ಅವನಿಗೆ 63, ಅವಳಿಗೆ 22. ಇಬ್ಬರದ್ದೂ ಸುಖೀ ದಾಂಪತ್ಯ, ಆದ್ರೆ ಎಲ್ರೂ ಅದೇ ಪ್ರಶ್ನೆ ಕೇಳ್ತಿದ್ದಾರಂತೆ !

By Suvarna News  |  First Published Mar 20, 2022, 3:37 PM IST

ಅವಳಿಗಿನ್ನೂ 22. ಉಲ್ಲಾಸದಿಂದ ಚಿಮ್ಮುವ ಹದಿಹರೆಯದ (Teenage) ವಯಸ್ಸು. ಆತನಿಗೆ  63. ಊರು ಹೋಗು ಅನ್ನುತ್ತೆ ಕಾಡು ಬಾ ಅನ್ನುತ್ತೆ ಅನ್ನೋ ಮುದಿ ಕಾಲ. ಇವರಿಬ್ಬರೂ ಪ್ರೀತಿಸಿ ಮದುವೆ (Marriage)ಯಾಗಿದ್ದಾರೆ. ಬೆಡ್‌ (Bed)ನಲ್ಲಿ ಎಲ್ಲವೂ ಸರಿಯಾಗಿದ್ಯಾ ಅಂತ ಟೀಕೆ ಮಾಡ್ತಿದ್ದಾರಂತೆ ಸುತ್ತಮುತ್ತಲಿರೋರು.


ಮದುವೆ (Marriage) ಎಂಬುದು ಒಂದು ಪವಿತ್ರ ಅನುಬಂಧ. ಬೇರೆ ಬೇರೆ ಸ್ಥಳದಿಂದ, ಬೇರೆ ಬೇರೆ ಮನೋಭಾವದವರು, ಬೇರೆ ಸಂಸ್ಕೃತಿ ಹೊಂದಿದವರು ಮದುವೆಯೆಂಬ ಬಂಧನದಲ್ಲಿ ಒಗ್ಗೂಡುತ್ತಾರೆ. ಕಷ್ಟ-ಸುಖವನ್ನು ಹಂಚಿ ಬಾಳುತ್ತಾರೆ. ಹಿಂದೆಲ್ಲಾ ಮದುವೆಯೆಂಬ ವಿಚಾರ ಬಂದಾಗ ಹಲವಾರು ವಿಚಾರಗಳನ್ನು ಗಮನಿಸಿಕೊಳ್ಳುತ್ತಿದ್ದರು. ಧರ್ಮ, ಜಾತಿ, ಸಂಸ್ಕೃತಿ, ಭಾಷೆ, ವಯಸ್ಸು (Age) ಎಲ್ಲವನ್ನೂ ನೋಡಿಕೊಳ್ಳುತ್ತಿದ್ದರು. ಒಂದೇ ಜಾತಿ, ಸಂಸ್ಕೃತಿ, ಸರಿಯಾದ ವಯಸ್ಸಿನ ಅಂತರವಿದ್ದರಷ್ಟೇ ಮದುವೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಮದುವೆಯ ವಿಚಾರದಲ್ಲಿ ಆಯ್ಕೆ, ಆಸಕ್ತಿಗಳು ಬದಲಾಗಿವೆ.

ಹಿಂದೆಲ್ಲಾ ಹುಡುಗ-ಹುಡುಗಿಯನ್ನು ಮದುವೆಯಾಗಬೇಕಿತ್ತು. ಆದರೆ ಈಗ ಹಾಗಿಲ್ಲ. ಹುಡುಗ-ಹುಡುಗನನ್ನೂ, ಹುಡುಗಿ-ಹುಡುಗಿಯನ್ನೂ ಬದಲಾಗಬಹುದು. ಜಾತಿ, ಧರ್ಮ, ಅಂತಸ್ತುಗಳಂತೂ ಲೆಕ್ಕಕ್ಕೇ ಬರುವುದಿಲ್ಲ. ಸಂಸ್ಕೃತಿ, ಭಾಷೆ ಬದಲಾವಣೆಯನ್ನು ಸಹ ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ವಯಸ್ಸಿನ ಅಂತರ (Age Gap)ದ ಹಂಗು ಈಗಿಲ್ಲ. 18 ವರ್ಷದವರು 30 ವರ್ಷದವರನ್ನು, 20 ವರ್ಷದವರು 40 ವರ್ಷದವರನ್ನು, 40 ವರ್ಷದವರು 60 ವರ್ಷದವರನ್ನು ಹೀಗೆ ವಯಸ್ಸಿನ ಅಂತರವಿಲ್ಲದೆ ಮದುವೆಯಾಗುತ್ತಾರೆ. ಅಷ್ಟೇ ಅಲ್ಲ ಅತಿ ಕಿರಿಯ ವಯಸ್ಸಿನವರು ಅತಿ ಹಿರಿಯ ವಯಸ್ಸಿನವರನ್ನು ಮದುವೆಯಾಗುತ್ತಾರೆ. 

