ಬೆತ್ತಲೆ ಮಲಗುವ ಪತಿ, ಪತ್ನಿಗೆ ಮುಜುಗರ ! ಮನೆ ಕೆಲಸದಾಕೆ ನೋಡಿದ್ದೇನು ?

By Suvarna NewsFirst Published Sep 2, 2022, 12:44 PM IST
Highlights

ಆರೇಂಜ್ಡ್ ಮ್ಯಾರೇಜ್‌ ಎಂಬುದು ಸಂಪೂರ್ಣವಾಗಿ ಅಪರಿಚಿತರನ್ನು ಮದುವೆಯಾದಂತೆ. ಮದುವೆಯಾದ ನಂತರವಷ್ಟೇ ಸಂಗಾತಿಯ ಬಗ್ಗೆ ಹಲವು ವಿಚಾರಗಳು ತಿಳಿಯುತ್ತವೆ. ಕೆಲವೊಮ್ಮೆ ಪಾರ್ಟ್‌ನರ್ ವರ್ತನೆ ಮುಜುಗರವನ್ನು ಸಹ ಉಂಟು ಮಾಡಬಹುದು. ಇಲ್ಲೊಬ್ಬ ಮಹಿಳೆಗೆ ಹಾಗೆಯೇ ಆಗಿದೆ.

ದಾಂಪತ್ಯ ಅಂದ್ರೆ ತುಂಬಾ ಸೂಕ್ಷ್ಮವಾದ ವಿಚಾರ. ಅಲ್ಲಿ ಕೆಲವೊಮ್ಮೆ ಸಣ್ಣಪುಟ್ಟ ವಿಚಾರಗಳು ಸಹ ಬೃಹಾದಾಕಾರವಾಗಿ ನಿಂತು ಕಾಡತೊಡಗುತ್ತವೆ. ಇಬ್ಬರ ನಡುವೆ ವೈಮನಸ್ಸು ಮೂಡಿ ಡೈವೋರ್ಸ್ ವರೆಗೂ ಬಂದು ನಿಲ್ಲುತ್ತದೆ. ಇದಕ್ಕೆ ಗಂಡ-ಹೆಂಡಿರ ಸ್ವಭಾವವೂ ಕಾರಣವಾಗುತ್ತದೆ. ಹಾಗೇ ಇಲ್ಲೊಬ್ಬಳು ನನ್ನ ಪತಿ ಬಟ್ಟೆ ಇಲ್ಲದೆ ಮಲಗಲು ಇಷ್ಟಪಡುತ್ತಾನೆ, ಇದು ಪ್ರತಿದಿನ ಬೆಳಿಗ್ಗೆ ನನಗೆ ತುಂಬಾ ಮುಜುಗರವಾಗುತ್ತದೆ ಎಂದು ಹೇಳಿಕೊಂಡಿದ್ದಾಳೆ. ಅದಕ್ಕೆ ತಜ್ಞರು ಏನು ಉತ್ತರ ಹೇಳಿದ್ದಾರೆ ತಿಳಿಯೋಣ.

ಪ್ರಶ್ನೆ: ನಾನು ವಿವಾಹಿತ ಮಹಿಳೆ (Married woman). ನಾನು ಹಲವು ವರ್ಷಗಳ ಕಾಲ ಮದುವೆ (Marriage)ಯಾಗಿರಲ್ಲಿಲ್ಲ. ನನ್ನ ಗಂಡನನ್ನು ನನ್ನ ಹೆತ್ತವರು ಆಯ್ಕೆ ಮಾಡಿದರು, ಆದರೆ ನಂತರ ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೆವು. ನನ್ನ ಪತಿಯ ಬಗ್ಗೆ ನನಗೆ ಯಾವುದೇ ದೂರುಗಳಿರಲ್ಲಿಲ್ಲ. ಅವರು ತುಂಬಾ ಒಳ್ಳೆಯ ವ್ಯಕ್ತಿ. ನನ್ನ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಆದರೆ ಅವರ ಈ ಒಂದು ಅಭ್ಯಾಸ ನನಗೆ ಇಷ್ಟವಿಲ್ಲ. ವಾಸ್ತವವಾಗಿ, ನನ್ನ ಪತಿ ಬೆತ್ತಲೆ (Naked)ಯಾಗಿ ಮಲಗಲು ಇಷ್ಟಪಡುತ್ತಾರೆ, ಅದು ಕೆಲವೊಮ್ಮೆ ನನಗೆ ತುಂಬಾ ವಿಚಿತ್ರವೆನಿಸುತ್ತದೆ. ನಮ್ಮ ಕೆಲಸದಾಕೆ ಬೆಳಗ್ಗೆ ಬಂದಾಗ ಈ ಒಂದು ಕಾರಣಕ್ಕೆ ತುಂಬಾ ಮುಜುಗರ ಅನುಭವಿಸಬೇಕಾಗುತ್ತದೆ.

ಅಯ್ಯಯ್ಯೋ..ಬರೋಬ್ಬರಿ ಆರು ವರ್ಷ ತಮ್ಮನ ಜೊತೆಯೇ ಡೇಟಿಂಗ್ ಮಾಡಿದ್ಲು !

