ಟಿಂಡರ್ ಡೇಟಿಂಗ್ ಆ್ಯಪ್ ಕಡೆಗೆ ಯುವಜನರ ಆಕರ್ಷಣೆ ಏಕೆ? ಆ ಕಾರಣಕ್ಕಾ?

By Suvarna NewsFirst Published Sep 23, 2023, 3:44 PM IST
Highlights

ಡೇಟಿಂಗ್ ಆಪ್ ನಲ್ಲಿ ಟಿಂಡರ್ ಹೆಚ್ಚು ಪ್ರಸಿದ್ಧಿ ಪಡೆದಿದೆ. ಸಂಗಾತಿ ಪಡೆಯಲು ಜನರು ಇದ್ರ ಸಹಾಯ ಪಡೆಯುತ್ತಾರೆ. ಆದ್ರೆ ಜಿನ್ ಝೆಡ್ ಆಯ್ಕೆ ಹಾಗೂ ಆಸಕ್ತಿ ಇದ್ರಲ್ಲೂ ಭಿನ್ನವಾಗಿದೆ. 
 

ಜೆನ್ ಝೆಡ್ ಎಂದು ಕರೆಯಲ್ಪಡುವ ಹೊಸ ಪೀಳಿಗೆಯ ಜನರ ಆಲೋಚನೆಗಳು ಬಹಳ ಭಿನ್ನ. ಅವರ ಕೆಲಸ, ಜೀವನ ಶೈಲಿ (Lifestyle), ಅವರ ಆಹಾರ ಸೇರಿದಂತೆ ಎಲ್ಲದರಲ್ಲೂ ಭಿನ್ನತೆಯನ್ನು ನೀವು ನೋಡ್ಬಹುದು. ಅದೇ ರೀತಿ ಅವರು ಪ್ರೀತಿ ಮತ್ತು ಸಂಬಂಧಗಳ ಬಗ್ಗೆಯೂ ವಿಭಿನ್ನ ಚಿಂತನೆಯನ್ನು ಹೊಂದಿದ್ದಾರೆ ಎಂಬುದು ಬಹಿರಂಗವಾಗಿದೆ. 

Gen Z  ಪೀಳಿಗೆಯ ಯುವಕರು ಡೇಟಿಂಗ್ ಆಪ್  ಟಿಂಡರ್ (Tinder) ಬಳಸುವುದು ತುಂಬಾ ಸಾಮಾನ್ಯವಾಗಿದೆ. ಬೆಂಗಳೂರಿ (Bangalore)ನಲ್ಲಿ ಈ ಆಪ್ ಬಳಸುತ್ತಿರುವ ಯುವಕರ ಸಮೀಕ್ಷೆ ನಡೆದಿದೆ. ಸಮೀಕ್ಷೆ (Survey) ಯಲ್ಲಿ Gen Z ಯುವಕರ ಬಗ್ಗೆ ಅಚ್ಚರಿಯ ವಿಷ್ಯಗಳು ಹೊರ ಬಿದ್ದಿವೆ. ಹೊಸ ಪೀಳಿಗೆಯಲ್ಲಿ ಸಂಬಂಧಗಳಿಗೆ ಸಂಬಂಧಿಸಿದಂತೆ ದೊಡ್ಡ ಬದಲಾವಣೆಯಾಗಿದೆ ಎಂಬುದು ಸಮೀಕ್ಷೆಯಿಂದ ಹೊರ ಬಿದ್ದಿದೆ. 

ಸೆಕ್ಸ್ ಬೇಡ ಅನಿಸೋದ್ಯಾಕೆ? ಯಾರು ಈ ಸುಖದಿಂದ ವಿಮುಖರಾಗುವುದೇಕೆ?

