ಮೇಲರಿಮೆ ಹೊಂದಿರುವ ಜನ ತಾವು ಎಲ್ಲರಿಗಿಂತ ಮೇಲು ಎಂದುಕೊಳ್ಳುವ ಜತೆಗೆ ಮತ್ತೊಬ್ಬರನ್ನು ಕುಗ್ಗಿಸಿ ನೋಡುತ್ತಾರೆ. ಆಳವಾದ ಮೇಲರಿಮೆ ಇರುವ ಜನ ಕ್ರಮೇಣ ಏಕಾಂಗಿಯಾಗುತ್ತಾರೆ. ಏಕೆಂದರೆ, ಇವರಿಗೆ ತಾವೊಬ್ಬರೇ ಗ್ರೇಟ್.
ಖಾಸಗಿ ಜೀವನದಲ್ಲಾಗಲೀ, ವೃತ್ತಿ ಬದುಕಿನಲ್ಲಾಗಲೀ, ನಾವು ಹೊಸ ಜನರನ್ನು ಆಗಾಗ ಭೇಟಿ ಮಾಡುತ್ತಲೇ ಇರುತ್ತೇವೆ. ಕೆಲವರ ನಡೆನುಡಿಗಳು ನಮ್ಮನ್ನು ಸಿಕ್ಕಾಪಟ್ಟೆ ಇರಿಸುಮುರಿಸುಗೊಳಿಸುತ್ತವೆ. ಅವರ ಮಾತು, ವರ್ತನೆ, ಕ್ರಿಯೆಗಳು ಏನೋ ಕಿರಿಕಿರಿ ಉಂಟು ಮಾಡುತ್ತವೆ. ತಾವು ಎಲ್ಲರಿಗಿಂತ ಮೇಲು ಎನ್ನುವ ಭಾವನೆಯಲ್ಲಿ ಅವರು ವರ್ತಿಸುತ್ತಿರುತ್ತಾರೆ. ಹೀಗಾಗಿ, ಅವರೊಂದಿಗೆ ಮುಕ್ತವಾಗಿ ಒಡನಾಡಲು ನಮಗೆ ಸಾಧ್ಯವಾಗುವುದಿಲ್ಲ. ಇದನ್ನೇ ಮೇಲರಿಮೆ ಎನ್ನುತ್ತೇವೆ. ಕೀಳರಿಮೆ ವ್ಯಕ್ತಿತ್ವಕ್ಕೆ ಎಷ್ಟು ಹಾನಿಯೋ, ಅಷ್ಟೇ ಹಾನಿಯನ್ನು ಈ ಮೇಲರಿಮೆಯೂ ತರುತ್ತದೆ. ಕೀಳರಿಮೆ ಇದ್ದಾಗ ನಾವೇ ಜನರಿಂದ ದೂರವಾದರೆ, ಮೇಲರಿಮೆ ಇರುವಾಗ ಜನರೇ ನಮ್ಮಿಂದ ದೂರವಾಗುತ್ತಾರೆ. ಒಟ್ಟಿನಲ್ಲಿ ಈ ಎರಡೂ ಭಾವನೆಗಳು ನಮ್ಮನ್ನು ಒಂಟಿಯಾಗಿ ಮಾಡುತ್ತವೆ. ಅಂದ ಹಾಗೆ, ಮೇಲರಿಮೆ ಇರುವವರಲ್ಲಿ ಕೆಲವು ಲಕ್ಷಣಗಳು ಕಂಡುಬರುತ್ತವೆ. ಆಳವಾದ ಮೇಲರಿಮೆ ಭಾವನೆಯಿಂದ ಬಳಲುವವರನ್ನು ಈ ಲಕ್ಷಣಗಳ ಮೂಲಕ ಗುರುತಿಸಿ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು.
