ಅಮೇರಿಕಾದಲ್ಲಿರುವ ಗಂಡ, ಇಂಡಿಯಾದಲ್ಲಿರುವ ಹೆಂಡತಿಗೆ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಭೌತಿಕ ಹಾಜರಿಗೆ ಪ್ರಯಾಣದ ವೆಚ್ಚ ಕೇಳಿದ್ದ ಪತಿಗೆ ಹೈಕೋರ್ಟ್ ಬುದ್ಧಿ ಕಲಿಸಿದೆ.
ಬೆಂಗಳೂರು (ಜೂ.20): ಬೆಂಗಳೂರಿನಲ್ಲಿರುವ ಪತ್ನಿಗೆ ಅಮೇರಿಕಾದಲ್ಲಿರುವ ಪತಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿ ವಿಚಾರಣೆ ವೇಳೆ ಪತಿ ಭೌತಿಕ ಹಾಜರಿಗಾಗಿ ಪತ್ನಿ ಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ, ಪ್ರಯಾಣ ವೆಚ್ಚವನ್ನು ನೀವೇ ಭರಿಸಬೇಕು ಎಂದು ಆದೇಶಿಸಿದ್ದ ಬೆಂಗಳೂರು ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್, ಪತಿಯೇ ವೆಚ್ಚ ಭರಿಸಿಕೊಂಡು ಬರುವಂತೆ ಆದೇಶ ಹೊರಡಿಸಿದೆ. ಈ ಮೂಲಕ ಪತ್ನಿಗೆ ರಿಲೀಫ್ ನೀಡಲಾಗಿದೆ.
ಮದುವೆಯಾದ ನಂತರ ಜೀವನ ಶೈಲಿ ಹಾಗೂ ದುಡಿಮೆಗಾಗಿ ಕೆಲವರು ದೂರ ದೂರ ಇರುವುದು ಸಹಜ. ಕೆಲವು ಬಾರಿ ಅನಿವಾರ್ಯವೂ ಆಗಿರುತ್ತದೆ. ಆದರೆ, ದೂರವಿದ್ದವರು ಹಲವು ವರ್ಷಗಳವರೆಗೆ ಪರಿಸ್ಪರ ಭೇಟಿಯೇ ಇಲ್ಲವೆಂದಾಗ ವಿವಾಹ ವಿಚ್ಛೇದನ ಮಾಡಿಕೊಳ್ಳುವ ಪ್ರಕರಣಗಳು ಕೂಡ ಹೆಚ್ಚಾಗಿವೆ. ಇನ್ನು ಬೆಂಗಳೂರಿನಲ್ಲಿ ಮದುವೆಯಾಗಿದ್ದ ವ್ಯಕ್ತಿ ತನ್ನ ಪತ್ನಿಯನ್ನು ಬೆಂಗಳೂರಿನಲ್ಲಿಯೇ ಬಿಟ್ಟು ಅಮೇರಿಕಾಕಕ್ಕೆ ತೆರಳಿದ್ದರು. ಆದರೆ, ಹಲವು ವರ್ಷಗಳಾಗಿದ್ದರಿಂದ ಅಲ್ಲಿಂದಲೇ ತನ್ನ ಪತ್ನಿಗೆ ವಿವಾಹ ವಿಚ್ಛೇದನ ನೀಡುವುದಕ್ಕೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು.
