ಹುಡುಗಿಯರನ್ನು ಇಂಪ್ರೆಸ್ ಮಾಡುವುದು ಹೇಗೆ ? ಸ್ಪೆಷಲ್ ಕ್ಲಾಸ್‌ಗೆ 1 ಗಂಟೆಗೆ 25 ಸಾವಿರ ಫೀಸ್ !

By Suvarna News  |  First Published Apr 9, 2022, 4:46 PM IST

ಹುಡುಗೀಯರನ್ನು (Girls) ಮೆಚ್ಚಿಸೋಜಕೆ ಮಾಡೋಕೆ ಹುಡುಗ್ರು ಎಷ್ಟೆಲ್ಲಾ ಕಷ್ಟ ಪಡ್ತಾರೆ ನೋಡಿದ್ದೀರಾ? ಕಾಸ್ಟ್ಲೀ ಡ್ರೆಸ್, ವಾಚ್‌ ಹೀಗೆ ಏನೇನೋ ಗಿಫ್ಟ್‌ (gift)ಗಳನ್ನು ಕೊಡಿಸುತ್ತಿರುತ್ತಾರೆ. ಹೀಗಿದ್ದೂ ಎಷ್ಟೋ ಸಾರಿ ಹುಡುಗೀರು ಡೋಂಟ್‌ಕೇರ್ ಅಂದುಬಿಡ್ತಾರೆ. ಹಾಗಿದ್ರೆ ಹುಡುಗಿಯರನ್ನು ಇಂಪ್ರೆಸ್ ಮಾಡೋದು ಹೇಗೆ ? ಇಲ್ಲೊಬ್ಳು ಅದನ್ನು ಹೇಳಿ ಕೊಡೋಕೆ ಸ್ಪೆಷಲ್ ಕ್ಲಾಸ್ (Special Class) ಮಾಡ್ತಿದ್ದಾಳೆ.  1 ಗಂಟೆಗೆ ಭರ್ತಿ 25  ಸಾವಿರ ಫೀಸ್ !


ಪುರುಷರು (Men) ಯಾವಾಗಲೂ ಹುಡುಗಿಯರಿಗೆ ಪ್ರೇಮ ನಿವೇದನೆ ಮಾಡಲು ಭಯಪಡುತ್ತಾರೆ. ಯಾಕೆಂದರೆ ಅವರು ಹುಡುಗಿಯರಿಂದ ನೋ ಎಂದು ಕೇಳಲು ಬಯಸುವುದಿಲ್ಲ. ಹೀಗಾಗಿಯೇ ಅದಕ್ಕೂ ಮೊದಲು ಹುಡುಗಿಯರನ್ನು ಇಂಪ್ರೆಸ್ (Impress) ಮಾಡಲು ಎಲ್ಲಾ ರೀತಿಯಲ್ಲಿ ಪ್ರಯತ್ನ ಪಡುತ್ತಾರೆ. ಆದರೆ ಯಶಸ್ವಿಯಾಗಿ ಇಂಪ್ರೆಸ್ ಮಾಡಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಹುಡುಗರು ಮಾಡುವ ಕೆಲವು ಕೆಲಸಗಳಿಂದ ಹುಡುಗಿಯರು (Girls) ಸಿಟ್ಟುಕೊಂಡು ಮಾತನಾಡುವುದನ್ನೇ ಬಿಟ್ಟು ಬಿಡಬಹುದು. ಹೀಗಾಗಿ ಹುಡುಗರು ಹುಡುಗಿಯರನ್ನು ಮೆಚ್ಚಿಸಲು ಏನನ್ನಾದರೂ ಮಾಡುವ ಮೊದಲು ಏನು ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಇಲ್ಲದಿದ್ರೆ ಹುಡುಗಿ ಬಲೆಗೆ ಬೀಳೋದು ಸಾಧ್ಯನೇ ಇಲ್ಲ. ಹೀಗಿದ್ದಾಗ ಹುಡುಗರಿಗೆ ಸಲಹೆ (Advice) ಕೊಡೋಕೆ ಹುಡುಗಿಯರ ಸಲಹೆಯೇ ಬೇಕಾಗುತ್ತದೆ. 

