ಪತ್ನಿಯ ಸ್ನೇಹಿತೆಯೊಂದಿಗೆ ಏಕಾಂತದಲ್ಲಿರುವಾಗಲೇ ಸಿಕ್ಕಿಬಿದ್ದ ಗಂಡ!

By Sathish Kumar KH  |  First Published Sep 29, 2024, 4:31 PM IST

ವಿವಾಹೇತರ ಸಂಬಂಧಗಳು ಹೊಂದಿರುವುದು ಅನೈತಿಕ ಮತ್ತು ಅಪಾಯಕಾರಿ. ಈ ವೈರಲ್ ವಿಡಿಯೋದಲ್ಲಿ, ಪತಿ ತನ್ನ ಹೆಂಡತಿಯ ಸ್ನೇಹಿತೆಯೊಂದಿಗೆ ಅನೈತಿಕ ಸಂಬಂಧ ಹೊಂದಿರುವುದು ಬೆಳಕಿಗೆ ಬಂದಿದೆ. ಹೆಂಡತಿ ಮನೆಗೆ ಬಂದಾಗ ಏನಾಗುತ್ತದೆ ಎಂಬುದನ್ನು ನೋಡಿ.


ಇಲ್ಲೊಬ್ಬ ಪತಿರಾಯ ತನ್ನ ಹೆಂಡತಿ ಹೊರಗೆ ಹೋಗಿದ್ದ ವೇಳೆ, ಹೆಂಡತಿಯ ಸ್ನೇಹಿತೆಯನ್ನು ಮನೆಗೆ ಕರೆಸಿಕೊಂಡ ಗಂಡ ಆಕೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡು ಏಕಾಂತದಲ್ಲಿರುತ್ತಾನೆ. ಆದರೆ, ಇದೇ ವೇಳೆ ಹೆಂಡತಿ ಬಂದು ಬಾಗಿಲು ಬಡಿದಿದ್ದು, ಏಕಾಂತದಲ್ಲಿದ್ದ ಇಬ್ಬರೂ ಬರಸಿಡಿಲು ಬಂದವರಂತೆ ಮೇಲೆದ್ದು ತಪ್ಪಿಸಿಕೊಳ್ಳಲು ಪರದಾಡುತ್ತಾರೆ. ಆದರೆ, ಮುಂದೇನಾಯ್ತು ಎಂಬುದು ಈ ವೈರಲ್ ವಿಡಿಯೋದಲ್ಲಿ ನೋಡಿ..

ಹಲವು ಪುರುಷರು ತನಗೆ ಸುಂದರವಾಗಿರುವ ಹೆಂಡತಿ ಇದ್ದರೂ ಬೇರೊಬ್ಬರೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿರುತ್ತಾರೆ. ಅದರಲ್ಲಿ ಮಾಜಿ ಗೆಳತಿಯರು, ಹೆಂಡತಿಯ ಸ್ನೇಹಿತೆಯರು, ಕೆಲಸ ಮಾಡುವ ಸ್ಥಳದ ಸಹೋದ್ಯೋಗಿಗಳು, ಅಕ್ಕಪಕ್ಕದ ಮನೆಯವರೊಂದಿಗೆ ಇಂತಹ ಅನೈತಿಕ ಸಂಬಂಧಗಳು ಹೆಚ್ಚಾಗಿರುತ್ತವೆ. ಆದೇ ರೀತಿ ಇಲ್ಲೊಬ್ಬ ವ್ಯಕ್ತಿ ತಮ್ಮ ಹೆಂಡತಿಯ ಸ್ನೇಹಿತೆಯನ್ನೇ ಬುಟ್ಟಿಗೆ ಹಾಕಿಕೊಂಡಿದ್ದಾನೆ. ಹೆಂಡತಿ ಇದ್ದಾಗ ಆಗಾಗ ಮನೆಗೆ ಬರುತ್ತಿದ್ದ ಆಕೆಯ ಸ್ನೇಹಿತೆಯನ್ನೇ ಈತ ಬುಟ್ಟಿಗೆ ಹಾಕಿಕೊಂಡು, ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ. ಇದೀಗ, ಹೆಂಡತಿ ಮನೆಯಲ್ಲಿ ಇಲ್ಲದಿರುವಾಗ ಆಕೆಯನ್ನು ಮನೆಗೆ ಕರೆಸಿಕೊಂಡು ಅನೈತಿಕ ಸಂಬಂಧವನ್ನೂ ಬೆಳೆಸುತ್ತಿದ್ದಾರೆ. ಈಗ ಹೆಂಡತಿಗೆ ಸಿಕ್ಕಿಬೀಳುವ ಪರಿಸ್ಥಿತಿ ಬಂದಾಗ ಹೇಗೆ ರಕ್ಷಣೆ ಮಾಡಿಕೊಳ್ಳುತ್ತಾರೆ ಎಂಬ ವಿಡಿಯೋ ವೈರಲ್ ಆಗಿದೆ.

