವಿಚಿತ್ರ ಮಾರ್ಗ ಹಿಡಿದಿದ್ದಾನೆ. ಆತನ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಏಕಾಂಗಿತನಕ್ಕೆ ಪರಿಹಾರ ನಿಮ್ಮಲ್ಲೇ ಇದೆ, ನಿಮ್ಮ ಜೊತೆ ನೀವೇ ಫ್ರೆಂಡ್‌ಶಿಪ್ ಮಾಡಿಕೊಳ್ಳಿ!
ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ದೂರದಲ್ಲಿ ವಾಸವಾಗಿರುವ ಗರ್ಲ್ ಫ್ರೆಂಡ್ (Girlfriend) ಗಾಗಿ ಅದ್ಭುತವಾದ ದಿಂಬನ್ನು ಸಿದ್ಧಪಡಿಸಿದ್ದಾನೆ. ತನ್ನ ಎದೆಗೂದಲನ್ನು ಕಿತ್ತು, ದಿಂಬು ಸಿದ್ಧಪಡಿಸಿದ್ದಾನೆ. ವೀಡಿಯೊದಲ್ಲಿ ಈ ವ್ಯಕ್ತಿ ತನ್ನ ಎದೆಯ ಕೂದಲು ಕೀಳೋದನ್ನು ನೀವು ನೋಡ್ಬಹುದು. ನಂತರ ಹೃದಯದ ಆಕಾರದಲ್ಲಿ ದಿಂಬಿನ ಮೇಲೆ ಅದನ್ನು ಅಂಟಿಸುತ್ತಾನೆ. ಹೀಗೆ ಕೂದಲಿನ ದಿಂಬು ಸಿದ್ಧವಾದ ನಂತರ, ಪ್ರೇಮಿ ಅದರ ಮೇಲೆ ತಲೆಯಿಟ್ಟು ಮಲಗಿರುವುದನ್ನು ಕಾಣಬಹುದು.
ಈತ, ಪ್ರಿಯತಮೆಯಿಂದ ದೂರ ಇರುವ ಕಾರಣ, ಆಕೆ ಇವನನ್ನು ಬಹಳಷ್ಟು ಮಿಸ್ ಮಾಡಿಕೊಳ್ತಾಳಂತೆ. ತನ್ನ ಗೆಳತಿ ಒಂಟಿತನ ಮತ್ತು ಖಿನ್ನತೆಗೆ ಒಳಗಾಗಿದ್ದಾಳೆ. ಆಕೆಯ ನೋವನ್ನು ಕಡಿಮೆ ಮಾಡಲು ನಾನು ಹೀಗೆ ಮಾಡಿದ್ದೇನೆ ಎನ್ನುತ್ತಾನೆ ವ್ಯಕ್ತಿ. ಎದೆಗೂದಲಿನಿಂದ ತಯಾರಾದ ದಿಂಬಿನ ಮೇಲೆ ಹುಡುಗಿ ಮಲಗಿದ್ರೆ ಆಕೆಗೆ ನನ್ನ ಜೊತೆ ಇದ್ದ ಅನುಭವವಾಗುತ್ತದೆ. ಆಕೆ ನನ್ನನ್ನು ಮಿಸ್ ಮಾಡಿಕೊಳ್ಳೋದಿಲ್ಲ ಎಂಬುದು ವ್ಯಕ್ತಿ ಅಭಿಪ್ರಾಯ.
ಮಳೆಯಲಿ ಜೊತೆಯಲಿ..ಅಜ್ಜ-ಅಜ್ಜಿಯ ಗೋಲ್‌ಗಪ್ಪಾ ಡೇಟ್; ಕ್ಯೂಟ್ ವಿಡಿಯೋ ವೈರಲ್
ವ್ಯಕ್ತಿ ಈ ದಿಂಬು ತಯಾರಿಸಲು ಅನೇಕ ದಿನಗಳನ್ನು ತೆಗೆದುಕೊಂಡಿದ್ದಾನೆ. ಇದನ್ನು ಗರ್ಲ್ ಫ್ರೆಂಡ್ ಗೆ ನೀಡಿದ್ದಾನೆ. fitz_reilly ಇನ್ಸ್ಟಾಗ್ರಾಮ್ ನಲ್ಲಿ ಇದ್ರ ವಿಡಿಯೋ ಹಂಚಿಕೊಳ್ಳಲಾಗಿದೆ. ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ ಎಂದು ವ್ಯಕ್ತಿ ಶೀರ್ಷಿಕೆ ಹಾಕಿದ್ದಾನೆ. ವಿಡಿಯೋದಲ್ಲಿ ಇದಕ್ಕೆ ಕಾರಣವೇನು ಎಂಬುದನ್ನು ಆತ ಬರೆದಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಬಳಕೆದಾರರಿಗೆ ಇಷ್ಟವಾಗಿಲ್ಲ. ಅನೇಕರು ವ್ಯಕ್ತಿಯ ಕೆಲಸವನ್ನು ಖಂಡಿಸಿದ್ದಾರೆ. ಇದು ಅಪಾಯಕಾರಿ ಎಂದು ಕೆಲವರು ಹೇಳಿದ್ರೆ ಎದೆ ಕೂದಲು ತೆಗೆದು ದಿಂಬು ಮಾಡಿದ ವ್ಯಕ್ತಿಗೆ ತಲೆ ಕೆಟ್ಟಿದ್ಯಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.