ಹುಡುಗಿಯರನ್ನು ಇಂಪ್ರೆಸ್ ಮಾಡುವುದು ಹೇಗೆ ? ಹೀಗೊಂದು ಸ್ಪೆಷಲ್‌ ಕ್ಲಾಸ್‌ (Special Class) ಮಾಡುತ್ತಾಳೆ ಕೆಝಿಯಾ ನೋಬಲ್. ಹುಡುಗಿಯರನ್ನು ಇಂಪ್ರೆಸ್ ಮಾಡೋಕೆ ಕಷ್ಟಪಡುವ ಹುಡುಗರಿಗೆ ಅವರು ಸ್ಪೆಷಲ್ ಸೆಷನ್ ನಡೆಸಿ ಸಲಹೆ ನೀಡುತ್ತಾರೆ. ಇದಕ್ಕಾಗಿ ಅವರು ಸಾಕಷ್ಟು ಶುಲ್ಕ (Fees)ವನ್ನು ವಿಧಿಸುತ್ತಾರೆ. 

Tap to resize

Latest Videos

Extramarital Affair: ಕೆಲಸದಾಕೆ ಮೇಲೆ ಹೆಚ್ಚಾಯ್ತು ಪ್ರೀತಿ, ಕದ್ದುಮುಚ್ಚಿ ಫೋಟೋ ಕ್ಲಿಕ್ಕಿಸಿದ ವ್ಯಕ್ತಿ

ಹುಡುಗಿಯರನ್ನು ಇಂಪ್ರೆಸ್ ಮಾಡುವುದು ಹೇಗೆ ? 
ಕೆಝಿಯಾ ನೋಬಲ್, ಎಲ್ಲವನ್ನೂ ಬಿಟ್ಟು ಡೇಟಿಂಗ್ (Dating) ತರಬೇತುದಾರನಾಗಲು ನಿರ್ಧರಿಸಿದು. ಈ ರೀತಿಯ ನಿರ್ಧಾರ ತೆಗೆದುಕೊಂಡಾಗ ವಯಸ್ಸಿನಲ್ಲಿಯೇ ಕೆಝಿಯಾ ತುಂಬಾ ಚಿಕ್ಕವರಾಗಿದ್ದರು. 2006ರಲ್ಲಿ ಕೆಝಿಯಾ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದರು ಮತ್ತು ಆ ಸಮಯದಲ್ಲಿ ಲಂಡನ್‌ನ ಬಾರ್‌ಗೆ ಹೋಗಿದ್ದರು. ಈ ಸಮಯದಲ್ಲಿ, ಒಬ್ಬ ವ್ಯಕ್ತಿ ಅವಳ ಬಳಿಗೆ ಬಂದು, ಒಂಟಿ ಪುರುಷರಿಗೆ ಹುಡುಗಿ ಫಿಕ್ಸ್ ಮಾಡಲು ನೆರವಾಗಬಹುದೇ ಎಂದು ಕೆಳಿದರು. ಆತ ಪುರುಷರಿಗಾಗಿ ಬೂಟ್ ಕ್ಯಾಂಪ್ ನಡೆಸುತ್ತಿರುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಮತ್ತು ಹುಡುಗಿಯರೊಂದಿಗೆ ಮ್ಯಾಚ್ ಮೇಕಿಂಗ್ ಮಾಡುತ್ತಿದ್ದ ಎಂದು ಕೆಝಿಯಾ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಕೆಝಿಯಾ, ಮೊದಲಿಗೆ ನನಗೆ ಇದು ವಿಚಿತ್ರವೆನಿಸಿತು. ಆದರೆ ತರಬೇತಿ ಪಡೆದುಕೊಳ್ಳಲು ಆರಂಭಿಸಿದ ನಂತರ ಒಳ್ಳೆಯ ಹುಡುಗರು ಸಹ ಯಾವುದೇ ಕಾರಣವಿಲ್ಲದೆ ಒಂಟಿಯಾಗಿದ್ದಾರೆ ಎನಿಸಿತು. ಹೀಗಾಗಿ ಅವರಿಗೆ ಸಲಹೆಗಳನ್ನು ನೀಡುವುದು ತುಂಬಾ ಉಪಯುಕ್ತ ಅನಿಸಿತು. ಅಂತಿಮವಾಗಿ ಕೆಜಿಯಾ ನೋಬಲ್ ಕಂಪನಿಯನ್ನು ತೊರೆಯಲು ಮತ್ತು ಅವರ ಸ್ವಂತ ವೀಡಿಯೊಗಳನ್ನು ಮಾಡಲು ನಿರ್ಧರಿಸಿದರು.

