ಹೆಂಡ್ತಿ ಕಾಟ ತಡ್ಯೋಕ್ ಆಗ್ತಿಲ್ಲ, ನೊಂದ ಪುರುಷರ ಗೋಳು ಕೇಳೋರಿಲ್ಲ!

By Roopa Hegde  |  First Published Sep 27, 2024, 2:49 PM IST

ಕೌಟುಂಬಿಕ ದೌರ್ಜನ್ಯ ಅಂದ್ರೆ ಅಲ್ಲಿ ಮಹಿಳೆ ಮಾತ್ರ ಶೋಷಿತಳಲ್ಲ. ಪುರುಷರೂ ಅನೇಕ ಬಾರಿ ಪತ್ನಿ ಕಾಟಕ್ಕೆ ಹಿಂಸೆ ಅನುಭವಿಸ್ತಾರೆ. ಆತ್ಮಹತ್ಯೆ ಮಾಡ್ಕೊಂಡವರ ಸಂಖ್ಯೆ ಕೂಡ ಸಾಕಷ್ಟಿದೆ. ಉತ್ತರಪ್ರದೇಶದಲ್ಲಿ ನೊಂದ ಪತಿಯರ ಸಂಖ್ಯೆ ಆಗ್ತಾನೆ ಇದೆ. 
 


ಭಾರತದಲ್ಲಿ ಕೌಟುಂಬಿಕ ದೌರ್ಜನ್ಯ (India Domestic violence) ನಿಂತಿಲ್ಲ. ಪತಿಯ ಕಾಟಕ್ಕೆ ಬೇಸತ್ತು ಅದೆಷ್ಟೋ ಮಹಿಳೆಯರು ಆತ್ಮಹತ್ಯೆ ಮಾಡ್ಕೊಂಡಿದ್ದಾರೆ.  ಆದ್ರೆ ಈಗ ಪುರುಷರಿಗೆ ಟಕ್ಕರ್ ನೀಡೋಕೆ ಮಹಿಳೆಯರು ಸಿದ್ಧವಾಗಿದ್ದಾರೆ. ರಿಪೋರ್ಟ್ ಒಂದರ ಪ್ರಕಾರ, ಪತ್ನಿ ಕಾಟ ತಾಳಲಾರದೆ ಆತ್ಮಹತ್ಯೆ (Suicide) ಮಾಡಿಕೊಳ್ತಿರುವ ಗಂಡಂದಿರ ಸಂಖ್ಯೆ ಇತ್ತೀಚಿಗೆ ಜಾಸ್ತಿ ಆಗಿದೆ. ಮಹಿಳೆ ಯಾವುದೇ ಹಿಂಸೆಗೆ ಒಳಗಾದ್ರೆ ದೂರು ನೀಡೋಕೆ ಮಹಿಳಾ ಆಯೋಗಕ್ಕೆ ಹೋಗ್ತಾಳೆ. ಆದ್ರೆ ಪುರುಷರು ಎಲ್ಲಿ ಹೋಗ್ಬೇಕು? ಈ ಪ್ರಶ್ನೆಯನ್ನಿಟ್ಟುಕೊಂಡೇ ವಕೀಲರೊಬ್ಬರು ಸುಪ್ರೀಂ ಕೋರ್ಟ್ ಗೆ ಪುರುಷ ಆಯೋಗ ಸ್ಥಾಪನೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಈಗ ಉತ್ತರ ಪ್ರದೇಶ (Uttar Pradesh) ದ ವರದಿಯೊಂದು, ಪುರುಷರ ಆಯೋಗ ಬೇಕೇಬೇಕು ಎಂಬುದನ್ನು ಒತ್ತಿ ಹೇಳ್ತಿದೆ. ವರದಿ ಪ್ರಕಾರ, ಉತ್ತರ ಪ್ರದೇಶದಲ್ಲಿ ಪತ್ನಿ ಪೀಡನೆಗೆ ಒಳಗಾಗ್ತಿರುವ ಪುರುಷರ ಸಂಖ್ಯೆ ವೇಗವಾಗಿ ಹೆಚ್ಚಾಗ್ತಿದೆ.

ಉತ್ತರ ಪ್ರದೇಶದ ಮಾನವ ಹಕ್ಕುಗಳ ಆಯೋಗ (Human Rights Commission) ಕ್ಕೆ ನಿತ್ಯ, ನೋವು ಹೊತ್ತ ಪುರುಷರು ಬರ್ತಿದ್ದಾರೆ. ನೊಂದ ಪತಿಯಂದಿರ ಸಂಖ್ಯೆ ಏರಿಕೆಯಾಗಿದೆ. ಈ ವರ್ಷ ಇದುವರೆಗೆ 22522 ದೂರುಗಳು ದಾಖಲಾಗಿವೆ. ಅಂಕಿ ಅಂಶಗಳ ಪ್ರಕಾರ, ಜನವರಿ 2023-24ರವರೆಗೆ 31285 ದೂರುಗಳು ಬಂದಿವೆ. 2022-23ನೇ ಸಾಲಿನಲ್ಲಿ 36209 ದೂರುಗಳು ಬಂದಿವೆ. 2011-12ನೇ ಸಾಲಿನಲ್ಲಿ ಆಯೋಗಕ್ಕೆ ಅತಿ ಹೆಚ್ಚು 38824 ದೂರುಗಳು ಬಂದಿದ್ದವು.

