Break Up ಆದ ಕೂಡಲೇ ಮತ್ತೊಂದು ಲವ್ವಾ? ಬೇಡ, ಸ್ವಲ್ಪ ಸ್ಪೇಸ್ ಇರಲಿ!

By Suvarna News  |  First Published Jun 1, 2023, 5:02 PM IST

ಲವ್ ಬ್ರೇಕಪ್ ಆದ ತಕ್ಷಣ ಮತ್ತೊಂದು ಸಂಬಂಧಕ್ಕೆ ಅಂಟಿಕೊಳ್ಳುವುದು ಮೂರ್ಖತನ. ಬ್ರೇಕಪ್ ಆದ ಸಮಯದಲ್ಲಿ ಮನಸ್ಸಿಗೂ ಸುಧಾರಿಸಿಕೊಳ್ಳಲು ಸಮಯ ಬೇಕು. ಆಗ ಉತ್ತಮ ಸಂಗಾತಿಯನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಕೆಲ ಕಾಲ ಸಿಂಗಲ್ ಆಗಿದ್ದುಕೊಂಡು ಜೀವನವನ್ನು ಎದುರಿಸಿ. ಖಾಸಗಿ ಬೆಳವಣಿಗೆಗೆ ಆದ್ಯತೆ ನೀಡಿ. ಅದರಿಂದ ಜೀವನ ಸುಂದವರನಿಸುತ್ತದೆ. 
 


ಕೆಲವೊಮ್ಮೆ ಲವ್ ಬ್ರೇಕಪ್ ಆಗುವುದು ಸಹಜ. ಪ್ರೀತಿಪಾತ್ರರಿಂದ ದೂರವಾಗುವುದು ಸಾಕಷ್ಟು ಹಿಂಸೆ ನೀಡುವ ವಿಚಾರ. ಆ ಸಮಯದಲ್ಲಿ ಕೆಲವರು ಖಿನ್ನತೆಯನ್ನೂ ಅನುಭವಿಸುತ್ತಾರೆ. ಬಹಳಷ್ಟು ದಿನಗಳ ಕಾಲ ಅವರದ್ದೇ ಗುಂಗಿನಲ್ಲಿ ದಿನ ಕಳೆಯುತ್ತಾರೆ. ಜತೆಗೆ, ಕೋಪ, ಹತಾಶೆಗಳಂತಹ ನೆಗೆಟಿವ್ ವರ್ತನೆಗಳನ್ನು ತೋರುವುದೂ ಇದೆ. ಆದರೆ, ಕೆಲವರು ಅಂತಹ ಸಮಯದಲ್ಲೂ ಪ್ರಬುದ್ಧತೆ ತೋರುತ್ತಾರೆ. ನೋವಾದರೂ ಸುಧಾರಿಸಿಕೊಂಡು ಸಹಜ ಸ್ಥಿತಿಗೆ ಮರಳುತ್ತಾರೆ. ಆದರೆ, ಕೆಲ ಅಪ್ರಬುದ್ಧರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಒಂದು ಪ್ರೀತಿ ಕೈಬಿಡುತ್ತಿದ್ದ ಹಾಗೆ ಮತ್ತೊಬ್ಬರ ಜತೆ ಟಕ್ ಎಂದು ಪ್ರೀತಿಗೆ ಬೀಳುತ್ತಾರೆ. ಹಿಂದಿನ ಸಂಬಂಧದಿಂದ ಸರಿಯಾಗಿ ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ಸಂಬಂಧ ಏರ್ಪಡಿಸಿಕೊಳ್ಳುತ್ತಾರೆ. ಇದು ಭಾರೀ ಆತಂಕಕ್ಕೆ ಕಾರಣವಾಗುವ ಕೃತ್ಯ. ಏಕೆಂದರೆ, ಗಡಿಬಿಡಿಯಲ್ಲಿ ತೆಗೆದುಕೊಳ್ಳುವ ಯಾವುದೇ ನಿರ್ಧಾರದಿಂದ ಅಸಮಾಧಾನವಾಗುವ ಸಾಧ್ಯತೆಯೇ ಹೆಚ್ಚು. ಮುಂದೆ ಪರಿತಪಿಸುವ ಬದಲು ಲವ್ ಬ್ರೇಕಪ್ ಆದಾಗ ಸ್ವಲ್ಪ ಸಮಯ ಏಕಾಂಗಿಯಾಗಿದ್ದು ಮನಸ್ಸು ರಿಲ್ಯಾಕ್ಸ್ ಆಗುವಂತೆ ನೋಡಿಕೊಳ್ಳುವುದು ಅಗತ್ಯ. ಹೀಗಾಗಿ, ಸಿಂಗಲ್ ಆದವರು ಕೆಲ ಸಮಯ ಬ್ರೇಕ್ ತೆಗೆದುಕೊಳ್ಳಬೇಕು. ಅದರಿಂದ ಹಲವು ಲಾಭಗಳಿವೆ.

