ಗಂಡ ಲಿಪ್‌ಸ್ಟಿಕ್‌ ಹಚ್ಕೊಂಡು, ಮಹಿಳೆಯರ ಒಳಉಡುಪು ಧರಿಸಿ ಮಲಗ್ತಾನೆ: ಪತ್ನಿಯಿಂದ ದೂರು

By Kannadaprabha News  |  First Published Apr 2, 2023, 8:25 AM IST

ಗಂಡ ಕನ್ನಡಿಯ ಮುಂದೆ ನಿಂತುಕೊಂಡು ತುಟಿಗೆ ಬಣ್ಣ ಹಾಕಿಕೊಂಡು, ನನ್ನ ಒಳ ಉಡುಪು ಧರಿಸಿಕೊಂಡು ವಿಚಿತ್ರವಾಗಿ ವರ್ತಿಸುತ್ತಾನೆ. ಇದನ್ನು ಪ್ರಶ್ನಿಸಿದ್ದಕ್ಕೆ ಅತ್ತೆ-ಮಾವ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ.


ನನ್ನ ಪತಿ ತುಟಿಗಳಿಗೆ ಲಿಪ್‌ಸ್ಟಿಕ್‌ ಬಳಿದುಕೊಳ್ಳುತ್ತಾರೆ. ಹೆಣ್ಣು ಮಕ್ಕಳ ಒಳ ಉಡುಪು ಧರಿಸಿ ರಾತ್ರಿ ಮಲಗುತ್ತಾರೆ. ಈ ವಿಚಿತ್ರ ವರ್ತನೆ ವಿರೋಧಿಸಿದ್ದಕ್ಕೆ ತನಗೆ ಮಾವನ ಮನೆಯವರು ಕಿರುಕುಳ ಕೊಡುತ್ತಿದ್ದಾರೆ ಎಂದು ಆರೋಪಿಸಿ 26 ವರ್ಷದ ಮಹಿಳೆಯೊಬ್ಬರು ಕುಮಾರಸ್ವಾಮಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಸಂತ್ರಸ್ತೆ ದೂರಿನ ಮೇರೆಗೆ ಕುಮಾರಸ್ವಾಮಿ ಲೇಔಟ್‌ ಠಾಣೆಯಲ್ಲಿ ಆಕೆಯ ಪತಿ, ಅತ್ತೆ ಹಾಗೂ ಮಾವನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ಎಫ್‌ಐಆರ್‌ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಲಿಪ್‌ಸ್ಟಿಕ್ ಹಚ್ಚಿಕೊಂಡು ವಿಚಿತ್ರವಾಗಿ ವರ್ತಿಸುವ ಪತಿ
ಎರಡು ವರ್ಷಗಳ ಹಿಂದೆ ಮ್ಯಾಟ್ರಿಮೋನಿಯಲ್‌ ಮೂಲಕ ಪರಿಚಿತರಾದ ಎಂಟೆಕ್‌ ಪದವೀಧರ ಖಾಸಗಿ ಕಂಪನಿ ಉದ್ಯೋಗಿ (Employee) ಜತೆ ವಿವಾಹವಾಯಿತು. ಮದುವೆ (Marriage)ಯಲ್ಲಿ 800 ಗ್ರಾಂ ಚಿನ್ನ, 1 ಕೇಜಿ ಬೆಳ್ಳಿ, .5 ಲಕ್ಷ ನಗದು ನೀಡಿದ್ದರು. ಪ್ರಸ್ತದ ದಿನ ನನ್ನ ಗಂಡ ಕನ್ನಡಿಯ ಮುಂದೆ ನಿಂತುಕೊಂಡು ತುಟಿಗೆ ಬಣ್ಣ ಹಾಕಿಕೊಂಡು, ನನ್ನ ಒಳ ಉಡುಪು (Undergarments) ಧರಿಸಿಕೊಂಡು ವಿಚಿತ್ರವಾಗಿ ವರ್ತಿಸುತ್ತಿದ್ದ. ಈ ಬಗ್ಗೆ ಕೇಳಿದ್ದಕ್ಕೆ ನನಗೆ ಗಂಡಸರೆಂದರೆ ತುಂಬಾ ಇಷ್ಟವೆಂದು ಹೇಳಿದ್ದ. ಮತ್ತೆ ಪ್ರಶ್ನಿಸಿದಾಗ ಗಲಾಟೆ ಮಾಡಿ ರೂಮ್‌ನಲ್ಲಿ ಕೂಡಿ ಹಾಕಿದ್ದರು. ಪ್ರತಿ ದಿನ ನನ್ನ ಗಂಡ (Husband), ಅತ್ತೆ ಹಾಗೂ ಮಾವ ಊಟ ನೀಡದೆ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕುತ್ತಿದ್ದರು ಎಂದು ದೂರಿನಲ್ಲಿ ಸಂತ್ರಸ್ತೆ ವಿವರಿಸಿದ್ದಾರೆ.

