ಸಂಬಂಧದ ಅರ್ಥ ಬದಲಾಗ್ತಿದೆ. ಮೊದಲಿದ್ದಂತೆ ಜನರು ಈಗ ಸಂಬಂಧಕ್ಕೆ ಬೆಲೆ ನೀಡ್ತಿಲ್ಲ. ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ತಿದ್ದಾರೆ. ಅದ್ರಲ್ಲಿ ಬ್ಯಾಕ್ ಬರ್ನರ್ ಸಂಬಂಧವೂ ಒಂದು. ಅದರ ಬಗ್ಗೆ ಮಾಹಿತಿ ಇಲ್ಲಿದೆ.
ಈಗಿನ ದಿನಗಳಲ್ಲಿ ಜನರ ಆಲೋಚನೆ ಬದಲಾಗಿದೆ. ಈ ಡೇಟಿಂಗ್ ಯುಗದಲ್ಲಿ ಪ್ರೀತಿಯನ್ನು ಹುಡುಕುವ ಅಥವಾ ಅದನ್ನು ಅರ್ಥೈಸಿಕೊಳ್ಳುವ ರೀತಿ ಬದಲಾಗಿದೆ. ಈಗ ಜನರು ಒನ್ ಪರ್ಸನ್ ಪಾಲಿಸಿ ಬದಲು ಡೇಟಿಂಗ್ ಗೆ ಒಬ್ಬರು, ಪ್ರೀತಿಗೆ ಒಬ್ಬರನ್ನು ಇಟ್ಟುಕೊಂಡಿರ್ತಾರೆ. ಈ ಕಾರಣದಿಂದಾಗಿ ಬ್ಯಾಕ್‌ಬರ್ನರ್ ಸಂಬಂಧಗಳು ವೇಗವನ್ನು ಪಡೆಯಲಾರಂಭಿಸಿವೆ. ಇದರರ್ಥ ಈಗ ಒಬ್ಬ ವ್ಯಕ್ತಿಯು ಪ್ರೀತಿಯ ವಿಷಯಗಳಲ್ಲಿ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ.
ಒಬ್ಬ ವ್ಯಕ್ತಿ ಜೊತೆ ದೀರ್ಘಕಾಲದವರೆಗೆ ಸಂಬಂಧ (Relationship) ಇಟ್ಟುಕೊಳ್ಳಲು ಸಾಧ್ಯವಿಲ್ಲ ಎನ್ನುವ ಜನರು ಅವರನ್ನು ಬಿಟ್ಟು ಇನ್ನೊಬ್ಬರ ಬಳಿ ಹೋಗ್ತಾರೆ. ಹಾಗಂತ ಇವರಿಗೆ ಸಂಗಾತಿ ಬದಲಿಸೋದು ಸುಲಭವಾಗಿರೋದಿಲ್ಲ. ಒಬ್ಬರು ಅಥವಾ ಇಬ್ಬರು ಸಂಗಾತಿಗಳೂ ಒತ್ತಡ (Stress) ಕ್ಕೆ ಒಳಗಾಗಿರ್ತಾರೆ. ತಮ್ಮ ಸಂಬಂಧವನ್ನು ಮರೆಯಲು ಅವರಿಗೆ ಸಾಧ್ಯವಾಗೋದಿಲ್ಲ. ನಾವಿಂದು ಈ ಬ್ಯಾಕ್ ಬರ್ನರ್ (Back Burner) ಸಂಬಂಧ ಅಂದ್ರೇನು ಅನ್ನೋದನ್ನು ಹೇಳ್ತೇವೆ.
ಐಶ್-ಅಭಿಷೇಕ್ ಡಿವೋರ್ಸ್ ಸುದ್ದಿ ಬೆನ್ನಲ್ಲೇ ಸೊಸೆಯನ್ನು ಅನ್ಫಾಲೋ ಮಾಡಿದ ಅಮಿತಾಭ್? ಅಸಲಿಯತ್ತೇನು?
