Relationship Tips: ಸಂಗಾತಿ ಮರಳಿ ಸಿಗಬೇಕೆ? ಹೀಗ್ಮಾಡಿ

By Suvarna News  |  First Published Apr 9, 2022, 6:44 PM IST

Relationship tips: ಸಂಬಂಧ ಕೊನೆಯಾಗಬೇಕು ಎಂದು ನಿಮ್ಮ ಸಂಗಾತಿ ಹಠ ಹಿಡಿದು ಕೂತಿದ್ದಾರೆಯೇ? ಹಾಗಿದ್ದರೆ ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ. ಕೆಲವು ದಿನಗಳ ಕಾಲ ಅವರನ್ನು ಹಾಗೆಯೇ ದೂರವಿಟ್ಟರೆ ಅವರು ಮತ್ತೆ ನಿಮಗೇ ಮರಳಿ ಸಿಗುತ್ತಾರೆ. ಸಂಗಾತಿ ಬ್ರೇಕಪ್ ಮಾಡಿಕೊಂಡಾಗ ನೀವೇನು ಮಾಡಬೇಕು ನೋಡಿಕೊಳ್ಳಿ.
 


ಸಂಬಂಧವೊಂದು (Relation) ಇದ್ದಕ್ಕಿದ್ದ ಹಾಗೆ ಕೊನೆಯಾಗಬಹುದು. ಕೆಟ್ಟ ಘಳಿಗೆ, ಕೆಟ್ಟದಾದ ಒಂದು ಜಗಳ, ಸಂಗಾತಿಯ (Partner) ಮೋಸ (Cheat) ಇತ್ಯಾದಿ ಹಲವಾರು ಕಾರಣಗಳಿಂದ ಸಂಬಂಧ ಅಂತ್ಯಗೊಳ್ಳಬಹುದು. ಕಹಿಯಾದ ಸತ್ಯವೆಂದರೆ, ಸಂಬಂಧ ಕೊನೆಯಾಗಲು ಇಬ್ಬರೂ ಕಾರಣರಾಗಬೇಕಿಲ್ಲ. ಒಬ್ಬರ ಹಠ, ಮತ್ತೊಬ್ಬರ ಈಗೋ(Ego)ಗಳಿಂದಲೂ ಸಂಬಂಧ ಮುರಿಯಬಹುದು. ಇನ್ನೊಬ್ಬ ವ್ಯಕ್ತಿಯ ಪಾತ್ರವೇ ಇಲ್ಲದಿದ್ದರೂ, ಅವರಿಗೆ ಈ ಸಂಬಂಧದಲ್ಲಿ ಮುಂದುವರಿಯಲು ಇಷ್ಟವಿದ್ದರೂ ಒಬ್ಬರ ಕಾರಣದಿಂದ ಅದು ಸಾಧ್ಯವಾಗದಿರಬಹುದು. ನಿಮ್ಮ ಸಂಗಾತಿಯೂ ನಿಮ್ಮನ್ನು ಹೀಗೆಯೇ ಘಾಸಿಗೊಳಿಸಿದ್ದಾರಾ? ಹಾಗಿದ್ದರೆ ಈ ಸಮಯದಲ್ಲಿ ನೀವು ಮಾಡಬೇಕಾದುದೇನು? ಒಂದೊಮ್ಮೆ ನಿಮ್ಮ ಸಂಗಾತಿ ನಿಮಗೆ ಮರಳಿ ಸಿಗಬೇಕು ಎಂದಾದರೆ ಏನು ಮಾಡಬೇಕು ಎಂದು ನೋಡಿಕೊಳ್ಳಿ. 

