ಸಮಯ ಸಿಗೋದಿಲ್ಲ, ಅದನ್ನು ನಾವು ಹೊಂದಿಸಿಕೊಳ್ಬೇಕು. ದಾಂಪತ್ಯದಲ್ಲಿ ಪರಸ್ಪರ ಸಮಯ ನೀಡೋದು ಬಹಳ ಮುಖ್ಯ. ಬೇರೆ ಬೇರೆ ಕಾರಣ ಹೇಳಿ ಪತ್ನಿಯಿಂದ ತಪ್ಪಿಸಿಕೊಳ್ಳುವ ಪತಿಯನ್ನು ದಾರಿಗೆ ತರೋದು ಸುಲಭವಲ್ಲವಾದ್ರೂ ದೊಡ್ಡ ಕಷ್ಟವೇನಲ್ಲ.
ದಾಂಪತ್ಯದಲ್ಲಿ ಪ್ರೀತಿ ಬಹಳ ಮುಖ್ಯ. ಮದುವೆಯಾದ ಮೊದಲ ವರ್ಷವಿದ್ದ ಉತ್ಸಾಹ, ಪ್ರೀತಿ ತೋರಿಸುವ ರೀತಿ ಬರ್ತಾ ಬರ್ತಾ ಬದಲಾಗುತ್ತದೆ. ವರ್ಷಗಳು ಕಳೆದಂತೆ ಸಂಗಾತಿ ಮಧ್ಯೆ ಅಂತರ ಹೆಚ್ಚಾಗುತ್ತದೆ. ಇಬ್ಬರ ಮಧ್ಯೆ ಪ್ರೀತಿ ಇಲ್ಲ ಎಂದಲ್ಲ. ಅದನ್ನು ತೋರಿಸುವ ಅಗತ್ಯವಿಲ್ಲ ಎಂಬ ಭಾವನೆಗೆ ಜನರು ಬರ್ತಾರೆ. ಆರಂಭದಲ್ಲಿ ಸಾಕಷ್ಟು ಸಮಯವನ್ನು ಒಟ್ಟಿಗೆ ಕಳೆಯುತ್ತಿದ್ದವರಿಗೆ ನಂತ್ರ ಮುಖಕ್ಕೆ ಮುಖಕೊಟ್ಟು ಮಾತನಾಡಲೂ ಸಮಯವಿರುವುದಿಲ್ಲ. ವಾರ, ತಿಂಗಳು ಕಳೆದು ವರ್ಷವಾದ್ರೂ ಇಬ್ಬರು ಔಟಿಂಗ್ ಹೋಗಿರೋದಿಲ್ಲ. ಗಂಡನಿಗೆ ಜವಾಬ್ದಾರಿ ಹೆಚ್ಚಾದಂತೆ, ಕೆಲಸದ ಹೊರೆ ಜಾಸ್ತಿಯಾದಂತೆ ಆತ ಮನೆಯ ಜವಾಬ್ದಾರಿಯನ್ನು ಸಂಪೂರ್ಣ ಬಿಟ್ಟು ಬಿಡ್ತಾನೆ. ಹೆಂಡತಿಗೆ ಸಮಯ ನೀಡುವುದು ಕಡಿಮೆಯಾಗುತ್ತದೆ.
ಪತಿ ಮೊದಲಿನಂತೆ ಇರಬೇಕು, ಇಬ್ಬರು ಹೊರಗೆ ಪ್ರವಾಸ (Trip) ಕ್ಕೆ ಹೋಗ್ಬೇಕು, ಡಿನ್ನರ್ ಗೆ ಹೋಗ್ಬೇಕು ಎಂದು ಕನಸು (Dream) ಕಾಣುವ ಪತ್ನಿ, ಪತಿಯ ವರ್ತನೆಯಿಂದ ಕೋಪಗೊಳ್ಳುವ ಸಾಧ್ಯತೆ ಹೆಚ್ಚು. ದಿನ ಕಳೆದಂತೆ ಆಕೆ ಪತಿ ಮೇಲಿನ ಆಸಕ್ತಿ ಕಳೆದುಕೊಳ್ಳಲು ಶುರು ಮಾಡ್ತಾಳೆ. ಸಂಸಾರದಲ್ಲಿ ಯಾವುದೇ ಸಮಸ್ಯೆಯಾಗಬಾರದು, ಪತಿ ನಿಮ್ಮ ಜೊತೆ ಸಮಯ ಕಳೆಯಬೇಕು ಎಂಬುದು ನಿಮ್ಮ ಆಸೆಯಾಗಿದ್ರೆ ಕೆಲ ಟಿಪ್ಸ್ ಫಾಲೋ ಮಾಡಿ. ಇಗ್ನೋರ್ (Ignore) ಮಾಡ್ತಿದ್ದ ಪತಿ ತಾನಾಗಿಯೇ ನಿಮ್ಮ ಬಳಿ ಬರ್ತಾನೆ ನೋಡಿ.