ಬ್ಯಾಕ್ ಬರ್ನರ್ ಸಂಬಂಧ ಎಂದರೇನು? : ಹಳೆಯ ಸ್ನೇಹಿತನೊಂದಿಗೆ ಮರುಸಂಪರ್ಕಿಸುವ ಸಾಧ್ಯತೆಯನ್ನು ಕಾಪಾಡಿಕೊಳ್ಳುವುದನ್ನು ಬ್ಯಾಕ್‌ಬರ್ನರ್ ಸಂಬಂಧ ಎಂದು ಕರೆಯಲಾಗುತ್ತದೆ. ಪ್ರಸ್ತುತ ಹಳೆ ಸ್ನೇಹಿತನ ಜೊತೆ ಸಂಬಂಧದಲ್ಲಿರೋದಿಲ್ಲ ಆದ್ರೆ ಸಂಪರ್ಕದಲ್ಲಿರುತ್ತಾರೆ. ಅವಶ್ಯಕತೆ ಬಂದ್ರೆ ಭವಿಷ್ಯದಲ್ಲಿ ಸಂಬಂಧವನ್ನು ಬೆಳೆಸಲು ಮುಂದಾಗ್ತಾರೆ.
ಅತೀ ಹೆಚ್ಚು ಅಶ್ಲೀಲ ವಿಡಿಯೋ ನೋಡುವ ದೇಶದ ಪಟ್ಟಿ ಬಹಿರಂಗ, ಭಾರತಕ್ಕೆ ಎಷ್ಟನೆ ಸ್ಥಾನ?
ಬ್ಯಾಕ್ ಬರ್ನರ್ ಸಂಬಂಧದಲ್ಲಿದ್ದೀರಿ ಎಂಬುದನ್ನು ಹೀಗೆ ಪತ್ತೆ ಮಾಡಿ :
ಒಂದೇ ಬಾರಿ ಒಂದಕ್ಕಿಂತ ಹೆಚ್ಚು ಸಂಬಂಧದ ಸ್ವೀಕಾರ : ಒಂದು ಸಮಯದಲ್ಲಿ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳೊಂದಿಗೆ ಡೇಟಿಂಗ್ ಮಾಡುವುದನ್ನು ಬ್ಯಾಕ್ ಬರ್ನರ್ ಸಂಬಂಧ ಸೂಚಿಸುತ್ತದೆ. ಜನರು ತಮ್ಮ ಡೇಟಿಂಗ್ ಪಾಲುದಾರರೊಂದಿಗೆ ಪ್ರಯಾಣ ಮತ್ತು ಲೈಂಗಿಕ ಸಂಬಂಧವನ್ನು ಸಹ ಸಾಮಾನ್ಯವೆಂದು ಪರಿಗಣಿಸುತ್ತಾರೆ. ಒಂದೇ ಬಾರಿ ಎರಡು, ಮೂರು ಜನರ ಜೊತೆ ಡೇಟಿಂಗ್ ಮಾಡುವ ವ್ಯಕ್ತಿ ಜೊತೆ ನೀವು ಸಂಬಂಧದಲ್ಲಿದ್ದರೆ ನೀವು ಬ್ಯಾಕ್ ಬರ್ನರ್ ಸಂಬಂಧಕ್ಕೆ ಬಲಿ ಆಗ್ತಿದ್ದೀರಿ ಎಂದರ್ಥ.
ಕಮಿಟ್ಮೆಂಟ್ ಗೆ ಹಿಂದೇಟು : ನಿಮ್ಮ ಸಂಗಾತಿ ನಿಮ್ಮ ಜೊತೆ ಸಂಬಂಧದ ಕಮಿಟ್ಮೆಂಟ್ ಗೆ ಬೀಳ್ತಿಲ್ಲ ಎಂದಾದ್ರೆ ನೀವು ಬ್ಯಾಕ್ ಬರ್ನರ್ ಸಂಬಂಧದಲ್ಲಿ ಸಿಕ್ಕಿಬಿದ್ದಿದ್ದೀರಿ ಎಂದರ್ಥ. ನಿಮ್ಮ ಸಂಗಾತಿ ನಿಮ್ಮ ಜೊತೆ ಡೇಟಿಂಗ್, ಈಟಿಂಗ್ ಎಲ್ಲದನ್ನು ಮಾಡಿದ್ರೂ ಆ ಸಂಬಂಧಕ್ಕೆ ಒಂದು ಹೆಸರು ನೀಡೋದಿಲ್ಲ. ಅದನ್ನು ಕಮಿಟ್ಮೆಂಟ್ ಇಲ್ಲದ ಸಂಬಂಧ ಎನ್ನಬಹುದು.