ಮದುವೆಯಾದ್ಮೇಲೆ ಸೆಕ್ಸ್ ನಿರಾಕರಿಸೋದು ಕ್ರೌರ್ಯ: ಕರ್ನಾಟಕ ಹೈ ಕೋರ್ಟ್
ವಿಚಾರಣೆಗೆ ಪತಿ ಹಾಜರಿ ಕೇಳಿದ ಪತ್ನಿಗೆ ಶಾಕ್: ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ಮಾಡಿದಾಗ ಬೆಂಗಳೂರಿನಲ್ಲಿರುವ ಪತ್ನಿ, ಅಮೇರಿಕಾದಲ್ಲಿರುವ ತನ್ನ ಪತಿ ಪಾಟೀಸವಾಲಿಗೆ ನೇರವಾಗಿ (ಭೌತಿಕ) ಹಾಜರಿ ಆಗಬೇಕು ಎಂದು ಕೋರ್ಟ್ ಮುಂದೆ ಮನವಿ ಸಲ್ಲಿಕೆ ಮಾಡಿದ್ದಾರೆ. ಆದರೆ, ನ್ಯಾಯಾಲಯವು ನಿಮ್ಮ ಪತಿ ಅಮೇರಿಕಾದಿಂದ ಇಲ್ಲಿಗೆ ಬಂದು ಹೋಗಲು ಆಗುವ 1.65 ಲಕ್ಷ ರೂ. ಪ್ರಯಾಣ ವೆಚ್ಚವನ್ನು ಭರಿಸುವಂತೆ ಪತ್ನಿಗೆ ನಿರ್ದೇಶನ ನೀಡಿತ್ತು. ಇಷ್ಟೊಂದು ದುಬಾರಿ ವೆಚ್ಚವನ್ನು ಪಾವತಿಸಲಾಗದೇ ಪತ್ನಿ ಕಂಗಾಲಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್‌ನಲ್ಲಿ ಪತ್ನಿಗೆ ರಿಲೀಫ್: ಇನ್ನು ಹೈಕೋರ್ಟ್‌ನಲ್ಲಿ ವಿವಾಹ ವಿಚ್ಛೇದನದ ಅರ್ಜಿ ವಿಚಾರಣೆ ಮಾಡಿದಾಗ ಪತ್ನಿಯ ಮನವಿಯನ್ನು ಪುರಸ್ಕಾರ ಮಾಡಲಾಗಿದೆ. ವಿವಾಹ ವಿಚ್ಛೇದನಕ್ಕೆ ಅಮೇರಿಕಾದಿಂದಲೇ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇನ್ನು ಪತ್ನಿಯು ಪತಿಯ ಭೌತಿಕ ಹಾಜರಿ ಕೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಅಮೇರಿಕಾದಲ್ಲಿರುವ ಪತಿ ಬಡವನೇನೂ ಅಲ್ಲದ್ದರಿಂದ, ಪತ್ನಿಯೇ ಪ್ರಯಾಣ ವೆಚ್ಚವನ್ನು ಭರಿಸಬೇಕೆಂಬ ಬೆಂಗಳೂರು ಕೌಟುಂಬಿಕ ನ್ಯಾಯಾಲಯ ಆದೇಶವನ್ನು ರದ್ದುಗೊಳಿಸಿದೆ. ಇದರಿಂದ ಪತ್ನಿಯ ಮನವಿಗೆ ಪುರಸ್ಕಾರ ಸಿಕ್ಕಿ, ದೊಡ್ಡ ಮೊತ್ತದ ಹಣ ನಷ್ಟವಾಗುವುದು ತಪ್ಪಿದಂತಾಗಿದೆ.
