Bedroom Secrets: ನನ್ನ ಒಳ ಉಡುಪು ಪತಿ ಧರಿಸ್ತಾನೆ.. ಏನ್ ಮಾಡೋದು?

By Suvarna News  |  First Published Oct 19, 2022, 2:39 PM IST

ಬೆಡ್ ರೂಮಿನಲ್ಲಿ ಸಂಗಾತಿ ಬಣ್ಣ ಬಯಲಾಗುತ್ತದೆ. ಎಲ್ಲರ ಮುಂದೆ ಶಿಸ್ತಿನಿಂದಿರುವ ಪತಿ, ಬೆಡ್ ರೂಮಿಗೆ ಬರ್ತಿದ್ದಂತೆ ಪತ್ನಿ ಬ್ರಾ ಧರಿಸಿದ್ರೆ ಹೇಗಾಗಬೇಡ? ಗೊಂದಲದಲ್ಲಿರುವ ಪತ್ನಿ ಪ್ರಶ್ನೆಗೆ ಉತ್ತರ ಸಿಗದೆ ಒದ್ದಾಡ್ತಿದ್ದಾಳೆ. 
 


ಬೆಡ್ ರೂಮಿನಲ್ಲಿ ಅನೇಕ ಗುಟ್ಟುಗಳಿರುತ್ತವೆ. ಅದು ಗುಟ್ಟಾಗಿದ್ರೆ ಚೆಂದ. ಆದ್ರೆ ಕೆಲವು ಬಾರಿ ಸಂಗಾತಿ ವರ್ತನೆ ತೀರಾ ವಿಚಿತ್ರವೆನ್ನಿಸುತ್ತದೆ. ಅದನ್ನು ಸಂಗಾತಿ ಬಳಿ ಹೇಳಿಕೊಳ್ಳಲೂ ಸಾಧ್ಯವಾಗುವುದಿಲ್ಲ. ಆಗ ಆಪ್ತರ ಜೊತೆ ಇದ್ರ ಬಗ್ಗೆ ಚರ್ಚೆ ನಡೆಸುವುದು ಅನಿವಾರ್ಯವಾಗುತ್ತದೆ. ಸಂಗಾತಿ ವರ್ತನೆ ನಾವು ಬಯಸಿದಂತೆ ಇರಬೇಕೆಂದೇನೂ ಇಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಗುಣ, ಸ್ವಭಾವವನ್ನು ಹೊಂದಿರುತ್ತಾನೆ. ಬೆಡ್ ರೂಮಿನಲ್ಲಿ ಬೆತ್ತಲಾಗಿರುವುದು ಕೆಲವರಿಗೆ ಇಷ್ಟವಾಗುತ್ತದೆ. ಮತ್ತೆ ಕೆಲವರು ಬರೀ ಒಳ ಉಡುಪು ಧರಿಸಿರುತ್ತಾರೆ. ಇನ್ನು ಕೆಲವರು ಬಟ್ಟೆಗಳನ್ನು ನೀಟಾಗಿ ಜೋಡಿಸಿಟ್ಟಿದ್ದರೆ ಮತ್ತೆ ಕೆಲವರು ಚಲ್ಲಾಪಿಲ್ಲಿಯಾದ ಬಟ್ಟೆ ಮಧ್ಯೆ ಮಲಗಲು ಇಷ್ಟಪಡ್ತಾರೆ. ಇದನ್ನೆಲ್ಲ ಸಹಿಸಿಕೊಳ್ಳಬಹುದು. ಆದ್ರೆ ಪತಿಯಾದವನು ಪತ್ನಿ ಒಳ ಉಡುಪು ಧರಿಸಲು ಶುರು ಮಾಡಿದ್ರೆ ಪತ್ನಿ ಅಪ್ಸೆಟ್ ಆಗೋದು ಸಾಮಾನ್ಯ. ಈ ಮಹಿಳೆಗೂ ಈಗ ಏನು ಮಾಡ್ಬೇಕು ಗೊತ್ತಾಗ್ತಿಲ್ಲ.