ಎಲ್ಲರದಲ್ಲೂ ಸಂಗಾತಿ ಮೇಲುಗೈ : ನಿಮ್ಮ ಸಂಗಾತಿ ನಿಮಗಿಂತ ಅವರ ಇಚ್ಛೆಗೆ ಹೆಚ್ಚು ಆದ್ಯತೆ ನೀಡ್ತಿದ್ದರೆ ನೀವು ಬ್ಯಾಕ್ ಬರ್ನರ್ ಸಂಬಂಧದಲ್ಲಿದ್ದೀರಿ ಎಂದು ಅರ್ಥೈಸಿಕೊಳ್ಳಿ. ಈ ಸಂಬಂಧದಲ್ಲಿ ಜನರು ಬೇರೆಯವರ ಬಗ್ಗೆ ಹೆಚ್ಚು ಗಮನ ನೀಡೋದಿಲ್ಲ. ತಮಗೆ ಬೇಕಾದಂತೆ ಪರಿಸ್ಥಿತಿ ಹಾಗೂ ಜನರನ್ನು ಬದಲಿಸುತ್ತಾರೆ. ಆಗಾಗ ಕಣ್ಮರೆಯಾಗುತ್ತಾರೆ. ತಮಗೆ ಅನುಕೂಲವಿದ್ದಲ್ಲಿ ಮಾತ್ರ ಜನರ ಜೊತೆ ಮಾತನಾಡ್ತಾರೆ.
ಬ್ಯಾಕ್ ಬರ್ನರ್ ಸಂಬಂದಿಂದ ಅನಾನುಕೂಲ :
ಒತ್ತಡ : ದೀರ್ಘಕಾಲದವರೆಗೆ ಬ್ಯಾಕ್ ಬರ್ನರ್ ಸಂಬಂಧದಲ್ಲಿ ಇದ್ದರೆ ಒತ್ತಡಕ್ಕೆ ಬಲಿಯಾಗುವ ಸಾಧ್ಯತೆ ಇರುತ್ತದೆ. ಇದು ನಿಮ್ಮನ್ನು ಖಿನ್ನತೆಗೆ ನೂಕಬಹುದು. ಸಂಬಂಧದಲ್ಲಿ ಕಮಿಟ್ಮೆಂಟ್ ಇಲ್ಲದಿರುವುದೇ ಇದಕ್ಕೆ ದೊಡ್ಡ ಕಾರಣವಾಗುತ್ತದೆ.
ಕೀಳರಿಮೆ : ನಿಮ್ಮ ಭಾವನೆಗಳಿಗೆ ಸಂಗಾತಿ ಮಹತ್ವ ನೀಡದಿರುವುದು ಅಥವಾ ಆಗಾಗ ಕಣ್ಮರೆಯಾಗುವ ಸ್ವಭಾವ ನಿಮ್ಮನ್ನು ಕೀಳರಿಮೆ ತಳ್ಳುತ್ತದೆ. ಸಂಗಾತಿ ಮೇಲೆ ಅಪನಂಬಿಕೆ ಮೂಡಲೂ ಇದೇ ಕಾರಣವಾಗುತ್ತದೆ.
ಆತ್ಮವಿಶ್ವಾದ ಕೊರತೆ : ನೀವು ಸಂಗಾತಿಯ ಪ್ರೀತಿ ಆಗಿರಬೇಕು. ಅದೇ ಸ್ಟ್ಯಾಂಡ್ ಬೈ ಆದ್ರೆ ಅದು ನಿಮ್ಮನ್ನು ಕುಗ್ಗಿಸುತ್ತದೆ. ನಿಮ್ಮ ಆತ್ಮವಿಶ್ವಾಸಕ್ಕೆ ಧಕ್ಕೆಯುಂಟು ಮಾಡುತ್ತದೆ.