Intimacy: 40ರ ನಂತರ ಅದರಲ್ಲಿ ಆಸಕ್ತಿ ಜಾಸ್ತಿಯಾಗುತ್ತೆ ಅಂತಾರಲ್ಲ ನಿಜಾನಾ?

Published : Jan 16, 2026, 06:02 PM IST
intimacy

ಸಾರಾಂಶ

40ರ ನಂತರ ಲೈಂಗಿಕ ಜೀವನ (intimacy) ಮುಗಿಯುವುದಿಲ್ಲ, ಬದಲಾಗಿ ಅದು ಇನ್ನಷ್ಟು ಅರ್ಥಪೂರ್ಣವಾಗಬಹುದು. ದೈಹಿಕ ಬದಲಾವಣೆಗಳನ್ನು ಒಪ್ಪಿಕೊಂಡು, ಮುಕ್ತ ಸಂವಹನ ಮತ್ತು ಹೊಸ ಪ್ರಯೋಗಗಳ ಮೂಲಕ ಪುರುಷರು ಮತ್ತು ಮಹಿಳೆಯರು ಹೆಚ್ಚು ತೃಪ್ತಿದಾಯಕವಾದ ಆಪ್ತತೆಯನ್ನು ಅನುಭವಿಸಬಹುದು.

40ರ ನಂತರ ಲೈಂಗಿಕ ಜೀವನ ಅಂದ್ರೆ ಮುಗಿದು ಹೋಯ್ತು ಅನ್ನೋದು ದೊಡ್ಡ ತಪ್ಪು ಕಲ್ಪನೆ. ವಯಸ್ಸು ಹೆಚ್ಚಾದಂತೆ ದೇಹದಲ್ಲಿ ಕೆಲವು ಬದಲಾವಣೆಗಳು ಆಗುತ್ತವೆ. ಆದರೆ ಮನಸ್ಸು, ಭಾವನೆಗಳು ಇನ್ನಷ್ಟು ಪಕ್ವವಾಗುತ್ತವೆ. ಅದಕ್ಕೇ “ಜೀವನ 40ರ ನಂತರ ಆರಂಭ” ಅಂತಾರೆ. 40ರಲ್ಲಿರುವಾಗ ನಿಮ್ಮ ಲೈಂಗಿಕ ಚಟುವಟಿಕೆಯಲ್ಲಿ ಸ್ವಲ್ಪ ಬದಲಾದರೆ ಗಾಬರಿಯಾಗ್ಬೇಡಿ. ಬದಲಾವಣೆ ಒಪ್ಪಿಕೊಂಡ್ರೆ ಹೊಸ ಅನುಭವಗಳು, ಹೊಸ ಸಂತೋಷ ಸಿಗುತ್ತವೆ. ಅದನ್ನು ಅರ್ಥ ಮಾಡ್ಕೊಳ್ಳದೇ ಒತ್ತಡ ತಗೊಂಡ್ರೆ ಸಮಸ್ಯೆಗಳೇ ಜಾಸ್ತಿ ಆಗುತ್ತವೆ.

40ರ ವಯಸ್ಸಿಗೆ ಬರುವಾಗ ಹೆಚ್ಚಿನವರು ಜೀವನದ ಕಷ್ಟಗಳಿಂದ ಪಾಠ ಕಲಿತಿರ್ತಾರೆ. ಹಣಕಾಸಿನ ಸ್ಥಿರತೆ, ಜೀವನದ ಬಗ್ಗೆ ತೃಪ್ತಿ, ಹಿಂದಿನ ತಪ್ಪುಗಳಿಂದ ಕಲಿತ ಜಾಣ್ಮೆ – ಇವೆಲ್ಲ ಇರ್ತವೆ. ಈ ವಯಸ್ಸಿನಲ್ಲಿ ಲೈಂಗಿಕ ಆಸಕ್ತಿ 20ರಷ್ಟಿರಲಿಕ್ಕಿಲ್ಲ. ಆದ್ರೆ ಅದ್ರ ಅರ್ಥ ಮಿಲನ ಇಲ್ಲ ಅಂತಲ್ಲ. ಇನ್ನೂ ಉತ್ತಮ, ತೃಪ್ತಿದಾಯಕ ಲೈಂಗಿಕ ಜೀವನ ಆಗ ಸಾಧ್ಯ.

40ರ ನಂತರ ಮಿಲನ ಹೇಗೆ ಬದಲಾಗುತ್ತೆ?