•    ಆರೋಗ್ಯಕರ ಸಂಬಂಧ (Healthy Relation) ಗುರುತಿಸಲು ಅನುಕೂಲ
ಹಿಂದಿನ ಬ್ರೇಕಪ್ (Breakup) ಆದ ಸಮಯದಲ್ಲಿ ನೆಗೆಟಿವ್ ಭಾವನೆಗಳಿಂದ (Negative Feelings) ತತ್ತರಿಸುವುದು ಸಹಜ. ನೆಗೆಟಿವ್ ಭಾವನೆಗಳಿರುವಾಗ ಉತ್ತಮ ವ್ಯಕ್ತಿಯನ್ನು (Good Person) ಗುರುತಿಸುವುದು ಕಷ್ಟವಾಗುತ್ತದೆ. ಆರೋಗ್ಯಕರ ಸಂಬಂಧ ಹೊಂದಲು ಸಾಧ್ಯವಾಗುವುದಿಲ್ಲ. ಆದರೆ, ಕೆಲ ಸಮಯ ಏಕಾಂಗಿಯಾಗಿ ಸುಮ್ಮನಿದ್ದರೆ ಉತ್ತಮ ಸಂಗಾತಿಯನ್ನು (Partner) ಗುರುತಿಸಲು ಸಾಧ್ಯ.

Tap to resize

Latest Videos

Relationship Tips: ಗಂಡ ನನ್ನನ್ನು ದ್ವೇಷಿಸ್ತಾನಾ? ಇಷ್ಟಪಡೋಲ್ವಾ? ಮಹಿಳೆಯರನ್ನ ಕಂಗಾಲು ಮಾಡೋ ಪ್ರಶ್ನೆ ಇದು

•    ಮನಸ್ಸು ರಿಲ್ಯಾಕ್ಸ್ (Relax)
ಹಿಂದಿನ ನೋವಿನಿಂದ ಚೇತರಿಸಿಕೊಳ್ಳಲು ಮನಸ್ಸಿಗೆ ಸಮಯ ಅಗತ್ಯ. ಅದನ್ನು ನೀಡದೆ ಹಿಂದಿನ ಲವರ್ (Lover) ಮೇಲಿನ ಕೋಪಕ್ಕೋ (Angry) ಅಥವಾ ಗಡಿಬಿಡಿಯಲ್ಲೋ ಮತ್ತೊಂದು ಸಂಬಂಧ (Relation) ಹೊಂದುವುದು ಮನಸ್ಸಿಗೆ ಸುಧಾರಿಸಿಕೊಳ್ಳಲು ಅವಕಾಶವೇ ಇಲ್ಲದಂತಾಗುತ್ತದೆ. ಭಾವನಾತ್ಮಕ (Emotion) ಮತ್ತು ಮಾನಸಿಕವಾಗಿ (Mental) ತೃಪ್ತಿ ಹೊಂದಲು ನಿಮ್ಮಲ್ಲಿ ಚೈತನ್ಯ ಇರುವುದು ಅಗತ್ಯ. 

