ಸೆಕ್ಸ್ ಬರೀ ಮನೋರಂಜನೆ ನೀಡುವ ಕ್ರಿಯೆ ಮಾತ್ರವಲ್ಲ. ಅದು ಅನೇಕ ಲಾಭವನ್ನು ಹೊಂದಿದೆ. ಸೆಕ್ಸ್ ಇಲ್ಲದ ದಾಂಪತ್ಯ ಕೆಲ ನಷ್ಟಕ್ಕೆ ಕಾರಣವಾಗುತ್ತೆ. ಇದು ತಿಳಿದಿದ್ರೂ ಕೆಲವರಿಗೆ ನಿಯಮಿತ ಸೆಕ್ಸ್ ಸಾಧ್ಯವಿಲ್ಲ.. ಅದೇಕೆ ಗೊತ್ತಾ?
ಸಂಗಾತಿ ಜೊತೆ ನೀವು ಶಾರೀರಿಕ ಸಂಬಂಧ ಬೆಳೆಸುತ್ತಿಲ್ಲ ಅಂದ್ರೆ ಅದು ಕಾಯಿಲೆ ಲಕ್ಷಣವಲ್ಲ. ಸಂಭೋಗವನ್ನು ಜೀವನ ನಡೆಸಲು ಮುಖ್ಯ ಎಂದು ನೀವು ಭಾವಿಸದೇ ಇರುವುದೇ ಇದಕ್ಕೆ ಕಾರಣವಾಗಿರುತ್ತದೆ. ಆದ್ರೆ ಸೆಕ್ಸ್, ಜೀವನದಲ್ಲಿ ಸಂತೋಷ ತರುವ ಕೆಲಸ ಮಾಡುತ್ತದೆ. ಸಂಭೋಗ ಬೆಳೆಸಿದಾಗ ಸಂತೋಷದ ಹಾರ್ಮೋನ್ ಬಿಡುಗಡೆ ಆಗುತ್ತದೆ. ಅದ್ರಲ್ಲಿ ಡೋಪಮೈನ್ ಕೂಡ ಒಂದು. ನಿಮ್ಮ ದೇಹದಲ್ಲಿ ಡೋಪಮೈನ್ ಬಿಡುಗಡೆಯಾದ ನಂತ್ರ ಮನಸ್ಸು ಹಾಗೂ ದೇಹ ಎರಡೂ ಶಾಂತವಾಗುತ್ತದೆ. ಸಂಗಾತಿ ಮಧ್ಯೆ ಇರುವ ಅಂತರ ಕಡಿಮೆ ಆಗುತ್ತದೆ. ಇಬ್ಬರ ಮಧ್ಯೆ ಪ್ರೀತಿ, ಬಾಂಧವ್ಯ ಹೆಚ್ಚಾಗುವ ಜೊತೆಗೆ ಒತ್ತಡ ಕಡಿಮೆಯಾಗುತ್ತದೆ. ಸಕಾರಾತ್ಮಕ ಬದಲಾವಣೆ ಕಂಡು ಬರುತ್ತದೆ. ದೇಹ ಹಾಗೂ ಮನಸ್ಸು ಎರಡೂ ಆರೋಗ್ಯವಾಗಿರಬೇಕೆಂದ್ರೆ ಲೈಂಗಿಕ ಜೀವನ ಸಕ್ರಿಯವಾಗಿರಬೇಕು. ಸಂಭೋಗದಿಂದ ದೂರ ಇರುವ ದಂಪತಿ ಮಧ್ಯೆ ಸಮಸ್ಯೆ ಕಾಣಿಸಿಕೊಳ್ಳಲು ಶುರುವಾಗುತ್ತದೆ. ಒತ್ತಡ ಇಬ್ಬರು ಬೇರೆಯಾಗಲು ಕಾರಣವಾಗುತ್ತದೆ. ಅದಾಗ್ಬಾರದು ಅಂದ್ರೆ ನಿಮ್ಮ ಸೆಕ್ಸ್ ಜೀವನ ಸಕ್ರಿಯವಾಗಿರಬೇಕು. ಅನೇಕ ಬಾರಿ ಎಷ್ಟೇ ಬಯಸಿದ್ರೂ ಲೈಂಗಿಕ ಜೀವನ ಸರಾಗವಾಗಿ ನಡೆಯೋದಿಲ್ಲ. ಅದಕ್ಕೆ ಕೆಲ ಕಾರಣವಿದೆ.
