International Sex Workers Day 2022: ಲೈಂಗಿಕ ಕಾರ್ಯಕರ್ತರ ದಿನ ಆರಂಭವಾಗಿದ್ದು ಯಾವಾಗ ?

Published : Jun 02, 2022, 11:25 AM ISTUpdated : Jun 02, 2022, 11:26 AM IST
International Sex Workers Day 2022: ಲೈಂಗಿಕ ಕಾರ್ಯಕರ್ತರ ದಿನ ಆರಂಭವಾಗಿದ್ದು ಯಾವಾಗ ?

ಸಾರಾಂಶ

ಲೈಂಗಿಕ ಕಾರ್ಯಕರ್ತೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿ (Awareness) ಮೂಡಿಸಲು ಮತ್ತು ಅವರ ಮೂಲಭೂತ ಮಾನವ ಹಕ್ಕುಗಳನ್ನು ರಕ್ಷಿಸಲು ಪ್ರತಿ ವರ್ಷ ಜೂನ್ 2ರಂದು ಅಂತಾರಾಷ್ಟ್ರೀಯ ಲೈಂಗಿಕ ಕಾರ್ಮಿಕರ ದಿನ (International sex workers day) ವನ್ನು ಆಚರಿಸಲಾಗುತ್ತದೆ. ಯಾವಾಗ ಈ ದಿನವನ್ನು ಆಚರಿಸಲು ಆರಂಭಿಸಲಾಯಿತು. ಈ ದಿನದ ಮಹತ್ವವೇನು (Importance) ಎಂಬುದನ್ನು ತಿಳಿಯೋಣ.

ಪ್ರಪಂಚದಾದ್ಯಂತ ಲೈಂಗಿಕ ಕಾರ್ಯಕರ್ತೆಯರನ್ನು ಗೌರವಿಸಲು ಮತ್ತು ಅವರ ಮೇಲಾಗುತ್ತಿರುವ ನಿಂದನೆ, ಅವಮಾನದ ಕುರಿತು ಗಮನ ಹರಿಸಲು ಅಂತಾರಾಷ್ಟ್ರೀಯ ಸೆಕ್ಸ್ ವರ್ಕರ್ಸ್‌ ದಿನ (International sex workers day) ವನ್ನು ಆಚರಿಸಲು ನಿರ್ಧರಿಸಲಾಯಿತು. ವೇಶ್ಯಾವಾಟಿಕೆಯನ್ನು ಸಾಮಾನ್ಯವಾಗಿ ಪ್ರಪಂಚದ ಅತ್ಯಂತ ಹಳೆಯ ವೃತ್ತಿ ಎಂದು ವಿವರಿಸಲಾಗುತ್ತದೆ. ಲೈಂಗಿಕ ಕೆಲಸದಲ್ಲಿ ತೊಡಗಿರುವವರು ಕಷ್ಟಗಳು ಮತ್ತು ಅವಮಾನಗಳನ್ನು ಎದುರಿಸುತ್ತಲೇ ಇರುತ್ತಾರೆ. ಅವರು ಅಪರಾಧೀಕರಣ, ಹಿಂಸಾಚಾರ, ತಾರತಮ್ಯ ಮತ್ತು ಇತರ ರೀತಿಯ ಮಾನವ ಹಕ್ಕುಗಳ (Human Rights) ಉಲ್ಲಂಘನೆಗಳನ್ನು ಅನುಭವಿಸುತ್ತಾರೆ. ಹೀಗಾಗಿ ಈ ಬಗ್ಗೆ ಜಾಗೃತಿ (Awareness) ಮೂಡಿಸಲು ಅಂತಾರಾಷ್ಟ್ರೀಯ ಸೆಕ್ಸ್ ವರ್ಕರ್ಸ್ ಡೇ ಆಚರಿಸಲು ನಿರ್ಧರಿಸಲಾಯಿತು. 