Latest Videos

undefined

ಹಗಲಲ್ಲಿ ನ್ಯಾಯಾಧೀಶ..ರಾತ್ರಿಯಾದ್ರೆ ಪೋರ್ನ್‌ ಸ್ಟಾರ್‌, ಸೆಕ್ಸ್‌ ಫಿಲ್ಮ್‌ನಲ್ಲಿ ನಟಿಸುತ್ತಿದ್ದ ಜಡ್ಜ್‌ ವಜಾ!

ಹೆಣ್ಣು ಮಕ್ಕಳ ಒಳ ಉಡುಪುಗಳನ್ನು ಧರಿಸಿ ಮಲಗುವ ಗಂಡ
ಗಂಡ ನನ್ನ ಹೆಸರಿನಲ್ಲಿ ಆನ್‌ಲೈನ್‌ನಲ್ಲಿ ಹೆಣ್ಣು ಮಕ್ಕಳು ಧರಿಸುವ ಒಳ ಉಡುಪುಗಳನ್ನು ತರಿಸಿಕೊಂಡು ಬಳಿಕ ಅವುಗಳನ್ನು ರಾತ್ರಿ ವೇಳೆ ಧರಿಸಿ ಮಲಗುತ್ತಿದ್ದರು. ಈ ವಿಚಿತ್ರ ವರ್ತನೆ (Weird behaviour) ಬಗ್ಗೆ ವೈದ್ಯರ ಬಳಿ ಚಿಕಿತ್ಸೆ ನೀಡಲು ತವರು ಮನೆಯಿಂದ .10 ಲಕ್ಷ ತರುವಂತೆ ಅತ್ತೆ ಮಾವ ಒತ್ತಾಯಿಸಿದ್ದರು. ಈ ಕಿರುಕುಳ ತಾಳಲಾರದೆ ತವರು ಮನೆಗೆ ಹೋಗಿದ್ದೆ.

ನಂತರ ನಾನು ಕಾಲೇಜಿಗೆ ಸೇರಿದ್ದೇನೆ. ಈಗ ನನ್ನ ಕಾಲೇಜು ಹಾಗೂ ನನ್ನ ಸಂಬಂಧಿಕರ ಮನೆ ಬಳಿ ಬಂದು ಪತಿ ಗಲಾಟೆ ಮಾಡುತ್ತಿದ್ದಾರೆ. ವಿಚಿತ್ರ ವರ್ತನೆಯನ್ನು ಮುಚ್ಚಿಟ್ಟು ಮದುವೆ ಮಾಡಿದ್ದಲ್ಲದೆ ಆಸ್ತಿ ಹಾಗೂ ಹಣಕ್ಕೆ ತೊಂದರೆ ಕೊಡುತ್ತಿರುವ ನನ್ನ ಗಂಡ, ಅತ್ತೆ ಹಾಗೂ ಮಾವನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಂತ್ರಸ್ತೆ ಮನವಿ ಮಾಡಿದ್ದಾರೆ.

