ಸಂಗಾತಿ ಹೀಗೆಲ್ಲಾ ಮಾಡ್ತಿದ್ರೆ ಅವ್ರಿಗೆ ನಿಮ್ಮ ಮೇಲೆ ಏನೇನೂ ಆಸಕ್ತಿ ಉಳಿದಿಲ್ಲ ಎಂದರ್ಥ

By Suvarna NewsFirst Published Jun 22, 2022, 2:26 PM IST
Highlights

ಮದ್ವೆ (Marriage) ಮೊದ್ಲೆಲ್ಲಾ ಚೆನ್ನಾಗಿತ್ತಪ್ಪಾ. ಈಗ ನೋಡಿದ್ರೆ ಗಂಡ (Husband) ಯಾವಾಗ್ಲೂ ಕೆಲ್ಸದ ನೆಪ ಹೇಳಿ ಮನೆಗೆ ಬರೋದು ಲೇಟು, ಪಾರ್ಕ್‌, ಮೂವಿ ಅಂತ ಕರ್ಕೊಂಡು  ಹೋಗೋದೆ ಇಲ್ಲ. ಸಂಗಾತಿಯ (Partner) ಇಂಥಾ ವರ್ತನೆ ಹಲವರಲ್ಲಿ ಗಾಬರಿ ಮೂಡಿಸುತ್ತದೆ. ಹೀಗಾಗಿ ಅವ್ರ ವರ್ತನೆಯನ್ನು ಗಮನಿಸಿ. ನಿಮ್ಮ ಪಾರ್ಟನರ್ ಬಿಹೇವಿಯರ್ ಹೀಗಿದ್ರೆ ಅವ್ರಿಗೆ ನಿಮ್ಮ ಮೇಲೆ ಆಸಕ್ತೀನೆ (Interest) ಉಳಿದಿಲ್ಲ ಎಂದರ್ಥ.

ಪ್ರೀತಿ (Love) ಅನ್ನೋದು ಮನಸ್ಸಿನಲ್ಲಿ ಮೂಡುವ ಭಾವನೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಮತ್ತು ಯಾವಾಗ್ಲೂ ಇದು ಒಂದೇ ರೀತಿ ಇರೆಬೇಕೆಂದು ಕೂಡಾ ಇಲ್ಲ. ಕೆಲವೊಮ್ಮೆ ಪ್ರೀತಿ ಹೆಚ್ಚಾಗಬಹುದು. ಕೆಲವೊಮ್ಮೆ ಕಡಿಮೆಯಾಗಬಹುದು. ಹೀಗೆ ಭಾವನೆಯಲ್ಲಿ ತುಂಬಾ ಏರುಪೇರುಗಳು ಉಂಟಾಗುತ್ತವೆ. ಇದರ ಜೊತೆಯಲ್ಲೇ ಸಂಬಂಧ (Relationship)ಗಳಲ್ಲೂ ವ್ಯತ್ಯಸ್ಥತೆ ಕಾಣಿಸಿಕೊಳ್ಳುತ್ತದೆ.  ನಾವು ಒಬ್ಬ ವ್ಯಕ್ತಿಯನ್ನು ಇಷ್ಟಪಟ್ಟಾಗ ಆ ವ್ಯಕ್ತಿ ಸಹ ನಮ್ಮನ್ನು ಇಷ್ಟಪಡಬೇಕೆಂದು ಬಯಸುತ್ತೇವೆ. ಆದರೆ, ನಿಮ್ಮ ಸಂಗಾತಿಯ ಕೆಲವು ವರ್ತನೆ (Behaviour) ಗಳನ್ನು ಗಮನಿಸಿದರೆ, ಅವರು ನಿಮ್ಮ ಒತ್ತಾಯಕ್ಕೆ ಮಣಿದು ಜೊತೆಯಲ್ಲಿದ್ದಾರೆ. ಹೊರತು ಪ್ರೀತಿಯಿಂದ ಅಲ್ಲ ಎಂದು ತಿಳಿದು ಬರುತ್ತದೆ. 