ಯುವಕರು ಕೆಲ ಸಂದರ್ಭಗಳ ಕಾರಣಕ್ಕೆ ಟಿಂಡರ್‌ಗೆ ಹೋಗುತ್ತಾರೆ. ಅವರು ಅದನ್ನು ಸಿಚುವೇಶನ್ಶಿಪ್ ಎಂದು ಕರೆಯುತ್ತಾರೆ. ಅಷ್ಟೇ ಅಲ್ಲ ಅವರು ಸಂಬಂಧಕ್ಕಾಗಿ ಟಿಂಡರ್ ಡೇಟಿಂಗ್ ಅಪ್ಲಿಕೇಷನ್ ಗೆ ಹೋಗೋದಿಲ್ಲ. ಅವರಿಗೆ ಸಂಗಾತಿಯ ನೋಟದಂತಹ ವಿಷ್ಯ ಹೆಚ್ಚು ಮುಖ್ಯವಲ್ಲ. ಸಮೀಕ್ಷೆಯಲ್ಲಿ ಇನ್ನೇನಲ್ಲ ಸಂಗತಿ ಬಹಿರಂಗವಾಗಿದೆ ಎಂಬುದರ ವಿವರ ಇಲ್ಲಿದೆ.

ಸಿಚ್ಯುವೇಶನ್ಶಿಪ್ ಆಯ್ಕೆ ಮಾಡಿಕೊಳ್ತಿರುವ ಯುವಜನತೆ :  ಫ್ಯೂಚರ್ ಆಫ್ ಡೇಟಿಂಗ್ ಈ ಅಧ್ಯಯನ ನಡೆಸಿದೆ. ಬೆಂಗಳೂರು, ಹೈದರಾಬಾದ್, ಮುಂಬೈ ಸೇರಿದಂತೆ ದೇಶದ ಹಲವು ನಗರಗಳ ಯುವಕರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ 18 ರಿಂದ 30 ವರ್ಷ ವಯಸ್ಸಿನ 1,018 ಭಾರತೀಯ ಯುವಕರಿಗೆ ಅನೇಕ ಪ್ರಶ್ನೆಗಳನ್ನು ಕೇಳಲಾಗಿತ್ತು. 

ಸ್ಮಾರ್ಟ್ ಆಗಿರೋ ಹುಡುಗೀರು ಲವ್ವಲ್ಲಿ ಫೈಲ್ಯೂರ್ ಆಗೋದ್ಯಾಕೆ?

ಸಮೀಕ್ಷೆ ಪ್ರಕಾರ, ಯುವಕರು ರಿಲೇಶನ್ಶಿಪ್ ಗಿಂತ (Relationship) ಸಿಚ್ಯುವೇಶನ್ಶಿಪ್ ಗಾಗಿ ಟಿಂಡರ್ ಆಪ್ ಬಳಸುತ್ತಿದ್ದಾರೆ ಎಂಬುದು ಬಹಿರಂಗವಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಜನರು, ಸಂಗಾತಿಯ ನೋಟ ಮತ್ತು ಮೈಕಟ್ಟುಗಿಂತ ತಮ್ಮ ಸಂಗಾತಿಯ ಉದ್ದೇಶಗಳು ಮತ್ತು ಆಲೋಚನೆಗಳು ಹೆಚ್ಚು ಮಹತ್ವಪಡೆಯುತ್ತವೆ ಎಂದಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇಕಡಾ 43ರಷ್ಟು ಯುವಕರು ಸನ್ನಿವೇಶವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಿಚುವೇಶನ್ಶಿಪ್ ಅಂದ್ರೆ ಯಾವುದೇ ಉದ್ದೇಶ, ಕಮಿಟ್ಮೆಂಟ್ ಕಾರ್ಯಸೂಚಿ ಇಲ್ಲದೆ ಇರುವುದು.  ಸಾಮಾನ್ಯ ಡೇಟಿಂಗ್ ನಲ್ಲಿ ಕೂಡ ಪ್ರಾಮಾಣಿಕತೆ ಹಾಗೂ ಮುಕ್ತತೆ ಮುಖ್ಯ ಪಾತ್ರವಹಿಸುತ್ತದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಯುವಕರು ಒಪ್ಪಿಕೊಂಡಿದ್ದಾರೆ. ಮಾನಸಿಕವಾಗಿ ತಮ್ಮ ಬಗ್ಗೆ ಹೆಚ್ಚು ಗಮನ ನೀಡುವ, ತಮ್ಮನ್ನು ನೋಡಿಕೊಳ್ಳುವ ಸಂಗಾತಿಗೆ ಹೆಚ್ಚು ಮಹತ್ವ ನೀಡುತ್ತೇವೆ ಎಂದು ಸಮೀಕ್ಷೆಯಲ್ಲಿ ಯುವಕರು ಒಪ್ಪಿಕೊಂಡಿದ್ದಾರೆ. 