Tap to resize

Latest Videos

ಪತ್ನಿ ಇನ್ನೊಬ್ಬರ ಜೊತೆ ಸಂಬಂಧ ಬೆಳೆಸಿದ್ರೆ No Problem ಅಂತಾನೆ ಈ ಪತಿ ಮಹಾಶಯ!

ಅಮೇರಿಕಾದಲ್ಲೂ ಜೋಡಿಯೊಂದು ಹೀಗೆ ವಯಸ್ಸಿನ ಅಂತರವಿಲ್ಲದೆ ಮದುವೆಯಾಗಿದ್ದಾರೆ. ಆತನ ವಯಸ್ಸು 63, ಅವಳ ವಯಸ್ಸು 22. ಜೆಫ್ರಿ ಓಬೆರ್‌ಮೆನ್ ಹಾಗೂ ಅಲೆಕ್ಸ್ ಇವರಿಬ್ಬರೂ ಈ ರೀತಿ ಪ್ರೀತಿಸಿ (Love) ಮದುವೆಯಾಗಿ ಖುಷಿಯಾಗಿ ಜೀವನ ನಡೆಸುತ್ತಿದ್ದಾರೆ.

ನಾನು ವೃತ್ತಿಯಿಂದ ನಿವೃತ್ತಿ ಪಡೆದು ಕೆನಡಾದಿಂದ ಡೊಮಿನಿಕಾಗೆ ತೆರಳಿದ್ದೆ. ಮೊದಲ ಹೆಂಡತಿಗೆ ಡೈವೋರ್ಸ್ (Divorce) ಕೊಟ್ಟು ಮೂರು ವರ್ಷಗಳಾಗಿತ್ತು. ಈ ಸಂದರ್ಭದಲ್ಲಿ ಫೇಸ್‌ಬುಕ್ (Facebook) ಪೇಜ್ ಮೂಲಕ 22 ವರ್ಷದ ಅಲೆಕ್ಸ್ ಪರಿಚಯವಾಯಿತು. ಸ್ಪಲ್ಪ ದಿವಸದ ಚಾಟ್ ಹಾಗೂ ಫೋನ್ ಸಂಭಾಷಣೆಯ ನಂತರ ಇಬ್ಬರೂ ಪ್ರೀತಿಸಿಲು ಆರಂಭಿಸಿದೆವು ಎಂದು ಜೆಫ್ರಿ ಓಬೆರ್‌ಮೆನ್ ಹೇಳುತ್ತಾರೆ. 

ಅಲೆಕ್ಸ್ ನನಗಿಂತಲೂ ಕಿರಿಯರು. ಆದರೂ ನನ್ನ ಬಗ್ಗೆ ತಿಳಿದು ನಮ್ಮಿಬ್ಬರ ಮದುವೆಗೆ ಒಪ್ಪಿಗೆ ನೀಡಿದರು. ನಾವಿಬ್ಬರೂ ಹಿರಿಯರ ಒಪ್ಪಿಗೆಯಿಂದ ಮದುವೆಯಾಗಿ ಡೊಮೆನಿಕಾದಲ್ಲಿ ಖುಷಿಯಿಂದ ಜೀವನ ನಡೆಸುತ್ತಿದ್ದೇವೆ ಎಂದು ಜೆಫ್ರಿ ಓಬೆರ್‌ಮೆನ್ ಹೇಳಿದ್ದಾರೆ. ಆದರೆ ನನ್ನ ಮಕ್ಕಳು ನನ್ನ ಮದುವೆಯ ಬಗ್ಗೆ ಆಶ್ಚರ್ಯ ಚಕಿತರಾಗಿದ್ದರು. ಅವರ ಹೊಸ ತಾಯಿ ಅವರಿಗೆ ವಯಸ್ಸಿನಲ್ಲಿ ಸಮಾನರಾಗಿದ್ದಾರೆ ಎಂದು ಸಂಕೋಚ ವ್ಯಕ್ತಪಡಿಸಿದರು. ಸ್ನೇಹಿತರು, ಬಂಧು ಬಳಗದವರು ಇನ್ನೂ ಈ ವಯಸ್ಸಿನ ಅಂತರದ ಮದುವೆಯ ಬಗ್ಗೆ ಹೀಯಾಳಿಸುತ್ತಿದ್ದಾರೆ ಎಂದು ಜೆಫ್ರಿ ಓಬೆರ್‌ಮೆನ್ ತಿಳಿಸಿದ್ದಾರೆ.