ಆಕೆಗೆ 27 ವರ್ಷ. ಪತಿಗೆ 35 ವರ್ಷ. ಮದುವೆ (Marriage) ಯಾಗಿ ಎರಡು ವರ್ಷ ಕಳೆದಿದೆ. ವೈವಾಹಿಕ ಜೀವನ ಸುಖವಾಗಿದೆ. ಸಂಗಾತಿ ಜೊತೆ ಒಳ್ಳೆ ಶಾರೀರಿಕ ಸಂಬಂಧ (Physical Relationship ) ವಿದೆ. ಆದ್ರೆ ಪತಿಯ ಒಂದು ವರ್ತನೆ ಪತ್ನಿಗೆ ಹಿಂಸೆ ನೀಡ್ತಿದೆ. ಪತಿ, ಆಗಾಗ ಪತ್ನಿಯ ಒಳ ಉಡುಪ (Underwear) ನ್ನು ಧರಿಸ್ತಾನಂತೆ. ಒಂದು ದಿನ ಬ್ರಾ ತಂದುಕೊಂಡುವಂತೆ ಪತಿ ಕೇಳಿದ್ದನಂತೆ. ಹುಡುಗರಿಗೆ ಮಹಿಳೆಯರ ಒಳ ಉಡುಪಿನ ಬಗ್ಗೆ ಆಸಕ್ತಿ ಇರುತ್ತದೆ ಎಂಬ ವಿಷ್ಯ ಮಹಿಳೆಗೆ ತಿಳಿದಿತ್ತಂತೆ. ಹಾಗೆ ಕೆಲ ಹುಡುಗರು, ಮಹಿಳೆಯರ ಬಟ್ಟೆ ಧರಿಸ್ತಾರೆ ಎಂಬುದೂ ತಿಳಿದಿತ್ತಂತೆ. ಆದ್ರೆ ತನ್ನ ಪತಿಯೇ ಹೀಗೆ ಎಂಬುದು ಸ್ವಲ್ಪ ಶಾಕ್ ನೀಡಿತ್ತಂತೆ.

Tap to resize

Latest Videos

ವೀರ್ಯದ ಬಗ್ಗೆ ಡಾಕ್ಟರ್ ನೀಡಿದ ಶಾಕಿಂಗ್ ಸುದ್ದಿಯನ್ನು ಬಚ್ಚಿಟ್ಟ ಪತಿ

ಪತಿ ಇಚ್ಛೆಯಂತೆ ಪತ್ನಿ ಆತನಿಗಾಗಿ ಬ್ರಾ ತಂದಿದ್ದಳಂತೆ. ಪತಿ ಆಗಾಗ ಪತ್ನಿಯ ಒಳ ಉಡುಪನ್ನು ಧರಿಸ್ತಾನಂತೆ. ಒಂದೆರಡು ಬಾರಿ ಪತಿ ಹೀಗೆ ಮಾಡಿದಾಗ ಪತ್ನಿ ಅದನ್ನು ಹೆಚ್ಚು ಗಮನಿಸಿರಲಿಲ್ಲವಂತೆ. ಆದ್ರೆ ಒಂದು ವರ್ಷದಿಂದ ಪತಿ ಇದೇ ಕೆಲಸ ಮಾಡ್ತಿದ್ದು, ಈಗ ಟೆನ್ಷನ್ ಜಾಸ್ತಿಯಾಗಿದೆಯಂತೆ. ಈ ಬಗ್ಗೆ ಪತಿ ಜೊತೆ ಮಾತನಾಡಿಯಾಗಿದೆ. ಆದ್ರೆ ಆತ ತನ್ನ ಸ್ವಭಾವ ಬಿಡ್ತಿಲ್ಲ. ಇದೆಲ್ಲ ಕಾಮನ್ ಎನ್ನುತ್ತಿದ್ದಾನೆ. ಕೌನ್ಸಲಿಂಗ್ ಮಾಡಿಸುವಂತೆ ಪತಿಗೆ ಸಲಹೆ ಕೂಡ ನೀಡಿದ್ದೇನೆ. ಆದ್ರೆ ಪ್ರಯೋಜನವಾಗಲಿಲ್ಲ. ಬೆಡ್ ರೂಮಿನಲ್ಲಿ ಮಾತ್ರ ಹೀಗೆ ಮಾಡುವ ಪತಿ ಹೊರಗೆ ನಾರ್ಮಲ್ ಇರ್ತಾನೆ. ಮುಂದೇನು ಮಾಡ್ಬೇಕು ಗೊತ್ತಾಗ್ತಿಲ್ಲ ಎನ್ನುತ್ತಾಳೆ ಮಹಿಳೆ. 