Tap to resize

Latest Videos

undefined

ಇದನ್ನೂ ಓದಿ: ಮೈಸೂರು: 'ಚಾಮುಂಡಿ ಕಾಲ್ಪನಿಕ, ಮಹಿಷಾಸುರನನ್ನು ಕೊಂದಿಲ್ಲ' - ನಂಜರಾಜೇ ಅರಸ್‌

ನಮ್ಮ ದೇಶದಲ್ಲಿ ಏಕ ಪತ್ನಿತ್ವ ವ್ಯವಸ್ಥೆ ಇರುವ ಹಿನ್ನೆಲೆಯಲ್ಲಿ ಪುರುಷ ಅಥವಾ ಮಹಿಳೆ ಯಾರೇ ಇದ್ದರೂ ಅವರಿಗೆ ವಿವಾಹೇತರ ಸಂಬಂಧ ಹೊಂದಲು ವಿರೋಧವಿದೆ. ಆದರೂ ಕೆಲವರು ಅನೈತಿಕ ಸಂಬಂಧಗಳನ್ನು ಇಟ್ಟುಕೊಂಡಿದ್ದು, ಅವು ದುರಂತ ಘಟನೆಗಳೊಂದಿಗೆ ಹೊರಗೆ ಬರುತ್ತವೆ. ಇನ್ನು ವಿದೇಶಗಳಲ್ಲಿಯೂ ಇದಕ್ಕೆ ಹೊರತಾಗಿಲ್ಲ. ಅಲ್ಲಿಯೂ ಕೂಡ ಹೆಂಡತಿ ಹೊರತಾಗಿ ಬೇರೊಂದು ವಿವಾಹೇತರ ಸಂಬಂಧ ಹೊಂದಲು ವಿರೋಧವಿದೆ. ಹೀಗಿದ್ದರೂ, ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಸ್ನೇಹಿತೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಇನ್ನೇನು ಹೆಂಡತಿಗೆ ಸಿಕ್ಕಿ ಬೀಳುತ್ತಾನೆ ಎನ್ನುವಾಗ ಆಕೆಯಿಂದ ಇಬ್ಬರೂ ತಪ್ಪಿಸಿಕೊಳ್ಳುತ್ತಾರೆ. ಆದರೆ, ಹೇಗೆ ಹೆಂಡತಿಯಿಂದ ಪಾರಾಗುತ್ತಾರೆ ಎಂಬ ವಿವರ ವಿಡಿಯೋದಲ್ಲಿದೆ ನೋಡಿ..

