ರೊಮ್ಯಾಂಟಿಕ್ ಜೀವನವನ್ನೇ ಹಾಳು ಮಾಡುವ ದೋರಣೆ!

By Suvarna NewsFirst Published Jul 22, 2022, 5:29 PM IST
Highlights

ಯೋಚನೆಗಳ ವಿಚಾರಕ್ಕೆ ನೀವು ತೀವ್ರವಾದಿಯಾ? ನಿಮ್ಮದು ಬ್ಲ್ಯಾಕ್ ಅಂಡ್ ವೈಟ್ ಚಿಂತನಾಕ್ರಮವಾ? ಹಾಗಿದ್ದರೆ ಬದಲಿಸಿಕೊಳ್ಳಿ. ಇದರಿಂದ ನಿಮ್ಮ ರೋಮ್ಯಾಂಟಿಕ್ ಲೈಫ್ ದಿಕ್ಕೆಟ್ಟು ಹೋಗುತ್ತದೆ. 
 

ನೀವು ಸದಾಕಾಲ ಸರಿ ಮತ್ತು ತಪ್ಪುಗಳ ನಡುವೆ ಹೊಯ್ದಾಡುತ್ತೀರಾ? “ಒಳ್ಳೆಯದು’ ಮತ್ತು “ಕೆಟ್ಟ’ ಭಾವನೆಗಳ ಹೋರಾಡುತ್ತೀರಾ? ಅಂದರೆ, ನೀವು ಬ್ಲ್ಯಾಕ್ ಅಂಡ್ ವೈಟ್ ಯೋಚನೆಗಳನ್ನು ನಿಮ್ಮದಾಗಿಸಿಕೊಂಡಿದ್ದೀರಿ ಎಂದರ್ಥ. ಅರ್ಥವಾಗಲಿಲ್ವಾ?  ನೀವು ಯಾವತ್ತೂ ನಿಮ್ಮ ನಿಲುವೇ ಸರಿ, ಪ್ರಪಂಚ ಸರಿಯಾಗಿಲ್ಲ ಎನ್ನುವ ಧೋರಣೆ ಹೊಂದಿದ್ದೀರಾ? ಹಾಗೆಯೇ, ಇನ್ನೊಬ್ಬರ ನಿಲುವು ನಿಮಗೆ ಯಾವತ್ತೂ ಸರಿ ಅನ್ನಿಸೋದಿಲ್ವಾ? ಹಾಗಾದ್ರೆ ನೀವು ಬ್ಲ್ಯಾಕ್ ಅಂಡ್ ವೈಟ್ ಯೋಚನೆಗಳನ್ನು ಹೊಂದಿದ್ದೀರಿ ಎಂದರ್ಥ. ಇದು ಪ್ರಪಂಚವನ್ನು ಹೇಗಿದೆಯೋ ಹಾಗೆ ಗ್ರಹಿಸಿಕೊಳ್ಳಲು ಸಾಧ್ಯವಾಗದಿರುವ ಮನೋಸ್ಥಿತಿ ಎನ್ನಬಹುದು. ಜೀವನದಲ್ಲಿ ಬದಲಾವಣೆಗಳು ಸಹಜ ಎನ್ನುವುದನ್ನು ಇಂತಹ ಮನೋಭಾವ ಅರ್ಥೈಸಿಕೊಳ್ಳುವುದಿಲ್ಲ. ಯಾವತ್ತೂ ಒಂದೇ ರೀತಿಯಾಗಿರಬೇಕು ಎಂದು ಬಯಸುತ್ತದೆ. ಒಂದೋ ಸರಿ, ಇಲ್ಲವೇ ತಪ್ಪು ಎನ್ನುವ ಧೋರಣೆ ಸರಿಯಲ್ಲ. ಏಕೆಂದರೆ, ಪರಿಸ್ಥಿತಿ, ಜನ, ಸಾಂಸ್ಕೃತಿಕ ಹಿನ್ನೆಲೆ ಇತ್ಯಾದಿ ಅನೇಕ ಅಂಶಗಳಿಗೆ ತಕ್ಕ ಹಾಗೆ ಈ ಸರಿ, ತಪ್ಪುಗಳು ಬದಲಾಗಬಹುದು. ಆದರೆ, ನೀವು ಮಾತ್ರ ಇದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ನಿಮ್ಮ ಪ್ರಕಾರ, ಜಗತ್ತಿಗೆ ಇರುವುದು ಎರಡೇ ದಾರಿ, ಒಂದು ಸರಿ ಇಲ್ಲವೇ ತಪ್ಪು. 

