ವೈವಾಹಿಕ ಜೀವನ ಹಾಳು ಮಾಡುತ್ತೆ ಪುರುಷರು ಮಾಡೋ ಈ ಕೆಲಸ

By Suvarna News  |  First Published Jul 14, 2022, 2:42 PM IST

ಮದುವೆಯಾದ್ರೆ ಸಾಲ್ದು, ಜವಾಬ್ದಾರಿಯನ್ನು ನಿರ್ವಹಿಸುವ ಶಕ್ತಿ ಇರಬೇಕು. ಒತ್ತಡವಿಲ್ಲದೆ ಜೀವನ ನಡೆಸಿದಾಗ ಸಂತೋಷದ ಜೊತೆ ಆರೋಗ್ಯ ಸಾಧ್ಯ. ಒತ್ತಡವಿಲ್ಲದ ಬದುಕು ಸಾಗಿಸ್ಬೇಕೆಂದ್ರೆ ಸರಿಯಾಗಿ ನಿದ್ರೆ ಮಾಡ್ಬೇಕು. ಕೆಲ ಪುರುಷರ ಸಂಸಾರ ಹಾಳಾಗೋಕೆ ಅವರ ನಿದ್ರೆ ಕಾರಣ ಅಂದ್ರೆ ನಂಬ್ತೀರಾ?
 


ವಿವಾಹದ ನಂತ್ರ ಪುರುಷರ ಜವಾಬ್ದಾರಿ ಹೆಚ್ಚಾಗುತ್ತೆ. ಕುಟುಂಬ ನಿರ್ವಹಣೆ, ಆರ್ಥಿಕ ಬಲಕ್ಕಾಗಿ ಪುರುಷರು ಕೆಲಸಕ್ಕೆ ಹೆಚ್ಚಿನ ಮಹತ್ವ ನೀಡಲು ಶುರು ಮಾಡ್ತಾರೆ. ದಿನವಿಡಿ ಕೆಲಸ ಮಾಡುವ ಪುರುಷರು ವೈವಾಹಿಕ ಜೀವನಕ್ಕೆ ಹೆಚ್ಚು ಗಮನ ನೀಡಲು ಹೋಗೋದಿಲ್ಲ. ಇದ್ರಿಂದಾಗಿ ವೈವಾಹಿಕ ಜೀವನ ಮುರಿದು ಬೀಳುವ ಸಾಧ್ಯತೆ ಹೆಚ್ಚಿರುತ್ತದೆ.  ಹಾಗೆ, ಮದುವೆಯ ನಂತರ ಪುರುಷರು ತಮ್ಮ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ಅವರು ನಿರ್ಲಕ್ಷ್ಯಿಸುತ್ತಾರೆ. ಹಾಗೆ ಆರೋಗ್ಯ ಹದಗೆಡ್ತಿದ್ದರೂ ಅವರು ಈ ವಿಷ್ಯವನ್ನು ಕುಟುಂಬಸ್ಥರ ಮುಂದೆ ಹೇಳೋದಿಲ್ಲ. ಆರೋಗ್ಯದ ಬಗ್ಗೆ ಸರಿಯಾಗಿ ಕಾಳಜಿವಹಿಸದೆ ಹೋಗುವ ಕಾರಣ ಆರೋಗ್ಯ ಮತ್ತಷ್ಟು ಹದಗೆಡಲು ಪ್ರಾರಂಭಿಸುತ್ತದೆ. ಇದು ಕೂಡ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಪುರುಷರು ಸಾಮಾನ್ಯವಾಗಿ ರಾತ್ರಿಯಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಇದು ಅವರ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. 

ಎಲ್ಲಾ ಸಂಶೋಧನೆ (Research)ಗಳ ಪ್ರಕಾರ, ಆರೋಗ್ಯವಂತ ವ್ಯಕ್ತಿಯು ದಿನಕ್ಕೆ ಕನಿಷ್ಠ 8 ಗಂಟೆ ನಿದ್ರೆ ಮಾಡುವುದು ಅವಶ್ಯಕ. ಅದರಲ್ಲಿ ವಿಫಲವಾದರೆ ಅದು ದೇಹಕ್ಕೆ ಮಾತ್ರವಲ್ಲದೆ ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ. ಕಚೇರಿ (Office) ಕೆಲಸ ಸೇರಿದಂತೆ ಬೇರೆ ಒತ್ತಡದಿಂದಾಗಿ ಜನರು ನಿದ್ರೆಗೆ ಮಹತ್ವ ನೀಡುವುದಿಲ್ಲ. ಜನರು ಕಚೇರಿ ಕೆಲಸದ ಒತ್ತಡದಲ್ಲಿ ನಿದ್ರೆಯ ಬಗ್ಗೆ ರಾಜಿ ಮಾಡಿಕೊಳ್ಳಬಾರದು. ತಜ್ಞರ ಪ್ರಕಾರ, ಕಡಿಮೆ ನಿದ್ರೆ  ಹೆಚ್ಚಿನ ಪುರುಷರ ಒತ್ತಡಕ್ಕೆ ಮುಖ್ಯ ಕಾರಣ. ಒತ್ತಡ ಹೆಚ್ಚಾದಂತೆ ವೈವಾಹಿಕ ಜೀವನದಲ್ಲಿ ಕಹಿ ಹೆಚ್ಚಾಗುತ್ತದೆ. ಎನ್ ಸಿಬಿಐ ವರದಿಯ ಪ್ರಕಾರ, ಒತ್ತಡದಿಂದಾಗಿ  ಪುರುಷರ ವೈವಾಹಿಕ ಜೀವನ  ಹುಳಿಯಾಗುತ್ತದೆ. ದಂಪತಿ ಮಧ್ಯೆ ಜಗಳಗಳು ಹೆಚ್ಚಾಗುತ್ತವೆ. ಆದ್ದರಿಂದ, ವೈವಾಹಿಕ ಜೀವನವನ್ನು ಸಂತೋಷವಾಗಿಡಲು, ಪುರುಷರು ಒತ್ತಡವನ್ನು ಕಡಿಮೆ ಮಾಡಬೇಕು. ಇದಕ್ಕಾಗಿ ಪ್ರತಿದಿನ ಸಾಕಷ್ಟು ನಿದ್ರೆ ಮಾಡುವುದು ಅವಶ್ಯಕ. 