ತಜ್ಞರ ಸಲಹೆ : ಆರೋಗ್ಯಕರ ಲೈಂಗಿಕ ಜೀವನದಲ್ಲಿ, ಗಂಡ ಮತ್ತು ಹೆಂಡತಿ ಮೋಜಿಗಾಗಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ. ಇಬ್ಬರೂ  ಇದರಲ್ಲಿ ಆರಾಮದಾಯಕವಾಗಿರಲು ಬಯಸ್ತಾರೆ. ನಿಮ್ಮ ಪತಿ ನಿಮ್ಮೊಂದಿಗೆ ಶಾರೀರಿಕ ಸಂಬಂಧ ಆನಂದಿಸಲು ಬಯಸುತ್ತಿರಬಹುದು. ನಿಮ್ಮೊಂದಿಗೆ ಪ್ರತಿ ಕ್ಷಣವನ್ನು ಆನಂದಿಸಲು ಬಯಸಿರಬಹುದು. ಹಾಗಾಗಿ ನಿಮ್ಮ ಒಳ ಉಡುಪುಗಳನ್ನು ಧರಿಸಲು ಇಷ್ಟಪಡ್ತಾರೆ ಎಂದು ತಜ್ಞರು ಹೇಳಿದ್ದಾರೆ.

ಪತಿ ಜೊತೆ ಮಾತನಾಡಿ : ನಿಮ್ಮ ಒಳ ಉಡುಪನ್ನು ಪತಿ ಧರಿಸೋದು ನಿಮಗೆ ಇಷ್ಟವಾಗ್ತಿಲ್ಲ ಅಂದ್ರೆ ಅದನ್ನು ಅವರಿಗೆ ತಿಳಿಸಿ ಎನ್ನುತ್ತಾರೆ ತಜ್ಞರು. ಪತಿ ಜೊತೆ ನೀವು ಕುಳಿತು ಮಾತನಾಡ್ಬೇಕು. ಯಾವುದೇ ಕಾರಣಕ್ಕೂ ಕೂಗಾಡದೆ, ಶಾಂತವಾಗಿ ನಿಮ್ಮ ಸಮಸ್ಯೆ ಹೇಳಬೇಕು. ಶಾರೀರಿಕ ಸಂಬಂಧವನ್ನು ಇನ್ನಷ್ಟು ರೋಮ್ಯಾಂಟಿಕ್ ಮಾಡಲು ಬೇರ ವಿಧಾನಗಳಿವೆ. ಈ ವಿಧಾನ ನನಗೆ ಇಷ್ಟವಾಗ್ತಿಲ್ಲ ಎಂದು ನೀವು ಪತಿಗೆ ಹೇಳ್ಬೇಕು ಎನ್ನುತ್ತಾರೆ ತಜ್ಞರು.

ಹಣೆ ಮೇಲೆ ಮುತ್ತಿಡುವ ಮುನ್ನ ಅರ್ಥ ತಿಳಿದ್ಕೊಳ್ಳಿ

ಸಣ್ಣ ಸಣ್ಣ ವಿಷ್ಯಕ್ಕೆ ಸಂಬಂಧ ಹಾಳಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಮೊದಲು ಪತಿಯನ್ನು ಅರ್ಥ ಮಾಡಿಕೊಳ್ಳಿ. ನಿಮಗೆ ಈಗ ಇಷ್ಟವಾಗದ ವಿಷ್ಯ ಸಂಗಾತಿಗೆ ಇನ್ನಷ್ಟು ಹತ್ತಿರವಾಗ್ತಿದ್ದಂತೆ ಪ್ರಿಯವಾಗ್ಬಹುದು. ಹಾಗಾಗಿ ಯಾವುದೇ ಕಾರಣಕ್ಕೂ ಆತುರಪಡದೆ ನಿರ್ಧಾರ ತೆಗೆದುಕೊಳ್ಳಿ ಎಂದಿದ್ದಾರೆ ತಜ್ಞರು.

click me!