@TheFigen_ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ಮತ್ತು ಅವನ ಗೆಳತಿ (ಹೆಂಡತಿಯ ಸ್ನೇಹಿತೆ) ಕೋಣೆಯಲ್ಲಿ ಅಪ್ಪಿಕೊಂಡು ಏಕಾಂತಕ್ಕೆ ಅಣಿಯಾಗುತ್ತಿರುವುದನ್ನು ನೀವು ನೋಡಬಹುದು. ಈ ವೇಳೆ ಇದ್ದಕ್ಕಿದ್ದಂತೆ ಪತ್ನಿ ಮನೆಯ ಹೊರಗೆ ಬಂದು ಬಾಗಿಲು ಬಡಿಯುತ್ತಾಳೆ. ಆಗ ಗೆಳತಿ ಒಳಗಿದ್ದಾಳೆ ಮತ್ತು ಹೆಂಡತಿ ಹೊರಗಿದ್ದಾಳೆ ಎಂದು ಗಂಡ ಗಾಬರಿ ಬೀಳುತ್ತಾನೆ. ಅದರಲ್ಲಿಯೂ ಮನೆಯ ಒಳಗೆ ಬರಲು ಹಾಗೂ ಹೋಗಲು ಒಂದೇ ಬಾಗಿಲು ಇದ್ದುದರಿಂದ ಗೆಳತಿಯನ್ನು ಹೊರಗೆ ಕಳುಹಿಸಲಾಗದೆ ಪರದಾಡಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಪತಿಯ ಪರಿಸ್ಥಿತಿ ಹದಗೆಡುತ್ತದೆ.

ಇದನ್ನೂ ಓದಿ: ಗಂಡಸರು ಕಾಮತೃಷೆ ತೀರಿಸಿಕೊಳ್ಳಲು ಬಲತ್ಕಾರ ಮಾಡಲ್ಲ, ಬದಲಿಗೆ... ಉರ್ಫಿ ಜಾವೇದ್​ ಹೇಳಿದ್ದೇನು?

ಪತ್ನಿ ಸತತವಾಗಿ ಬಾಗಿಲು ಬಡಿಯುತ್ತಲೇ ಇರುತ್ತಾಳೆ, ನಂತರ ಪತಿಗೆ ಒಂದು ಟ್ರಿಕ್ ಹೊಳೆಯುತ್ತದೆ. ಅವನು ತನ್ನ ಬಟ್ಟೆಗಳನ್ನು ಬೇಗನೆ ತೆಗೆದು ತನ್ನ ಗೆಳತಿಗೆ ಹಾಕಿಕೊಳ್ಳಲು ಹೇಳುತ್ತಾನೆ. ಜೊತೆಗೆ, ಆಕೆಯ ಉದ್ದನೆಯ ತಲೆ ಕೂದಲನ್ನು ಮರೆಮಾಡಲು ಹಾಗೂ ಮುಖ ಕಾಣದಂತೆ ಟೋಪಿ ಹಾಕುತ್ತಾನೆ. ಅವನು ಅವಳನ್ನು ಟಿವಿಯ ಮುಂದೆ ಕುರ್ಚಿಯಲ್ಲಿ ಕುಳಿತು ವಿಡಿಯೋ ಗೇಮ್ ಆಡಲು ಬಂದವಳಂತೆ ಕುಳಿತಿರುತ್ತಾಳೆ. ಇದಾದ ಬಳಿಕ ಗಂಡ ಹೋಗಿ ಬಾಗಿಲು ತೆರೆದು ಪತ್ನಿಯನ್ನು ಒಳಗೆ ಕರೆಯುತ್ತಾನೆ. ಆಗ ಹೆಂಡತಿಗೆ ಈತ ತನ್ನ ಗೆಳೆಯ ವಿಡಿಯೋ ಗೇಮ್ ಆಡಲು ಬಂದಿದ್ದಾನೆ ಎಂದು ಪರಿಚಯ ಮಾಡಿಕೊಡುತ್ತಾನೆ. ಆಗ ಹೆಂಡತಿ, ಅವರನ್ನು ಮಾತನಾಡಿಸದೇ ನೇರವಾಗಿ ಒಳಗೆ ಹೋಗುತ್ತಾಳೆ. ಪತ್ನಿ ಒಳಗೆ ಹೋದ ಕೂಡಲೇ ಗೆಳತಿಯನ್ನು ಹೊರಗೆ ಕಳಿಸಿ, ಸಂಕಷ್ಟದಿಂದ ಪಾರಾಗುತ್ತಾನೆ.

He is the devil's master.

pic.twitter.com/TpEa2pmo90

— Figen (@TheFigen_)
click me!