ಸಾಯುವ ಮುನ್ನ ಸತ್ಯ ಹೇಳಿದ ತಂದೆ… ಕಂಗಾಲಾದ ಮಗಳು!

By Suvarna News  |  First Published Dec 9, 2023, 3:50 PM IST

ಈಕೆ ತನ್ನ ತಂದೆ ಮೇಲೆ ಅಪಾರ ನಂಬಿಕೆ ಇಟ್ಟಿದ್ದಳು. ತಂದೆ ಪ್ರಾಮಾಣಿಕ ಎಂದುಕೊಂಡಿದ್ದಳು. ಆದ್ರೆ ಸಾಯುವ ಮುನ್ನ ತಂದೆ ಹೇಳಿದ ಮಾತು ಈಕೆಯ ಜೀವನವನ್ನು ತಲೆಕೆಳಗೆ ಮಾಡಿದೆ.


ಕುಟುಂಬದ ಬಗ್ಗೆ ಅದ್ರಲ್ಲೂ ಆಪ್ತರ ಬಗ್ಗೆಯೇ ಸರಿಯಾದ ಮಾಹಿತಿ ನಮಗೆ ಇರೋದಿಲ್ಲ. ಅದು ಹೇಗೋ ನಮ್ಮ ಕಿವಿಗೆ ಬಿದ್ದಾಗ ನಂಬೋದು ಕಷ್ಟವಾಗುತ್ತದೆ. ನಮ್ಮ ಹುಟ್ಟಿನ ರಹಸ್ಯ ಅಥವಾ ನಮ್ಮ ಪಾಲಕರ ಹುಟ್ಟಿನ ರಹಸ್ಯ ಇಲ್ಲವೆ ಅವರ ಬಾಲ್ಯದ ಕೆಲವೊಂದು ಘಟನೆ ಆಘಾತಕಾರಿಯಾಗಿರುತ್ತದೆ. ಆ ಕಟುಸತ್ಯ ಗೊತ್ತಾದಾಗ ಅವರ ಮೇಲಿನ ಭರವಸೆಯನ್ನೇ ನಾವು ಕಳೆದುಕೊಳ್ತೇವೆ. ನಮ್ಮ ಜೊತೆಗಿದ್ದವರ ಜೀವನದಲ್ಲಿ ಹೀಗೆಲ್ಲ ನಡೆದಿದ್ಯಾ ಅಥವಾ ಇಂಥ ಕ್ರೂರ ವ್ಯಕ್ತಿಗಳ ಜೊತೆ ನಾವು ಜೀವನ ನಡೆಸಿದ್ದೇವಾ ಎಂಬ ಪ್ರಶ್ನೆ ಮೂಡಲು ಶುರುವಾಗುತ್ತದೆ. ಈಗ ಈ ಮಹಿಳೆಗೂ ಅದೇ ಆಗಿದೆ. ಆಕೆ ತಂದೆ ಸಾಯುವ ಮುನ್ನ ಹೇಳಿದ ಆಕೆ ಕಂಗಾಲಾಗಿದ್ದಾಳೆ. ಇಷ್ಟೊಂದು ವರ್ಷ ಇವನ ಜೊತೆ ನಾನು ವಾಸವಾಗಿದ್ನಾ ಎಂಬ ಪ್ರಶ್ನೆ ಆಕೆಯನ್ನು ಕಾಡ್ತಿದೆ.

ಘಟನೆ ನಡೆದಿರೋದು ಮ್ಯಾಸಚೂಸೆಟ್ಸ್‌ (Massachusetts) ನ ಲಿನ್‌ಫೀಲ್ಡ್‌ನಲ್ಲಿ. ಆಕೆ ಹೆಸರು ಆಶ್ಲೇ. ಆಕೆ ತಂದೆಗೆ 71 ವರ್ಷದ  ಟಾಮ್ ರೆಂಡೆಲ್‌ಗೆ ಶ್ವಾಸಕೋಶದ ಕ್ಯಾನ್ಸರ್ (Cancer) ಇತ್ತು. ಕೊನೆ ಕ್ಷಣಗಳನ್ನು ಕಳೆಯುತ್ತಿದ್ದ ತಂದೆ, ಆಶ್ಲೆಗೆ ನನ್ನ ಹಿಂದಿನ ಆಳವಾದ ರಹಸ್ಯವನ್ನು ನಿನಗೆ ಹೇಳ್ತೇನೆ ಎಂದಿದ್ದಾನೆ. ಇದ್ರ ಮಧ್ಯೆ ತಂದೆ ಷರತ್ತೊಂದನ್ನು ಹಾಕಿದ್ದಾನೆ. ನಾನು ಹೇಳುವ ಸತ್ಯವನ್ನು ನೀವು ಯಾರಿಗೂ ಹೇಳ್ಬಾರದು. ಹಾಗೆ ಅದನ್ನು ತನಿಖೆ ನಡೆಸುವ ಪ್ರಯತ್ನಕ್ಕೆ ಹೋಗ್ಬಾರದು ಎಂದಿದ್ದಾನೆ. ಆಶ್ಲೆ ಇದಕ್ಕೆ ಒಪ್ಪಿದ್ದಾಳೆ.

