ಇಂಟರ್ನೆಟ್ ಮಾಧ್ಯಮದ ಮೂಲಕ ಮದುವೆ ಬಂಧನದಲ್ಲಿ ಸಿಕ್ಕಿ ಬಿದ್ದ ಮಹಿಳೆಯೊಬ್ಬಳು ಈಗ ಪರಿತಪಿಸ್ತಿದ್ದಾಳೆ. ಯಾವುದೇ ಪೂರ್ವಾಪರ ಆಲೋಚನೆ ಮಾಡದೆ ಮದುವೆಯಾದವಳಿಗೆ ಪತಿ ಹಾಗೂ ಪತಿ ಮನೆಯವರ ಅಸಲಿಯತ್ತು ಗೊತ್ತಾಗಿದೆ. ಆದ್ರೆ ಈಗ ಸಮಯ ಮೀರಿದೆ.
ಮದುವೆ ಮಾಡುವ ಮೊದಲು, ಹತ್ತಾರು ಕಡೆ ವಿಚಾರಿಸ್ಬೇಕೆಂದು ದೊಡ್ಡವರು ಹೇಳ್ತಾರೆ. ಹಿಂದಿನ ಕಾಲದಲ್ಲಿ ಮದುವೆಯನ್ನು ಸುಲಭವಾಗಿ ನಿಶ್ಚಯ ಮಾಡ್ತಿರಲಿಲ್ಲ. ಹುಡುಗ ಒಪ್ಪಿಗೆಯಾದ್ರೂ ಅಕ್ಕ – ಪಕ್ಕದವರು, ಸಂಬಂಧಿಕರಿಂದ ಹುಡುಗ ಅಥವಾ ಹುಡುಗಿ ಬಗ್ಗೆ ವಿಚಾರಿಸ್ತಾ ಇದ್ದರು. ಮನೆಗೆ ಭೇಟಿಯಾಗಿ ಮಾತುಕತೆ ನಡೆಸ್ತಿದ್ದರು. ಬುದ್ಧಿವಂತಿಕೆಯಿಂದ ಸಂಬಂಧ ಕುದುರಿಸ್ತಾ ಇದ್ರು. ಅದೇ ಕಾರಣಕ್ಕೆ ಮದುವೆಗಳು ದೀರ್ಘಕಾಲ ಉಳಿಯುತ್ತಿದ್ದವು. ಆದ್ರೀಗ ಎಲ್ಲವೂ ಡಿಜಿಟಲ್ ಆಗಿದೆ. ಮ್ಯಾರೇಜ್ ಬ್ಯೂರೋದಲ್ಲಿ ಹುಡುಗ ಅಥವಾ ಹುಡುಗಿ ಫೋಟೋ ನೋಡಿ ಒಪ್ಪಿಕೊಳ್ಳುವವರೇ ಹೆಚ್ಚು ಮಂದಿ. ಅವರ ಸೌಂದರ್ಯ, ಥಳಕು – ಬಳಕಿನ ಜೀವನಕ್ಕೆ ಜನರು ಮರಳಾಗ್ತಾರೆ. ಇದನ್ನೇ ನಿಜವೆಂದು ನಂಬಿ ಮದುವೆಯಾಗ್ತಾರೆ. ಆದ್ರೆ ಸತ್ಯ ಹೊರ ಬರುವ ಹೊತ್ತಿಗೆ ತಡವಾಗಿರುತ್ತೆ. ಮದುವೆಯಾದ್ಮೇಲೆ ವಾಸ್ತವದ ಅರಿವಾಗುತ್ತದೆ. ಮದುವೆ ಬಂಧನದಿಂದ ಹೊರಗೆ ಬರಲಾರದೆ ಅನೇಕರು ಪರಿತಪಿಸ್ತಾರೆ. ಮೋಸದ ಬಲೆಯಲ್ಲಿ ಬಿದ್ದು ಒದ್ದಾಡ್ತಾರೆ. ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲೂ ಇಂಥ ಪ್ರಕರಣವೊಂದು ಹೊರ ಬಿದ್ದಿದೆ. ಇಂಟರ್ನೆಟ್ ಮೂಲಕ ಮದುವೆ ಫಿಕ್ಸ್ ಮಾಡಿಕೊಂಡ ವಿದ್ಯಾವಂತ ಹುಡುಗಿಗೆ ಮದುವೆಯಾದ್ಮೇಲೆ ಗಂಡ ಏನಕ್ಕೂ ಬಾರದವ ಎಂಬುದು ಗೊತ್ತಾಗಿದೆ. ಇದನ್ನು ಮಾವನಿಗೆ ಹೇಳಿದ್ರೆ, ಗಂಡನ ಜಾಗ ತಾನು ತುಂಬುತ್ತೇನೆ ಎನ್ನುತ್ತಾನಂತೆ. ಸದ್ಯ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಅಂತರ್ಜಾಲ ನಂಬಿ ಮೋಸ ಹೋದ ಹುಡುಗಿ ಕಥೆಯೇನು ಎಂಬುದನ್ನು ನಾವಿಂದು ಹೇಳ್ತೇವೆ.
