ಆಪ್ತರು ನೀಡುವ ಸಲಹೆಗಳೆಲ್ಲಾ ಸಂಬಂಧ ಸುಧಾರಿಸೋಲ್ಲ!

By Suvarna NewsFirst Published Aug 9, 2022, 2:52 PM IST
Highlights

ಸಂಬಂಧದಲ್ಲಿ ಪ್ರೀತಿ ಬಹಳ ಮುಖ್ಯ. ನಿಮ್ಮ ಸಂಬಂಧದ ಬಗ್ಗೆ ನಿಮ್ಮನ್ನು ಬಿಟ್ಟು ಮತ್ತ್ಯಾರು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಸಂಬಂಧದ ಬಗ್ಗೆ ಆಪ್ತರು ಸಾಕಷ್ಟು ಸಲಹೆ ನೀಡ್ತಾರೆ. ಆದ್ರೆ ಎಲ್ಲವನ್ನೂ ಕುರುಡಾಗಿ ಪಾಲನೆ ಮಾಡ್ಬಾರದು.
 

ಮನಸ್ಸಿನಲ್ಲಿರುವ ನೋವಿರಲಿ, ಸಂತೋಷವಿರಲಿ ಇಲ್ಲ ಬೇರೆ ಯಾವುದೇ ಗೊಂದಲವಿರಲಿ, ಅದನ್ನು ಹೊರ ಹಾಕಿದಾಗ ಮನಸ್ಸು ಹಗುರವಾಗುತ್ತದೆ. ನಮ್ಮ ಆಪ್ತರ ಮುಂದೆ ನೋವನ್ನು ತೋಡಿಕೊಂಡ್ರೆ ಮನಸ್ಸು ಶಾಂತವಾಗುತ್ತದೆ. ಇದೇ ಕಾರಣಕ್ಕೆ ಜನರು ತಮಗಿಷ್ಟವಾಗುವ ವ್ಯಕ್ತಿ ಮುಂದೆ ಮನಸ್ಸನ್ನು ತೆರೆದಿಡುತ್ತಾರೆ. ಇದರಲ್ಲಿ ತಪ್ಪಿಲ್ಲ. ಆದ್ರೆ ನಮ್ಮ ಭಾವನೆಯನ್ನು ನಾವು ವ್ಯಕ್ತಪಡಿಸಿದಾಗ ಆ ಕಡೆಯಿಂದ ಬೇರೆ ಬೇರೆ ಸಲಹೆಗಳು ನಿಮಗೆ ಸಿಗುತ್ತವೆ. ಅದ್ರಲ್ಲಿ ಯಾವುದನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು ಹಾಗೆ ಯಾವುದನ್ನು ನೀವು ದೂರವಿಡಬೇಕು ಎಂಬುದು ನಿಮಗೆ ತಿಳಿದಿರಬೇಕು. ಅನೇಕ ಬಾರಿ ಸ್ವಲ್ಪವೂ ಆಲೋಚನೆ ಮಾಡದೆ ಆಪ್ತರು ಹೇಳಿದಂತೆ ನಡೆದು ಬಿಟ್ಟಿರ್ತೇವೆ. ಇದ್ರಿಂದ ಮುಂದೆ ಸಮಸ್ಯೆ ಎದುರಿಸಬೇಕಾಗುತ್ತದೆ. ಸಂಬಂಧ ಹಾಳಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಮೇಲೆ ನಂಬಿಕೆ ಇಟ್ಟಿರಬೇಕು. ಸಂಬಂಧದ ವಿಷ್ಯ ಬಂದಾಗ  ಯಾರ ಸಲಹೆಯನ್ನೂ ಅನುಸರಿಸಬಾರದು. ನಿಮ್ಮ ಪರಿಸ್ಥಿತಿಯನ್ನು ಅವಲೋಕಿಸಿ ನೀವೇ ನಿರ್ಧಾರ ಕೈಗೊಳ್ಳಬೇಕು. ನಮ್ಮ ಕುಟುಂಬಸ್ಥರು, ಸ್ನೇಹಿತರು, ಆಪ್ತರು, ನೆರೆಹೊರೆಯವರು ಸಂಬಂಧದಲ್ಲಿದ್ದೇವೆ ಎಂದಾಗ ಕೆಲವೊಂದು ಸಲಹೆ ನೀಡ್ತಾರೆ. ಅದು ಯಾವುದು ಎಂಬುದನ್ನು ನಾವಿಂದು ಹೇಳ್ತೇವೆ.