Tap to resize

Latest Videos

ಮೂಲತಃ ತಂದೆ ಯಾರು?: ನಂತ್ರ ಮಾತು ಮುಂದುವರೆಸಿದ ತಂದೆ, ನನ್ನ ನಿಜವಾದ ಹೆಸರು ಟಾಮ್ ರಾಂಡಲ್ ಅಲ್ಲ. ನನ್ನ ಅಸಲಿ ಹೆಸರು ಟೆಡ್ ಕಾನ್ರಾಡ್ ಎಂದಿದ್ದಾನೆ. ನೀನು ನನ್ನ ಬಗ್ಗೆ ತಿಳಿದ ಎಲ್ಲ ಮಾಹಿತಿ ಸುಳ್ಳು ಎಂದಿದ್ದಾನೆ. ನನ್ನ ಹುಟ್ಟಿದ ದಿನಾಂಕ ಕೂಡ ಸುಳ್ಳು ಎಂದು ಮಗಳಿಗೆ ಶಾಕ್ ನೀಡಿದ್ದಾನೆ. ನನ್ನ 20ನೇ ವಯಸ್ಸಿನಿಂದ ಜುಲೈ 11, 1969 ರವರೆಗೆ   ಓಹಿಯೋದ ಕ್ಲೀವ್ಲ್ಯಾಂಡ್‌ನಲ್ಲಿರುವ ಸೊಸೈಟಿ ನ್ಯಾಷನಲ್ ಬ್ಯಾಂಕ್‌ನಲ್ಲಿ ಬ್ಯಾಂಕ್ ಟೆಲ್ಲರ್ ಆಗಿ ಕೆಲಸ ಮಾಡಿದ್ದೆ. ಬ್ಯಾಂಕ್ ಲಾಕರ್ ಕೀ ನನ್ನ ಬಳಿ ಇರ್ತಾ ಇತ್ತು. ಒಂದು ದಿನ ಬ್ಯಾಂಕ್ ಮ್ಯಾನೇಜರ್ ಗೆ ಸತ್ಯ ಗೊತ್ತಾಗಿದೆ. ಬ್ಯಾಂಕ್ ನಲ್ಲಿದ್ದ 215,000 ಡಾಲರ್ ಅಂದ್ರೆ 1.79 ಕೋಟಿ ರೂಪಾಯಿ ಕಾಣೆಯಾಗಿದೆ ಎಂಬುದು ಮ್ಯಾನೇಜರ್ ಗಮನಕ್ಕೆ ಬಂದಿದೆ. ಘಟನೆ ಗೊತ್ತಾಗುವ ಮೂರು ದಿನ ಮೊದಲೇ ಕಾನ್ರಾಡ್ ನಾಪತ್ತೆಯಾಗಿದ್ದ. ಹೌದು, ನಾನೇ ಅದನ್ನು ಕದ್ದಿದ್ದೆ. ನಾನು ಬ್ಯಾಂಕ್ ದರೋಡೆ ಮಾಡಿದ್ದೆ ಎಂದು ತಂದೆ, ಮಗಳ ಮುಂದೆ ಹೇಳಿದ್ದಾನೆ. 

ಪೊಲೀಸರಿಂದ ತಪ್ಪಿಸಿಕೊಳ್ಳಲು ನಾನು ಅಲ್ಲಿಂದ ಓಡಿ ಬಂದಿದ್ದೆ. 750 ಮೈಲಿ ದೂರದ ಲಿನ್‌ಫೀಲ್ಡ್‌ಗೆ ಬಂದು ನೆಲೆಸಿದೆ. ಅಲ್ಲಿ ನೀನು ಹುಟ್ಟಿದೆ. ಇಲ್ಲಿ ನನ್ನದೇ ಆದ ಹೊಸ ಜೀವನ ಶುರು ಮಾಡಿದೆ. ನನ್ನ ಹುಟ್ಟಿದ ದಿನಾಂಕದಿಂದ ಹಿಡಿದು, ಹೆಸರು ಎಲ್ಲದರ ಸುಳ್ಳು ದಾಖಲೆ ಸೃಷ್ಟಿ ಮಾಡಿದ್ದೆ. ಅದೇ ಕೊನೆಯ ದರೋಡೆ. ಅಲ್ಲಿಂದ ಮುಂದೆ ನಾನು ಯಾವುದೇ ತಪ್ಪು ಮಾಡಿಲ್ಲ. ನ್ಯಾಯಯುತವಾಗಿ ಕೆಲಸ ಮಾಡಿದ್ದೇನೆ ಎಂದು ತಂದೆ ಹೇಳಿದ್ದಾರೆ.

ತಂದೆ ಮಾತು ಕೇಳಿ ಆಶ್ಲೆ ದಂಗಾಗಿದ್ದಾಳೆ. ತಂದೆ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ. ಅವರ ಸಾವಿನ ನಂತ್ರ ನಾನು ಅನೇಕ ಬಾರಿ ತಂದೆ ಬಗ್ಗೆ ಆಲೋಚನೆ ಮಾಡಿದ್ದೇನೆ. ನಾನೊಬ್ಬ ಕ್ರಿಮಿನಲ್ ಮಗಳು. ಅವರ ಜೊತೆ ಇಷ್ಟುವರ್ಷ ಜೀವನ ಮಾಡಿದ್ದೆ ಎಂದು ನನಗೆ ಅಚ್ಚರಿಯಾಗುತ್ತದೆ ಎಂದು ಆಶ್ಲೆ ಹೇಳಿದ್ದಾಳೆ. 

click me!