ಬ್ಲ್ಯಾಕ್ ಅಂಡ್ ವೈಟ್ (Black and White) ಧೋರಣೆ ಮನಸ್ಸಿಗೆ ಸಂಬಂಧಿಸಿದ ಒಂದು ಸಮಸ್ಯೆ (Problem) ಎನ್ನುತ್ತಾರೆ ತಜ್ಞರು. ಇದರಿಂದ ನಿಮ್ಮ ವೈವಾಹಿಕ (Family) ಬದುಕಿನ ಮೇಲೂ ಪರಿಣಾಮಗಳು ಉಂಟಾಗುತ್ತವೆ. ನಿಮ್ಮ ಸಂಗಾತಿ (Partner) ನಿಮ್ಮಿಂದ ಬಸವಳಿದು ಹೋಗುತ್ತಾರೆ.  ನಿಮ್ಮ ತೀವ್ರವಾದ ಭಾವನೆಗಳಿಂದಾಗಿ ಮೊದಲಿಗೆ ಸಮಸ್ಯೆ ಶುರುವಾಗುವುದೇ ಅವರಿಗೆ. ನಿಮ್ಮ ಯೋಚನೆಗಳು ಸಂಗಾತಿ ಹಾಗೂ ನಿಮ್ಮ ಸಂಬಂಧದ ಮೇಲೆ ಭಾರೀ ಪರಿಣಾಮ ಬೀರುತ್ತವೆ. ನೀವು ಸಹ ಈ ಧೋರಣೆ ಹೊಂದಿದ್ದರೆ ಕಷ್ಟಪಟ್ಟಾದರೂ ಬದಲಿಸಿಕೊಳ್ಳಿ. ಇಲ್ಲವಾದಲ್ಲಿ ರೋಮ್ಯಾಂಟಿಕ್ (Romantic) ಬದುಕು ಕ್ರಮೇಣ ನಾಶವಾಗುತ್ತದೆ. 

•    ನಿಮ್ಮಲ್ಲಿವೆಯೇ ವಿವೇಚನೆ (Irrational) ಇಲ್ಲದ ನಿರೀಕ್ಷೆಗಳು?
ಬ್ಲ್ಯಾಕ್ ಅಂಡ್ ವೈಟ್ ಯೋಚನಾ ವಿಧಾನ ಹೊಂದಿರುವವರು ತಮ್ಮ ಸಂಗಾತಿಯಿಂದ ತರ್ಕರಹಿತ ನಿರೀಕ್ಷೆಗಳನ್ನು (Expectations) ಮಾಡುವುದು ಹೆಚ್ಚು. ಹಾಗೆಯೇ, ಅವರ ಅಗತ್ಯಗಳು ಸಂಗಾತಿಯಿಂದ ಪೂರೈಕೆಯಾಗಬೇಕು. ವಿವೇಚನೆರಹಿತವಾಗಿರುವ ನಿರೀಕ್ಷೆಗಳಿಂದ ಪರಸ್ಪರ ಬೇಸರಕ್ಕೆ ಕಾರಣವಾಗುವ ಸನ್ನಿವೇಶಗಳು ಹೆಚ್ಚಾಗುತ್ತವೆ. ಸಂಗಾತಿಯ ಸ್ವಾತಂತ್ರ್ಯವನ್ನು (Freedom) ನಿರ್ಬಂಧಿಸುವ ಮಟ್ಟಿಗೂ ಇದು ಹೋಗಬಹುದು.

ಜೊತೆಯಾಗಿ ವೃದ್ಧ ದಂಪತಿ ಸಾಗುವ ವೀಡಿಯೋ ವೈರಲ್

•    ಸಂಬಂಧದಲ್ಲಿ ಹುರುಳಿಲ್ಲ ಎಂದು ಭಾಸವಾಗುವುದು
ನೀವು ಜೀವನದ ಋಣಾತ್ಮಕ (Negative) ಭಾಗವನ್ನಷ್ಟೇ ನೋಡುತ್ತ ನಿಮ್ಮ ಸಂಬಂಧವನ್ನು (Relation) ಹಗುರಾಗಿಸಬಹುದು. ಸಂಗಾತಿಯ ಕುರಿತು ಕೇವಲ ಟೀಕೆ ಮಾಡಬಹುದು. ಸಂಗಾತಿಯನ್ನು ದೋಷರಹಿತರನ್ನಾಗಿ ನೋಡುವುದು ನಿಮ್ಮಂದ ಸಾಧ್ಯವೇ ಆಗದಿರಬಹುದು. ಅವರಲ್ಲಿರುವ ದೋಷಗಳೇ (Weakness) ಪ್ರಧಾನವಾಗಿ ಕಂಡು ಟೀಕಿಸಬಹುದು. 