•    ಭಾವನಾತ್ಮಕ ಬೆಂಬಲ (Emotional Support) ಕಟ್ ಮಾಡಿ
ಇಷ್ಟು ದಿನ ನೀವು ನಿರಂತರವಾಗಿ ನೀಡುತ್ತಿದ್ದ ಭಾವನಾತ್ಮಕ ಬೆಂಬಲವನ್ನು ಕಟ್ ಮಾಡಿ. “ಅರೆ, ಹೀಗೆ ಮಾಡಿದರೆ ಸಂಗಾತಿ ಮರಳಿ ದೊರೆಯುತ್ತಾಳೆಯೇ/ ದೊರೆಯುತ್ತಾನೆಯೇ?’ ಎಂದು ಅಚ್ಚರಿ ಆಗುತ್ತಿದೆಯೇ? ಹೌದು. ನೀವು ಇಷ್ಟು ದಿನ ನೀಡುತ್ತಿದ್ದ ಬೇಷರತ್ ಬೆಂಬಲವನ್ನು ಅವರು ನಿಮ್ಮಿಂದ ದೂರವಾದ ತಕ್ಷಣದಿಂದ ನಿಲ್ಲಿಸಬೇಕು. ಸತ್ಯವೆಂದರೆ, ಎಲ್ಲ ಬ್ರೇಕಪ್ಪುಗಳೂ (Breakup) ಶಾಶ್ವತವಲ್ಲ. ನೈಜ ಸಂಬಂಧ ಯಾವುದೋ ಒಂದು ಘಳಿಗೆಯಲ್ಲಿ ಮಾತನಾಡಿ ಮುಗಿಸುವಂಥದ್ದಲ್ಲ. ಹೀಗಾಗಿ, ಕೆಲವು ದಿನಗಳಲ್ಲಿ ಅವರಿಗೂ ಇದರ ಅರಿವಾಗಬಹುದು. ಮನದಲ್ಲಿ ಪ್ರೀತಿಯ (Love) ಭಾವನೆ ಮುಂದುವರಿದಿದೆ ಹಾಗೂ ಅವರಿಲ್ಲದೆ ಬದುಕಿನಲ್ಲಿ ಸೊಗಸಿಲ್ಲ ಎನ್ನುವ ಸತ್ಯ ಗೋಚರವಾಗಬಹುದು. ಪಶ್ಚಾತ್ತಾಪವಾಗಬಹುದು. ಮಧ್ಯರಾತ್ರಿ ನಿಮಗೆ ಕಾಲ್ ಮಾಡಿ ಅವರು ಹೇಳಿಕೊಳ್ಳುತ್ತಿದ್ದ ಸಮಸ್ಯೆ, ಗೊಂದಲಗಳಿಗೆ ನೀವು ನೀಡುತ್ತಿದ್ದ ಸಾಂತ್ವನ, ಸಂದೇಶಗಳನ್ನು ಮಿಸ್ ಮಾಡಿಕೊಳ್ಳಲು ಆರಂಭಿಸಬಹುದು. ಹೀಗಾಗಿಯೇ ಸಂಬಂಧ ಅಂತ್ಯವಾದ ತಕ್ಷಣ ನೀವು ಟಕ್ ಎಂದು ಅವರಿಂದ ದೂರವಾಗಿಬಿಡಬೇಕು. ಆಗ ನಿಮ್ಮ ಮೌಲ್ಯ (Value) ಅವರಿಗೆ ಅರಿವಾಗುತ್ತದೆ. 