Life Story : ಪತ್ನಿ ತವರಿಗೆ ಹೋದಾಗ ಮಗಳ ಜೊತೆ ಸಂಬಂಧ..! ಈಗ ಶುರುವಾಗಿದೆ ಸಂಕಷ್ಟ

ಒಂದು ಗಂಟೆಗೆ 25  ಸಾವಿರ, ವಾರಕ್ಕೆ 3 ಲಕ್ಷ ರೂ. ಫೀಸ್ !
ಡೇಟಿಂಗ್ ತರಬೇತುದಾರರಾಗಿ ಕೆಝಿಯಾ ನೋಬಲ್, ಅವರು ಮೊದಲು ತಮ್ಮ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದರು, ಅದರ ಮೊದಲ ವೀಡಿಯೊ ತ್ವರಿತವಾಗಿ ವೈರಲ್ ಆಯಿತು. ಅವರು ತಮ್ಮ ಡಿವಿಡಿ, ವೆಬ್‌ಸೈಟ್ ಮತ್ತು ಬ್ರ್ಯಾಂಡಿಂಗ್‌ಗೆ ಸಣ್ಣ ಮೊತ್ತವನ್ನು ಖರ್ಚು ಮಾಡಿದರು ಮತ್ತು ಕೆಲವೇ ಸಮಯದಲ್ಲಿ ಸುಮಾರು 9 ಕೋಟಿಗಳಷ್ಟು ಸಂಪತ್ತನ್ನು ಸಂಗ್ರಹಿಸಿದರು. ಅವರು ತಮ್ಮದೇ ಆದ ತಂಡವನ್ನು ಹೊಂದಿದ್ದಾರೆ. ಈ ಮೂಲಕ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ.

ಕೆಜಿಯಾ ನೋಬಲ್‌ನ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಸ್ಕೈಪ್‌ನಲ್ಲಿ ಸೆಷನ್‌ಗಾಗಿ ಅವರ ಗಂಟೆಯ ಶುಲ್ಕ 250 ಪೌಂಡ್‌ಗಳು, ಇದು ಸುಮಾರು 25 ಸಾವಿರ ರೂಪಾಯಿಗಳಿಗೆ ಸಮನಾಗಿರುತ್ತದೆ. ಅದೇ ಸಮಯದಲ್ಲಿ, ಅವರು ಒಂದು ವಾರದ ವೈಯಕ್ತಿಕ ಡೇಟಿಂಗ್ ತರಬೇತಿಗಾಗಿ 4000 ಬ್ರಿಟಿಷ್ ಪೌಂಡ್‌ಗಳನ್ನು ವಿಧಿಸುತ್ತಾಳೆ. ಈ ಕರೆನ್ಸಿಯು ಭಾರತೀಯ ರೂಪಾಯಿಯಲ್ಲಿ ಸರಿಸುಮಾರು 3,96,437 ಆಗಿದೆ. ಅಂತಹ ದುಬಾರಿ ಶುಲ್ಕಗಳ ಹೊರತಾಗಿಯೂ, ಅವರು ಬಹಳಷ್ಟು ಗ್ರಾಹಕರನ್ನು ಹೊಂದಿದ್ದಾರೆ.

ಸಿಂಗಲ್ ಆಗೇ ಸಾಯ್ತೇವೇನೋ ಎಂದು ಕೊರಗೋ ಅದೆಷ್ಟು ಮಂದಿ ಫೀಸ್ ಎಷ್ಟಾದ್ರೂ ಪರ್ವಾಗಿಲ್ಲ ಹುಡುಗಿ ಸೆಟ್ಟಾದ್ರೆ ಸಾಕು ಅಂತ ಇವ್ರ ಬೆನ್ನು ಬಿದ್ದಿದ್ದಾರಂತೆ.

click me!