ಸಿಕ್ಕಿರುವ ಮಾಹಿತಿಗಳ ಪ್ರಕಾರ, ಪತಿ ಸನೋಜ್ ಕುಮಾರ್ ಸಿಂಗ್, ತನ್ನ ಪತ್ನಿ ಪ್ರಿಯಾಂಕಾಳನ್ನು ಆಕೆಯ ಪ್ರೇಮಿಯಾಗಿರುವ ಜೀತೇಂದ್ರ ವಿಶ್ವಕರ್ಮಗೆ ಮದುವೆ ಮಾಡಿಸಿದ್ದಾರೆ. ಜಾರ್ಖಂಡ್‌ನ ಪಾಲಾಮು ಜಿಲ್ಲೆಯ ಮನಾಟು ಪೊಲೀಸ್ ಠಾಣೆ ವ್ಯಾಪ್ತಿಯ ಕಿಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ರಾಂಚಿ (ಜೂ.1): ಕೇವಲ 20 ದಿನಗಳ ಹಿಂದೆ ಇಡೀ ಗ್ರಾಮದಲ್ಲಿ ಸಂಭ್ರಮವೋ ಸಂಭ್ರಮ. ಊರಿನ ಹುಡುಗ ಅದ್ದೂರಿಯಾಗಿ ಮದುವೆಯಾಗಿ ವಧುವನ್ನು ತನ್ನ ಗ್ರಾಮಕ್ಕೆ ಕರೆತಂದಿದ್ದ. ಇಡೀ ಗ್ರಾಮ, ಹುಡುಗನ ಕುಟುಂಬ ಎಲ್ಲರೂ ಖುಷಿಯಾಗಿದ್ದರು. ಆದರೆ ವಧುವಿನ ಮುಖದಲ್ಲಿ ಮಾತ್ರ ಖುಷಿ ನಾಪತ್ತೆಯಾಗಿತ್ತು. ಮದುವೆಯ ನಿಮಿತ್ತ ನಡೆದ ಅದೆಷ್ಟೋ ಕಾರ್ಯಕ್ರಮಗಳಲ್ಲಿ ಆಕೆಮೌನವಾಗಿಯೇ ಇದ್ದಳು. ಯಾರಲ್ಲೂ ಮಾತಿಲ್ಲ, ಕಥೆಯಿಲ್ಲ. ಇದರ ನಡುವೆ ಆಕೆ ಮಾಡುತ್ತಿದ್ದ ಏಕೈಕ ಕೆಲಸ ಏನೆಂದರೆ, ಮೊಬೈಲ್‌ನಲ್ಲಿ ನಿತ್ಯ ಯಾರೋ ಬಳಿ ಮಾತನಾಡುವುದು. ದಿನಕಳೆದಂತೆ ಪತಿಗೂ ಕೂಡ ಇದರ ಬಗ್ಗೆ ಅರಿವಾಯಿತು. ಆಕೆ ಮೊಬೈಲ್‌ನಲ್ಲಿ ಮಾತನಾಡುತ್ತಿರುವುದು ಅವರ ಮನೆಯವರ ಜತೆಯಲ್ಲ, ಆಕೆಯಲ್ಲಿ ಮನಸ್ಸಿನಲ್ಲಿರುವವನ ಜೊತೆ ಅನ್ನೋದು ಅರ್ಥವಾಯಿತು. ಆಕೆಗೆ ಮದುವೆ ಇಷ್ಟವಿರಲಿಲ್ಲ. ತನ್ನ ಬದುಕು ಏನಿದ್ದರೂ ತಾನು ಪ್ರೀತಿ ಮಾಡುವ ಹುಡುಗನ ಜೊತೆ ಮಾತ್ರ ಎಂದು ಆಕೆ ತೀರ್ಮಾನ ಮಾಡಿಬಿಟ್ಟಿದ್ದಳು. ಒಂದು ದಿನ ಗಂಡನ ಮನೆಯಿಂದ ಓಡಿಹೋಗುವ ಪ್ರಯತ್ನವನ್ನೂ ಮಾಡಿದ್ದಳು. ಆದರೆ, ದುರಾದೃಷ್ಟವಶಾತ್ ಸಿಕ್ಕಿಹಾಕಿಕೊಂಡಿದ್ದಳು. ಇದು ಊರಿನಲ್ಲಿ ದೊಡ್ಡ ವಿವಾದವಾಗಿ ಊರಿನವರ ಬಾಯಿಗೆ ಆಹಾರವಾಗುವ ಮುನ್ನವೇ, ಪತಿ ಆಕೆಯನ್ನು ಆಕೆಯ ಪ್ರಿಯಕರನಿಗೆ ಒಪ್ಪಿಸಿ ಮದುವೆ ಮಾಡಿಸಿದ್ದಾನೆ. ಮದುವೆಯಾಗುವ ವೇಳೆ, 'ನೀನು ಖುಷಿಯಾಗಿದ್ದರೆ, ನಾನು ಖುಷಿ' ಎನ್ನುವ ತ್ಯಾಗರಾಜನ ಡೈಲಾಗ್ ಹೊಡೆದು ಬಂದಿದ್ದಾನೆ.
