Life: ಒಳ್ಳೆ ಮತ್ತು ಕೆಟ್ಟ ಎರಡೂ ರೀತಿಯಲ್ಲಿ ನಮ್ಮನ್ನು ಬದಲಿಸುತ್ತೆ ಸುತ್ತಮುತ್ತಲ ಪರಿಸರ

Published : Oct 19, 2022, 12:55 PM IST
Life: ಒಳ್ಳೆ ಮತ್ತು ಕೆಟ್ಟ ಎರಡೂ ರೀತಿಯಲ್ಲಿ ನಮ್ಮನ್ನು ಬದಲಿಸುತ್ತೆ ಸುತ್ತಮುತ್ತಲ ಪರಿಸರ

ಸಾರಾಂಶ

ಒಂದು ಅರ್ಧ ಗಂಟೆ ಅಪರಿಚಿತರ ಜೊತೆ ಮಾತನಾಡಿರ್ತೇವೆ ಅಷ್ಟೇ…ಆ ನಂತ್ರ ಅವರಂತೆ ಸ್ಟೈಲ್ ಶುರು ಮಾಡ್ತೇವೆ. ಇನ್ನು ವರ್ಷಗಟ್ಟಲೆ ಜೊತೆಗಿರುವ ವ್ಯಕ್ತಿ ಪ್ರಭಾವಕ್ಕೆ ಒಳಗಾಗೋದು ವಿಶೇಷವಲ್ಲ. ಈ ಪ್ರಭಾವ ನಮ್ಮ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.   

ನಾವು ಒಂಟಿಯಾಗಿ ಜೀವನ ನಡೆಸಲು ಎಂದಿಗೂ ಸಾಧ್ಯವಿಲ್ಲ. ಕಾಡಿನಲ್ಲಿ ಜೀವನ ನಡೆಸಿದ್ರೂ ನಾವು ಇನ್ನೊಬ್ಬರನ್ನು ಅವಲಂಬಿಸಬೇಕಾಗುತ್ತದೆ. ಒಂದಲ್ಲ ಒಂದು ರೀತಿಯಲ್ಲಿ ನಾವು ಸಮಾಜದ ಜೊತೆ ಸಂಬಂಧ ಹೊಂದಿರಬೇಕಾಗುತ್ತದೆ. ಕುಟುಂಬ, ಸಂಬಂಧಿಕರು, ಸ್ನೇಹಿತರು, ಅಕ್ಕಪಕ್ಕದ ಜನರು ಹೀಗೆ ಎಲ್ಲರ ಜೊತೆ ಜೀವನ ನಡೆಸುವುದು ಅನಿವಾರ್ಯ. ಜನರ ಜೊತೆ ಬದುಕಿದಾಗ ಮಾತ್ರ ಜೀವನ ಸರಾಗವಾಗಿ ಸಾಗಲು ಸಾಧ್ಯ. ನಾವು ಕುಟುಂಬಸ್ಥರ  ಜೊತೆ ಊಟ ಮಾಡ್ತೇವೆ, ಕುಳಿತು ಮಾತನಾಡ್ತೇವೆ.  ಮಾತುಕತೆ ಮೂಲಕ ಪರಸ್ಪರ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಜನರೊಂದಿಗೆ ನಮ್ಮ ಸಂಬಂಧ ಕೇವಲ ಮಾತನಾಡುವುದಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ನಮ್ಮ ಸುತ್ತಮುತ್ತ ಇರುವ ಜನರ ಜೊತೆ ನಾವು ಬೆರೆಯುವ ಮೂಲಕ ಅನೇಕ ವಿಚಾರದಲ್ಲಿ ಪ್ರಭಾವಿತರಾಗ್ತೇವೆ.