ನಿಮ್ಮಿಬ್ಬರ ಮಧ್ಯೆ ಸೆಕ್ಸ್ (Sex) ಶೂನ್ಯವಾಗಿದೆ ಅಂದ್ರೆ ಅದಕ್ಕೆ ಇವು ಕಾರಣ :
undefined
ಯೋನಿ (Vaginal) ಶುಷ್ಕತೆ : ವಯಸ್ಸಾದಂತೆ ಮಹಿಳೆಯರಲ್ಲಿ ಯೋನಿ ಶುಷ್ಕತೆಯ ಸಮಸ್ಯೆ ಹೆಚ್ಚಾಗತೊಡಗುತ್ತದೆ. ಯೋನಿ ನೋವು, ಶುಷ್ಕತೆ (dryness) ಕಾರಣಕ್ಕೆ ಕೆಲ ಮಹಿಳೆಯರು ಸಂಭೋಗ ಬೆಳೆಸಲು ಮನಸ್ಸು ಮಾಡುವುದಿಲ್ಲ. ನಿಯಮಿತವಾಗಿ ಸಂಭೋಗ ಬೆಳೆಸುವ ಮಹಿಳೆ ಕಾಮಾಸಕ್ತಿ ಕಳೆದುಕೊಳ್ಳುವುದಿಲ್ಲ. ಯೋನಿ ಶುಷ್ಕತೆ ಸಮಸ್ಯೆ ಕೂಡ ಆಕೆಗೆ ಕಾಡೋದಿಲ್ಲ. ಸೆಕ್ಸ್ ವೇಳೆ ನೋವು ಮತ್ತು ಉರಿ ಕಾಡಬಾರದು ಅಂದ್ರೆ ನಿಯಮಿತವಾಗಿ ಶಾರೀರಿಕ ಸಂಬಂಧ ಬೆಳೆಸಬೇಕು.
Self Love: ನಿಮ್ಮನ್ನು ನೀವು ಪ್ರೀತಿಸುತ್ತಿದ್ರೆ ಈ ಕೆಲಸಗಳಿಂದ ದೂರವಿರಿ!
ಕನೆಕ್ಟಿವಿಟಿ ಸಮಸ್ಯೆ : ಎರಡು ಮನಸ್ಸುಗಳು ಒಂದಾದಾಗ ಮಾತ್ರ ದೇಹ ಒಂದಾಗಲು ಸಾಧ್ಯ. ಮದುವೆಯಾದ ವರ್ಷಗಳ ನಂತರ, ದಂಪತಿಯಲ್ಲಿ ಸಣ್ಣ ಪುಟ್ಟ ವಿವಾದಗಳು ಶುರುವಾಗುತ್ತವೆ. ಇದು ಲೈಂಗಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಪರಸ್ಪರ ನೊಂದುಕೊಳ್ಳುವ ದಂಪತಿ ಸೆಕ್ಸ್ ನಿಂದ ದೂರ ಇರ್ತಾರೆ. ಆದ್ರೆ ಸಂಭೋಗ, ಔಷಧಿಯಿದ್ದಂತೆ. ಫಿಟ್ ಆಗಿ ಮತ್ತು ಆರೋಗ್ಯವಾಗಿಡಲು ಸೆಕ್ಸ್ ಬಹಳ ಮುಖ್ಯ. ಇದು ಒತ್ತಡ ಕಡಿಮೆ ಮಾಡುತ್ತದೆ. ಎಂಡಾರ್ಫಿನ್, ಡೋಪಮೈನ್ ಮತ್ತು ಸಿರೊಟೋನಿನ್ ನಂತಹ ಹಾರ್ಮೋನ್ ಇದ್ರಿಂದ ಬಿಡುಗಡೆಯಾಗುತ್ತದೆ. ಇದು ನಿಮ್ಮ ಆರೋಗ್ಯ ವೃದ್ಧಿಸುತ್ತದೆ.