• ಅಭದ್ರತೆ (Insecurity)
ಮೇಲರಿಮೆ (Superiority Complex) ಇರುವವರು ಮೇಲ್ನೋಟಕ್ಕೆ ತಾವು ಎಲ್ಲರಿಗಿಂತ ಗ್ರೇಟ್ (Great) ಎನ್ನುವಂತೆ ವರ್ತಿಸಿದರೂ ಆಳವಾಗಿ ಅವರಲ್ಲಿ ಅಭದ್ರತೆಯ ಭಾವನೆ ಗಾಢವಾಗಿರುತ್ತದೆ. ಅವರು ಬಾಲ್ಯಕಾಲದಲ್ಲಿ ಗೋಲ್ಡನ್ ಚೈಲ್ಡ್ ಸಿಂಡ್ರೋಮ್ (Golden Child Syndrome) ನಿಂದಲೂ ಕೂಡಿದ್ದಿರಬಹುದು. ಮೇಲುಮೇಲಿನ ಆತ್ಮವಿಶ್ವಾಸದ (Confidence) ಹೊದಿಕೆಯ ಕೆಳಗೆ ತಮ್ಮ ಮೌಲ್ಯದ ಕುರಿತು ಅವರಿಗೇ ಸ್ವತಃ ಗೊಂದಲವಿರುತ್ತದೆ. ಹೀಗಾಗಿ, ಅವರು ತಾವು ಎಷ್ಟು ಗ್ರೇಟ್ ಎನ್ನುವುದನ್ನು ಪದೇ ಪದೆ ಸಾಬೀತುಪಡಿಸಿಕೊಳ್ಳಲು ಯತ್ನಿಸುತ್ತಾರೆ, ಮಿಂಚಲು ಬಯಸುತ್ತಾರೆ.
undefined
ವರ್ಷ 40 ಆಯ್ತು, ಮದ್ವೆ ಆಗ್ತಿಲ್ಲವೆಂದರೆ ಹೀಗ್ ಮಾಡಿ ನೋಡಿ, ಡೇಟಿಂಗ್ ಟಿಪ್ಸ್
• ಎಷ್ಟೆಲ್ಲ ತಿಳಿದಿದೆ ಎನ್ನುವ ಭಾವ
ಮೇಲರಿಮೆ ಹೊಂದಿರುವವರಲ್ಲಿ ತಮಗೆ ಎಲ್ಲವೂ ಗೊತ್ತು ಎನ್ನುವ ಭಾವನೆಯೂ ದಟ್ಟವಾಗಿರುತ್ತದೆ. ತಮಗೆ ತಿಳಿದಿರುವ ಸಣ್ಣದೊಂದು ವಿಚಾರವನ್ನೂ ಅವರು ದೊಡ್ಡ ವಿಚಾರವೆಂಬಂತೆ ಎಲ್ಲರ ಬಳಿ ಹೇಳಿಕೊಳ್ಳುತ್ತಾರೆ. ಬೇರೆಯವರಿಗಿಂತ ತಮಗೆ ತಿಳಿದಿದೆ ಎಂದು ಬಿಂಬಿಸುವುದಷ್ಟೇ ಅವರ ಉದ್ದೇಶವಾಗಿರುತ್ತದೆ.
• ಶೋ ಆಫ್ (Show Off)
ಸಣ್ಣದೊಂದು ಅಧಿಕಾರವಿದ್ದರೂ (Power) ಶೋ ಆಫ್ ಮಾಡುತ್ತಾರೆ. ಕಚೇರಿಯ ಅಧಿಕೃತ ಗುರುತು, ಸರ್ಟಿಫಿಕೇಟ್ ಗಳು, ಪದವಿ, ರ್ಯಾಂಕ್ (Rank), ಪ್ರೊಮೋಷನ್ (Promotion) ಗಳನ್ನು ವೈಭವದಿಂದ ಬಿಂಬಿಸುತ್ತಾರೆ. ಇದನ್ನು ನಾವೆಲ್ಲರೂ ಮಾಡುತ್ತೇವೆ. ಆದರೆ, ಮೇಲರಿಮೆ ಇರುವವರಿಗೆ ಇದೊಂದು ಗೀಳಿನ (Obsession) ಚಟವಾಗಿರುತ್ತದೆ.
