ಲೈಂಗಿಕ ಸುರಕ್ಷತೆಗಲ್ಲ, ನಶೆಗೆ ! ಬೇಕಾಬಿಟ್ಟಿ ಕಾಂಡೋಮ್ ಖರೀದಿಸ್ತಿರೋ ಯುವಕರು ಮಾಡ್ತಿರೋದೇನು ?

By Suvarna NewsFirst Published Jul 22, 2022, 4:58 PM IST
Highlights

ಕಾಂಡೋಮ್‌ಗಳನ್ನು ಸಾಮಾನ್ಯವಾಗಿ ಲೈಂಗಿಕ ಸುರಕ್ಷತೆಯ ದೃಷ್ಟಿಯಿಂದ ಬಳಸಲಾಗುತ್ತದೆ. ಆದ್ರೆ ಪಶ್ಚಿಮಬಂಗಾಳದ ದುರ್ಗಾಪುರದಲ್ಲಿ ನೆಲೆಸಿರುವ ಯುವಕರು ವಿಚಿತ್ರ ವ್ಯಸನಕ್ಕೆ ಬಿದ್ದಿದ್ದಾರೆ.  ಸುವಾಸನೆ ಭರಿತ ಕಾಂಡೋಮ್​ಗಳ ನೀರನ್ನು ಸೇವಿಸುವ ಆ ಒಂದು ಯುವ ವರ್ಗ ಮಾದಕತೆಯನ್ನು ಅನುಭವಿಸುತ್ತಿದ್ದಾರೆ.

ಲೈಂಗಿಕ ಸುರಕ್ಷತೆಯ ದೃಷ್ಟಿಯಿಂದ ಬಳಸುವ ಕಾಂಡೋಮ್‌ನ್ನು ಜನರನ್ನು ಆಕರ್ಷಿಸುವ ಉದ್ದೇಶದಿಂದ ನಾನಾ ರೀತಿಯ ಸುವಾಸನೆ ಸೇರಿಸಿ ತಯಾರಿಸಲಾಗುತ್ತದೆ. ಈ ಪರಿಮಳದಿಂದಾಗಿಯೇ ಯುವಜನತೆ ಕಾಂಡೋಮ್​ಗಳನ್ನು ದುರ್ಬಳಕೆ ಮಾಡತೊಡಗಿದ್ದಾರೆ. ಸುವಾಸನೆ ಬೀರುವ ಕಾಂಡೋಮ್‌ಗಳಿಂದ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಯುವಕರು ಕಾಂಡೋಮ್‌ನ್ನು ನೀರನ್ನು ಕುಡಿಯುವ ಚಟವನ್ನು ಬೆಳೆಸಿಕೊಂಡಿದ್ದಾರೆ. ಪಶ್ಚಿಮಬಂಗಾಳದಲ್ಲಿ ಸುವಾಸನೆ ಬೀರುವ ಕಾಂಡೋಮ್​ಗಳಿಗೆ ಇದ್ದಕ್ಕಿಂದ್ದಂತೆ ಭಾರೀ ಬೇಡಿಕೆ ವ್ಯಕ್ತವಾಗಿದೆ. 

ಬೇಕಾಬಿಟ್ಟಿ ಸುವಾಸನೆಭರಿತ ಕಾಂಡೋಮ್ ಖರೀದಿಸುತ್ತಿರುವ ಯುವಜನತೆ
ಬಿಧಾನನಗರ ಪ್ರದೇಶದಲ್ಲಿ ದುರ್ಗಾಪುರದ ಸಿಟಿ ಸೆಂಟರ್​ನಲ್ಲಿ ಇದ್ದಕ್ಕಿದ್ದಂತೆ ಸುವಾಸನೆಯ ಕಾಂಡೋಮ್​ಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗಿತ್ತು. ಕಳೆದ ಕೆಲವು ದಿನಗಳಲ್ಲಿ ದುರ್ಗಾಪುರದ ವಿವಿಧ ಭಾಗಗಳಾದ ದುರ್ಗಾಪುರ ಸಿಟಿ ಸೆಂಟರ್, ಬಿಧಾನನಗರ, ಬೆನಚಿಟಿ ಮತ್ತು ಮುಚಿಪಾರ, ಸಿ ವಲಯ, ಎ ವಲಯಗಳಲ್ಲಿ ಸುವಾಸನೆಯ ಕಾಂಡೋಮ್‌ಗಳ ಮಾರಾಟವು ತೀವ್ರವಾಗಿ ಹೆಚ್ಚಾಗಿದೆ.  ಆದರೆ ಹಿಂದಿರುವ ವಿಚಿತ್ರ ಕಾರಣ ಯಾರಿಗೂ ಅರ್ಥವಾಗಿರಲ್ಲಿಲ್ಲ. ಇಂತಹ ಕಾಂಡೋಮ್​ಗಳನ್ನು ವಯಸ್ಕರು ಮಾತ್ರವಲ್ಲ ಸಣ್ಣ ಹುಡುಗರು, ಕಾಲೇಜು ವಿದ್ಯಾರ್ಥಿಗಳು, ಕಾಲೇಜ್ ಮುಗಿಸಿ ಕೆಲಸ ಹುಡುಕುತ್ತಿರುವ ಹಾಗೂ ಒಂಟಿಯಾಗಿರುವವರೇ ಹೆಚ್ಚು ಖರೀದಿಸುತ್ತಿದ್ದರು.