Tap to resize

Latest Videos

ರಾತ್ರಿ ಪುರುಷರು ಮಾಡಬೇಕು ಈ ಕೆಲಸ: 
1. ವಿವಾಹಿತ ಪುರುಷರು ಪ್ರತಿ ರಾತ್ರಿ ಒಂದೇ ಸಮಯದಲ್ಲಿ ಮಲಗಲು ಪ್ರಯತ್ನಿಸಬೇಕು ಮತ್ತು ಮರುದಿನ ಬೆಳಿಗ್ಗೆ ಅದೇ ಸಮಯಕ್ಕೆ ಎದ್ದೇಳಬೇಕು. ಇದು ಕೆಲವು ದಿನಗಳ ನಂತರ ನಿಮ್ಮ ನಿದ್ರೆಯ ಮಾದರಿಯನ್ನು ಸರಿಪಡಿಸುತ್ತದೆ. ನಿಮಗೆ ಅಗತ್ಯವಿರುವಷ್ಟು ನಿದ್ರೆ ಮಾಡಲು ಇದ್ರಿಂದ ಸಹಾಯವಾಗುತ್ತದೆ.

ಕೊರೊನಾ ಚಂಡಮಾರುತದಲ್ಲಿ ಕೊಚ್ಚಿ ಹೋದ ದಾಂಪತ್ಯ : ಹೆಚ್ಚಾಯ್ತು Divorce Case

2. ಮಲಗುವ ಮುನ್ನ ಪುರುಷರು ತುಂಬ ಭಾರವಾದ ಅಥವಾ ತುಂಬ ಹಗುರವಾದ ಆಹಾರವನ್ನು ಸೇವನೆ ಮಾಡಬಾರದು.  ಇದು ನಿಮ್ಮ ನಿದ್ರೆಗೆ ಅಡ್ಡಿಯಾಗಬಹುದು. ಮಲಗುವ ಸಮಯಕ್ಕೆ ಕನಿಷ್ಠ 2 ಗಂಟೆಗಳ ಮೊದಲು ಆಹಾರವನ್ನು ಸೇವಿಸಬೇಕು. 
3. ವಿವಾಹಿತ ಪುರುಷರು ಮಲಗುವ ಕೋಣೆ ಬಗ್ಗೆಯೂ ಗಮನ ನೀಡಬೇಕು. ಮಲಗುವ ಕೋಣೆ ಶಾಂತವಾಗಿರುವಂತೆ ನೋಡಿಕೊಳ್ಳಬೇಕು. ತಂಪಾದ ಹಾಗೂ ಕತ್ತಲಿರುವ ಕೋಣೆಯಲ್ಲಿ ಮಲಗುವುದು ಒಳ್ಳೆಯದು. ಇದರಿಂದ ನಿದ್ರೆ ಬೇಗ ಬರುತ್ತದೆ. ಹಾಗೆ ನಿದ್ರೆಗೆ ಯಾವುದೇ ತೊಂದರೆಯಾಗುವುದಿಲ್ಲ.
4. ಪುರುಷರು ಹಗಲಿನಲ್ಲಿ ಮಲಗುವ ಅಭ್ಯಾಸದ ಬಗ್ಗೆಯೂ ಗಮನ ಹರಿಸಬೇಕು. ತುಂಬಾ ದಣಿದಿದ್ದರೂ ಸಹ ದಿನಕ್ಕೆ 30 ನಿಮಿಷಗಳಿಗಿಂತ ಹೆಚ್ಚು ಕಾಲ ಹಗಲಿನಲ್ಲಿ ನಿದ್ರೆ ಮಾಡಬಾರದು. ರಾತ್ರಿ ನಿದ್ರೆ ಬರದೆ ಇರಲು ನೀವು ಹಗಲಿನಲ್ಲಿ ಮಾಡಿದ ನಿದ್ರೆ ಕಾರಣವಿರಬಹುದು.

ಕನ್ಯತ್ವ ಇಟ್ಕೊಂಡೇ ಸಾಯ್ತಿದ್ಲು, ಅವಳ ಕಡೆ ಆಸೆ ಕೇಳಿ ಇವನು ದಂಗು!

5.  ಒತ್ತಡದ ಕಾರಣದಿಂದಾಗಿ ವಿವಾಹಿತ ಪುರುಷರಿಗೆ ಸರಿಯಾಗಿ ನಿದ್ರೆ ಬರದೆ ಇರಬಹುದು. ಹಾಗಾಗಿ ಅವರು ದೈಹಿಕ ಚಟುವಟಿಕೆಯನ್ನು ಮಾಡಬೇಕು. ಧ್ಯಾನ, ಯೋಗಾಸನಗಳನ್ನು ಮಾಡುವುದ್ರಿಂದಲೂ ಒತ್ತಡ ಕಡಿಮೆಯಾಗುತ್ತದೆ. 

click me!