ಮಂಟಪದಲ್ಲೇ ವಧು-ವರರ ಡಿಶುಂ ಡಿಶುಂ, ಜುಟ್ಟು ಹಿಟ್ಕೊಂಡು ಕಿತ್ತಾಡಿದ ಜೋಡಿ!

By Vinutha Perla  |  First Published Apr 20, 2023, 10:38 AM IST

ಮದ್ವೆ ಅಂದ್ರೆ ಶುಭಕಾರ್ಯ. ಹೀಗಾಗಿ ಇಲ್ಲಿ ಎಲ್ಲವೂ ಸುಲಲಿತವಾಗಿ ನಡೆಯಬೇಕು ಅಂತಾನೇ ಎಲ್ರೂ ಅಂದ್ಕೊಳ್ತಾರೆ. ಆದ್ರೆ ಈ ಮದ್ವೆ ಮನೆ ವಧು-ವರರ ಕಿತ್ತಾಟಕ್ಕೆ ರಣಾಂಗಣವೇ ಆಗಿ ಹೋಗಿದೆ. ಮಂಟಪದಲ್ಲೇ ವಧು-ವರರು ಜುಟ್ಟು ಹಿಟ್ಕೊಂಡು ಕಿತ್ತಾಡಿಕೊಂಡಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.


ಮದುವೆ ಮನೆ ಅಂದ್ರೆ ಅಲ್ಲಿ ಸಂಭ್ರಮ, ಸಡಗರ ತುಂಬಿಡುತ್ತೆ. ವಧು-ವರರು ಸುಂದರವಾಗಿ ರೆಡಿಯಾಗಿ ಮಂಟಪದಲ್ಲಿ ಕುಳಿತಿರುತ್ತಾರೆ. ಕುಟಂಬಸ್ಥರು, ಸ್ನೇಹಿತರು ಸಹ ಈ ಖುಷಿಯ ಕ್ಷಣದಲ್ಲಿ ಭಾಗಿಯಾಗಲು ಆಗಮಿಸುತ್ತಾರೆ. ಸಾಮಾನ್ಯವಾಗಿ ಮದುವೆ ಮನೆಯ ವಾತಾವರಣ ತುಂಬಾ ಸುಂದರವಾಗಿರುತ್ತೆ. ಗ್ರ್ಯಾಂಡ್ ಡೆಕೊರೇಷನ್‌, ಮ್ಯೂಸಿಕ್, ಸುಂದರ ಉಡುಗೆಯನ್ನು ತೊಟ್ಟು ಜನರು ಓಡಾಡುತ್ತಿರುತ್ತಾರೆ. ಆದ್ರೆ ಇಲ್ಲೊಂದು ಮದುವೆ ಮಂಟಪದಲ್ಲಿ ಖುಷಿಯಿರುವ ಬದಲು ಸಂಪೂರ್ಣ ಗಲಾಟೆ, ಗದ್ದಲವೇ ತುಂಬಿಕೊಂಡಿತ್ತು. ಮಂಟಪದಲ್ಲೇ ವಧು-ವರರು ಜುಟ್ಟು ಹಿಟ್ಕೊಂಡು ಕಿತ್ತಾಡಿಕೊಂಡ್ರು. ಸಾಮಾಜಿಕ ಜಾಲತಾಣದಲ್ಲಿ ಸದ್ಯ ಈ ವೀಡಿಯೋ ಸಖತ್ ವೈರಲ್ ಆಗಿದೆ.

ಮಂಟಪದಲ್ಲೇ ಹೊಡೆದಾಡಿಕೊಂಡ ನವ ಜೋಡಿಯ ವೀಡಿಯೋ ವೈರಲ್
ಸಾಮಾಜಿಕ ಜಾಲತಾಣಗಳಲ್ಲಿ (Social media) ಮದುವೆಯ ವಿಡಿಯೋಗಳು ಸಾಕಷ್ಟು ವೈರಲ್ ಆಗುತ್ತಿರುತ್ತವೆ. ಕೆಲವೊಂದು ಸುಂದರ ಕ್ಷಣಗಳಿಗಾಗಿ ವೈರಲ್ ಆದರೆ ಇನ್ನು ಕೆಲವು ಶಾಸ್ತ್ರದ ಸಂದರ್ಭದಲ್ಲಿ ಆಗೋ ಅವಾಂತರಗಳಿಂದ ವೈರಲ್ ಆಗುತ್ತವೆ. ಹಾಗೆಯೇ ಇತ್ತೀಚಿಗೆ ಟ್ವಿಟರ್‌ನಲ್ಲಿ ಮದುವೆ (Wedding) ಮಂಟಪದಲ್ಲಿ ನಡೆದ ಘಟನೆಯೊಂದನ್ನು ಪೋಸ್ಟ್ ಮಾಡಲಾಗಿದೆ. ಇದರಲ್ಲಿ ವಧು-ವರರು (Bride-bride groom) ಮಾಡಿರೋ ಅವಾಂತರ ಎಲ್ಲೆಡೆ ವೈರಲ್ ಆಗಿದೆ. ಸಮಾರಂಭದ ನಡುವೆ ವಧು-ವರರು ಪರಸ್ಪರ ಹೊಡೆಯುವುದನ್ನು ವೀಡಿಯೋದಲ್ಲಿ ನೋಡಬಹುದು.

Tap to resize

Latest Videos

'ದಯವಿಟ್ಟು ಮದುವೆಗೆ ಯಾರೂ ಬರ್ಬೇಡಿ', ಯಪ್ಪಾ..ಮದ್ವೆಗೆ ಹೀಗೂ ಕರೀತಾರಾ..!