•    ನಿಮಗೇನು ಬೇಕು?
ಒಂದು ಸಂಬಂಧಕ್ಕೆ ಬೈ ಹೇಳಿರುವ ಸಮಯದಲ್ಲಿ ನಿಮಗೆ ನಿಜವಾಗಿ ಬೇಕಾದುದೇನು (What you Want) ಎನ್ನುವುದನ್ನು ಗುರುತಿಸಲು ಅನುಕೂಲವಾಗುತ್ತದೆ. ನಿಮಗೇನು ಬೇಕೋ ಅದನ್ನು ಹೊಂದಲು ಈ ಸಮಯವನ್ನು ಬಳಕೆ ಮಾಡಿಕೊಳ್ಳಿ. ನಿಮ್ಮತನವನ್ನು ಅರಸಿಕೊಳ್ಳಲು ಇದು ಸೂಕ್ತ ಸಮಯ. ನಿಮ್ಮ ವೃತ್ತಿ (Profession), ಕುಟುಂಬ (Family), ಸ್ನೇಹಿತರ (Friends) ಕಡೆಗೆ ಗಮನ ನೀಡಲು ಈ ಸಮಯ ಅನುಕೂಲ ಮಾಡಿಕೊಡುತ್ತದೆ. ಬೇರೆ ಸಂಗತಿಗಳ ಕಡೆಗೂ ಗಮನ ಹರಿಸಿದಾಗ ಬದುಕು (Life) ಸುಂದರವೆನಿಸುತ್ತದೆ. ಖಾಸಗಿ ಬೆಳವಣಿಗೆಯ ಕಡೆ ಆದ್ಯತೆ ನೀಡಿ. 

•    ನಿಮ್ಮೊಂದಿಗೆ ನೀವು ಕಫಂರ್ಟ್ (Comfort)
ಲವ್ ಬ್ರೇಕಪ್ ಆದಾಗ ನೀವು ಏಕಾಂಗಿ (Single) ಆಗಿರುತ್ತೀರಿ. ಆಗ ನಿಮ್ಮಷ್ಟಕ್ಕೆ ನೀವು ಕಂಫರ್ಟ್ ಆಗಿರುವುದನ್ನು ಕಲಿಯುತ್ತೀರಿ. ಯಾವುದೇ ಬಾಹ್ಯ ಪ್ರಭಾವ ಇಲ್ಲದೆ ಎಲ್ಲವನ್ನೂ ಎದುರಿಸುವ ಸಾಮರ್ಥ್ಯ ಹೊಂದುತ್ತೀರಿ. ಏಕಾಂಗಿಯಾಗಿರುವ ಸಮಯದಲ್ಲಿ ನಿಮ್ಮನ್ನು ನೀವು ಪ್ರೀತಿಸುವುದನ್ನು, ಗೌರವಿಸುವುದನ್ನು (Respect) ಕಲಿಯುತ್ತೀರಿ. 

Relationship Tips: ಸಂಗಾತಿ ಮೇಲೆ ಸಂದೇಹನಾ? ಸಂಬಂಧ ಚೆನ್ನಾಗಿರ್ಬೇಕು ಅಂದ್ರೆ ಇದನ್ನೋದಿ

•    ಸ್ವಾತಂತ್ರ್ಯ (Freedom)
ಹಿಂದೆಂದೂ ಇಲ್ಲದ ಸ್ವಾತಂತ್ರ್ಯ ಈಗ ನಿಮಗೆ ಲಭಿಸಿದೆ ಎಂದುಕೊಳ್ಳಿ. ಬ್ರೇಕಪ್ ಸಮಯದಲ್ಲಿ ಟ್ರಾವೆಲ್ (Travel) ಮಾಡಿ. ಯಾರನ್ನಾದರೂ ಭೇಟಿಯಾಗಬೇಕೆಂಬ ಹಿಂದಿನ ಆಸೆ ಪೂರೈಸಿಕೊಳ್ಳಿ. ನಿಮ್ಮಲ್ಲಿ ಸ್ಫೂರ್ತಿ (Inspiration) ತುಂಬುವ ಯಾವುದೇ ಕೆಲಸವನ್ನಾದರೂ ಮಾಡಿ. ಸಂಬಂಧದಲ್ಲಿರುವಾಗ ಕೆಲವು ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಅವುಗಳನ್ನು ಈಗ ಈಡೇರಿಸಿಕೊಳ್ಳಿ. ಮೊಬೈಲ್ ಬಳಕೆ ಹೆಚ್ಚಿಸದೇ ಏನಾದರೂ ಮಾಡಿ. ಮೊಬೈಲ್ ನಲ್ಲಿ ಸಮಯ ಕಳೆದರೆ ಖಿನ್ನರಾಗುವುದು ಗ್ಯಾರೆಂಟಿ. 
 

click me!