40ರ ನಂತರದ ದೈಹಿಕ ಮಿಲನ “ಒಳ್ಳೆಯದು–ಕೆಟ್ಟದು” ಅಂತಲ್ಲ. ಅದು ಇನ್ನಷ್ಟು ಅರ್ಥಪೂರ್ಣ, ಸಾಮೀಪ್ಯದ ಭಾವನೆಗಳ ಜೊತೆ ಇರ್ತದೆ. ದೇಹ ಬದಲಾಗುತ್ತೆ, ಆಸೆಗಳು ಬದಲಾಗುತ್ತವೆ, ಆತ್ಮವಿಶ್ವಾಸ ಹೆಚ್ಚಾಗುತ್ತೆ. ಕೆಲವೊಮ್ಮೆ ಹೆಚ್ಚು ಹತ್ತಿರ ಬೇಕು ಅನಿಸಬಹುದು. ಕೆಲವೊಮ್ಮೆ ಕೆಲಸದ ಒತ್ತಡ, ದಣಿವು ಕಾರಣದಿಂದ ಇಂಟಿಮಸಿ ಕಷ್ಟ ಅನಿಸಬಹುದು. ಇದು ಸಂಪೂರ್ಣ ನಾರ್ಮಲ್. ಸ್ವಲ್ಪ ಸಹನೆ, ಮಾತುಕತೆ, ಮತ್ತು ಹೊಸದನ್ನು ತಿಳಿಯುವ ಆಸಕ್ತಿ ಇದ್ದರೆ – 40ರಲ್ಲಿ ಅದು ತುಂಬಾ ತೃಪ್ತಿ ಕೊಡೋ ಹಂತವಾಗಬಹುದು.

40ರ ನಂತರ ಅದರ ಬಗ್ಗೆ ತಿಳಿದುಕೊಳ್ಳಬೇಕಾದ 10 ವಿಷಯಗಳು

1. ಹೃದಯ ಆರೋಗ್ಯಕ್ಕೆ ಗಮನ ಕೊಡಿ

40ರ ನಂತರ ಸೆಕ್ಸ್ ಜೀವನ ಚೆನ್ನಾಗಿರ್ಬೇಕಂದ್ರೆ ಹೃದಯ ಆರೋಗ್ಯ ಮುಖ್ಯ. ವ್ಯಾಯಾಮ, ನಡಿಗೆ, ಕಾರ್ಡಿಯೋ, ಪೌಷ್ಟಿಕ ಆಹಾರ, ಡಾಕ್ಟರ್ ಚೆಕ್‌ಅಪ್ – ಇವೆಲ್ಲ ಸಹಾಯ ಮಾಡುತ್ತವೆ. ಸ್ಟ್ರೆಂಥ್ ಟ್ರೈನಿಂಗ್ ಕೂಡ ಆತ್ಮವಿಶ್ವಾಸ ಮತ್ತು ಶಕ್ತಿ ಹೆಚ್ಚಿಸುತ್ತದೆ.

ಮಿಥ್: ಹೃದಯ ಸಮಸ್ಯೆ ವೃದ್ಧಾಪ್ಯದಲ್ಲಿ ಮಾತ್ರ ಅನ್ನೋದು ತಪ್ಪು. 40ರಲ್ಲೇ ಜಾಗ್ರತೆ ಶುರು ಮಾಡ್ಬೇಕು.

2. ಲೈಂಗಿಕ ಸೋಂಕುಗಳ (STD) ಅಪಾಯ ಇರುತ್ತದೆ

ಇದು 20ರವರಿಗೆ ಮಾತ್ರ ಅನ್ನೋದು ತಪ್ಪು. ಮಧ್ಯವಯಸ್ಸಿನವರಲ್ಲೂ STD ಸಮಸ್ಯೆ ಹೆಚ್ಚಾಗಿದೆ. ವಯಸ್ಸಾದಂತೆ ಚರ್ಮ ತೆಳುವಾಗುತ್ತೆ, ಸಣ್ಣ ಗಾಯಗಳಿಂದ ಸೋಂಕು ಬರಬಹುದು. ಹೊಸ ಸಂಗಾತಿಯಿದ್ದರೆ, ಗರ್ಭಧಾರಣೆಯ ಸಾಧ್ಯತೆ ಕಡಿಮೆ ಇದ್ದರೂ ಕಾಂಡೋಮ್‌ ಬಳಕೆ ಬಹಳ ಮುಖ್ಯ.

ಮಿಥ್: STD ಯಂಗ್ ಜನರ ಸಮಸ್ಯೆ ಮಾತ್ರ ಅನ್ನೋದು ತಪ್ಪು.

