
ಅದೊಂದು ಸರಳ ಕಾರ್ಯಕ್ರಮ, ತುಂಬಾ ಜನರೂ ಇಲ್ಲ. ನನ್ನ ಕುಟುಂಬದವರನ್ನೂ ಕರೆದಿರಲಿಲ್ಲ. ಅಸಲಿಗೆ ಅವರಿಗೆ ಅದೇನು ಕಾರ್ಯಕ್ರಮ ಅಂತಲೇ ಗೊತ್ತಿಲ್ಲ. ಸಾಂಪ್ರದಾಯಿಕ ಮನಸ್ಥಿತಿಯವರಾದ ಅವರಿಗೆ ಅದು ಗೊತ್ತಾಗೋಕೆ ಸಾಧ್ಯಾನೂ ಇರಲಿಲ್ಲ. ಅದು ಸೆಲ್ಫ್ ಮ್ಯಾರೇಜ್ (Self Marriage), ಅಥವಾ ಸ್ವ ವಿವಾಹ. ನನ್ನನ್ನೇ ನಾನು ಮದುವೆಯಾಗುವುದು. ಈ ವಿಷಯದಲ್ಲಿ ಪರಿಣತೆಯಾದ ಒಬ್ಬಾಕೆ ನನಗಾಗಿ ಕಾದಿದ್ದಳು, ನನ್ನನ್ನು ಹೂ ಹೂವಿನ ದಿರಸಿನಿಂದ ಸಿಂಗರಿಸಿದಳು. ನನಗೆ ಒಂದು ಪ್ರತಿಜ್ಞಾವಿಧಿ ಬೋಧಿಸಿದಳು. ಬೇರೆ ಎಲ್ಲಾ ಮದುವೆಗಳಲ್ಲಿ ಇರುವಂತೆಯೇ. ನಾನು ಮುಂದಿನ ಜೀವನಪೂರ್ತಿ ಎಲ್ಲ ವಿಷಯದಲ್ಲೂ ನಿನ್ನ ಜೊತೆಯಾಗಿ ನಡೆಯುತ್ತೇನೆ ಎಂಬ ಪ್ರಮಾಣ ಮಾಡಿದೆ. ನಿನ್ನ ಜೊತೆ ಎಂದರೆ ನನ್ನ ಜೊತೆಗೇ. ಅಲ್ಲಿ ವರ ಮಾತ್ರ ಮಿಸ್ಸಿಂಗು. ನಾನೇ ವಧು (Bride), ನಾನೇ ವರ (Bride groom).
ನಿಮಗೆ ಗೊತ್ತಿರಲಾರದು. ಒಬ್ಬ ಸಂಗಾತಿಯನ್ನು ಮದುವೆಯಾಗೋದು ಮೋನೋಗ್ಯಾಮಿ (Monogamy), ಬಹು ಸಂಗಾತಿಗಳನ್ನು ಮದುವೆಯಾಗೋದು ಪಾಲಿಗ್ಯಾಮಿ (Polygamy). ಹಾಗೇ ತನ್ನನ್ನೇ ತಾನು ಮದುವೆಯಾಗೋದನ್ನು ಸೋಲೋಗ್ಯಾಮಿ (Sologamy) ಅಂತಾರೆ. ಸೋಲೋ ಟ್ರಾವೆಲ್ ಇದ್ದ ಹಾಗೆ. ಇದೇನೂ ಹೊಸದಲ್ಲ. 1996ರಲ್ಲಿ ಡೆನ್ನಿಸ್ ರಾಡ್‌ಮನ್ ಎಂಬ ತಾರೆ ತನ್ನನ್ನೇ ತಾನು ಮದುವೆಯಾಗಿದ್ದ.
ಪತಿ ಇನ್ನಷ್ಟು ಹತ್ತಿರ ಬರಬೇಕೆಂದ್ರೆ ಇಲ್ಲಿದೆ ಮ್ಯಾಜಿಕ್ ಮಂತ್ರ
2003ರಲ್ಲಿ 'ಸೆಕ್ಸ್ ಆಂಡ್ ದಿ ಸಿಟಿ' ಟಿವಿ ಶೋದ ಒಂದು ಎಪಿಸೋಡ್‌ನ ಬಳಿಕ ಈ ಟ್ರೆಂಡ್ ತುಸು ಹೆಚ್ಚಾಯಿತು. ಆ ಎಪಿಸೋಡ್‌ನಲ್ಲಿ ಕ್ಯಾರೀ ಬ್ರಾಡ್‌ಶಾ ಎಂಬ ನಟಿ, ಸ್ವ ವಿವಾಹವನ್ನು ಘೋಷಿಸಿಕೊಂಡಿದ್ದಳು. ಅದೇಕೆ ಎಂದರೆ ಸಿಂಗಲ್ ಆಗಿ ಬದುಕುತ್ತಿರುವವರನ್ನು, ಮದುವೆಯಾಗುವುದಿಲ್ಲ ಎಂದು ತೀರ್ಮಾನಿಸಿದವರನ್ನು ಈ ಸಮಾಜ ಒಂದು ಬಗೆಯ ಗುಮಾನಿಯಿಂದ ನೋಡುತ್ತದೆ. ಪ್ರಶ್ನೆಗಳನ್ನು ಕೇಳಿ ಹಿಂಸಿಸುತ್ತದೆ. ಅವಮಾನ ಮಾಡುತ್ತದೆ. ಕೆಲವು ಆಚರಣೆಗಳಿಂದ ಹೊರಗೆ ಇಡುತ್ತದೆ. ಇದನ್ನು ವಿರೋಧಿಸಿ ಪಬ್ಲಿಕ್ಕಾಗಿ ಆ ಅನೌನ್ಸ್‌ಮೆಂಟ್ ಮಾಡಿದ್ದಳು.
