ನಾ ಮದ್ವೆಯಾದವ ಅವನಲ್ಲ ಅವಳು: 10 ತಿಂಗಳ ಬಳಿಕ ಬಯಲಾದ ಸತ್ಯ!

By Suvarna NewsFirst Published Jun 22, 2022, 2:35 PM IST
Highlights

ಇಂಡೋನೇಷ್ಯಾದ ಮಹಿಳೆಯೊಬ್ಬರಿಗೆ ಮದ್ವೆಯಾದ 10 ತಿಂಗಳ ನಂತರ ತಾನು ಮದುವೆಯಾಗಿದ್ದು, ಪುರುಷನನ್ನು ಅಲ್ಲ ಎಂಬುದು ತಿಳಿದು ಬಂದಿದ್ದು, ಆಕೆಗೆ ತಾನು ಮೋಸ ಹೋಗಿರುವುದರ ಅರಿವಾಗಿದೆ.

ಇಂಡೋನೇಷ್ಯಾ: ಮದುವೆಯಲ್ಲಿ ನಡೆಯುವ ಮೋಸಗಳ ಸಾವಿರಾರು ಸ್ಟೋರಿಗಳನ್ನು ನಾವು ಈಗಾಗಲೇ ಕೇಳಿದ್ದೇವೆ. ಮದುವೆಗಳು ತಾಳಿ ಕಟ್ಟುವ ಸಮಯದಲ್ಲಿ ನಿಂತು ಹೋಗುವುದು, ಮದುವೆ ದಿನವೇ ವಧು ವರರು ಅವರ ಸಂಬಂಧಿಕರು ಹೊಡೆದಾಡುವ ಘಟನೆಯನ್ನು ನೋಡಿದ್ದೇವೆ. ಆದರೆ ಈಗ ಇಂಡೋನೇಷ್ಯಾದ ಮಹಿಳೆಯೊಬ್ಬರಿಗೆ ಮದ್ವೆಯಾದ 10 ತಿಂಗಳ ನಂತರ ತಾನು ಮದುವೆಯಾಗಿದ್ದು, ಪುರುಷನಲ್ಲ ಸ್ತ್ರೀ ಎಂಬುದು ತಿಳಿದು ಬಂದಿದ್ದು, ಆಕೆಗೆ ತಾನು ಮೋಸ ಹೋಗಿರುವುದರ ಅರಿವಾಗಿದೆ.  

ಈಗ ಕಾನೂನು ಮೊರೆ ಹೋಗಿರುವ ಆಕೆ ತನ್ನ ಈ ಮೋಸದ ಮದುವೆಯ ಬಗ್ಗೆ ಹೇಳಿಕೊಂಡಿದ್ದಾಳೆ. ಈಕೆ ತಾನು ಮದುವೆಯಾದ ವ್ಯಕ್ತಿಯನ್ನು ಡೇಟಿಂಗ್ ಆಪ್‌ನಲ್ಲಿ ಭೇಟಿಯಾಗಿದ್ದಳು. ಅಲ್ಲದೇ ಆತ ಸರ್ಜನ್ ಎಂದು ಹೇಳಿಕೊಂಡಿದ್ದ. ಕಾನೂನು ದಾಖಲೆಗಳಲ್ಲಿ ಈ ಮಹಿಳೆಯನ್ನು NA ಎಂದು ಉಲ್ಲೇಖಿಸಲಾಗಿದ್ದು,  AA ಎಂಬ ಮೊದಲಕ್ಷರಗಳಿಂದ ಆಕೆ ಮದುವೆಯಾದ ವ್ಯಕ್ತಿಯನ್ನು ಉಲ್ಲೇಖಿಸಲಾಗಿದೆ.

ವೈರಲ್‌ ಆಗೋದಕ್ಕೋಸ್ಕರನೇ ಹೆಣ್ಣು ಆಡಿನೊಂಡಿಗೆ ಮದುವೆಯಾದ ಗಂಡು

AA ತಾನೂಬ್ಬ ಕಲ್ಲಿದ್ದಲು ವ್ಯವಹಾರ ನಡೆಸುವುದರ ಜೊತೆ, ತರಬೇತಿ ಪಡೆದ ಶಸ್ತ್ರಚಿಕಿತ್ಸಕ ಎಂದು NA ಜೊತೆ ಪರಿಚಯ ಮಾಡಿಕೊಂಡಿದ್ದರು ಎಂದು ಮಹಿಳೆ ಹೇಳಿಕೊಂಡರು. ಹಲವು ಸುತ್ತಾಟಗಳ ಬಳಿಕ ಈ ಜೋಡಿ ರಹಸ್ಯವಾದ ಸಮಾರಂಭದಲ್ಲಿ ಪರಸ್ಪರ ವಿವಾಹವಾದರು. ಅದಾದ ನಂತರ ರೂಢಿಯಂತೆ NA ತನ್ನ ಗಂಡನೊಂದಿಗೆ ಹೊಸ ಮನೆಯಲ್ಲಿ ವಾಸಿಸಲು ಶುರು ಮಾಡಿದ್ದಳು.