3. ಪುರುಷರು ನಿಮಿರುವಿಕೆ ಸಮಸ್ಯೆ ಬಗ್ಗೆ ಜಾಗ್ರತೆ ವಹಿಸಬೇಕು

40ರ ನಂತರ ಕೆಲವರಿಗೆ ನಿಮಿರುವಿಕೆ ಗಟ್ಟಿಯಾಗಿರೋದಿಲ್ಲ, ಅಥವಾ ಆಗಾಗ ಆಗಲ್ಲ. ಔಷಧಿಗಳ ಮೇಲೆ ಮಾತ್ರ ನಂಬಿಕೆ ಇಡಬೇಡಿ. ವ್ಯಾಯಾಮ, ಆರೋಗ್ಯಕರ ಜೀವನಶೈಲಿ, ಪೌಷ್ಟಿಕ ಆಹಾರ ಸಹಾಯ ಮಾಡುತ್ತವೆ. ಕೆಲವು ಔಷಧಿಗಳೂ EDಗೆ ಕಾರಣವಾಗಬಹುದು – ಡಾಕ್ಟರ್ ಜೊತೆ ಮಾತನಾಡಿ.

ಮಿಥ್: ED ವೃದ್ಧಾಪ್ಯದ ಸಮಸ್ಯೆ ಮಾತ್ರ ಅನ್ನೋದು ತಪ್ಪು.

4. ಮಹಿಳೆಯರಿಗೆ ಇನ್ನಷ್ಟು ಆನಂದ ಸಿಗಬಹುದು

ವಯಸ್ಸಾದ ಮಹಿಳೆಗೆ ಮಿಲನದ ತುರೀಯ ಸ್ಥಿತಿ ಬರಲ್ಲ ಅನ್ನೋದು ತಪ್ಪು. 40ರ ನಂತರ ಮಹಿಳೆಯರಲ್ಲಿ ಆತ್ಮವಿಶ್ವಾಸ, ದೇಹದ ಅರಿವು ಜಾಸ್ತಿ ಆಗುತ್ತೆ. ಅದರಿಂದ ಲೈಂಗಿಕ ತೃಪ್ತಿ ಹೆಚ್ಚಾಗಬಹುದು.

ಮಿಥ್: ಮಹಿಳೆಯರಿಗೆ ವಯಸ್ಸಾದಂತೆ ಮಿಲನದ ಆಸಕ್ತಿ ಕಡಿಮೆ ಆಗುತ್ತೆ ಅನ್ನೋದು ತಪ್ಪು.

5. ಪುರುಷರು ಹೆಚ್ಚು ಸಮಯ ಲೈಂಗಿಕ ಕ್ರಿಯೆ ಮಾಡಬಹುದು

ಹಾರ್ಮೋನ್ ಸ್ವಲ್ಪ ಕಡಿಮೆಯಾಗೋದರಿಂದ ಕೆಲವರಿಗೆ ವೀರ್ಯ ಚಿಮ್ಮುವಿಕೆ ನಿಧಾನವಾಗುತ್ತೆ. ಇದರಿಂದ ಸಂಗಾತಿಯ ಜೊತೆ ನಿಧಾನವಾಗಿ, ಉತ್ತಮ ಅನುಭವ ಸಾಧ್ಯ.

ಮಿಥ್: ಹಾರ್ಮೋನ್ ಕಡಿಮೆ ಆಗ್ತಾ ಹೋದಂತೆ ಮಿಲನ ಚೆನ್ನಾಗಿರಲ್ಲ ಅನ್ನೋದು ತಪ್ಪು.

6. ಲ್ಯೂಬ್ ಬಳಕೆ ಸಹಜ

40ರ ನಂತರ ಮಹಿಳೆಯರಲ್ಲಿ ಮಿಲನಾಂಗದಲ್ಲಿ ಡ್ರೈ ಆಗುವಿಕೆ ಸಾಮಾನ್ಯ. ಲ್ಯೂಬ್ರಿಕೇಂಟ್ ಬಳಕೆ ಮಾಡಿದ್ರೆ ಆರಾಮ, ಸಂತೋಷ ಹೆಚ್ಚಾಗುತ್ತೆ. ಇದು ಸಮಸ್ಯೆ ಅಲ್ಲ – ಸಹಾಯ.

ಮಿಥ್: ಲ್ಯೂಬ್ ಸಮಸ್ಯೆ ಇದ್ದಾಗ ಮಾತ್ರ ಅನ್ನೋದು ತಪ್ಪು.