ಕೇಳುವುದು, ಅರ್ಥ ಮಾಡುವುದಕ್ಕಿಂತ ಹೆಚ್ಚಿನದು : ಎಲ್ಲ ಜನರನ್ನು ನಾವು ಒಂದೇ ರೀತಿ ನೋಡುವುದಿಲ್ಲ. ಜನರೊಂದಿಗೆ ನಾವು ವಿಭಿನ್ನ ಗಡಿಗಳನ್ನು ಹೊಂದಿರುತ್ತೇವೆ. ಕೆಲವರು ನಮಗೆ ಆಪ್ತರಾಗಿರುತ್ತಾರೆ. ಅವರಿಲ್ಲದೆ ನಾವಿರಲು ಸಾಧ್ಯವಿಲ್ಲ ಎನ್ನುವ ಭಾವನೆ ಹೊಂದಿರುತ್ತೇವೆ. ನಮಗೆ ಯಾವುದೇ ಸಮಸ್ಯೆಯಾದ್ರೂ ನಾವು ಅವರ ಮುಂದೆ ಹೇಳಿಕೊಳ್ತೇವೆ. ಅವರ ನೋವಿಗೆ ಸ್ಪಂದಿಸ್ತೇವೆ. ಅವ್ರ ಪ್ರಭಾವಕ್ಕೆ ಬರುವ ನಾವು ಒಂದಲ್ಲ ಒಂದು ದಿನ ಅವರ ಆಲೋಚನೆಗಳನ್ನು ಸರಿ ಎಂದು ನಂಬಲು ಶುರು ಮಾಡ್ತೇವೆ. ಅನೇಕ ಬಾರಿ ಅವರಂತೆ ನಾವು ಮಾತನಾಡಲು ಆರಂಭಿಸ್ತೇವೆ. ನೀವು ಗಮನಿಸಿರಬಹುದು, ಮಕ್ಕಳು ಕೆಲ ಸಮಯ ಒಬ್ಬ ವ್ಯಕ್ತಿ ಜೊತೆಗಿದ್ದರೆ ಅವರ ಭಾಷೆ ಬಳಕೆ ಮಾಡ್ತಾರೆ. 

ಮನುಷ್ಯ ಹಾಗೂ ಆತನ ವರ್ತನೆ : ನೀವು ಪ್ರತಿ ದಿನ ಅನೇಕ ಜನರನ್ನು ಭೇಟಿಯಾಗಿರ್ತೀರಿ. ಒಬ್ಬರ ಮನೆಯಲ್ಲಿ ಪ್ರತಿ ದಿನ ಜಗಳ (Fight) ವಾಗ್ತಿದ್ದರೆ ಆತನ ವರ್ತನೆ ಹಾಗೂ ಶಾಂತವಾಗಿರುವ ಮನೆ (Home) ಯಲ್ಲಿ ಬೆಳೆದಿರುವ ವ್ಯಕ್ತಿಯ ವರ್ತನೆ ಒಂದೇ ರೀತಿ ಇರುವುದಿಲ್ಲ. ಇಬ್ಬರ ಮಧ್ಯೆ ನೀವು ಅಜಗಜಾಂತರ ವ್ಯತ್ಯಾಸವನ್ನು ನೋಡಬಹುದು. ಹಾಗೆ ಇನ್ನೊಬ್ಬ ವ್ಯಕ್ತಿ ಧರ್ಮ (Religion) ದ ಪರ ಮಾತನಾಡಿದ್ರೆ ಮತ್ತೊಬ್ಬ ವ್ಯಕ್ತಿ ಧರ್ಮದ ವಿರುದ್ಧ ಮಾತನಾಡ್ತಾನೆ. ನಾವು ಯಾವ ವ್ಯಕ್ತಿ ಜೊತೆ ಹೆಚ್ಚು ಸಮಯ ಕಳೆಯುತ್ತೇವೋ ಅವರ ಪ್ರಭಾವಕ್ಕೆ ತಿಳಿಯದೇ ಒಳಗಾಗ್ತೇವೆ. ಅವರ ಉಡುಗೆ –ತೊಡುಗೆ , ವಿಚಾರಗಳು ನಮಗೆ ಇಷ್ಟವಾಗಲು ಶುರುವಾಗುತ್ತದೆ. ನಾವು ತಿಳಿಯದೆ ಅದನ್ನು ಪಾಲಿಸ್ತೇವೆ. ನಮ್ಮ ಧರ್ಮ, ಭಾಷೆ (Language), ಬಟ್ಟೆ,ರಾಷ್ಟ್ರದ ಬಗ್ಗೆ ಪ್ರೇಮ, ಮಾತು ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಜನರಿಂದ ಪ್ರಭಾವಿತವಾಗಿರುತ್ತದೆ.