ಆದರೆ ಈ ನವ ದಂಪತಿಗಳು ದಕ್ಷಿಣ ಸುಮಾತ್ರಾಕ್ಕೆ ತೆರಳಿದ ನಂತರ, ವರನು, ವಧು NAಳ ಕುಟುಂಬವನ್ನು ಹಣ ನೀಡುವಂತೆ ಪೀಡಿಸಲು ಪ್ರಾರಂಭಿಸಿದನು. ಮಿರರ್‌ನ ವರದಿಯ ಪ್ರಕಾರ, NA ಮತ್ತು ಅವರ ಕುಟುಂಬಕ್ಕೆ ವರ AA 16,537 ಪೌಂಡ್‌ಗಳಲ್ಲಿ (Rs 15.7 ಲಕ್ಷ) ವಂಚಿಸಿದ್ದಾನೆ ಎಂದು  ತಿಳಿದು ಬಂದಿದೆ. ಇಂಡೋನೇಷ್ಯಾದ ಜಂಬಿ ಜಿಲ್ಲಾ ನ್ಯಾಯಾಲಯದಲ್ಲಿ ಹಾಜರಾದ ಮಹಿಳೆ  ತನ್ನ ಸಂಗಾತಿಯು ಕಾನೂನುಬದ್ಧ ವಿವಾಹಕ್ಕಾಗಿ ಯಾವುದೇ ದಾಖಲೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾಳೆ.

6 ಹೆಂಡತಿಯರೊಂದಿಗೆ ಶಾಪಿಂಗ್‌ ಹೋದ ಪತಿ: ಖರ್ಚು ಮಾಡಿದ್ದು ಎಷ್ಟು ಗೊತ್ತಾ?

ತನ್ನ ಸಂಗಾತಿಯು 'ರಹಸ್ಯ ವಿವಾಹ'ವನ್ನು ಏರ್ಪಡಿಸಿದ್ದಾರೆ ಎಂದು ಮಹಿಳೆ ಹೇಳಿದ್ದಾಳೆ. ಇಂಡೋನೇಷ್ಯಾದಲ್ಲಿ ನೋಂದಾಯಿಸದ ವಿವಾಹಗಳಿಗೆ ರಹಸ್ಯ ವಿವಾಹ ಪದವನ್ನು ಬಳಸಲಾಗುತ್ತದೆ. ಈ ಮದುವೆಗೆ ಧರ್ಮದಲ್ಲಿ ಮಾನ್ಯತೆ ನೀಡಲಾಗುತ್ತದೆ. ಆದರೆ ಸರ್ಕಾರದಿಂದ ಯಾವುದೇ ಮಾನ್ಯತೆ ಇಲ್ಲ. ಮದುವೆಯನ್ನು ನೋಂದಾಯಿಸಲು ಅಗತ್ಯವಿರುವ ಯಾವುದೇ ನಾಗರಿಕ ದಾಖಲೆಗಳನ್ನು ಹೆಣ್ಣಾಗಿದ್ದ ಆಕೆಗೆ ನೀಡಲು ಸಾಧ್ಯವಾಗದ ಕಾರಣ ಎಎ ಅಂತಹ ವ್ಯವಸ್ಥೆಗೆ ಹೋಗಿದ್ದಾರೆ ಎಂದು ಮಹಿಳೆ  ದೂರಿದ್ದಾಳೆ. 

ಈ ಮಧ್ಯೆ ಪದೇ ಪದೇ ಹಣ ನೀಡಿದರೂ ಆತ ಸಮಾಧಾನಗೊಳ್ಳದ ಹಾಗೂ ತನ್ನ ಪತ್ನಿಯ ಜೊತೆ ಪತಿಯಂತೆ ವರ್ತಿಸದ ಕಾರಣ ಅನುಮಾನಗೊಂಡ ಮಹಿಳೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನ ಕತೆಯನ್ನು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಅನೇಕರು ಮಹಿಳೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ವರ ಎಎ ಗಂಡಲ್ಲ ಹೆಣ್ಣು ಎಂಬುದು ತಿಳಿದು ಬಂದಿದೆ. ಅಲ್ಲದೇ ಆಕೆಯ ನಿಜವಾದ ಹೆಸರು EY ಎಂದು ಪೊಲೀಸರ ಮುಂದೆ ಆಕೆ ಬಾಯ್ಬಿಟ್ಟಿದ್ದಾಳೆ. 

click me!