ಏಕೆಂದರೆ ಗಂಡ ತಡರಾತ್ರಿಯವರೆಗೆ ಕೆಲಸ ಮಾಡುತ್ತಾರೆ ಮತ್ತು ಬೆಳಗ್ಗೆ 10 ಗಂಟೆಯ ನಂತರ ಎಚ್ಚರಗೊಳ್ಳುತ್ತಾರೆ. ಅಷ್ಟರಲ್ಲಿ ನಮ್ಮ ರೂಮನ್ನು ಕ್ಲೀನ್ ಮಾಡಲು ನಮ್ಮ ಕೆಲಸದಾಕೆ ಬರುತ್ತಾಳೆ, ಅದಕ್ಕಾಗಿಯೇ ಅವರು ಹೊದಿಕೆಯನ್ನು ಸಂಪೂರ್ಣವಾಗಿ ಮುಚ್ಚಿದ್ದಾರೆಯೇ ಎಂದು ನಾನು ಪ್ರತಿ ಬಾರಿ ಖಚಿತಪಡಿಸಿಕೊಳ್ಳಬೇಕು. ಇದರ ಹಿಂದಿನ ದೊಡ್ಡ ಕಾರಣವೆಂದರೆ, ನನ್ನ ಪತಿ ಒಮ್ಮೆ ಮಲಗಿದ್ದಾಗ, ಅವರ ಹೊದಿಕೆ ಸರಿದು ಹೋಗುತ್ತದೆ.. ಈ ಸಮಯದಲ್ಲಿ ನಾನು ಇತರ ಮನೆಕೆಲಸಗಳಲ್ಲಿ ನಿರತಳಾಗಿರುತ್ತೇನೆ. ಒಂದು ದಿನ ನನ್ನ ಕೆಲಸದಾಕೆ (Maid) ಕ್ಲೀನ್ ಮಾಡಲು ನಮ್ಮ ಕೋಣೆಯೊಳಗೆ ಹೋದಳು ಮತ್ತು ತಕ್ಷಣ ಹೊರಗೆ ಬಂದು ಬಾಗಿಲು ಮುಚ್ಚಿದಳು. ಅವಳು ಹೀಗೆ ಮಾಡುವುದನ್ನು ನೋಡಿ ಕಾರಣ ಕೇಳಿದಾಗ ‘ದೀದಿ ನಾನು ರೂಮಿಗೆ ಹೋಗುವುದಿಲ್ಲ’ ಎಂದಳು. ಆಗ ನನಗೆಲ್ಲ ವಿಷಯ ಏನೆಂದು ಅರ್ಥವಾಯಿತು. ಆದರೂ, ಈ ವಿಷಯದಲ್ಲಿ ನಾನು ಅವನಿಗೆ ಯಾವುದೇ ಉತ್ತರವನ್ನು ನೀಡಲು ಸಾಧ್ಯವಾಗಲಿಲ್ಲ, ಆದರೆ ಈ ಕ್ಷಣ ನನಗೆ ತುಂಬಾ ಮುಜುಗರವನ್ನುಂಟುಮಾಡಿತು.

ನಾನು ನನ್ನ ಗಂಡ (Husband)ನನ್ನು ಒಪ್ಪಿಸಲು ಪ್ರಯತ್ನಿಸಲಿಲ್ಲ ಎಂದಲ್ಲ. ಆದರೆ ಬಟ್ಟೆ ಹಾಕಿಕೊಂಡು ಮಲಗುವುದಿಲ್ಲ ಎಂದು ಪ್ರತಿ ಬಾರಿಯೂ ತಪ್ಪಿಸುತ್ತಾರೆ. ನನಗೆ ಹೀಗೆ ಮಲಗುವುದೇ ದೊಡ್ಡ ಸಮಸ್ಯೆಯಾಗುತ್ತಿರುವುದಕ್ಕೆ ಇದೂ ಒಂದು ಕಾರಣ. ನಾನು ಏನು ಮಾಡಬೇಕೆಂದು ನನಗೆ ಅರ್ಥವಾಗುತ್ತಿಲ್ಲ. ಈ ಒಂದು ಕಾರಣದಿಂದ ನಾನು ಪ್ರತಿದಿನ ಎಷ್ಟು ಮುಜುಗರವನ್ನು ಎದುರಿಸುತ್ತಿದ್ದೇನೆ ಎಂದು ನನ್ನ ಪತಿಗೆ ನಾನು ಹೇಗೆ ವಿವರಿಸಲಿ.