7. ಸೆಕ್ಸ್ ಹೊರತುಪಡಿಸಿ ಬೇರೆ ರೀತಿಯ ಸಂತೋಷವೂ ಬೇಕಾಗಬಹುದು

ಎಲ್ಲಾ ಸಂತೋಷ ಲೈಂಗಿಕ ಅಂಗಗಳಿಂದಲೇ ಬರಬೇಕು ಅನ್ನೋ ನಿಯಮ ಇಲ್ಲ. ಸ್ಪರ್ಶ, ಸಾಮೀಪ್ಯ, ಮುದ್ದಾಟ, ಮಾತುಕತೆ – ಇವೆಲ್ಲವೂ ಇಂಟಿಮಸಿಯೇ.

ಮಿಥ್: ದೈಹಿಕ ಸೇರುವಿಕೆ ಇಲ್ಲದೆ ಸಂತೋಷ ಸಾಧ್ಯವಿಲ್ಲ ಅನ್ನೋದು ತಪ್ಪು.

8. ಗರ್ಭಧಾರಣೆ ಬಗ್ಗೆ ಹೆಚ್ಚು ಒತ್ತಡ ಇದ್ದರೆ ಅದು ಬೋರ್ ಆಗಬಹುದು

40ರ ನಂತರ ಗರ್ಭಧಾರಣೆ ಕಷ್ಟವಾಗಬಹುದು. ಕೇವಲ ಮಗು ಮಾಡೋದಕ್ಕೆ ಮಾತ್ರ ಮಿಲನ ಎಂತಾದರೆ ಮನಸ್ಸಿನ ಮೇಲೆ ಒತ್ತಡ ಜಾಸ್ತಿ ಆಗುತ್ತೆ.

ಮಿಥ್: ಮಗು ಮಾಡೋದ್ರಿಂದಲೇ ಸಂಬಂಧ ಗಟ್ಟಿ ಆಗುತ್ತೆ ಅನ್ನೋದು ತಪ್ಪು.

9. ಸ್ವಲ್ಪ ಹೆಚ್ಚು ಪ್ರಯತ್ನ ಬೇಕಾಗಬಹುದು

ದೇಹದಲ್ಲಿ ಹಾರ್ಮೋನ್ ಬದಲಾವಣೆ ಆಗ್ತಿರುತ್ತೆ. ಹೀಗಾಗಿ ಅದರಲ್ಲಿ ಆಸಕ್ತಿ ತಕ್ಷಣ ಬರಲ್ಲ. ಆದ್ರೆ ಮುದ್ದಾಟ, ಆಟಿಕೆಗಳು ಸಹಾಯ ಮಾಡುತ್ತವೆ.

ಮಿಥ್: ಆಸೆ ತಾನೇ ಬರಬೇಕು ಅನ್ನೋದು ತಪ್ಪು.

10. ಯಾವಾಗಲೂ ಒಂದೇ ರೀತಿ ಮಾಡಬೇಡಿ

40ರ ನಂತರ ಸಮಯ, ಹಣ, ವಿಶ್ವಾಸ ಎಲ್ಲವೂ ಜಾಸ್ತಿ ಇರುತ್ತದೆ. ಹೊಸ ಆಟಗಳನ್ನು ಪ್ರಯತ್ನಿಸೋ ಧೈರ್ಯ ಇರ್ತದೆ. ಹೊಸ ಐಡಿಯಾಗಳನ್ನು ಟ್ರೈ ಮಾಡಿ.

ಮಿಥ್: ರೂಟೀನ್ ಇದ್ದರೆ ಸಂಬಂಧ ಗಟ್ಟಿಯಾಗಿರುತ್ತೆ ಅನ್ನೋದು ತಪ್ಪು.

40ರ ನಂತರ ಉತ್ತಮ ಲೈಂಗಿಕ ಜೀವನಕ್ಕೆ 5 ಸಲಹೆಗಳು

1. ಆರಾಮದಾಯಕ ಪೊಸಿಷನ್‌ಗಳು: ದೇಹಕ್ಕೆ ನೋವಾಗದ ಪೊಸಿಷನ್‌ಗಳನ್ನು ಆಯ್ಕೆ ಮಾಡಿ. ತಲೆಗೆ, ಮೊಣಕಾಲಿಗೆ ಪಿಲ್ಲೋ ಬಳಸಬಹುದು.

2. ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಜೀವನ: ಮದ್ಯ, ಸಿಗರೇಟು ಕಡಿಮೆ ಮಾಡಿ. ಯೋಗ, ವಾಕಿಂಗ್, ಕೇಗಲ್ ಎಕ್ಸರ್‌ಸೈಸ್ ಮಾಡಿ. ಹಣ್ಣು, ತರಕಾರಿ, ಕಡಲೆಕಾಯಿ ತಿನ್ನಿ.