ವಧು ಸಿಹಿ ತಿಂಡಿ ತಿನ್ನಲು ನಿರಾಕರಿಸಿದ್ದಕ್ಕೆ ವರನ ಸಿಟ್ಟು
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದ ಆರಂಭದಲ್ಲಿ, ವರನು, ವಧುವಿಗೆ ಕೆಲವು ಸಿಹಿತಿಂಡಿಗಳನ್ನು (Sweets) ತಿನ್ನಿಸಲು ಯತ್ನಿಸುವುದನ್ನು ಕಾಣಬಹುದು. ಆದರೆ ಇದಕ್ಕೆ ವಧು ನಿರಾಕರಿಸುತ್ತಾಳೆ. ವರನ ಕೈಯನ್ನು ಬಲವಂತವಾಗಿ ತೆಗೆಯಲು ಪ್ರಯತ್ನಿಸುತ್ತಾಳೆ. ಅವನು ಮತ್ತೂ ಒತ್ತಾಯಿಸಿದಾಗ ಹೊಡೆಯುತ್ತಾಳೆ. ನಂತರ ವರ ಸಹ ವಧುವಿಗೆ ಹೊಡೆಯುವುದು, ಆಕೆಯ ಕೂದಲನ್ನು ಹಿಡಿದು ಎಳೆದಾಡುವುದನ್ನು ನೋಡಬಹುದು. ಮಂಟಪದಲ್ಲಿ ಇತರ ಮಂದಿ ಇವರಿಬ್ಬರನ್ನು ಬೇರೆ ಮಾಡಲು ಯತ್ನಿಸುತ್ತಾರೆ.

ಆದರೆ ಇದೆಲ್ಲದರ ಮಧ್ಯೆಯೂ ವಧು-ವರರು ಕಿತ್ತಾಡಿಕೊಳ್ಳುತ್ತಾರೆ. ವಧು ಮತ್ತು ವರರು ಪರಸ್ಪರ ಹೊಡೆಯುವುದನ್ನು ಮುಂದುವರೆಸಿದಾಗ, ದಂಪತಿಗಳ ಅತಿಥಿಗಳು (Guests) ಮತ್ತು ಸಂಬಂಧಿಕರು (Relatives) ವೇದಿಕೆಯನ್ನು ಪ್ರವೇಶಿಸಿ ಪರಿಸ್ಥಿತಿಯನ್ನು ಶಮನಗೊಳಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿರುವುದು ಕಂಡುಬರುತ್ತದೆ.

ಏಳು ವರ್ಷ ವಯಸ್ಸಿನಿಂದ ಸಾಕಿದ್ದ ಮಲಮಗನಿಂದಲೇ ಮಗುವನ್ನು ಪಡೆದ ಮಹಿಳೆ!

@gharkekalesh ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಇದನ್ನು 163.4 K ಬಾರಿ ವೀಕ್ಷಿಸಲಾಗಿದೆ. ವಿಡಿಯೋಗೆ ಹಲವರು ಕಾಮೆಂಟ್ ಮಾಡಿದ್ದಾರೆ. 'ಮದುವೆಯಾಗುತ್ತೀರಾ ಅಥವಾ ವಿಚ್ಛೇದನ (Divorce) ಪಡೆಯುತ್ತೀರಾ' ನೀವೇ ನಿರ್ಧರಿಸಿ ಎಂದು ಒಬ್ಬರು ಕೇಳಿದರು. ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆಯೇ ಎಂದು ಮತ್ತೊಬ್ಬರು ಕೇಳಿದರು. ಇನ್ನೊಬ್ಬರು 'ನಾನು ಈ ಸಂಪೂರ್ಣ ಜಗಳದ ವೀಡಿಯೋವನ್ನು ಎಲ್ಲಿ ನೋಡಬಹುದು' ಎಂದು ಪ್ರಶ್ನಿಸಿದ್ದಾರೆ. ಎರಡನೆಯ ವ್ಯಕ್ತಿ, 'ವಿವಾಹ ಕಾರ್ಡ್‌ನಲ್ಲಿನ ಆಮಂತ್ರಣವು WEDS ಅನ್ನು VS ಎಂದು ತಪ್ಪಾಗಿ ಬರೆದಿದೆ' ಮತ್ತೆ ಕೆಲವರು ಈ ವೀಡಿಯೋ ಮೊದಲೇ ಪ್ಲಾನ್ ಮಾಡಿರುವಂತದ್ದು, ಇಡೀ ವೀಡಿಯೊವನ್ನು ಸ್ಕ್ರಿಪ್ಟ್ ಮಾಡಲಾಗಿದೆ' ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಅದೇನೆ ಇರ್ಲಿ, ಹಿಂದೆಯೆಲ್ಲಾ ಮದ್ವೆಯಾದ್ಮೇಲೆ ಕಿತ್ತಾಡಿಕೊಳ್ತಿದ್ರು. ಈಗ ಮಂಟಪದಲ್ಲೇ ಶುರುವಾಗ್ತಿದ್ಯಲ್ಲಾ ಅಂತಿದ್ದಾರೆ ಜನರು.

ಮಗಳ ಡಿಎನ್‌ಎ ಟೆಸ್ಟ್ ಮಾಡಿಸಿದ ದಂಪತಿ, ರಿಪೋರ್ಟ್‌ ನೋಡಿದ್ರೆ ಇಬ್ಬರಿಗೂ ಮ್ಯಾಚ್ ಆಗ್ತಿಲ್ಲ!

Kalesh B/w Husband and Wife in marriage ceremony pic.twitter.com/bjypxtJzjt

— Ghar Ke Kalesh (@gharkekalesh)
click me!