ಮದ್ವೆ ಮೊದ್ಲೇ ಕಮಿಟೆಡ್ ಆಗಿದ್ದಾಗ್ಲೂ ಕೆಲವೊಮ್ಮೆ ಹೀಗೆಲ್ಲಾ ಆಗುತ್ತದೆ. ಸಂಗಾತಿ (Partner)ಗೆ ನಮ್ಮ ಮೇಲೆ ಹೆಚ್ಚು ಆಸಕ್ತಿಯಿಲ್ಲದಂತೆ ಭಾಸವಾಗುತ್ತದೆ. ಆದರೆ ಇದು ನಿಜವೋ, ಅಲ್ಲ ನಮ್ಮ ಭಾವನೆಯಷ್ಟೆಯೋ ಎಂಬುದನ್ನು ತಿಳಿದುಕೊಳ್ಳಲು ಕಷ್ಟವಾಗುತ್ತದೆ . ಮದುವೆಯ (Marriage) ನಂತರವೂ ದಂಪತಿಯ ಮಧ್ಯೆ ಇಂಥಾ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೀಗಾದಾಗ ಸಂಬಂಧವೇ ಅರ್ಥಹೀನವಾಗಿಬಿಡುತ್ತದೆ. ಇಷ್ಟವಿಲ್ಲದ ಇಬ್ಬರು ವ್ಯಕ್ತಿಗಳು ಒಂದೇ ಸೂರಿನಡಿ ಇರುವುದರಲ್ಲಿ ಅರ್ಥವೇ ಇಲ್ಲ. ಸಂಗಾತಿಗೆ ನಿಮ್ಮ ಬಗ್ಗೆ ಮೊದಲಿನ ಪ್ರೀತಿ ಉಳಿದಿಲ್ಲ ಎಂಬುದನ್ನು ಅವರ ಕೆಲವು ವರ್ತನೆಯಿಂದ ತಿಳಿದುಕೊಳ್ಳಬಹುದು. ಅದನ್ನು ತಿಳಿದುಕೊಳ್ಳೋಕೆ ಇಲ್ಲಿದೆ ಕೆಲವೊಂದು ಟಿಪ್ಸ್.

ಹುಡುಗನ ಮೊದಲ ಸ್ಪರ್ಶವಾಗ್ತಿದ್ದಂತೆ ಹೀಗೆ ಯೋಚಿಸ್ತಾಳೆ ಹುಡುಗಿ!

ಸಂಗಾತಿ ರೂಮ್‌ಮೇಟ್‌ನಂತೆ ಭಾಸವಾಗುತ್ತಾರೆ: ಕೇವಲ ಊಟ, ತಿಂಡಿಗೆ ಮಾತ್ರ ಜೊತೆಯಾಗಿ ಟೇಬಲ್‌ ಮುಂದೆ ಕುಳಿತುಕೊಳ್ಳುವುದು. ಕೇವಲ ಒಂದೆರಡು ಸಂಭಾಷಣೆ ಇದು ಸಂಗಾತಿಗೆ ನಿಮ್ಮ ಮೇಲೆ ಆಕರ್ಷಣೆ ಉಳಿದಿಲ್ಲ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಅವರು ನಿಮ್ಮ ಸಾಮೀಪ್ಯವನ್ನು ಇಷ್ಟಪಡುತ್ತಿಲ್ಲ. ನಿಮ್ಮಿಂದ ದೂರ ಹೋಗಲು ಬಯಸುತ್ತಿದ್ದಾರೆ ಎಂಬುದನ್ನು ತಿಳಿಸುತ್ತದೆ.  

ಸಂಗಾತಿ ಬಗ್ಗೆ ಗಮನ ಇಲ್ಲದಿರುವುದು: ಸಂಗಾತಿಯ ಬಗ್ಗೆ ಪ್ರೀತಿಯಿದ್ದಾಗ ಪರಸ್ಪರ ಇಬ್ಬರೂ ಹೆಚ್ಚು ಸಮಯ ಕೊಟ್ಟು ಇಬ್ಬರ ಬಗ್ಗೆ ಕಾಳಜಿ ವಹಿಸುತ್ತಾರೆ. ಆದ್ರೆ ಆ ಪ್ರೀತಿಯೇ ಇರದಿದ್ದಾಗ ಸಂಗಾತಿ ಬಗ್ಗೆ ಗಮನವೇ ಇರುವುದಿಲ್ಲ. ಆಕೆಯ ಆರೋಗ್ಯ, ಆಸಕ್ತಿ, ಹವ್ಯಾಸ ಯಾವುದರ ಬಗ್ಗೆಯೂ ತಿಳಿದುಕೊಳ್ಳುವ ಮನಸ್ಥಿತಿಯಿರುವುದಿಲ್ಲ. ಇಂಥಹಾ ನಿರ್ಲಕ್ಷ್ಯದ ವರ್ತನೆಯಿಂದ ಸಂಗಾತಿಗೆ ನಿಮ್ಮ ಬಗ್ಗೆ ಆಕರ್ಷಣೆ ಉಳಿದಿಲ್ಲ ಎಂದು ತಿಳಿದುಕೊಳ್ಳಬಹುದು.

ಜವಾಬ್ದಾರಿ ತೆಗೆದುಕೊಳ್ಳದಿರುವುದು: ಸಂಗಾತಿಗೆ ನಿಮ್ಮ ಬಗ್ಗೆ ಆಸಕ್ತಿ ಇಲ್ಲದಿದ್ದರೆ ನಿಮ್ಮ ಅಥವಾ ಮನೆಯ ಜವಾಬ್ದಾರಿ ತೆಗೆದುಕೊಳ್ಳುವ ಬಗ್ಗೆ ಆಸಕ್ತಿಯಿರುವುದಿಲ್ಲ. ಮನೆಯ ಜವಾಬ್ದಾರಿ ಹೊರದೆ ಏನು ಬೇಕಾದ್ರೂ ಮಾಡ್ಕೊಳ್ಳಿ ಅನ್ನೋ ಮನಸ್ಥಿತಿ ಸಂಪೂರ್ಣವಾಗಿ ನಿರ್ಲಕ್ಷ್ಯವನ್ನು ತೋರಿಸುತ್ತದೆ. ನಿಮ್ಮ ಜವಾಬ್ದಾರಿಯನ್ನು, ಇಷ್ಟ-ಕಷ್ಟಗಳನ್ನು ಪೂರೈಸಲು ಅವರು ಸಿದ್ಧರಿಲ್ಲ. ಅವರು ಅದರಲ್ಲಿ ಆಸಕ್ತಿ ಹೊಂದಿಲ್ಲ ಎಂಬುದನ್ನು ತಿಳಿದುಕೊಳ್ಳಬಹುದು.