ಅಂತಾರಾಷ್ಟ್ರೀಯ ಲೈಂಗಿಕ ಕಾರ್ಮಿಕರ ದಿನದ ಇತಿಹಾಸ
1975ರಲ್ಲಿ ಜೂನ್ 2ರಂದು ಅಂತರಾಷ್ಟ್ರೀಯ ಲೈಂಗಿಕ ಕಾರ್ಮಿಕರ ದಿನವನ್ನು ಆಚರಿಸಲು ಆರಂಭಿಸಲಾಯಿತು. ಸುಮಾರು 100 ಲೈಂಗಿಕ ಕಾರ್ಯಕರ್ತರು ಲಿಯಾನ್‌ನಲ್ಲಿರುವ ಸೇಂಟ್-ನಿಜಿಯರ್ ಚರ್ಚ್ ಅನ್ನು ಆಕ್ರಮಿಸಿಕೊಂಡರು. ಲೈಂಗಿಕ ಕೆಲಸದ ವಿರುದ್ಧ ಪೋಲೀಸರ ತಾರತಮ್ಯವನ್ನು ಕೊನೆಗಾಣಿಸಲು ಮತ್ತು ಯೋಗ್ಯವಾದ ಕೆಲಸದ ಪರಿಸ್ಥಿತಿಗಳನ್ನು ಕೇಳಲು ಮಹಿಳೆಯರು ಎಂಟು ದಿನಗಳ ಕಾಲ ಚರ್ಚ್‌ನಲ್ಲಿ ಪ್ರತಿಭಟನೆ ನಡೆಸಿದರು. ಲೈಂಗಿಕ ಕಾರ್ಯಕರ್ತರ ವಿರುದ್ಧದ ಹಿಂಸಾಚಾರದ ಹೆಚ್ಚಳವು ಚಳುವಳಿಯನ್ನು ಪ್ರಚೋದಿಸಿತು. ಫ್ರಾನ್ಸ್‌ನ ವಿವಿಧ ಭಾಗಗಳಲ್ಲಿ ಇತರ ಲೈಂಗಿಕ ಕಾರ್ಯಕರ್ತರು ಪ್ಯಾರಿಸ್, ಮಾರ್ಸಿಲ್ಲೆ, ಗ್ರೆನೋಬಲ್, ಸೇಂಟ್-ಎಟಿಯೆನ್ನೆ ಮತ್ತು ಮಾಂಟ್‌ಪೆಲ್ಲಿಯರ್ ಸೇರಿದಂತೆ ಚರ್ಚ್‌ಗಳನ್ನು ಆಕ್ರಮಿಸಿಕೊಂಡರು.

ಸೆಕ್ಸ್ ವರ್ಕರ್ಸ್‌ಗೆ ಸಲಾಂ ಹೇಳಲು ಬದಲಾದ ಕೋಲ್ಕತ್ತಾದ ರಸ್ತೆಗಳು

ಲಿಯಾನ್‌ನಲ್ಲಿರುವ ಚರ್ಚ್‌ನ ಪಾದ್ರಿ ಸೇರಿದಂತೆ ಲೈಂಗಿಕ ಕಾರ್ಯಕರ್ತರು ರಾಜಕೀಯ, ಒಕ್ಕೂಟ ಮತ್ತು ಸ್ತ್ರೀವಾದಿ ಸಂಘಟನೆಗಳಿಂದ ಬೆಂಬಲವನ್ನು ಗಳಿಸಿದರೂ ಸಹ, ಸರ್ಕಾರದ ಆದೇಶದ ಮೇರೆಗೆ ಚರ್ಚ್‌ನಿಂದ ಆಕ್ರಮಿತರನ್ನು ತೆಗೆದುಹಾಕುವಲ್ಲಿ ಪೊಲೀಸರು ಯಶಸ್ವಿಯಾದರು. ಯಾವುದೇ ಶಾಸನ ಅಥವಾ ಸುಧಾರಣೆಯನ್ನು ಪ್ರಾರಂಭಿಸಲಾಗಿಲ್ಲ ಆದರೆ ಇದು ಯುರೋಪ್ ಮತ್ತು ಯುಕೆಯಲ್ಲಿ ಹಕ್ಕುಗಳ ಚಳವಳಿಯನ್ನು ಪ್ರಚೋದಿಸಿತು.

ಅಂತಾರಾಷ್ಟ್ರೀಯ ಲೈಂಗಿಕ ಕಾರ್ಮಿಕರ ದಿನದ ಮಹತ್ವ
ಈ ದಿನದಂದು, ಲೈಂಗಿಕ ಕಾರ್ಯಕರ್ತೆಯ ಹಕ್ಕುಗಳ ಕಾರ್ಯಕರ್ತರು ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾರಿಗೆ ತರಲು, ನೀತಿ ಶಿಫಾರಸುಗಳನ್ನು ರೂಪಿಸಲು ಒಕ್ಕೂಟಗಳೊಂದಿಗೆ ಕೆಲಸ ಮಾಡುತ್ತಾರೆ. ವೇಶ್ಯೆಯರ ದೈನಂದಿನ ಜೀವನದ ಭಾಗವಾಗಿರುವ ತಾರತಮ್ಯ, ಶೋಷಣೆ ಮತ್ತು ಬಡತನವನ್ನು ಕೊನೆಗೊಳಿಸಲು ವಿವಿಧ ಉಪಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಪ್ರತಿ ವರ್ಷ ಮಾರ್ಚ್ 3 ರಂದು ಅಂತರರಾಷ್ಟ್ರೀಯ ಲೈಂಗಿಕ ಕಾರ್ಮಿಕರ ಹಕ್ಕುಗಳ ದಿನವನ್ನು ಸಹ ಆಚರಿಸಲಾಗುತ್ತದೆ.

ಕಾಮಾಟಿಪುರದ ವೇಶ್ಯೆಯರು ಈಗೇನು ಮಾಡುತ್ತಿದ್ದಾರೆ!