ಈ ಘಟನೆ ನಡೆದಿರುವುದು ಜಾರ್ಖಂಡ್‌ನ ಪಲಾಮು ಜಿಲ್ಲೆಯ ಮನಾಟು ಪೊಲೀಸ್ ಠಾಣೆ ವ್ಯಾಪ್ತಿಯ ಕಿಲಾ ಗ್ರಾಮದಲ್ಲಿ. ಲಭ್ಯವಿರುವ ಮಾಹಿತಿಗಳ ಪ್ರಕಾರ, ಸನೋಜ್ ಕುಮಾರ್ ಮೇ 10 ರಂದು ಪ್ರಿಯಾಂಕಾ ಕುಮಾರಿ ಎನ್ನುವ ಹುಡುಗಿಯ ಮದುವೆಯಾಗಿದ್ದ. ಆದರೆ, ಆಕೆ ಇನ್ನೊಬ್ಬಳ್ಳನ್ನು ಪ್ರೀತಿಸುತ್ತಿದ್ದಾಳೆ ಎಂದು ಗೊತ್ತಾಗಿದ್ದೆ ಆಕೆಯನ್ನು ಪ್ರಯಕರ ಜೀತೇಂದ್ರ ವಿಶ್ವಕರ್ಮಗೆ ಮದುವೆ ಮಾಡಿಸಿಕೊಟ್ಟಿದ್ದಾನೆ. ಪ್ರಿಯಾಂಕಾ ಕುಮಾರಿ ಲೆಸ್ಲಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ತುರ್ಕದಿಯಾ ಗ್ರಾಮದ ನಿವಾಸಿ.
ಈ ಬಗ್ಗೆ ಮಾಹಿತಿ ನೀಡಿರುವ ಮನಾಟು ಪೊಲೀಸ್ ಠಾಣೆಯ ಸ್ಟೇಷನ್ ಇನ್ ಚಾರ್ಜ್ ಕಮಲೇಶ್ ಕುಮಾರ್, ಮೇ 10 ರಂದು ಸನೋಜ್ ಕುಮಾರ್, ಪ್ರಿಯಾಂಕಾ ಕುಮಾರಿಯ ವಿವಾಹ ಅದ್ದೂರಿಯಾಗಿ ನಡೆದಿತ್ತು. ಆದರೆ, ಮದುವೆಯಾದ ಕೆಲ ದಿನಗಳಲ್ಲಿಯೇ ಪತ್ನಿ ಪ್ರಿಯಾಂಕಾ, ಜೀತೇಂದ್ರ ಎನ್ನುವ ಹುಡುಗನನ್ನು ಪ್ರೀತಿ ಮಾಡುತ್ತಿದ್ದಾಳೆ ಎನ್ನುವುದು ಗೊತ್ತಾಗಿತ್ತು. ಇಬ್ಬರೂ ಕೂಡ ಒಂದೇ ಗ್ರಾಮದವರಾಗಿದ್ದಲ್ಲದೆ, ಕಳೆದ 10 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಆದರೆ, ಜಾತಿ ಬೇರೆ ಬೇರೆ ಆಗಿದ್ದ ಕಾರಣಕ್ಕಾಗಿ ಇಬ್ಬರ ವಿವಾಹ ನಡೆದಿರಲಿಲ್ಲ. ಇದು ಗೊತ್ತಾದ ಬಳಿಕ ಸನೋಜ್ ಈ ನಿರ್ಧಾರ ಮಾಡಿದ್ದಾರೆ' ಎಂದು ತಿಳಿಸಿದ್ದಾರೆ.