• ಸದಾಕಾಲ ಕೇಂದ್ರಬಿಂದುವಾಗುವ ಬಯಕೆ
ಸಂದರ್ಭ ದೊರೆತಾಗಲೆಲ್ಲ ಇವರ ಈಗೋ (Ego) ಗುಣವು ಎಲ್ಲರ ಕೇಂದ್ರಬಿಂದುವಾಗಲು ಬಯಸುತ್ತಿರುತ್ತದೆ. ತಮ್ಮ ಬಗ್ಗೆ ಪ್ರಚಾರ ಮಾಡಿಕೊಳ್ಳುವುದು, ತಾವು ಎಷ್ಟು ಅದ್ಭುತ ವ್ಯಕ್ತಿತ್ವ ಹೊಂದಿದ್ದೇವೆ ಎಂದು ಭಾವಿಸಿ ಅದನ್ನು ಎಲ್ಲರೆದುರು ವ್ಯಕ್ತಪಡಿಸುತ್ತ ನೆಮ್ಮದಿ ಕಾಣುತ್ತಾರೆ. ಇನ್ನೂ ದುರಂತವೆಂದರೆ, ಕೆಲವೊಮ್ಮೆ ಇವರ ಕತೆ (Story) ನೋವಿನಿಂದ ಕೂಡಿದ್ದರೂ, ನೆಗೆಟಿವ್ ಆಗಿದ್ದರೂ ಪರವಾಗಿಲ್ಲ, ಅದನ್ನು ದೊಡ್ಡದಾಗಿ ಬಿಂಬಿಸಿಕೊಳ್ಳುತ್ತಾರೆ.
ಗಿಲ್ಟ್ ಫೀಲ್ ಮಾಡಿಕೊಳ್ಳೋದು ಬೇಕಾ? ಏನು ಮಾಡಿದ್ರೆ ಲೈಫ್ ಬಿಂದಾಸ್ ಇರುತ್ತೆ?
• ಘರ್ಷಣೆಗಳೆಂದರೆ (Conflict) ಇಷ್ಟ
ಮೇಲರಿಮೆ ಹೊಂದಿರುವ ಜನರು ಸಾಮಾನ್ಯರಿಗಿಂತ ತಾವು ಮೇಲು ಎಂದು ಭಾವಿಸುವುದರಿಂದ ಬೇರೊಬ್ಬರ ಬಗ್ಗೆ ಅಸೂಯೆ ಪಡುತ್ತಾರೆ, ಅಷ್ಟೇ ಅಲ್ಲ, ಚಿಕ್ಕಪುಟ್ಟ ವಿಷಯಗಳಿಗೂ ಜಗಳ ಮಾಡುತ್ತಾರೆ. “ನಾನ್ಯಾರು ಗೊತ್ತಾ? ಚಿಟಿಕೆ ಹೊಡೆಯುವುದರೊಳಗೆ ನಿನ್ನ ಕತೆ ಮುಗಿಸ್ತೇನೆ, ಊರಿಂದ ನಿನ್ನನ್ನು ಹೊರಗೆ ಕಳಿಸ್ತೀನಿʼ ಎಂಬಂತಹ ಮಾತುಗಳು ಇಂಥವರಿಂದಲೇ ಬರುತ್ತವೆ.
• ಮತ್ತೊಬ್ಬರನ್ನು ಕುಗ್ಗಿಸುವುದು (Downgrade)
ಬೇರೊಬ್ಬರ ಸಾಧನೆ, ವ್ಯಕ್ತಿತ್ವಗಳನ್ನು (Personality) ಕುಗ್ಗಿಸಿ ಮಾತನಾಡುವುದು ಇವರ ಪ್ರಮುಖ ಗುಣ. ಇದು ಇವರ ಸುತ್ತಲಿನವರನ್ನು ಸದಾಕಾಲ ನೋವಿಗೆ ತುತ್ತು ಮಾಡುತ್ತದೆ. ಮನೆಯವರನ್ನೂ ಸೇರಿಸಿ, ಸಮಾಜದ ಎಲ್ಲರನ್ನೂ ಇವರ ಡಿಗ್ರೇಡ್ ಮಾಡಿಯೇ ನೋಡುತ್ತಾರೆ.
• ದುಬಾರಿ ಗಿಫ್ಟ್
ಮೇಲರಿಮೆ ಉಳ್ಳವರು ಬೇರ್ಯಾರೂ ನೀಡದ ದುಬಾರಿ (Expensive) ಗಿಫ್ಟ್ ಗಳನ್ನು ನೀಡುವ ಚಾಳಿಯನ್ನೂ ಹೊಂದಿರಬಹುದು. ಈ ಮೂಲಕ ನಿಮ್ಮನ್ನು ನಿಯಂತ್ರಿಸಲು, ನಿಮ್ಮ ಮೇಲೆ ಪ್ರಭಾವ ಬೀರಲು ಯತ್ನಿಸಬಹುದು.