ಹಸ್ತಮೈಥುನ ಸುಖ ಸಂಸಾರಕ್ಕೆ ಅಡ್ಡಿಯೇ? ಅಯ್ಯೋ ಎಷ್ಟೊಂದು ಮಿಥ್ಸ್!

ಒಂದೊಮ್ಮೆ ಅಂಗಡಿ ಮಾಲೀಕನಿಗೆ ಕಾಂಡೋಮ್​ ಖರೀದಿ ನೋಡಿ ಕುತೂಹಲಗೊಂಡು ಯುವಕ (Youth) ನೋರ್ವನಲ್ಲಿ ಕೇಳಿಯೇ ಬಿಟ್ಟಿದ್ದಾರೆ. ಇದಕ್ಕೆ ಯುವಕ ಕೊಟ್ಟ ಉತ್ತರ ನೋಡಿ ಮಾಲೀಕರು ದಂಗಾಗಿದ್ದಾರೆ. ಅಷ್ಟಕ್ಕೂ ಯುವಕ, ತಾನು ಕಾಂಡೋಮ್​ಗಳ ನೀರನ್ನು ನಿಯಮಿತವಾಗಿ ಕುಡಿಯುತ್ತೇನೆ ಎಂದು ಹೇಳಿದ್ದಾನೆ.

ಕಾಂಡೋಮ್‌ನ್ನು ಬಿಸಿನೀರಲ್ಲಿ ನೆನೆಸಿಟ್ಟು ನೀರು ಕುಡೀತಾರೆ !
ದುರ್ಗಾಪುರದ ಜನರು ಯುವಜನತೆಯ ಹೊಸ ವ್ಯಸನದ ಬಗ್ಗೆ ತಿಳಿದುಕೊಂಡ ನಂತರ ದಿಗ್ಭ್ರಮೆಗೊಂಡಿದ್ದಾರೆ. ದುರ್ಗಾಪುರ ವಿಭಾಗೀಯ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಧೀಮನ್ ಮಂಡಲ್ ಅವರು ಕಾಂಡೋಮ್‌ ಕುರಿತ ಜನರ ವಿಲಕ್ಷಣ ಆಕರ್ಷಣೆಗೆ ಪ್ರತಿಕ್ರಿಯಿಸಿದರು. ಕಾಂಡೋಮ್ಗಳು ಆರೊಮ್ಯಾಟಿಕ್ ಸಂಯುಕ್ತಗಳನ್ನು ಹೊಂದಿರುತ್ತವೆ. ಅದು ಮದ್ಯವನ್ನು ರೂಪಿಸುತ್ತದೆ. ಇದು ವ್ಯಸನಕಾರಿಯೂ ಆಗಿದೆ. ಈ ಆರೊಮ್ಯಾಟಿಕ್ ಸಂಯುಕ್ತವು ಡೆಂಡ್ರೈಟ್ ಅಂಟುಗಳಲ್ಲಿಯೂ ಕಂಡುಬರುತ್ತದೆ. ಆದ್ದರಿಂದ ಅನೇಕ ಜನರು ವ್ಯಸನಕ್ಕಾಗಿ ಡೆಂಡ್ರೈಟ್ ಅನ್ನು ಬಳಸುತ್ತಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನು ಮತ್ತಷ್ಟು ವಿಶ್ಲೇಷಿಸಿದ ದುರ್ಗಾಪುರ ಆರ್‌ಇ ಕಾಲೇಜು ಮಾದರಿ ಶಾಲೆಯ ರಸಾಯನಶಾಸ್ತ್ರ ಶಿಕ್ಷಕ ನೂರುಲ್ ಹಕ್, 'ಕಾಂಡೋಮ್‌ಗಳನ್ನು ಬಿಸಿ ನೀರಿನಲ್ಲಿ ದೀರ್ಘಕಾಲ ನೆನೆಸುವುದರಿಂದ ದೊಡ್ಡ ಸಾವಯವ ಅಣುಗಳು ಅಲ್ಕೋಹಾಲ್‌ಯುಕ್ತ ಸಂಯುಕ್ತಗಳಾಗಿ ವಿಭಜನೆಯಾಗುವುದರಿಂದ ಮಾದಕತೆ ಉಂಟಾಗುತ್ತದೆ. ಎಂದು ಹೇಳಿದರು.