Love Break Up ಆಯಿತಾ? ಏನೂ ಆಗದಂತೆ ಇರಲು ಇಲ್ಲಿವೆ ಟಿಪ್ಸ್

ಮಾತನ್ನು ನಿರ್ಲಕ್ಷಿಸುವುದು: ಪ್ರೀತಿಯಿದ್ದಾಗ ಮಾತನಾಡಲು ಸಾಕಷ್ಟು ವಿಷಯವಿರುತ್ತದೆ. ಅದೇ ಪ್ರೀತಿಯಿಲ್ಲದಿದ್ದಾಗ ಅವರ ಮಾತನ್ನು ಕೇಳಲು ಆಸಕ್ತಿಯಿರುವುದಿಲ್ಲ. ನಿಮ್ಮ ಸಂಗಾತಿಯೂ ಹೀಗೆ ಮಾಡುತ್ತಿದ್ದರೆ, ಅವರಿಗೆ ನಿಮ್ಮ ಮೇಲೆ ಆಸಕ್ತಿ ಕಡಿಮೆಯಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.

ಸುಳ್ಳು ಹೇಳುವ ಅಭ್ಯಾಸ: ಪ್ರತಿಯೊಂದು ಸಂಬಂಧದ ಮುಖ್ಯ ಅಡಿಪಾಯ ನಂಬಿಕೆ. ಆ ನಂಬಿಕೆಗೆ ಒಮ್ಮೆ ಪೆಟ್ಟು ಬಿದ್ದರೂ ಚೇತರಿಸಿಕೊಳ್ಳುವುದು ಅಸಾಧ್ಯ. ಇಂತಹ ಶಂಕೆ ಇಬ್ಬರಲ್ಲಿ ಒಬ್ಬರಿಗೂ ಮೂಡಿದರೂ ಅದು ಕಷ್ಟವಾಗುತ್ತದೆ. ಸಂಗಾತಿಯಲ್ಲಿ ಯಾರೊಬ್ಬರಾದರೂ ಕ್ಷುಲ್ಲಕ ಕಾರಣಕ್ಕೆ ಆಗಿಂದಾಗೆ ಸುಳ್ಳು ಹೇಳುವ ಅಭ್ಯಾಸ ರೂಢಿಸಿಕೊಂಡರೆ ಅವರು ಈ ಸಂಬಂಧವನ್ನು ಮುಂದುವರಿಸುವ ಮನಸ್ಥಿತಿ ಹೊಂದಿಲ್ಲವೆಂದೇ ಅರ್ಥ. ಹೀಗಾಗಿಯೇ ಅವರು ಸುಳ್ಳು ಹೇಳಲು ಹಿಂಜರಿಯುವುದಿಲ್ಲ.

ಎಲ್ಲವನ್ನೂ ಗುಟ್ಟಾಗಿಡುವುದು: ಸಂಗಾತಿಗಳ ನಡುವೆ ಮುಚ್ಚು ಮರೆಯಂಬುದು ಇರಬಾರದು. ಇಬ್ಬರ ನಡುವೆ ಯಾವುದೇ ವಿಷಯಗಳಾಗಲಿ ಮುಕ್ತವಾಗಿ ಹಂಚಿಕೊಳ್ಳಬೇಕು ಎಂದು ಹೇಳುತ್ತಾರೆ. ನಿಮ್ಮ ಸಂಗಾತಿ ಆತ, ಕುಟುಂಬ, ಸ್ನೇಹಿತರ ಬಗ್ಗೆ ಏನು ಹೇಳದೇ ಇದ್ದರೆ, ನಿಮ್ಮಿಂದ ಅಂತರ ಕಾಯ್ದುಕೊಂಡಿದ್ದರೆ ಅವರಿಗೆ ಈ ಸಂಬಂಧವನ್ನು ಮುಂದುವರಿಸಲು ಇಷ್ಟವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.

ಸಂಗಾತಿ ಹೀಗೆಲ್ಲಾ ವರ್ತಿಸಿದಾಗ ಈ ಸಂಬಂಧ ಇನ್ಮುಂದೆ ಮುಂದುವರಿಯವುದು ಕಷ್ಟ. ಸಂಗಾತಿಗೆ ನಿಮ್ಮ ಮೇಲೆ ಯಾವುದೆ ರೀತಿಯ ಅಸಕ್ತಿ ಉಳಿದಿಲ್ಲ. ನೀವು ಆ ಬಂಧನದಿಂದ ಹೊರ ನಡೆಯಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.

click me!