ರಿಲೇಷನ್ಶಿಪ್ (Relationship) ನಲ್ಲಿದ್ದಾಗ ಆಪ್ತರು ನೀಡ್ತಾರೆ ಈ ಎಲ್ಲ ಸಲಹೆ (Advice) : 

ನಿರೀಕ್ಷೆ (Expectation) ಬೇಡ : ನೀವು ಸಂಗಾತಿ ಹುಡುಕಾಟದಲ್ಲಿದ್ದೀರಿ ಎಂದಿಟ್ಟುಕೊಳ್ಳಿ. ಆಗ ಬಹುತೇಕ ಎಲ್ಲರೂ, ಯಾರೂ ಪರಿಪೂರ್ಣ ಸಂಗಾತಿಯನ್ನು ಪಡೆಯುವುದಿಲ್ಲ. ಸಂಗಾತಿಯನ್ನು ಆಯ್ಕೆಮಾಡುವಾಗ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳಬೇಡಿ ಎಂದು ಸಲಹೆ ನೀಡ್ತಾರೆ.

ಹುಡುಗನ ವಯಸ್ಸು : ಡೇಟಿಂಗ್ (Dating) ಅಥವಾ ಮದುವೆ ವಿಷ್ಯ ಬಂದಾಗ ಹುಡುಗ ಹಾಗೂ ಹುಡುಗಿ ವಯಸ್ಸನ್ನೂ ಜನರು ಗಮನಿಸ್ತಾರೆ. ಹುಡುಗರು ತಮ್ಮ ವಯಸ್ಸಿಗಿಂತ ಕಡಿಮೆ ವಯಸ್ಸಿನ ಹುಡುಗಿ ಜೊತೆ ಡೇಟ್ ಮಾಡ್ಬೇಕೆಂದು ಆಪ್ತರು ಸಲಹೆ ನೀಡ್ತಾರೆ. ಇದ್ರಿಂದ ಸಂಬಂಧವು ಉತ್ತಮವಾಗಿರುತ್ತದೆ ಮತ್ತು ದೀರ್ಘಕಾಲದವರೆಗೆ ಉಳಿಯುತ್ತದೆ ಎನ್ನುತ್ತಾರೆ.

ಪ್ರೀತಿ ಮಾಡಿದ್ಮೇಲೆ ಮದುವೆ (Wedding) ಆಗ್ಲೇಬೇಕು : ಪ್ರೀತಿಸಿದ್ಮೇಲೆ ಮುಗೀತು. ಪ್ರೀತಿಸಿದ ವ್ಯಕ್ತಿಯನ್ನೇ ಮದುವೆಯಾಗ್ಬೇಕು ಎಂದು ಬಹುತೇಕರು ಹೇಳ್ತಾರೆ. ಪ್ರೀತಿಸಿದ ನಂತ್ರ ಬೇಗ ಮದುವೆಯಾಗ್ಬೇಕು, ಬ್ರೇಕ್ ಅಪ್ ಆಗ್ಬಾರದು ಎನ್ನುತ್ತಾರೆ ಆಪ್ತರು.

ಹುಡುಗಿಯರು ಸುಮ್ನಿರಬೇಕು : ಮದುವೆಯಾಗೋದು ಮಾತ್ರ ಹುಡುಗಿಯರ ಕೆಲಸ. ಮದುವೆ ನಂತ್ರ ಮೊದಲ ಬಾರಿ ದೈಹಿಕ ಸಂಬಂಧ ಬೆಳೆಸಲು ಅಥವಾ ಸಂಗಾತಿಗೆ ಮುತ್ತಿಡಲು ಹುಡುಗಿಯರಿಗೆ ಅವಕಾಶವಿಲ್ಲ. ಈ ಪ್ರಪೋಸಲ್ ಹುಡುಗರಿಂದ ಮಾತ್ರ ಬರಬೇಕು. 

