ಅಬ್ಬಬ್ಬಾ..ಸರಿಯಾಗಿ ಕಿಸ್ ಮಾಡೋಕಾಗಲ್ಲಾಂತ ನಾಲಿಗೆ ಕತ್ತರಿಸಿಕೊಂಡ ಯುವತಿ!

By Vinutha Perla  |  First Published Apr 21, 2023, 9:15 AM IST

ನಾಲಿಗೆ ಮಾನವನ ದೇಹದ ಪ್ರಮುಖವಾದ ಅಂಗ. ಮಾತನಾಡಲು, ರುಚಿ ನೋಡಲು ನಾಲಿಗೆ ಬೇಕೇ ಬೇಕು. ಆದ್ರೆ ಇಲ್ಲೊಬ್ಬಾಕೆ ಮಾತ್ರ ತನ್ನ ನಾಲಿಗೆಯನ್ನೇ ಕತ್ತರಿಸಿಕೊಂಡಿದ್ದಾಳೆ. ಅದ್ಕೆ ಕಾರಣ ಕಿಸ್ ಮಾಡೋಕೆ ಕಷ್ಟವಾಗುತ್ತೆ ಅನ್ನೋದು ಇನ್ನೂ ವಿಚಿತ್ರ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.


ಸುಂದರವಾಗಿ ಕಾಣಬೇಕೆಂದು ಪ್ರತಿಯೊಬ್ಬರ ಆಸೆ. ಹಿಂದೆಲ್ಲಾ ಸುಂದರವಾಗಿ ಕಾಣಬೇಕು ಎಂದಾದರೆ ಆರ್ಯುವೇದಿಕ್ ಉತ್ಪನ್ನಗಳನ್ನು ಬಳಸುವುದರತ್ತ ಹೆಚ್ಚು ಗಮನ ಕೊಡುತ್ತಿದ್ದರು. ಮನೆಯಲ್ಲೇ ತಯಾರಿಸಿದ ತೈಲಗಳನ್ನು ಬಳಸುತ್ತಿದ್ದರು. ಈಗಲೂ ಜನರು ತಮ್ಮ ದೇಹದ ಆಕಾರವನ್ನು ಬದಲಾವಣೆ ಮಾಡಿಕೊಳ್ಳಬೇಕೆಂದು ಬಯಸುತ್ತಾರೆ. ಹೀಗಾಗಿ ಸರ್ಜರಿಯನ್ನು ಮಾಡಿಕೊಳ್ಳುತ್ತಾರೆ. ಆದ್ರೆ ಈಗ ಏನಿದ್ರೂ ಬ್ಯೂಟಿ ಅಂದ್ರೆ ಸರ್ಜರಿ ಮಾಡಿಸಿಕೊಳ್ಳೋದು ಎಂಬಂತಾಗಿದೆ. ಮೂಗು, ಕಿವಿ, ಬಾಯಿ, ತುಟಿ, ಎದೆ, ಸೊಂಟ ಎಲ್ಲದರ ಮೋಡಿಫಿಕೇಶನ್ ಮಾಡಿಕೊಳ್ಳುತ್ತಾರೆ. ಈ ರೀತಿ ಬದಲಾವಣೆ ಮಾಡಿಕೊಂಡರೆ ಮತ್ತಷ್ಟು ಚೆನ್ನಾಗಿ ಕಾಣಿಸಬಹುದು ಎಂದು ಅಂದುಕೊಳ್ಳುತ್ತಾರೆ. 

ಹಾಗೆಯೇ ಯುವತಿಯೊಬ್ಬಳು ತಾನು ಉತ್ತಮ ಕಿಸ್ಸರ್ ಆಗಬೇಕೆನ್ನುವ ಹಂಬಲದಲ್ಲಿ ನಾಲಿಗೆಯನ್ನೇ ಕತ್ತರಿಸಿಕೊಂಡಿದ್ದಾಳೆ. ನ್ಯೂಯಾರ್ಕ್ ಪೋಸ್ಟ್ ವೆಬ್‌ಸೈಟ್‌ನ ವರದಿಯ ಪ್ರಕಾರ, 22 ವರ್ಷದ ರೋಚೆಲ್ ಗ್ಯಾರೆಟ್ ಎಂಬಾಕೆ ಹೀಗೆ ನಾಲಿಗೆಗೆ ಸರ್ಜರಿ ಮಾಡಿಸಿದ್ದಾಳೆ. ಪೋಷಕರು ಎಷ್ಟೇ ವಿರೋಧಿಸಿದರೂ ಆಕೆ ಕೇಳಲ್ಲಿಲ್ಲ ಎಂದು ತಿಳಿದುಬಂದಿದೆ. ರೋಚೆಲ್​ಗೆ ಇನ್​​ಸ್ಟಾಗ್ರಾಂನಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ಫಾಲೋವರ್ಸ್​ಗಳಿದ್ದಾರೆ. ವರದಿಯ ಪ್ರಕಾರ, ರೋಚೆಲ್ ತನ್ನ ನಾಲಿಗೆಯ ಒಂದು ಸಣ್ಣ ಭಾಗವನ್ನು ಕತ್ತರಿಸಿಕೊಂಡಿದ್ದಾಳೆ. ರೋಚೆಲ್ ಉತ್ತಮ ಕಿಸ್ಸರ್ ಆಗಲು ಹೀಗೆ ಮಾಡಿದ್ದಾಗಿ ಹೇಳಿಕೊಂಡಿದ್ದಾಳೆ.