ಕೆಲ ದಿನ ಪತಿ ಸುದ್ದಿಗೆ ಹೋಗ್ಬೇಡಿ : ಪತ್ನಿಯ ಮೇಲೆ ನೀವು ತೋರಿಸುವ ಅತಿಯಾದ ಕಾಳಜಿ ಕೂಡ ಆತನನ್ನು ಈ ಸ್ಥಿತಿಗೆ ತಂದಿರಬಹುದು. ನೀವು ಪದೇ ಪದೇ ಆತನಿಗೆ ಸಂದೇಶ ಕಳುಹಿಸುತ್ತಿದ್ದರೆ, ಕರೆ (Call) ಮಾಡ್ತಿದ್ದರೆ ಆತ ನಿಮ್ಮನ್ನು ಮತ್ತಷ್ಟು ನಿರ್ಲಕ್ಷ್ಯಿಸಬಹುದು. ಹಾಗಾಗಿ ಸ್ವಲ್ಪ ದಿನ ನಿಮ್ಮ ಪಾಡಿಗೆ ನೀವಿರಿ. ಯಾವುದೇ ಕರೆ ಮಾಡಲು ಹೋಗ್ಬೇಡಿ. ನೀವು ಅವರನ್ನು ನಿರ್ಲಕ್ಷ್ಯ ಮಾಡ್ತಿದ್ದೀರಿ ಎಂಬುದು ಅವರಿಗೆ ತಿಳಿದಾಗ, ನಿಮ್ಮ ವರ್ತನೆಯಲ್ಲಿ ಬದಲಾವಣೆ ಕಾಣಿಸಿಕೊಂಡಾಗ, ದಿನಕ್ಕೆ ಮೂರ್ನಾಲ್ಕು ಬಾರಿ ಬರ್ತಿದ್ದ ಫೋನ್ (Phone) ಒಂದು ಬಾರಿಯೂ ಬಂದಿಲ್ಲವೆಂದಾಗ ಅವರೇ ನಿಮ್ಮ ಬಳಿ ಬರ್ತಾರೆ.
ಗಂಡನ ದೇಹದ ದುರ್ವಾಸನೆಯಿಂದ ಸುಸ್ತಾಗಿದ್ದಾಳೆ ಈಕೆ, ಸಾಂತ್ವಾನ ಹೇಳುವುದ್ಹೇಗೆ?
ನಿಮ್ಮ ಪ್ರಯತ್ನ ಕೂಡ ಮುಖ್ಯ : ಪತಿ ನಿಮ್ಮನ್ನು ನಿರ್ಲಕ್ಷ್ಯ ಮಾಡ್ತಿದ್ದಾರೆ, ಎಲ್ಲಿಗೂ ಕರೆದುಕೊಂಡು ಹೋಗ್ತಿಲ್ಲ ಎಂದು ದೂರುವ ಬದಲು ನೀವೇ ಟ್ರಿಪ್ ಪ್ಲಾನ್ ಮಾಡಿ. ಪತಿಗೆ ಇಷ್ಟವಾಗುವ ಜಾಗಕ್ಕೆ ನೀವಿಬ್ಬರೆ ಹೋಗಿ. ಒಂದಿಷ್ಟು ಸಮಯವನ್ನು ಏಕಾಂತದಲ್ಲಿ ಕಳೆಯಿರಿ. ಇದ್ರಿಂದ ಆತನ ಮನಸ್ಸು ಕೂಡ ಬದಲಾಗುತ್ತದೆ. ಅವರ ಮುಂದೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ. ಹಳೆ ದಿನಗಳನ್ನು ಮೆಲುಕು ಹಾಕಿ.
ಪತಿ ಸಮಸ್ಯೆ ಅರಿಯೋದು ಮುಖ್ಯ : ಅನೇಕ ಬಾರಿ ಕೆಲಸದ ಒತ್ತಡ ಅಥವಾ ಬೇರೆ ಕಾರಣದಿಂದಾಗಿ ಪತಿ ಬ್ಯುಸಿಯಾಗಿರ್ತಾರೆ. ಬಯಸಿಯೂ ನಿಮಗೆ ಸಮಯ ನೀಡಲು ಅವರಿಂದ ಆಗ್ತಿರುವುದಿಲ್ಲ. ಆ ಸಂದರ್ಭದಲ್ಲಿ ಅವರ ಸಮಸ್ಯೆ ಏನು ಎಂಬುದನ್ನು ನೀವು ಅರಿಯಬೇಕು. ಅವರ ಜೊತೆ ಕುಳಿತು ಮಾತನಾಡಬೇಕು. ಸಮಯ ನೀಡ್ತಿಲ್ಲ ಎಂಬ ಕಾರಣವನ್ನಿಟ್ಟುಕೊಂಡು ಪದೇ ಪದೇ ಜಗಳವಾಡಿ ಅವರಿಗೆ ಮತ್ತಷ್ಟು ಕಿರಿಕಿರಿ ಮಾಡುವ ಬದಲು, ಅವರ ಜೊತೆ ನಿಂತು ಧೈರ್ಯ ಹೇಳಿದ್ರೆ, ಅವರೇ ನಿಮ್ಮ ಬಳಿ ಬರ್ತಾರೆ.
ಮಹಿಳೆಯರು ಹೀಗೆಲ್ಲಾ ಮಾಡೋದು ಗಂಡಸರಿಗೆ ಇಷ್ಟಾನೇ ಆಗಲ್ವಂತೆ !
ದಂಡಂ ದಶಗುಣಂ : ಕೆಲವೊಮ್ಮೆ ಮಾತಿನಲ್ಲಿ ಆಗದೆ ಇರೋದನ್ನು ನೀವು ಅಖಾಡಕ್ಕೆ ಇಳಿದು ತೋರಿಸಬೇಕಾಗುತ್ತದೆ. ಪತಿ ಜಿದ್ದು ಬಿಡ್ತಿಲ್ಲ, ಬೇಕಾದಷ್ಟು ಸಮಯವಿದ್ದರೂ ನಿಮಗೆ ಸಮಯ ನೀಡ್ತಿಲ್ಲ ಎನ್ನುವ ಸಂದರ್ಭದಲ್ಲಿ ನೀವು ಅವರನ್ನು ಬೆದರಿಸಬಹುದು. ತವರಿಗೆ ಹೋಗ್ತಿನಿ ಎಂಬ ತಂತ್ರವನ್ನು ಕೂಡ ನೀವು ಬಳಸಬಹುದು.