Tap to resize

Latest Videos

ಇದನ್ನೂ ಓದಿ: ಹದಿಹರೆಯದಲ್ಲೇ ಗರ್ಭಧಾರಣೆ! Safe Sex ಬಗ್ಗೆ ತಿಳಿದುಕೊಳ್ಳೋಕೆ ಇದು ಸಕಾಲ

•    ಅವರ ಡೋರ್ ಮ್ಯಾಟ್ (Door Mat) ಆಗಲು ನಿರಾಕರಿಸಿ
ಒಂದೊಮ್ಮೆ ನಿಮ್ಮ ಸಂಗಾತಿ ನಿಮ್ಮಿಂದ ದೂರವಾಗಲು ಬಯಸಿದರೆ ಅದನ್ನು ಸ್ವೀಕರಿಸಿ. ಬದಲಿಗೆ, ಅವರು ಹೇಳುವ ಎಲ್ಲ ಕಂಡಿಷನ್ (Condition) ಗಳನ್ನು ಒಪ್ಪಿಕೊಳ್ಳಬೇಡಿ. ಬ್ರೇಕಪ್ ಮಾಡಿಕೊಳ್ಳುವ ಮಾತನಾಡುವ ಅವರು ಸಹಜವಾಗಿ ನಿಮ್ಮ ಮೇಲೆ ದೂರುಗಳ ಮಳೆ ಸುರಿಸುತ್ತಾರೆ. ನಿಮ್ಮಲ್ಲಿ ತಪ್ಪಿಲ್ಲದಿದ್ದರೂ ಅವುಗಳನ್ನು ನೀವು ಒಪ್ಪಿಕೊಂಡು ಬದಲಾಗುತ್ತೇನೆ ಎನ್ನುವ ಮಾತುಗಳನ್ನು ಆಡಬೇಕಿಲ್ಲ. ನಿಮ್ಮ ನಿಲುವಿಗೆ ನೀವು ಬದ್ಧರಾಗಿ. ನೀವು “ಬಳಕೆಯಾಗಿದ್ದೀರಿ’ (Used) ಎನ್ನುವ ಭಾವನೆ ನಿಮ್ಮಲ್ಲಿ ಮೂಡದಂತೆ ಎಚ್ಚರಿಕೆ ವಹಿಸಿ. ಆಗ ನಿಮ್ಮ ಬಗ್ಗೆ ಅವರಿಗೂ ಗೌರವ (Respect) ಮೂಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗೂ ಸಂಬಂಧವನ್ನು ಪುನಃ ಬೆಸೆದುಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ. 

ಇದನ್ನೂ ಓದಿ: ಹುಡುಗಿಯರನ್ನು ಇಂಪ್ರೆಸ್ ಮಾಡುವುದು ಹೇಗೆ ? ಸ್ಪೆಷಲ್ ಕ್ಲಾಸ್‌ಗೆ 1 ಗಂಟೆಗೆ 25 ಸಾವಿರ ಫೀಸ್ !

•    ನಿಮ್ಮ ಕೆಲಸ ಕಾರ್ಯಗಳಲ್ಲಿ (Activity) ಮಗ್ನರಾಗಿ
ಸಂಬಂಧ ಮುರಿದಾಕ್ಷಣ ಕೆಲಸವಿಲ್ಲದೆ “ದೇವದಾಸ್’ ಆಗಬೇಕಾಗಿಲ್ಲ. ಬದಲಿಗೆ, ಇನ್ನಷ್ಟು ಬ್ಯುಸಿಯಾಗಿ. ಯಾವುದಾದರೊಂದು ಚಟುವಟಿಕೆಯಲ್ಲಿರಿ. ಹೃದಯ (Heart) ಚೂರಾದಂತೆ ನೋವಾಗುತ್ತಿದ್ದರೂ ಇತರರಿಗೆ ಸಹಾಯ ಮಾಡಿ. ಹೊಸ ಹೊಸ ಹವ್ಯಾಸಗಳನ್ನು (Hobbies) ರೂಢಿಸಿಕೊಳ್ಳಿ. ನೋವಿನ ಎಳೆ ಕಾಡದಂತೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ. ನಿಮ್ಮನ್ನು ನೀವು ಖುಷಿ(Happy)ಯಾಗಿಟ್ಟುಕೊಳ್ಳುವುದನ್ನು ಕಲಿತರೆ ಜೀವನದಲ್ಲಿ ಇನ್ನೇನೂ ಬೇಕಿಲ್ಲ. ನೀವು ಖುಷಿಯಾಗಿದ್ದರೆ ನಿಮ್ಮ ಸಂಗಾತಿಯೂ ನಿಮ್ಮನ್ನು ಮತ್ತೆ ಸೇರಿಕೊಳ್ಳುವ ಸಾಧ್ಯತೆ ಹೆಚ್ಚು. ಒಂದೊಮ್ಮೆ ಅವರು ಮತ್ತೆ ನಿಮ್ಮನ್ನು ಸೇರದಿದ್ದರೂ ನಿಮಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಜೀವನದಲ್ಲಿ ಖುಷಿಯಾಗಿರುವುದನ್ನು, ಕೆಲಸದಲ್ಲಿ ಮಗ್ನರಾಗಿರುವುದನ್ನು ಕಲಿತುಕೊಂಡ ಮೇಲೆ ಬೇರ್ಯಾರೂ ಅಗತ್ಯವೆನಿಸುವುದಿಲ್ಲ. 
 

click me!