First Night ಹಾಳು ಮಾಡುತ್ತೆ ಪುರುಷರ ಈ ಸಣ್ಣ ತಪ್ಪು

ನನಗಿಂತ 40 ವರ್ಷ ಕಿರಿಯವಳನ್ನು ಮದುವೆಯಾಗಿದ್ದಕ್ಕಾಗಿ ನಾನು ಸಾಕಷ್ಟು ಟೀಕೆಗಳನ್ನು ಎದುರಿಸಿದೆ. ಎಲ್ಲರೂ ನಮ್ಮಿಬ್ಬರ ಮಧ್ಯೆ ನಡೆಯುವ ಲೈಂಗಿಕ (Sex) ಸಂಬಂಧವನ್ನು ಪ್ರಶ್ನಿಸಿದರು. ಈ ಬಗ್ಗೆ ಲೇವಡಿ ಮಾಡಿದರು. ಆದ್ರೆ ನಾವಿಬ್ಬರು ನಮ್ಮ ಪ್ರೀತಿಯಲ್ಲಿ ಖುಷಿಯಾಗಿದ್ದೇವೆ ಎಂದು ಜೆಫ್ರಿ ಓಬೆರ್‌ಮೆನ್ ಹೇಳಿದ್ದಾರೆ. ಸಂಬಂಧದಲ್ಲಿ ಸೆಕ್ಸ್ ಮಾತ್ರ ಮುಖ್ಯವಲ್ಲ. ನಂಬಿಕೆ, ವಿಶ್ವಾಸ, ಪ್ರೀತಿ, ಭರವಸೆ ಈ ವಿಚಾರಗಳೂ ಮುಖ್ಯವಾಗುತ್ತವೆ. ಇದ್ಯಾವುದೂ ಇಲ್ಲದಿದ್ದಾಗ ದಾಂಪತ್ಯ ಉಳಿಯುವುದಿಲ್ಲ ಎಂದು ದಂಪತಿ ಹೇಳುತ್ತಾರೆ. 

ನನ್ನ ಸ್ನೇಹಿತರು ಮತ್ತು ಅವಳ ಸ್ನೇಹಿತರು ಪರಸ್ಪರ ಬದ್ಧರಾಗಲು ನಮ್ಮ ಆಯ್ಕೆಯನ್ನು ಪ್ರಶ್ನಿಸಿದರು. ನನ್ನ ಮಕ್ಕಳು ವಿದ್ಯಾವಂತರು. ಆದ್ರೆ ಅವರಿಗೂ  ತಮ್ಮ ತಂದೆಯ ಹೊಸ ವಧುಗಿಂತ ಕನಿಷ್ಠ ಆರು ವರ್ಷ ಹಿರಿಯರು ಎಂಬ ಅಂಶವನ್ನು ಹೇಗೆ ಪ್ರಕ್ರಿಯೆಗೊಳಿಸಬೇಕೆಂದು ತಿಳಿದಿರಲಿಲ್ಲ. ವೃತ್ತಿ ಜೀವನದಲ್ಲಿ ನಾವಿಬ್ಬರೂ ಯಶಸ್ವಿಯಾಗಿದ್ದೇವೆ. ಚೆನ್ನಾಗಿ ಹಣ ಮಾಡಿದ್ದೇವೆ. ಆದರೆ ನನ್ನ ವಿಷಯದಲ್ಲಿ, ಅತೃಪ್ತ ದಾಂಪತ್ಯದ ವರ್ಷಗಳ ನಂತರ, ನನಗೆ ಬೇಕಾಗಿರುವುದು ಲೈಂಗಿಕತೆಯಲ್ಲ ಆದರೆ ಅನ್ಯೋನ್ಯತೆ ಮತ್ತು ಪೋಷಣೆ ಇದು ನನಗೆ ಹೊಸ ಪ್ರೀತಿಯಿಂದ ಸಿಕ್ಕಿದೆ ಎಂದು ಜೆಫ್ರಿ ಓಬೆರ್‌ಮೆನ್ ತಿಳಿಸಿದ್ದಾರೆ.

ಅದೇನೆ ಇರ್ಲಿ, 63, ಮತ್ತು 22 ವಯಸ್ಸಿನವರು ಮದುವೆಯಾಗುವ ಮೂಲಕ ಮದುವೆಗೆ ವಯಸ್ಸಿನ ಹಂಗಿಲ್ಲ ಎಂಬುದುನ್ನು ಸಾಬೀತುಪಡಿಸಿದ್ದಾರೆ. ದಾಂಪತ್ಯ ಜೀವನದಲ್ಲಿ ಸೆಕ್ಸ್ ಅಲ್ಲದೆಯೂ ಹಲವು ವಿಚಾರಗಳು ಪ್ರಮುಖವಾಗುತ್ತವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

click me!