ಇಂಟರ್ನೆಟ್ ಮೂಲಕ ಪರಿಚಯವಾದ ವ್ಯಕ್ತಿ ಜೊತೆ ಮದುವೆ: ಘಟನೆ ನಡೆದಿರೋದು ಹರ್ದೋಯ್ ಜಿಲ್ಲೆಯಲ್ಲಿ. ವಿದ್ಯಾವಂತೆ, ಆಧುನಿಕ ಮನೋಭಾವದ ಹುಡುಗಿಯೊಬ್ಬಳು ಇಂಟರ್ನೆಟ್ ಮದುವೆಯಲ್ಲಿ ಸಿಕ್ಕಿ ಬಿದ್ದಿದ್ದಾಳೆ. 2019 ರಲ್ಲಿ ಜೀವನ್ ಸಾಥಿ ಮ್ಯಾಟ್ರಿಮೋನಿ ಅಪ್ಲಿಕೇಶನ್ ಮೂಲಕ ಯುವಕನನ್ನು ಭೇಟಿಯಾಗಿದ್ದಳಂತೆ. ಹುಡುಗನ ತಂದೆ ಇಂದೋರ್ ಪೊಲೀಸ್ ಇಲಾಖೆಯಲ್ಲಿ ಡಿಎಸ್‌ಪಿ. ಹುಡುಗಿ ಮತ್ತು ಹುಡುಗ ಅನೇಕ ಬಾರಿ ಮಾತನಾಡಿದ್ದಾರೆ. ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಡಲು ಶುರು ಮಾಡಿದ್ದಾರೆ. ನಂತರ ಕುಟುಂಬದವರು ಸೇರಿ ಫೆಬ್ರವರಿ 2020 ರಲ್ಲಿ ಮದುವೆ ನೆರವೇರಿಸಿದ್ದಾರೆ.
ಮದುವೆ ನಂತ್ರ ಅಮೆರಿಕಾದಲ್ಲಿ ಸಂಸಾರ: ಮದುವೆ ನಂತ್ರ ಹುಡುಗ ಮತ್ತು ಅವನ ಕುಟುಂಬ ಇಂದೋರ್‌ಗೆ ತೆರಳಿದೆ. ಹುಡುಗಿ ತನ್ನ ಕುಟುಂಬದವರ ಜೊತೆ ಹಾರ್ಡೋಯಿಯಲ್ಲಿಯೇ ನೆಲೆಸಿದ್ದಳು. ಕೆಲ ದಿನಗಳ ನಂತರ ಹುಡುಗನ ಮನೆಯಿಂದ ವರದಕ್ಷಿಣೆ ಬೇಡಿಕೆ ಬಂದಿತ್ತು. ಈ ನಡುವೆ ಆ ಹುಡುಗ ಅಮೆರಿಕಕ್ಕೆ ಹೋಗಿದ್ದ. ಸ್ವಲ್ಪ ಸಮಯದ ನಂತರ ಹುಡುಗಿಯೂ ಅಮೆರಿಕಾಕ್ಕೆ ಹೋಗಿದ್ದಾಲೆ. ಅಲ್ಲಿ ಮತ್ತೆ ಹಿಂದೂ ಪದ್ಧತಿಯಂತೆ ಇಬ್ಬರೂ ಮದುವೆಯಾಗಿದ್ದಾರೆ.