3. ದೇಹದ ಬದಲಾವಣೆ ಒಪ್ಪಿಕೊಳ್ಳಿ: ಬಿಳಿ ಕೂದಲು, ತೂಕ ಬದಲಾವಣೆ – ಇದು ಸಹಜ. ದೇಹದ ಬಗ್ಗೆ ಅತಿಯಾದ ಅಸಮಾಧಾನ ಲೈಂಗಿಕ ಜೀವನಕ್ಕೆ ಹಾನಿ.

4. ನಿಮ್ಮ ಆಸೆಗಳನ್ನು ಮಾತನಾಡಿ: ಲೈಂಗಿಕತೆ ಬಗ್ಗೆ ಮಾತಾಡೋದು ತಪ್ಪು ಅಲ್ಲ. ನಿಮಗೆ ಬೇಕಾದ್ದನ್ನು ಸಂಗಾತಿಗೆ ಹೇಳಿ. ಅವರ ಮಾತನ್ನೂ ಕೇಳಿ.

5. ಹೊಸದನ್ನು ಪ್ರಯತ್ನಿಸಿ: ಹೊಸ ಪೊಸಿಷನ್, ಹೊಸ ವಾತಾವರಣ, ಮಸಾಜ್, ಮ್ಯೂಸಿಕ್ – ಎಲ್ಲವನ್ನೂ ಟ್ರೈ ಮಾಡಿ. ನಿಮ್ಮ ಸಂತೋಷಕ್ಕೂ ಸಮಯ ಕೊಡಿ.

40ರ ನಂತರ ಹೆಚ್ಚು ಲೈಂಗಿಕ ಆಸಕ್ತಿ ಯಾಕೆ ಬರುತ್ತೆ?

ಕೆಲವರು ಹೇಳುವ ಪ್ರಕಾರ 40ರ ನಂತರ ಲೈಂಗಿಕ ಜೀವನ ಮತ್ತಷ್ಟು ಮಜವಾಗಿರುತ್ತದೆ. ಯಾಕೆಂದರೆ ಆಗ ಯಾವುದೇ ಒತ್ತಡ ಇರೋಲ್ಲ. ಈ ವಯಸ್ಸಿನಲ್ಲಿ ಜೀವನ ಸ್ಥಿರವಾಗಿರುತ್ತೆ. ಆತ್ಮವಿಶ್ವಾಸ ಜಾಸ್ತಿ. ಮಕ್ಕಳ ಹೊಣೆ ಕಡಿಮೆ. ಅದರಿಂದ ಸೆಕ್ಸ್ ಜೀವನಕ್ಕೂ ಹೊಸ ಶಕ್ತಿ ಸಿಗುತ್ತೆ. 40ರ ನಂತರ ಹೆಚ್ಚು ಆಸಕ್ತಿ ಅನಿಸಿದ್ರೆ – ಅದು ಅಸಾಮಾನ್ಯ ಅಲ್ಲ. ಅದು ಸಂಪೂರ್ಣ ಸಹಜ.

40ರ ನಂತರ ಸೆಕ್ಸ್ ಎಷ್ಟು ಸಮಯ ಇರಬೇಕು ಎಂಬುದಕ್ಕೂ ನಿಯಮ ಇಲ್ಲ. ಸಮಯಕ್ಕಿಂತ ಮಿಲನದಲ್ಲಿ ಗುಣಮಟ್ಟ ಮುಖ್ಯ. ಸಂಬಂಧದಲ್ಲಿ ಪ್ರೀತಿ, ಒಪ್ಪಿಸಿಕೊಳ್ಳುವಿಕೆ ಮುಖ್ಯ. ಮುದ್ದಾಟ, ಸಮಯ ಕೊಡುವಿಕೆ, ಮಾತಿನಲ್ಲೇ ಉದ್ರೇಕಿಸುವಿಕೆ, ಸಾಂಗತ್ಯ- ಸಾಮೀಪ್ಯ ಇವೆಲ್ಲ ಮುಖ್ಯವಾಗ್ತವೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹುಡುಗಿಯರು ಬ್ಯಾಡ್‌ ಬಾಯ್ಸ್‌ ಹಿಂದೆ ಹೋಗಲು ಕಾರಣವೇನು?, ಇಲ್ಲಿದೆ ಕುತೂಹಲಕಾರಿ ಉತ್ತರ
ವಿರ್ ದಾಸ್‌ಗೆ ನಟಿ ಮಿಥಿಲಾ ಪಾಲ್ಕರ್ ಕಪಾಳಮೋಕ್ಷ.. ಅದಕ್ಕೂ ಮೊದಲು ಈ ಇಬ್ಬರ ಮಧ್ಯೆ ಆಗಿದ್ದೇನು?