'ಸೆಕ್ಸ್' ಅನ್ನು ಕ್ರೀಡೆಯಾಗಿ ಪರಿಗಣಿಸಿದ ಸ್ವೀಡನ್, ಜೂ.8ಕ್ಕೆ ಮೊದಲ ಯುರೋಪಿಯನ್ ಸೆಕ್ಸ್ ಚಾಂಪಿಯನ್‌ಷಿಪ್!
ಕುಟುಂಬದ ಸದಸ್ಯರು ನೀಡಿರುವ ಮಾಹಿತಿಯ ಪ್ರಕಾರ, ಮದುವೆಯ ಬಳಿಕವೂ ಪ್ರಿಯಾಂಕಾ ಮೊಬೈಲ್‌ನಲ್ಲಿ ಜೀತೇಂದ್ರನ ಜೊತೆ ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಸೋಮವಾರ ಮಧ್ಯಾಹ್ನ ಮನಾಟುವಿಗೆ ಜೀತೇಂದ್ರ ಬಂದಿದ್ದಾನೆ. ಪ್ರಿಯಾಂಕಾ ಕೂಡ ಮನೆಯಿಂದ ಓಡಿ ಹೋಗುವ ತೀರ್ಮಾನ ಮಾಡಿದ್ದಳು. ಆದರೆ, ಗ್ರಾಮದವರು ಆಕೆಯನ್ನು ಹಿಡಿದು, ಕುಟುಂಬದವರಿಗೆ ಒಪ್ಪಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಗೇಮ್ ಆಡೋಕೆ ಮೊಬೈಲ್ ಕೊಡದ 12 ವರ್ಷದ ತಮ್ಮನನ್ನು ಕೊಂದ 15 ವರ್ಷದ ಅಕ್ಕ!
ಈ ಕುರಿತಾಗಿ ಸನೋಜ್ ಮನಾಟು ಪೊಲೀಸ್ ಠಾಣೆಗೂ ಮಾಹಿತಿ ನೀಡಿದ್ದ. ಈ ವೇಳೆ ಇಡೀ ಗ್ರಾಮದವರು ಈಕೆಯ ಬಗ್ಗೆ ಸನೋಜ್‌ಗೆ ತಿಳಿಸಿದ್ದಾರೆ. ಆದರೆ, ಬುಧವಾರದ ವೇಳೆಗೆ ಸನೋಜ್ ಪತ್ನಿಯನ್ನು ಜೀತೇಂದ್ರ ಕುಮಾರ್‌ಗೆ ಕೊಟ್ಟು ವಿವಾಹ ಮಾಡಿಸಿದ್ದಾರೆ. ಈ ವೇಳೆ ಪ್ರಿಯಾಂಕಾ ಕುಮಾರಿಯ ಮನೆಯವರು ಯಾರೂ ಉಪಸ್ಥಿತರಿರಲಿಲ್ಲ. ಹುಡುಗ ಹಾಗೂ ಹುಡುಗಿ ಇಬ್ಬರೂ ವಯಸ್ಕರಾಗಿದ್ದಾರೆ. ಎಲ್ಲಿ ಬೇಕಾದರೂ, ಹೇಗೆ ಬೇಕಾದರೂ ಮದುವೆಯಾಗುವ ಹಕ್ಕು ಅವರಿಗಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.