Latest Videos

undefined

ಕಿಸ್ಸಿಂಗ್ ರೋಗ: ಸಮಸ್ಯೆ ಕಡೆಗಣಿಸಿದ್ರೆ ಗಂಭೀರವಾಗೋ ಸಾಧ್ಯತೆನೂ ಇದೆ

ರೋಚೆಲ್‌ನ ನಾಲಿಗೆಯ ಫ್ರೆನ್ಯುಲಮ್, ಅಂದರೆ, ನಾಲಿಗೆ ಮತ್ತು ಬಾಯಿಯ ಕೆಳಭಾಗವನ್ನು ಜೋಡಿಸಲಾದ ಅಂಗಾಂಶವು ತುಂಬಾ ಚಿಕ್ಕದಾಗಿದೆ.. ಇದರಿಂದಾಗಿ ಅವರ ನಾಲಿಗೆ ಸಂಪೂರ್ಣವಾಗಿ ಹೊರಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ಈ ಭಾಗವನ್ನು ಕತ್ತರಿಸಿ ಬೇರ್ಪಡಿಸಿದ್ದಾರೆ ಎಂದು ಸರ್ಜರಿ ಮಾಡಿದ ವೈದ್ಯರು ತಿಳಿಸಿದರು..

ಈ ಹಿಂದೆ ಅವಳು ತನ್ನ ಸಂಗಾತಿಯನ್ನು ಚುಂಬಿಸುವಾಗ ತನ್ನ ನಾಲಿಗೆಯಿಂದಾಗಿ ಕೆಟ್ಟ ಅನುಭವ ಹೊಂದಿದ್ದಳಂತೆ. ಹೀಗಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಗಿ ಯುವತಿ ಹೇಳಿದ್ದಾಳೆ. ಈ ಶಸ್ತ್ರಚಿಕಿತ್ಸೆಯನ್ನು ಮಾಡಿದ ನಂತರ, ಮೊದಲಿಗಿಂತ ಉತ್ತಮ ಕಿಸ್ಸರ್ ಆಗಿದ್ದೇನೆ ಎಂದು ಕೂಡಾ ತಿಳಿಸಿದ್ದಾಳೆ. ಕೆಲವು ವರ್ಷಗಳ ಹಿಂದೆ ಈ ಶಸ್ತ್ರಚಿಕಿತ್ಸೆ ಮಾಡುವಂತೆ ಅವರ ವೈದ್ಯರು ಸಲಹೆ ನೀಡಿದ್ದರಂತೆ.

Watch: ದೆಹಲಿ ಮಟ್ರೋ ರೈಲಿನಲ್ಲಿ ಲವರ್‌ಗಳ ಕಿಸ್ಸಿಂಗ್‌, 'ಸ್ವಲ್ಪನಾದ್ರೂ ಸಂಸ್ಕತಿ ಉಳಿಸಿಕೊಳ್ಳಿ' ಎಂದು ಟೀಕಿಸಿದ ಜನ!

ಕೆಲವೊಮ್ಮೆ ಭಾಷಾ ಫ್ರೆನ್ಯುಲಮ್‌ನ ಮಡಿಕೆಯು ತುಂಬಾ ಚಿಕ್ಕದಾಗಿರುತ್ತದೆ ಅಥವಾ ಬಿಗಿಯಾಗಿರುತ್ತದೆ. ಇದು ಮಾತನಾಡಲು ಅಥವಾ ಉಸಿರಾಟದಲ್ಲಿ ತೊಂದರೆ ಉಂಟುಮಾಡಬಹುದು. ಚುಂಬಿಸುವಾಗ ಅವಳ ಭಾಷಾ ಫ್ರೆನ್ಯುಲಮ್ ತನ್ನನ್ನು ತೊಂದರೆಗೊಳಿಸುತ್ತಿತ್ತು ಮತ್ತು ಅವಳ ಪ್ರೀತಿಯ ಜೀವನದ ಮೇಲೆ ಪರಿಣಾಮ ಬೀರುತ್ತಿತ್ತು ಎಂದು ಸರ್ಜರಿ ಮಾಡಿದ ವೈದ್ಯರು ತಿಳಿಸಿದ್ದಾರೆ. ಲಿಂಗ್ಯುಯಲ್ ಫ್ರೆನೆಕ್ಟಮಿಯಲ್ಲಿ ಪರಿಣತಿ ಹೊಂದಿರುವ ದಂತವೈದ್ಯರು ಈ ಸರ್ಜರಿ ಮಾಡಿದ್ದಾರೆ.

ಕಾರ್ಯವಿಧಾನದ ನಂತರ ಕ್ಸೆಹ್ಲಿ ಶೀಘ್ರವಾಗಿ ಚೇತರಿಸಿಕೊಂಡರು. ತನ್ನ ಪ್ರೇಮ ಜೀವನದಲ್ಲಿ ಎಂದಿಗೂ ಹೆಚ್ಚು ಆತ್ಮವಿಶ್ವಾಸವನ್ನು ಅನುಭವಿಸಿಲ್ಲ. ಆದರೆ ಈಗ ತುಂಬಾ ಖುಷಿಯಾಗುತ್ತಿದೆ ಎಂದು ರೋಚೆಲ್ ಹೇಳಿದರು. 'ಶಸ್ತ್ರಚಿಕಿತ್ಸೆಯು ನನ್ನ ಜೀವನದಲ್ಲಿ ನಾನು ಮಾಡಿದ ಅತ್ಯುತ್ತಮ ಕೆಲಸಗಳಲ್ಲಿ ಒಂದಾಗಿದೆ. ಇದು ನನ್ನ ಜೀವನವನ್ನು 100 ಪ್ರತಿಶತ ಸುಧಾರಿಸಿದೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಸಂಗಾತಿ ದೂರವಿದ್ದರೇನಂತೆ..ಇನ್ಮುಂದೆ ಆನ್‌ಲೈನ್‌ನಲ್ಲೇ ಸ್ಮೂಚ್ ಮಾಡ್ಬೋದು..!

click me!