Sexual Health: ಸಂಗಾತಿ ಕಾಂಡೋಮ್ ಬೇಡ ಅಂತಾರ ? ಹೀಗೆ ಮಾಡಿ ಮನವೊಲಿಸಿ

ತಜ್ಞರ ಉತ್ತರ: ನಿಮ್ಮ ಸಮಸ್ಯೆ ನಮಗೆ ಅರ್ಥವಾಗುತ್ತದೆ. ಎಲ್ಲಕ್ಕಿಂತ ಮೊದಲು ನಿಮ್ಮ ಪತಿಯೊಂದಿಗೆ ಮಾತನಾಡಲು ನಾನು ನಿಮಗೆ ಸಲಹೆ ನೀಡುತ್ತೇನೆ. ಈ ಒಂದು ಕಾರಣದಿಂದ ನಿಮಗೆ ಎಷ್ಟು ತೊಂದರೆ (Problem)ಯಾಗುತ್ತಿದೆ ಎಂಬುದನ್ನು ಮನವರಿಕೆ ಮಾಡಿ ಕೊಡಿ. ಈ ಸಮಯದಲ್ಲಿ ನಿಮ್ಮಿಬ್ಬರ ನಡುವೆ ಆರೋಗ್ಯಕರ ಚರ್ಚೆ ನಡೆಯಬೇಕು ಎಂಬುದನ್ನು ನೆನಪಿನಲ್ಲಿಡಿ. ಏಕೆಂದರೆ ಜಗಳ ಈ ವಿಷಯಕ್ಕೆ ಪರಿಹಾರವಲ್ಲ. ಅದೇ ಸಮಯದಲ್ಲಿ, ನಿಮ್ಮ ಪತಿ ಬೆತ್ತಲೆಯಾಗಿ ಮಲಗಿರುವುದನ್ನು ನೋಡಿ, ನಿಮ್ಮ ಸೇವಕಿ ಕೆಲಸದಲ್ಲಿ ಅನಾನುಕೂಲತೆಯನ್ನು ಅನುಭವಿಸುತ್ತಾರೆ ಎಂಬುದನ್ನು ನೀವು ವಿವರಿಸಬೇಕು.

ಬೇಗ ಎದ್ದು ಬಟ್ಟೆ ಧರಿಸುವಂತೆ ಸೂಚಿಸಿ: ನಿಮ್ಮ ಕೋಣೆಯನ್ನು ಸ್ವಚ್ಛಗೊಳಿಸಲು ನಿಮ್ಮ ಕೆಲಸದಾಕೆ ಬಂದಾಗ, ನಿಮ್ಮ ಪತಿ ಯಾವ ಸ್ಥಿತಿಯಲ್ಲಿ ಮಲಗಿದ್ದಾರೆ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು. ನಿಮ್ಮ ಪತಿಯನ್ನು ಕೆಲಸದಾಕೆ ಬರುವ ಮೊದಲು ಎದ್ದೇಳಲು ಹೇಳಬಹುದು ಮತ್ತು ಇದು ಸಾಧ್ಯವಾಗದಿದ್ದರೆ, ಬೆಳಿಗ್ಗೆ ಅವರನ್ನು ಬಟ್ಟೆ (Dress) ಧರಿಸುವಂತೆ ಕೇಳಿಕೊಳ್ಳಬೇಕು. ಈ ಸಮಯದಲ್ಲಿ, ಅವರ ಬೆತ್ತಲೆಯಾಗಿ ಮಲಗುವ ಅಭ್ಯಾಸವು ಈಗ ನಿಮಗೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತಿದೆ ಎಂದು ನೀವು ಅವರಿಗೆ ವಿವರಿಸಬೇಕು, ಇದರಿಂದಾಗಿ ನಿಮ್ಮಿಬ್ಬರ ನಡುವಿನ ಸಂಬಂಧವೂ (Relationship) ಹಾಳಾಗಬಹುದು.

ಅವಳು ನಿಮಗೆ ಕ್ಲೀನ್ ಬೋಲ್ಡ್ ಆಗಿದ್ದು ಹೌದಾ? ಗೊತ್ತು ಮಾಡಿಕೊಳ್ಳೋದು ಹೇಗೆ?

ಬೆತ್ತಲೆಯಾಗಿ ಮಲಗುವುದು ಕೆಟ್ಟದ್ದಲ್ಲ: ಆರೋಗ್ಯದ ದೃಷ್ಟಿಯಿಂದ ನೋಡಿದಾಗ ಬೆತ್ತಲೆಯಾಗಿ ಮಲಗುವುದು ಕೆಟ್ಟ ಅಭ್ಯಾಸವಲ್ಲ.  ಇದು ನಮ್ಮ ದೇಹ ಉಸಿರಾಡಲು ಸಹಾಯ ಮಾಡುತ್ತದೆ. ಹೀಗಾಗಿ ಈ ವಿಚಾರದಲ್ಲಿ ನಿಮ್ಮ ಪತಿಯನ್ನು ಹೆಚ್ಚು ಒತ್ತಾಯಿಸುವುದು ಸರಿಯಾಗುವುದಿಲ್ಲ. ಬದಲಿಗೆ ನಿಮ್ಮ ಕೋಣೆಯನ್ನು ನೀವೇ ಸ್ವಚ್ಛ ಮಾಡಿ. ಮನೆಯ ಇತರ ಕೋಣೆಗಳನ್ನು ಮಾತ್ರ ಕೆಲಸದಾಕೆಗೆ ಕ್ಲೀನ್ ಮಾಡಲು ಹೇಳಿ.

click me!