ದುರ್ಗಾಪುರದ ಮೆಡಿಕಲ್ ಶಾಪ್‌ನ ವ್ಯಾಪಾರಿಗಳು, 'ಹಿಂದೆ ದಿನಕ್ಕೆ 3 ರಿಂದ 4 ಕಾಂಡೋಮ್‌ಗಳ ಪ್ಯಾಕೆಟ್‌ಗಳನ್ನು ಪ್ರತಿ ಅಂಗಡಿಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಮತ್ತು ಈಗ ಅಂಗಡಿಯಿಂದ ಕಾಂಡೋಮ್‌ಗಳ ಪ್ಯಾಕ್ (Pack) ಕಣ್ಮರೆಯಾಗುತ್ತಿದೆ' ಎಂದಿದ್ದಾರೆ. 21 ನೇ ಶತಮಾನದ ಮಧ್ಯಭಾಗದಲ್ಲಿ ಕೇವಲ ಚಟದಿಂದಾಗಿ, ನೈಜೀರಿಯಾದಲ್ಲಿ ಟೂತ್‌ಪೇಸ್ಟ್ ಮತ್ತು ಶೂ ಇಂಕ್ ಮಾರಾಟವು ಒಮ್ಮೆ ಸಾಮಾನ್ಯಕ್ಕಿಂತ 6 ಪಟ್ಟು ಹೆಚ್ಚಾಗಿತ್ತು. ಸದ್ಯ ದುರ್ಗಾಪುರದಲ್ಲಿ ಕಾಂಡೋಮ್‌ಗಳು ಏಕಾಏಕಿ ಬೇಡಿಕೆ ಪಡೆದುಕೊಂಡಿವೆ. ಇದು ಯುವಜನತೆಯಲ್ಲಿ ಜಗಳ, ಹೊಡೆದಾಟಕ್ಕೆ ಕಾರಣವಾಗಬಹುದೆಂಬ ಆತಂಕ ವ್ಯಕ್ತವಾಗಿದೆ. 

Love at First Sight ಆದರೂ ಮೊದಲ ಭೇಟಿಯಲ್ಲೇ ಫಸ್ಟ್ ನೈಟ್ ಮಾಡೋಣಾ ಅನ್ನೋದಾ?

ಕಾಂಡೋಮ್ ಪಡೆಯೋಕೆ ಇದೆ ಸೀಕ್ರೆಟ್ ಐಡಿ
ಕಾಂಡೋಮ್ ಅನ್ನು ನೀರಿನಲ್ಲಿ ಏಳೆಂಟು ಗಂಟೆಗಳ ಕಾಲ ನೆನೆಸಿದ ನಂತರ ಆ ನೀರನ್ನು ಕುಡಿದರೆ ನಶೆ ಬರುತ್ತದೆ. ಇದನ್ನು ಕೇಳಿ ನನಗೆ ಆಶ್ಚರ್ಯವಾಯಿತು. ನಂತರ ಘಟನೆ ನಿಜ ಎಂದು ಗೊತ್ತಾಯಿತು  ಎಂದು ನಗರದ ಮಧ್ಯಭಾಗದಲ್ಲಿರುವ ಅಂಗಡಿಯವರೊಬ್ಬರು ಹೇಳಿದರು. ದುರ್ಗಾಪುರದ ಕಾಲೇಜೊಂದರ ಹುಡುಗರಲ್ಲಿ ಈ ಕಾಂಡೋಮ್​ಗಳನ್ನು ಖರೀದಿಸಲು ಕೋಡ್ ವರ್ಡ್ ಕೂಡ ಇದೆ. ಮೂಲತಃ ಆ ಕೋಡ್ ವರ್ಡ್ ನಗರ ಕೇಂದ್ರದಲ್ಲಿರುವ ಒಂದು ನಿರ್ದಿಷ್ಟ ಅಂಗಡಿಯಲ್ಲಿ ಚಾಲನೆಯಲ್ಲಿದೆ ಎಂದು ಅಂಗಡಿ ಮಾಲೀಕ ಸುಜೋಯ್ ಪೊದ್ದಾರ್ ಹೇಳಿದರು.

ಕಾಲೇಜು ಹುಡುಗನೊಬ್ಬ ಮಾಲೀಕ ಸುಜೋಯ್ ಪೊದ್ದಾರ್ ಅವರ ಅಂಗಡಿಗೆ ಬಂದು ಐಡಿ ಎಂದು ಹೇಳುತ್ತಾನೆ. ಈ ವೇಳೆ ಸುಜೋಯ್ ಅಚ್ಚರಿಗೊಂಡಿದ್ದಲ್ಲದೆ, ನನ್ನ ಬಳಿ ಅಂತಹದ್ದು ಯಾವುದು ಇಲ್ಲ ಎಂದು ಹೇಳಿದ್ದಾರೆ. ಆಗ ಕಾಲೇಜು ವಿದ್ಯಾರ್ಥಿ ಐಡಿ ಎಂಬ ಪದ ಕೋಡ್ ವರ್ಡ್ ಬಗ್ಗೆ ಸಂಪೂರ್ಣವಾಗಿ ವಿವರಿಸುತ್ತಾನೆ. ನಂತರ ಅಂಗಡಿ ಮಾಲೀಕರಿಗೆ ಕಾಂಡೋಮ್​ನಿಂದ ಮಾದಕ ದ್ರವ್ಯ ಸೇವಿಸುತ್ತಿರುವ ಬಗ್ಗೆ ತಿಳಿದು ಬರುತ್ತದೆ. 

click me!