•    ನಿಮ್ಮ ಸಂಗಾತಿಗೆ ಕಾವಲಿ ಮೇಲೆ ಕೂತ ಅನುಭವ
ಸಂಗಾತಿ ಏನು ಮಾಡಿದರೂ ತಪ್ಪು ಹುಡುಕುವವರಿದ್ದಾರೆ. ಅವರು ಏನು ಮಾಡಿದರೂ ಒಂದೋ ಒಳ್ಳೆಯದು, ಇಲ್ಲವೇ ಕೆಟ್ಟದ್ದು ಎಂದು ಪರಿಭಾವಿಸುತ್ತಾರೆ. ಯಾವುದಾದರೂ ವಿಚಾರದ ಬಗ್ಗೆ ಅವರೊಂದಿಗೆ ಚರ್ಚೆ ಮಾಡಲು ಆರಂಭಿಸುವ ಮುನ್ನವೇ ನಿಮ್ಮಲ್ಲಿ ಅಭಿಪ್ರಾಯ ರೂಪುಗೊಂಡಿರುತ್ತದೆ. ಕ್ರಮೇಣ ಸಂಗಾತಿಯನ್ನು ಅತಿಯಾಗಿ ಟೀಕಿಸಬಹುದು, ಕಟುವಾಗಿ ಜಡ್ಜ್ (Judge) ಮಾಡಬಹುದು. ಹೀಗೆ ಮಾಡುತ್ತ ಹೋದಂತೆ ಅವರು ನಿಮ್ಮಿಂದ ವಸ್ತುಸ್ಥಿತಿಯನ್ನು ಮುಚ್ಚಿಡುತ್ತಾರೆ.  ಪಾರದರ್ಶಕವಾಗಿರುವುದಿಲ್ಲ, ನೀವು ಅವರ ನೈತಿಕ ಬೆಂಬಲಕ್ಕೆ ನಿಲ್ಲುವ ಕುರಿತು ನಿಮ್ಮನ್ನು ನಂಬುವುದಿಲ್ಲ. ಈ ಮೂಲಕ, ಉತ್ತಮ ಸಂಬಂಧಕ್ಕೆ ಮೂಲವಾಗಿ ಬೇಕಾಗಿರುವುದನ್ನೇ ಕಳೆದುಕೊಳ್ಳುತ್ತೀರಿ.  

ಬಾಂಧವ್ಯ ಮಧುರವಾಗಿರಲಿ ಇಳ್ಲಿವೆ ಸಿಂಪಲ್ ಟಿಪ್ಸ್

•    ಸಂಬಂಧದಲ್ಲಿ ದುಡುಕುವ ಪ್ರವೃತ್ತಿ (Impulsive) 
ದುಡುಕುತನವನ್ನು ನಿಯಂತ್ರಿಸಿಕೊಂಡು ವಿವೇಚನೆಯಿಂದ ವರ್ತಿಸುವುದರಲ್ಲೇ ಮನುಷ್ಯನ ಸಾಮರ್ಥ್ಯ ಅಡಗಿದೆ. ಆದರೆ, ಹಾಗೆ ಮಾಡದರೆ ಹೇಗೆಂದರೆ ಹಾಗೆ ವರ್ತಿಸುವುದು, ದುಡುಕುವುದು, ಪದೇ ಪದೆ ರಗಳೆ ಮಾಡಿಕೊಳ್ಳುವುದರಿಂದ ಸಂಗಾತಿ ನಿಮ್ಮ ಬಗ್ಗೆ ಬೇಸತ್ತು ಹೋಗುತ್ತಾರೆ. ನಿಮ್ಮ ರೋಮ್ಯಾಂಟಿಕ್ ಬದುಕಿಗೆ ಧಕ್ಕೆಯಾಗುತ್ತದೆ. 
 

click me!