ಸುಪ್ರೀಂಕೋರ್ಟ್‌ನಿಂದ ಮಹತ್ವದ ತೀರ್ಪು
ಸುಪ್ರೀಂ ಕೋರ್ಟ್ ಇತ್ತೀಚೆಗೆ ವೇಶ್ಯಾವಾಟಿಕೆಯನ್ನು ವೃತ್ತಿಯಾಗಿ ಗುರುತಿಸಿದೆ ಮತ್ತು ಸ್ವಯಂಪ್ರೇರಿತ ಲೈಂಗಿಕ ಕೆಲಸವು ಕಾನೂನುಬಾಹಿರವಲ್ಲದ ಕಾರಣ ವೇಶ್ಯಾಗೃಹಗಳ ಮೇಲೆ ದಾಳಿ ಮಾಡುವ ಮೂಲಕ ಲೈಂಗಿಕ ಕಾರ್ಯಕರ್ತರನ್ನು ಬಂಧಿಸಬಾರದು, ದಂಡ ವಿಧಿಸಬಾರದು ಅಥವಾ ಕಿರುಕುಳ ನೀಡಬಾರದು ಎಂದು ಹೇಳಿದೆ. ಲೈಂಗಿಕ ಕಾರ್ಯಕರ್ತರನ್ನು ಸಭ್ಯತೆ ಮತ್ತು ಘನತೆಯಿಂದ ನಡೆಸಿಕೊಳ್ಳಬೇಕು ಮತ್ತು ವಯಸ್ಕರು ಒಪ್ಪಿಗೆಯ ಲೈಂಗಿಕ ಕೆಲಸದಲ್ಲಿ ತೊಡಗಿದಾಗ ಪೊಲೀಸರು ಮಧ್ಯಪ್ರವೇಶಿಸಬಾರದು ಅಥವಾ ಯಾವುದೇ ಕ್ರಿಮಿನಲ್ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

ಸ್ವಯಂಪ್ರೇರಿತ ಲೈಂಗಿಕ ಕೆಲಸವು ಕಾನೂನುಬಾಹಿರವಲ್ಲ ಮತ್ತು ವೇಶ್ಯಾಗೃಹವನ್ನು ನಡೆಸುವುದು ಕಾನೂನುಬಾಹಿರವಾದ ಕಾರಣ ವೇಶ್ಯಾಗೃಹಗಳ ಮೇಲೆ ದಾಳಿ ಮಾಡುವ ಮೂಲಕ ಲೈಂಗಿಕ ಕಾರ್ಯಕರ್ತರನ್ನು ಬಂಧಿಸಬಾರದು, ದಂಡ ವಿಧಿಸಬಾರದು ಅಥವಾ ಕಿರುಕುಳ ನೀಡಬಾರದು ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ. ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ನೇತೃತ್ವದ ತ್ರಿಸದಸ್ಯ ಪೀಠವು ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ವಿಶೇಷ ಅಧಿಕಾರವನ್ನು ಜಾರಿಗೊಳಿಸಿದ ನಂತರ ಹೊರಡಿಸಿದ ಆದೇಶದಲ್ಲಿ ನಿರ್ದೇಶಿಸಿದೆ.

ಸೆಕ್ಸ್ ವರ್ಕರ್ಸ್ ಗೆ ಖುಷಿ ಸುದ್ದಿ..! ವಿಳಾಸ ಪುರಾವೆಯಿಲ್ಲದಿದ್ದರೂ ಸಿಗುತ್ತೆ Aadhaar Card

ಮಾತ್ರವಲ್ಲ. ಲೈಂಗಿಕ ಕಾರ್ಯಕರ್ತೆಯರ ಮಗುವನ್ನು ಕೇವಲ ಲೈಂಗಿಕ ವ್ಯಾಪಾರದಲ್ಲಿ ತೊಡಗಿದ್ದಾರೆ ಎಂಬ ಕಾರಣಕ್ಕೆ ತಾಯಿಯಿಂದ ಬೇರ್ಪಡಿಸಬಾರದು ಎಂದು ನ್ಯಾಯಾಲಯ ಹೇಳಿದೆ. ಮಾನವನ ಸಭ್ಯತೆ ಮತ್ತು ಘನತೆಯ ಮೂಲಭೂತ ರಕ್ಷಣೆಯು ಲೈಂಗಿಕ ಕಾರ್ಯಕರ್ತರು ಮತ್ತು ಅವರ ಮಕ್ಕಳಿಗೆ ವಿಸ್ತರಿಸುತ್ತದೆ ಎಂದು ನ್ಯಾಯಾಲಯವು ಗಮನಿಸಿದೆ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ತಾಳಿ ಕಟ್ಟು ಮೊದಲು ಬಿಗ್ ಟ್ವಿಸ್ಟ್ ಕೊಟ್ಟ ವರ, 8ನೇ ವಚನದೊಂದಿದೆ ಮದುವೆ ವಿಡಿಯೋ
ಈ ರಾಶಿಯವರು ಕೆಟ್ಟ ಅತ್ತೆಯಂತೆ, ಸೊಸೆಗೆ ಕಾಟ ಕೊಡೋದು ಜಾಸ್ತಿ