ಮದುವೆಯಾದ್ಮೇಲೆ ಸೆಕ್ಸ್ ನಿರಾಕರಿಸೋದು ಕ್ರೌರ್ಯ:
ಬೆಂಗಳೂರು (ಜೂ.20): ದಾಂಪತ್ಯದಲ್ಲಿ ಪತಿ ಅಥವಾ ಪತ್ನಿ ಪರಸ್ಪರರಿಗೆ ಲೈಂಗಿಕ/ದೈಹಿಕ ಸಂಬಂಧಕ್ಕೆ ನಿರಾಕರಿಸಿದರೆ ಅದು ಹಿಂದೂ ವಿವಾಹ ಕಾಯ್ದೆ 1995ರ ಪ್ರಕಾರ ಕ್ರೌರ್ಯತೆ ಆಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಆದರೆ ಭಾರತೀಯ ದಂಡ ಸಂಹಿತೆ ಅಡಿ ಇದು ಅಪರಾಧ ಅಲ್ಲ, ಆದರೆ ಹಿಂದೂ ವಿವಾಹ ಕಾಯ್ದೆಯಡಿ ಇದು ಕ್ರೌರ್ಯ ಎಂದು ಪರಿಗಣಿಸಲ್ಪಡುತ್ತದೆ ಎಂದು ಹೈಕೋರ್ಟ್ ಹೇಳುವ ಮೂಲಕ ಪತ್ನಿ, ಪತಿ ಹಾಗೂ ಆತನ ಪೋಷಕರ ವಿರುದ್ಧ ದಾಖಲಿಸಿದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿದೆ.
PSI Scam ಆರೋಪಿಗಳನ್ನು ಬಿಟ್ಟು ನೇಮಕಾತಿ ಮುಂದುವರೆಸಲು ಸಾಧ್ಯವೇ? ಹೈಕೋರ್ಟ್ ಪ್ರಶ್ನೆ
ಮದುವೆ ಆತ್ಮಗಳ ಸಮ್ಮಿಲನ ಎಂದಿದ್ದ ಪತಿರಾಯ: ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 ಎ ಹಾಗೂ 1961ರ ವರದಕ್ಷಿಣೆ ವಿರೋಧಿ ಕಾಯ್ದೆಯ ಸೆಕ್ಷನ್ 4ರ ಅಡಿ ತನ್ನ ಪೋಷಕರು ಹಾಗೂ ತನ್ನ ವಿರುದ್ಧ ಪತ್ನಿ ದಾಖಲಿಸಿದ್ದ ಆರೋಪಪಟ್ಟಿ ವಿರುದ್ಧ ಪತಿ ಹೈಕೋರ್ಟ್‌ನಲ್ಲಿ (High court) ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿದಾರರ ವಿರುದ್ಧ ಇರುವ ಒಂದೇ ಒಂದು ಆರೋಪವೆಂದರೆ, ಆತ ಓರ್ವ ಧಾರ್ಮಿಕ ಗುರುವಿನ ಅನುಯಾಯಿಯಾಗಿದ್ದು, ಆತ ಹೇಳಿದಂತೆ ಪ್ರೀತಿ ಎಂದರೆ ದೈಹಿಕ ಸಂಬಂಧವಲ್ಲ, ಅದು ಆತ್ಮಗಳ ಸಮ್ಮಿಲನ ಎಂದು ಹೇಳಿ ಪತ್ನಿಯ ಜೊತೆ ದೈಹಿಕ ಸಂಬಂಧ ನಡೆಸಲು ಆತ ನಿರಾಕರಿಸಿದ್ದನು. ಈತನ ಅರ್ಜಿಯ ವಿಚಾರಣೆ ನಡೆಸುವ ವೇಳೆ ಈ ವಿಚಾರವನ್ನು ಗಮನಿಸಿದ ನ್ಯಾಯಾಧೀಶರಾದ ನಾಗರತ್ನ (nagaratna) ಅವರು, ಆತ ಪತ್ನಿ ಜೊತೆ ದೈಹಿಕ ಸಂಬಂಧವನ್ನು (Physical Relationship) ಹೊಂದುವ ಬಗ್ಗೆ ಎಂದು ಯೋಚಿಸಿಯೇ ಇಲ್ಲ ಎಂಬುದನ್ನು ಗಮನಿಸಿದರು. ಇದು ನಿಶಂಸಯಾಸ್ಪದವಾಗಿ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 12(1)(ಎ) ಅಡಿ ಪರಸ್ಪರರ ಆಸೆಗಳನ್ನು ಪೂರೈಸದ ಕಾರಣ ಕ್ರೌರ್ಯವಾಗುತ್ತದೆ.