ಡ್ಯಾನ್ಸ್ ಮಾಡೋಕೆ ವಧುವಿನ ಕೈ ಹಿಡಿದು ಎಳೆದ ವರನ ಸ್ನೇಹಿತ, ಮದ್ವೆ ಕ್ಯಾನ್ಸಲ್!

ಗಂಡ ಬೇರೆಯವಳ ಜೊತೆ ಮಲಗೋಕೆ ಹೆಂಡ್ತೀನೆ ಟೈಂ ಕೊಡ್ತಾಳೆ!
ಮೋನಿಕಾ ಹಲ್ಟ್ ಎಂಬ ಅಮೇರಿಕನ್ ಮಹಿಳೆ (Women) ಹೀಗೆ ತನ್ನ ಗಂಡ ಯಾರ ಜೊತೆ ಸುತ್ತಾಡಿದ್ರೂ, ಮಲಗಿದ್ರೂ ನನಗೇನು ಸಮಸ್ಯೆಯಾಗಲ್ಲ ಅಂತ ಹೇಳುತ್ತಾಳೆ. ತನ್ನ ಪುರುಷನ ಅಗತ್ಯತೆಗಳು ಏನೇ ಇರಲಿ ಅವನನ್ನು ಸಂತೋಷಪಡಿಸುವುದು ತನ್ನ ಕರ್ತವ್ಯ ಎಂದು ಮಹಿಳೆ ನಂಬುತ್ತಾಳೆ. ನ್ಯೂಯಾರ್ಕ್ ಪೋಸ್ಟ್‌ ಜೊತೆ ಮಾತನಾಡಿದ ಮೋನಿಕಾ, ಪತಿ (Husband) ಜಾನ್ ಅನ್ನು ಸಂತೋಷಪಡಿಸುವುದು ಹೆಂಡತಿಯಾಗಿ (Wife) ತನ್ನ ಪ್ರಾಥಮಿಕ ಗುರಿಯಾಗಿದೆ. ತನ್ನ ಪತಿಗೆ ಇತರ ಮಹಿಳೆಯರೊಂದಿಗೆ ಮಲಗಲು ಅವಕಾಶ ನೀಡುವುದು ಅವರ ಸಂಬಂಧಕ್ಕೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ಮೋನಿಕಾ ಹಲ್ಟ್, ಅಡುಗೆ ಮನೆ (Kitchen), ಸ್ವಚ್ಛಗೊಳಿಸುವ ಮತ್ತು ಮನೆಕೆಲಸಗಳನ್ನು ನೋಡಿಕೊಳ್ಳುವಾಗ, ತನ್ನ ಪತಿಯನ್ನು ಇತರ ಮಹಿಳೆಯರೊಂದಿಗೆ ಸಮಯ ಕಳೆಯಲು ಕಳುಹಿಸುತ್ತಾಳೆ. ತನ್ನ ಪತಿಗೆ ಕೆಲಸದ ನಡುವೆ ಬಿಡುವಿನ ವೇಳೆಯನ್ನು ಹುಡುಕುವುದು ಕಷ್ಟಕರವಾದ ಕಾರಣ ತಾನು ಇದನ್ನು ಮಾಡಲು ಪ್ರಾರಂಭಿಸಿದೆ ಎಂದು ಗೃಹಿಣಿ ಹೇಳಿಕೊಂಡಿದ್ದಾಳೆ. ಹಲ್ಟ್ ಮನೆಯಲ್ಲಿ ಎಲ್ಲಾ ಕೆಲಸಗಳನ್ನು ಮುಗಿಸಿದ ನಂತರ ಮಾತ್ರ ಜಾನ್ ಮನೆಗೆ ಹಿಂದಿರುಗುತ್ತಾನೆ.

click me!