ಪ್ರೀತಿ ಇರ್ಬೇಕು, ಕಾಳಜಿ ಇರ್ಬೇಕು ನಿಜ. ಆದ್ರೆ ಅತಿಯಾದ್ರೆ ಏನ್ ಚಂದ ನೀವೇ ಹೇಳಿ?

By Suvarna NewsFirst Published Aug 8, 2022, 5:46 PM IST
Highlights

ಪ್ರೀತಿ, ಮಮತೆ ಸೇರಿದಂತೆ ಎಲ್ಲವೂ ಒಂದು ಮಿತಿಯಲ್ಲಿ ಇರಬೇಕು. ಕಾಳಜಿ ವಿಷ್ಯದಲ್ಲೂ ಇದು ನೂರಕ್ಕೆ ನೂರು ಸತ್ಯ. ಅತಿಯಾದ ಕಾಳಜಿ ಸಂಬಂಧ ಹಾಳು ಮಾಡುವ ಜೊತೆಗೆ ನಮ್ಮನ್ನು ನೋವಿಗೆ ನೂಕುತ್ತದೆ.
 

ಬೇರೆಯವರನ್ನು ಆರೈಕೆ ಮಾಡೋದು ಅಥವಾ ಬೇರೆಯವರ ಬಗ್ಗೆ ಕಾಳಜಿ ತೋರಿಸೋದು ಒಳ್ಳೆಯದೆ. ಆದರೆ ಎಲ್ಲವೂ ಮಿತಿಯಲ್ಲಿ ಇರಬೇಕು. ಕಾಳಜಿ ಕೂಡ ಮಿತಿ ಮೀರಿದ್ರೆ ಸಮಸ್ಯೆಯಾಗುತ್ತದೆ. ನೀವೂ ಕೂಡ ನಿಮ್ಮ ಆಪ್ತರ ಬಗ್ಗೆ ಹೆಚ್ಚು ಕಾಳಜಿ ವಹಿಸ್ತಿರಿ ಎಂದಾದ್ರೆ ಜಾಗರೂಕರಾಗಿರಿ. ನಾವು ನಿಮ್ಮ ಪ್ರೀತಿಪಾತ್ರರ ಬಗ್ಗೆ ಯೋಚಿಸಬೇಡಿ, ಕಾಳಜಿ ಮಾಡಬೇಡಿ ಅಂತಾ ಹೇಳ್ತಾ ಇಲ್ಲ. ಅವರ ಪ್ರತಿಯೊಂದು ಸಮಸ್ಯೆಯಲ್ಲೂ ನೀವು ಮಧ್ಯ ಪ್ರವೇಶ ಮಾಡಿದ್ರೆ, ನಿಮಗಿಂತ ಅವರಿಗೆ ಹೆಚ್ಚು ಆಧ್ಯತೆ ನೀಡಲು ಶುರು ಮಾಡಿದ್ರೆ ಸಮಸ್ಯೆಯಾಗುತ್ತದೆ. ನಿಮ್ಮ ಅವಶ್ಯಕತೆ ಇಲ್ಲ ಎನ್ನುವ ಸಂದರ್ಭದಲ್ಲೂ ನೀವು ಕಾಳಜಿ ಮಾಡಲು ಶುರು ಮಾಡಿದ್ರೆ ತೊಂದರೆ ಆಗೋದು ನಿಮಗೆ. ಮಿತಿಮೀರಿದ ಕಾಳಜಿಯಿಂದ ಏನೆಲ್ಲ ಸಮಸ್ಯೆಯಾಗುತ್ತೆ ಎಂಬುದನ್ನು ನಾವಿಂದು ಹೇಳ್ತೆವೆ.