ಮನೆಯಲ್ಲಿ ವಯಸ್ಕರನ್ನು ಸುರಕ್ಷಿತರನ್ನಾಗಿಡಲು ಮಾರ್ಪಾಡು ಮಾಡಿ

ಮಕ್ಕಳಿರುವಾಗ್ಲೇ ಶುರುವಾಗುತ್ತೆ ಈ ಪ್ರಭಾವ : ಬಾಲ್ಯದಲ್ಲಿ ಪಾಲಕರು ಮಕ್ಕಳಿಗೆ ಇದನ್ನು ತಿಳಿಯದೆ ಕಲಿಸಿರ್ತಾರೆ. ಜಾತಿ ಬಗ್ಗೆ ಮಾತನಾಡುವುದ್ರಿಂದ ಹಿಡಿದು ಬಣ್ಣ, ದಪ್ಪಗಿರುವ ವ್ಯಕ್ತಿಯನ್ನು ಸಮಾಜ ಹೇಗೆ ನೋಡುತ್ತದೆಯೋ ಹಾಗೆಯೇ ಮಕ್ಕಳು ನೋಡಲು ಶುರು ಮಾಡ್ತಾರೆ. ಬೇರೆಯವರಿಗೆ ಸಹಾಯ ಮಾಡುವುದ್ರಿಂದ ಹಿಡಿದು ಬೇರೆಯವರ ಬಗ್ಗೆ ತಮಾಷೆ ಮಾಡುವವರೆಗೆ ಎಲ್ಲದೂ ಮಕ್ಕಳ ಪ್ರಭಾವಕ್ಕೆ ಒಳಗಾಗುತ್ತದೆ.   

PARENTING TIPS: ಮಗುವಿನ ಗ್ರಹಿಕೆ ಬಲಗೊಳಿಸಲು ಹೀಗೆ ಮಾಡಿ

ಇತರರಿಂದ ಪ್ರಭಾವಿತರಾಗುವುದು ಎಷ್ಟು ಸರಿ? : ಈ ಪ್ರಶ್ನೆಗೆ ಉತ್ತರ ತುಂಬಾ ಸ್ಪಷ್ಟವಾಗಿದೆ. ನೀವು ಜನರ ಮಾತುಗಳನ್ನು ಕೇಳಬಹುದು. ಅವರ ಅಭಿಪ್ರಾಯವನ್ನು ಕೂಡ ಕೇಳಬಹುದು. ಸಲಹೆಯನ್ನು ತೆಗೆದುಕೊಳ್ಳುವುದು ಎಂದಿಗೂ ತಪ್ಪಲ್ಲ. ಆದ್ರೆ ಸರಿ ಮತ್ತು ತಪ್ಪು ವಿಷ್ಯ ಬಂದಾಗ ಅಥವಾ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ನಿಮ್ಮ ಮನಸ್ಸನ್ನು ನೀವು ಆಲಿಸಬೇಕು. ಯಾವುದು ತಪ್ಪು ಮತ್ತು ಯಾವುದು ಸರಿ ಎಂಬುದನ್ನು ನೀವು ಅರಿಯಬೇಕು. ನಿಮ್ಮ ಸುತ್ತಲಿರುವ ಸಮಾಜ ಹೇಗೇ ಇರಲಿ, ನೀವು ಮಾತ್ರ ನಿಮ್ಮತನವನ್ನು ಎಂದಿಗೂ ಬಿಡಬಾರದು.   

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?
ಚಾಣಕ್ಯ ನೀತಿಯ ಪ್ರಕಾರ ಇಂಥ ಸಂಗಾತಿ ಸಿಕ್ಕರೆ ಜೀವನಪೂರ್ತಿ ಕಷ್ಟ ತಪ್ಪಿದ್ದಲ್ಲ!