ಇದನ್ನೂ ಓದಿ: 15 ವರ್ಷದ ಹುಡುಗನ ಜತೆ 2 ಮಕ್ಕಳ ತಾಯಿಗೆ ಸಂಬಂಧ, ಲೈಂಗಿಕ ಕ್ರಿಯೆವೇಳೆ ಗಂಡನಿಗೆ ಸಿಕ್ಕಿಬಿದ್ದ ಪ್ರೇಮಿಗಳು
ಪತಿ ಬಗ್ಗೆ ಗೊತ್ತಾಯ್ತು ಸತ್ಯ : ಆದ್ರೆ ಅಮೆರಿಕಾಕ್ಕೆ ಹೋದ್ಮೇಲೆ ಪತಿ ಬಣ್ಣ ಬಯಲಾಗಿದೆ. ಪತಿ ನಪುಂಸಕ ಎಂಬುದು ಆಕೆಗೆ ಗೊತ್ತಾಗಿದೆ. ನಪುಂಸಕ ಹುಡುಗ ಸುಳ್ಳು ಹೇಳಿ ಮದುವೆಯಾಗಿದ್ದಾನೆ. ಅಷ್ಟೇ ಅಲ್ಲ ಪತ್ನಿಗೆ ಮನಸ್ಸಿಗೆ ಬಂದಂತೆ ಥಳಿಸುತ್ತಾನಂತೆ.
ಮಗ ಜಾಗ ತುಂಬ್ತೇನೆಂದ ಮಾವ : ಗಂಡನ ವರ್ತನೆಗೆ ಬೇಸತ್ತ ಹುಡುಗಿ ಈ ಬಗ್ಗೆ ಮಾವನಿಗೆ ದೂರು ನೀಡಿದ್ದಾಳೆ. ಆದ್ರೆ ಆತ ಸೊಸೆ ಸಮಸ್ಯೆಗೆ ಸ್ಪಂದಿಸುವ ಬದಲು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಅಲ್ಲದೆ ಮಗ ನೀಡಲು ಸಾಧ್ಯವಾಗದ ಸಂತೋಷವನ್ನು ನಾನು ನೀಡ್ತೇನೆ ಎಂದಿದ್ದಾನೆ.
ಇದನ್ನೂ ಓದಿ: ಸಂಗಾತಿ ನಿಮ್ಮನ್ನು ನೋಡಿ ನಗ್ತಿಲ್ಲವೆಂದ್ರೆ ಬೇಸರ ಬೇಡ : ಇದಕ್ಕೆ ಕಾರಣ Hormones
ಪೊಲೀಸರಿಗೆ ದೂರು : ಪತಿಯ ಕಾಟ ಹೆಚ್ಚಾಗ್ತಿದ್ದಂತೆ ಹುಡುಗಿ ತಂದೆಯನ್ನು ಸಂಪರ್ಕಿಸಿದ್ದಾಳೆ. ಅಮೆರಿಕಾದಿಂದ ತವರಿಗೆ ಬಂದವಳು ಪೊಲೀಸರಿಗೆ ದೂರು ನೀಡಿದ್ದಾಳೆ. ಗಂಡನ ಮನೆಯವರು ಮನೆಯೊಳಗೆ ಸೇರಿಸಿಕೊಳ್ತಿಲ್ಲ. ಗಂಡ ವಿಪರೀತ ಹಿಂಸೆ ನೀಡ್ತಾನೆಂದು ದೂರಿನಲ್ಲಿ ಆರೋಪಿಸಿದ್ದಾಳೆ.