ಅಮೆರಿಕದಲ್ಲಿ ಪ್ಯೂ ರಿಸರ್ಚ್ ಸೆಂಟರ್ ಮಾಡಿರುವ ಒಂದು ಅನಾಲಿಸಿಸ್ ಪ್ರಕಾರ, ಸಿಂಗಲ್‌ಗಳ ಸಂಖ್ಯೆ ಏರುತ್ತಿದೆ. 1990ರಲ್ಲಿ ಪ್ರಾಯಸ್ಥರಾದ ಸಿಂಗಲ್‌ಗಳ ಸಂಖ್ಯೆ 29%ದಷ್ಟಿದ್ದರೆ, ಈಗ ಅದು 38%ಕ್ಕೆ ಏರಿದೆ. ಮೆಕ್ಸಿಕೋದ ರಿವೆರಾ ಮಾಯಾ ಎಂಬಲ್ಲಿ ಇರುವ ಮಾಯಾಕೊಬಾ ಎಂಬ ರೆಸಾರ್ಟ್ ಇಂಥದೊಂದು ಸಿಂಗಲ್ ಮ್ಯಾರೇಜ್ ಕಾರ್ಯಕ್ರಮಕ್ಕೆ ಒತ್ತು ಕೊಡುತ್ತದೆ. ಅಲ್ಲಿ ಸಿಂಗಲ್ ಮ್ಯಾರೇಜ್ ಎಂಬುದು ನಾಲ್ಕು ದಿನಗಳ ಕಾರ್ಯಕ್ರಮ. ಪ್ರಿ ಹಿಸ್ಪಾನಿಕ್ ಶಮನಿಸಂ ಪಂಥದ ಹೀಲರ್‌ಗಳು ಅಲ್ಲಿ ನಿಮ್ಮನ್ನು ಸಿಂಗಲ್ ಮ್ಯಾರೀಜ್‌ಗೆ (Single Marriage) ಸಜ್ಜುಗೊಳಿಸುತ್ತಾರೆ.
ಇಂಥಾ ವಿಚಾರಗಳನ್ನು ಹೆಂಡ್ತಿ ಗಂಡನಿಂದ ಮುಚ್ಚಿಡೋದ್ರಲ್ಲಿ ತಪ್ಪೇನಿಲ್ವಂತೆ !
ತನ್ನನ್ನೇ ತಾನು ಮದುವೆಯಾದವರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ. ನಾನು ಇಲ್ಲಿ ನನ್ನನ್ನೇ ಮದುವೆಯಾದೆ. ಅದಕ್ಕೂ ಮೊದಲಿನ ವರ್ಷಗಳಲ್ಲಿ ನಾನು ಹಲವರ ಜೊತೆ ಪ್ರೀತಿಸಿದೆ, ಡೇಟಿಂಗ್ (Dating) ಮಾಡಿದೆ. ಆದರೆ ಯಾವುದೂ ಪೂರ್ತಿ ಸಂತೋಷ ಕೊಡಲಿಲ್ಲ. ಯಾಕೆಂದರೆ ನಾನು ಪೂರ್ತಿ ಸಂತೋಷವಾಗಿರಬೇಕಾದರೆ ಅದು 'ಬೆಟರ್ ಹಾಫ್'ನಿಂದ ಬರಬೇಕು ಎಂದುಕೊಂಡಿದ್ದೆ. ನನ್ನ ಕೈಗೆ ಯಾರಾದರೂ ಗಂಡು ರಿಂಗ್ 9Wedding Ring) ತೊಡಿಸದಿದ್ದರೆ ನನ್ನ ಜೀವನ ವ್ಯರ್ಥ ಎಂದುಕೊಂಡಿದ್ದೆ. ನನ್ನ ಸಂತೃಪ್ತಿಗೆ ನಾನು ಜವಾಬುದಾರಿ ತೆಗೆದುಕೊಳ್ಳದೆ, ಅದನ್ನು ಅನ್ಯರ ಮೇಲೆ ಹೊರಿಸಿದ್ದೆ. ಸಂಬಂಧಗಳಿಂದ ಸಂಬಂಧಗಳತ್ತ ಜಿಗಿದು ಅಲ್ಲಿ ಖುಷಿಯನ್ನು ಹುಡುಕುತ್ತಿದ್ದೆ ಎನ್ನುತ್ತಾರೆ.
ಸಂಬಂಧಗಳು ಬರಬಹುದು ಮತ್ತು ಹೋಗಬಹುದು. ಸಂಗಾತಿಗಳು ಬರಬಹುದು ಮತ್ತು ಹೋಗಬಹುದು. ಆದರೆ ನನ್ನ ಜೊತೆ ನಾನು ಯಾವತ್ತೂ ಇದ್ದೇ ಇರುತ್ತೇನಲ್ಲ! ಆದ್ದರಿಂದ ನನ್ನ ಸಂತೋಷವನ್ನು ನನ್ನೊಳಗೇ ಹುಡುಕಬೇಕು ಎಂಬುದು ಸ್ವ ವಿವಾಹದ ತಿರುಳು. ಇದನ್ನು ಅರಿತ ಕ್ಷಣದಿಂದ ನನ್ನ ಬದುಕೇ ಬದಲಾಯಿತು ಎಂದು ಈ ರೀತಿ ಮದುವೆಯಾದವರು ಹೇಳುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.