ಕಡಿಮೆಯಾಗುವ ಲೈಂಗಿಕ ಆಸಕ್ತಿ : ಮಕ್ಕಳಾದ್ಮೇಲೆ ಮಹಿಳೆಯರು ಲೈಂಗಿಕ ಆಸಕ್ತಿಯನ್ನು ಕಳೆದುಕೊಳ್ತಾರೆ. ಸಮಯದ ಅಭಾವ, ಒತ್ತಡ, ಅತಿಯಾದ ಕೆಲಸದಿಂದ ಅವರನ್ನು ಆಸಕ್ತಿ ಕಡಿಮೆಯಾಗುತ್ತದೆ. ಸೆಕ್ಸ್ ಕಡಿಮೆಯಾದಂತೆ ಸೆಕ್ಸ್ ಮೇಲಿನ ಆಸಕ್ತಿ ಕೂಡ ಕಡಿಮೆಯಾಗುತ್ತದೆ. ಅದೇ ನೀವು ನಿಯಮಿತವಾಗಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರೆ ಲೈಂಗಿಕ ಬಯಕೆ ಹೆಚ್ಚುತ್ತದೆ.
ಭಾರತದ ಈ ಗ್ರಾಮದಲ್ಲಿ ಮದುವೆಗೂ ಮುನ್ನ ನೈಟ್ ಕ್ಲಬ್ಬಲ್ಲಿ ದೈಹಿಕ ಸಂಬಂಧ ಬೆಳೆಸ್ಬಹುದು!
ತೃಪ್ತಿ – ಪರಾಕಾಷ್ಠೆ ಕೊರತೆ : ಕೆಲವರು ತಮ್ಮ ಸಂಗಾತಿ ಜೊತೆ ಲೈಂಗಿಕ ಕ್ರಿಯೆ ನಡೆಸಿದಾಗ ತೃಪ್ತರಾಗೋದಿಲ್ಲ. ಪರಾಕಾಷ್ಠೆ ತಲುಪುವುದಿಲ್ಲ. ಪದೇ ಪದೇ ಇದು ಸಂಭವಿಸಿದಾಗ ಅವರು ಲೈಂಗಿಕ ಆಸಕ್ತಿಯನ್ನೇ ಕಳೆದುಕೊಳ್ತಾರೆ. ಸಂಗಾತಿಯಿಂದ ದೂರವಿರಲು ಬಯಸ್ತಾರೆ. ಪುರುಷರಲ್ಲಿ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ, ಅಕಾಲಿಕ ಸ್ಖಲನ ಮತ್ತು ಕಡಿಮೆ ಹಾರ್ಮೋನ್ ಸಮಸ್ಯೆ ಕಾಡಿದ್ರೆ, ಮಹಿಳೆಯರಲ್ಲಿ ಬಿಗಿಯಾದ ಕನ್ಯಾಪೊರೆ, ಶುಷ್ಕ ಯೋನಿ, ಬಯಕೆಯ ಕೊರತೆ ಲೈಂಗಿಕ ಬಯಕೆಯನ್ನು ಕಡಿಮೆ ಮಾಡುತ್ತದೆ. ಈ ಎಲ್ಲಾ ನ್ಯೂನತೆಯಿಂದ ಸಂಗಾತಿಯು ತೃಪ್ತರಾಗುವುದಿಲ್ಲ.
ಸೆಕ್ಸ್ ಕಡಿಮೆಯಾದಂತೆ ದಂಪತಿ ಮಧ್ಯೆ ಭಿನ್ನಾಭಿಪ್ರಾಯ ಮಾತ್ರವಲ್ಲ ರೋಗ ನಿರೋಧಕ ಶಕ್ತಿ ಕಡಿಮೆ ಆಗುವುದು, ಸುಸ್ತು, ಒತ್ತಡ, ಕೆಲಸದಲ್ಲಿ ನಿರಾಸಕ್ತಿ ಸೇರಿದಂತೆ ಅನೇಕ ಸಮಸ್ಯೆ ಕಾಡುತ್ತದೆ.