ನಿರಾಕರಣೆಗೆ ಹಿಂಜರಿಕೆ : ನೀವು ಮಿತಿಗಿಂತ ಹೆಚ್ಚು ಕಾಳಜಿ ವಹಿಸಲು ಪ್ರಾರಂಭಿಸಿದಾಗ  ಸಂಬಂಧ ಬಲಗೊಳ್ಳುವ ಬದಲು ದುರ್ಬಲಗೊಳ್ಳುತ್ತದೆ. ಸಂಗಾತಿ ಹೇಳಿದ ಮಾತಿಗೆಲ್ಲ ಹೌದು ಎನ್ನಲು ಶುರು ಮಾಡ್ತೀರಿ. ಅವರಿಗೆ ಬೇಸರ ಮಾಡಬಾರದು ಎನ್ನುವ ಕಾರಣಕ್ಕೆ ನಿಮಗೆ ಇಷ್ಟವಿಲ್ಲವೆಂದ್ರೂ ನೀವು ಹೌದು ಎಂದು ಹೇಳಲು ಪ್ರಾರಂಭಿಸುತ್ತೀರಿ. ನಿರಾಕರಿಸಲು ಸಾಧ್ಯವಾಗದ ನಿಮ್ಮ ಅಸಮರ್ಥ ಸ್ವಭಾವ (Nature) ವು ನಿಧಾನವಾಗಿ ನಿಮ್ಮ ಸಂಬಂಧ (Relationship) ದಲ್ಲಿ ಕಹಿಯನ್ನು ತುಂಬಲು ಶುರು ಮಾಡುತ್ತದೆ.  

ಮಹಿಳೆಯರಲ್ಲಿ ಸೆಕ್ಸ್ ಡ್ರೈವ್ ಹೆಚ್ಚಿಸುವ ಆಹಾರಗಳಿವು

ಕಾಳಜಿ (Concern) ನಂತ್ರ ಅತಿಯಾಗುತ್ತೆ ನಿರೀಕ್ಷೆ (Expectation) : ನೀವು ಸಂಗಾತಿ ಬಗ್ಗೆ ಕಾಳಜಿ ವಹಿಸುವ ಸ್ವಭಾವವನ್ನು ಹೊಂದಿದ್ದಾಗ ನಿಮ್ಮ ಮೇಲೆ ಅವರ ನಿರೀಕ್ಷೆಗಳು ಹೆಚ್ಚಾಗುತ್ತವೆ. ಹಾಗೆಯೇ ಅವರ ಮೇಲೆ ನಿಮ್ಮ ನಿರೀಕ್ಷೆ ಹೆಚ್ಚಾಗುತ್ತದೆ. ಸಂಬಂಧದಲ್ಲಿ ಕಡಿಮೆ ನಿರೀಕ್ಷೆಯಿದ್ದರೆ  ಉತ್ತಮ. ಯಾವುದೇ ನಿರೀಕ್ಷೆಯಿಲ್ಲದೆ ಕೆಲಸ (work ) ಮಾಡಿದ್ರೆ ಅದು ಮತ್ತಷ್ಟು ಒಳ್ಳೆಯದು. ನಿರೀಕ್ಷೆ ನಂತರ ನಿಮಗೆ ತೊಂದರೆ ಹೊರತುಪಡಿಸಿ ಏನೂ ಸಿಗುವುದಿಲ್ಲ.  ಯಾಕೆಂದ್ರೆ ನೀವು ಸಂಗಾತಿ ಬಗ್ಗೆ ಹೆಚ್ಚು ಕಾಳಜಿ ವಹಿಸ್ತೀರಿ. ಸಂಗಾತಿ ಕೂಡ ಅದೇ ಕಾಳಜಿ ನಿಮ್ಮ ಮೇಲೆ ತೋರಿಸಬೇಕೆಂದು ಬಯಸ್ತೀರಿ. ಆದ್ರೆ ಅವರು ತೋರಿಸಿಲ್ಲವೆಂದಾಗ ನಿಮಗೆ ನಿರಾಸೆಯಾಗುತ್ತದೆ.

ಪುರುಷ ಮಹಾಶಯನಿಗೆ ತಮ್ಮ ಗರ್ಲ್ ಫ್ರೆಂಡ್ಸ್‌ನಿಂದ ಇವನ್ನು ಕೇಳೋ ಆಸೆ!