ಡೇಟಿಂಗ್ ಅಪ್ಲಿಕೇಷನ್ (Dating App) ಬಳಸುವವರ ಸಂಖ್ಯೆ ಎಷ್ಟಿದೆ ಗೊತ್ತಾ? : ಸಮೀಕ್ಷೆಯಲ್ಲಿ ಡೇಟಿಂಗ್ ಅಪ್ಲಿಕೇಷನ್ ಬಳಸುವವರು ಎಷ್ಟು ಎಂಬುದನ್ನು ಪತ್ತೆ ಮಾಡುವ ಪ್ರಯತ್ನ ಕೂಡ ನಡೆದಿದೆ. ಟಿಂಡರ್‌ನ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಅರ್ಧಕ್ಕಿಂತ ಹೆಚ್ಚು ಮಂದಿ ಅಂದ್ರೆ ಶೇಕಡಾ 52ರಷ್ಟು ಒಂಟಿ ಯುವಕರು ತಾವು ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸುತ್ತಿರೋದಾಗಿ ಅಥವಾ ಕೆಲವು ಸಮಯದಲ್ಲಿ ಅದನ್ನು ಬಳಸಿದ್ದಾಗಿ ಒಪ್ಪಿಕೊಂಡಿದ್ದಾರೆ. 

ಪಾಲುದಾರರ ಆಯ್ಕೆ ವೇಳೆ ಏನು ನೋಡ್ತಾರೆ ಯುವಕರು? :  ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇಕಡಾ 32 ಕ್ಕಿಂತ ಹೆಚ್ಚು ಯುವಕರು ಪಾಲುದಾರರನ್ನು ಆಯ್ಕೆ ಮಾಡುವ ಮೊದಲು ಮ್ಯೂಜಿಕ್ ಬಗ್ಗೆ ಸಂಗಾತಿಗಿರುವ ಆಸಕ್ತಿಯನ್ನು ಗಮನಿಸುವುದಾಗಿ ಹೇಳಿದ್ದಾರೆ.  ಸುಮಾರು ಶೇಕಡಾ 54ರಷ್ಟು ಯುವಕರು, ಲೈಂಗಿಕತೆ ಇಷ್ಟಪಡುವ ಅಥವಾ ಸೆಕ್ಸುವಲಿ ಐಡೆಂಟಿಟಿ ಹೊಂದಿರುವ ವ್ಯಕ್ತಿ ಜೊತೆಯೂ ಡೇಟಿಂಗ್ ಮಾಡಲು ಸಿದ್ಧರಾಗಿರುವುದಾಗಿ ಹೇಳಿದ್ದಾರೆ. ಶೇಕಡಾ 39ರಷ್ಟು ಜನರು ಜನಾಂಗ, ಸಂಸ್ಕೃತಿಗೆ ಮಹತ್ವ ನೀಡೋದಿಲ್ಲ. ಬೇರೆ ಜನಾಂಗದ ಹಾಗೂ ಸಂಸ್ಕೃತಿಯ ಜನರೊಂದಿಗೂ ಡೇಟಿಂಗ್ ಮಾಡಲು ಸಿದ್ಧ ಎಂದಿದ್ದಾರೆ. 
 

click me!