ಹುಡುಗನ ಮೇಲೆ ಅನುಮಾನ : ನಿಮ್ಮ ಸಂಗಾತಿ ಸ್ವಲ್ಪ ಪರ್ಸನಲ್ ಸ್ಪೇಸ್ ಕೇಳ್ತಿದ್ದಾನೆ ಅಂದ್ರೆ  ಅವನು ಖಂಡಿತವಾಗಿಯೂ ಇನ್ನೊಂದು ಸಂಬಂಧವನ್ನು ಹೊಂದಿರುತ್ತಾನೆ ಎಂದು ಅರ್ಥಮಾಡಿಕೊಳ್ಳಿ.

ಪ್ರೀತಿ ಮುಖ್ಯ : ಸಂಬಂಧದಲ್ಲಿ ಪ್ರೀತಿ ಅತ್ಯಂತ ಮುಖ್ಯವಾದ ವಿಷಯ. ಹಣಕ್ಕೆ ಮಹತ್ವ ನೀಡಬಾರದು. 

ಬಹುತೇಕ ಪುರುಷರು ಹೇಳೋ ಸುಳ್ಳಿದು, ನೀವೂ ಹೇಳ್ತೀರಾ?

ಸಂಬಂಧ ಉಳಿಸಲು ಹೀಗೆ ಮಾಡಿ : ಕೆಲವೊಮ್ಮೆ ಸಂಬಂಧವನ್ನು ಉಳಿಸಲು  ಅಹಂಕಾರವನ್ನು ನಿಯಂತ್ರಿಸಬೇಕೆಂದು ಆಪ್ತರು ಸಲಹೆ ನೀಡ್ತಿರುತ್ತಾರೆ.  

ಇಂಥ ಸಂಗಾತಿ ಆಯ್ಕೆ ಮಾಡಿ:  ನೀವು ಮಾಡುವ ಎಲ್ಲ ಕೆಲಸವನ್ನು ಇಷ್ಟಪಡುವ ಸಂಗಾತಿ ಆಯ್ಕೆ ಮಾಡಿ.  

ಪ್ರವಾಸಕ್ಕೆಂದು ಹೋದ ಮಹಿಳೆ ಲೈಫ್ ಗಾರ್ಡ್‌ ಜತೆ ಪ್ರೀತಿಯಲ್ಲಿ ಬಿದ್ದ ಕಥೆ

ಇವೆಲ್ಲ ಮಾಡ್ಲೇಬೇಕು : ಮದುವೆಯ ನಂತರ  ನಿಮ್ಮ ಅತ್ತೆಯ ಮನೆ ನಿಮ್ಮ ಮನೆಯಾಗಿದೆ. ನಿಮ್ಮ ಮನೆಯನ್ನು ಉಳಿಸಲು ನೀವು ಏನು ಬೇಕೋ ಅದನ್ನು ಮಾಡಲು ಸಿದ್ಧರಿರಬೇಕು ಎಂದು ಆಪ್ತರು ಸಲಹೆ ನೀಡ್ತಿರುತ್ತಾರೆ. 

ಇದಲ್ಲದೆ ಆಪ್ತರು ಇನ್ನು ಅನೇಕ ಸಲಹೆಗಳನ್ನು ನೀಡ್ತಿರುತ್ತಾರೆ. ಈ ಸಲಹೆ ತಪ್ಪೆಂದಲ್ಲ. ಆದ್ರೆ ಆ ಸಂದರ್ಭಕ್ಕೆ ಈ ಮಾತು ಹೊಂದಿಕೆಯಾಗುತ್ತಾ ಎಂಬುದನ್ನು ಗಮನಿಸಬೇಕು. ನಂತ್ರವೇ ನೀವು ನಿರ್ಧಾರ ಕೈಗೊಳ್ಳಬೇಕು. 
 

click me!