ತಪ್ಪು (Wrong) ಮಾಡದೆ ಕ್ಷಮೆ ಕೇಳುವುದು : ಸಂಗಾತಿ ಮೇಲೆ ಕಾಳಜಿ ತೋರಿಸುವುದು ಒಳ್ಳೆಯದೆ. ಆದ್ರೆ ನಿಮ್ಮ ಭಾವನೆ (Feeling) ಗೆ ತದ್ವಿರುದ್ದವಾಗಿ ನಡೆದುಕೊಳ್ಳಬೇಕೆಂದೇನಲ್ಲ. ಹಾಗೆಯೇ ಅವರ ಎಲ್ಲ ತಪ್ಪಿಗೆ ಕ್ಷಮಿಸುವುದು ಕಾಳಜಿಯಲ್ಲ. ತಪ್ಪು ಅವರು ಮಾಡಿದ್ರೂ ನೀವು ಕ್ಷಮೆ ಕೇಳುವುದು ಕೂಡ ಒಳ್ಳೆಯದಲ್ಲ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಕೆಟ್ಟದಾಗಿರುತ್ತದೆ. ತಪ್ಪಿಲ್ಲದೆ ಹೋದ್ರೂ ನೀವು ಕ್ಷಮೆ ಕೇಳಿದ್ದರೆ ಮೊದಲು ಆ ಸ್ವಭಾವ ಬದಲಿಸಿಕೊಳ್ಳಿ. ಹಾಗೆ ಸಂಗಾತಿ ತಪ್ಪು ಮಾಡಿದ್ದರೆ ಅವರೇ ಸಾರಿ ಕೇಳ್ಬೇಕು ಎಂಬುದು ನೆನಪಿರಲಿ. 

ಅತಿಯಾದ ಕಾಳಜಿ ಸ್ವಭಾವ  ಹೇಗೆ ಬದಲಾಯಿಸುವುದು ? : ನೀವು ಕೂಡ ಸಂಗಾತಿ ಮೇಲೆ ಅತಿಯಾದ ಕಾಳಜಿ ತೋರಿಸ್ತಾ ಇದ್ದು, ಅದೇ ಸಮಸ್ಯೆಯಾಗಲು ಶುರುವಾಗಿದ್ದರೆ, ಮೊದಲನೆಯದಾಗಿ ನಿಮ್ಮನ್ನು ನೀವು ಬದಲಿಸಿಕೊಳ್ಳಲು ಪ್ರಯತ್ನಿಸಿ. ನಿಮಗಾಗಿ ಸಮಯ ಮೀಸಲಿಡಿ. ಕಾಳಜಿ ಅತಿಯಾಗದಂತೆ ಎಚ್ಚರವಹಿಸಿ. ನಿಮ್ಮ ಆತ್ಮ ಗೌರವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಿ. ನಿಮ್ಮ ಬಗ್ಗೆ ಕಾಳಜಿಯನ್ನು ಪ್ರಾರಂಭಿಸಿ ಮತ್ತು ನಿಮ್ಮ ಭವಿಷ್ಯ (Future)ದ ಬಗ್ಗೆ ಯೋಜಿಸಿ. ನಿಮ್ಮ ಬಗ್ಗೆ ಯೋಚಿಸದ ಜನರ ಬಗ್ಗೆ ಗಮನ ಕೊಡುವುದನ್ನು ನಿಲ್ಲಿಸಿ. ನಕಾರಾತ್ಮಕ ಜನರಿಂದ ದೂರವಿರಲು ಪ್ರಯತ್ನಿಸಿ. ಸಕಾರಾತ್ಮಕ (Positive ) ಆಲೋಚನೆ ಮಾಡಿ. ಉತ್ತಮ ಜನರ ಜೊತೆ ಬೆರೆಯುವುದನ್ನು ಕಲಿಯಿರಿ. ಅದು ನಿಮ್ಮ ಜೀವನವನ್ನು ಬದಲಿಸುತ್ತದೆ.
 

click me!