Latest Videos

undefined

ಆರೇಳು ದಶಕಗಳಲ್ಲಿ ಮದುವೆ ಎನ್ನುವುದೇ ಇರಲ್ಲ: ಅಧ್ಯಯನದಿಂದ ಬಯಲಾಗಿದೆ ಶಾಕಿಂಗ್​ ವಿಷಯ!

ಉತ್ತರಪ್ರದೇಶ ಮಾತ್ರವಲ್ಲ ದೇಶದಾದ್ಯಂತ ಶೇಕಡಾ 33.2ರಷ್ಟು ಪುರುಷರು ಕೌಟುಂಬಿಕ ಸಮಸ್ಯೆಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೇಕಡಾ 4.8 ರಷ್ಟು ವೈವಾಹಿಕ ಕಲಹ ಮತ್ತು ಕೌಟುಂಬಿಕ ಹಿಂಸೆಗೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಾಕಷ್ಟು ಸಮೀಕ್ಷೆ ನಡೆದಿದ್ದು, ರಾಷ್ಟ್ರೀಯ ಪುರುಷರ ಆಯೋಗ ರಚಿಸಬೇಕು ಎಂಬ ಆಗ್ರಹ ಕೇಳಿಬಂದಿದೆ. 

ಭಾರತ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಪುರಷರ ಈ ಸಮಸ್ಯೆಯನ್ನು ನಿಭಾಯಿಸಲು ಯಾವುದೇ ನಿರ್ದಿಷ್ಟ ಕಾನೂನನ್ನು ಹೊಂದಿಲ್ಲ. ಯುಕೆ, ಯುಎಸ್, ಕೆನಡಾದಂತಹ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕೌಟುಂಬಿಕ ಹಿಂಸೆಯ ಕಾನೂನು, ಲಿಂಗ ತಟಸ್ಥವಾಗಿದೆ. ಆದರೆ ಭಾರತದಲ್ಲಿ ಇದು ಮಹಿಳೆಯರಿಗೆ ಮೀಸಲಾಗಿದೆ.  ಭಾರತದಲ್ಲಿ ಪತಿಗೆ ತನ್ನ ಹೆಂಡತಿಗೆ ಸಮಾನವಾದ ಹಕ್ಕನ್ನು ಹೊಂದಿಲ್ಲ. ಆದರೆ ಅವನ ಸುರಕ್ಷತೆ ಮತ್ತು ಘನತೆಗೆ ಕೆಲವು ಕಾನೂನು ಹಕ್ಕುಗಳಿವೆ. ಇದನ್ನು ಪ್ರತಿಯೊಬ್ಬ ವ್ಯಕ್ತಿ ತಿಳಿಯುವ ಅಗತ್ಯವಿದೆ. 

ಪತ್ನಿಯ ಬಿಕಿನಿ ಆಸೆ ಈಡೇರಿಸಲು 418 ಕೋಟಿ ರೂ. ದ್ವೀಪ ಖರೀದಿಸಿದ ಪತಿ! ವಿಡಿಯೋ ನೋಡಿ ಸುಸ್ತಾದ ನೆಟ್ಟಿಗರು

1. ಕೌಟುಂಬಿಕ ಹಿಂಸೆಯ ಸಂದರ್ಭದಲ್ಲಿ ಪತಿ ಪೊಲೀಸರಿಂದ ಸಹಾಯ ಪಡೆಯಬಹುದು. ಹೆಂಡತಿ, ಗಂಡನಿಗೆ ಹೊಡೆಯುತ್ತಿದ್ದರೆ,  ಜಗಳವಾಡುತ್ತಿದ್ದರೆ, ಆತನ ಮೇಲೆ ಒತ್ತಡ ಹೇರುತ್ತಿದ್ದರೆ, ಆತ 100 ಅಥವಾ ಮಹಿಳಾ ಸಹಾಯವಾಣಿ ಸಂಖ್ಯೆ 1091 ಗೆ ಕರೆ ಮಾಡಿ ದೂರು ದಾಖಲಿಸಬಹುದು.
2. ಪತಿಗೆ ಮಾತ್ರ ಸ್ವಯಂ ನಿರ್ಮಿತ ಆಸ್ತಿ ಮೇಲೆ ಹಕ್ಕಿದೆ. ಆತನ ಹೆಂಡತಿ ಅಥವಾ ಮಕ್ಕಳಿಗೆ ಈ ಆಸ್ತಿಯ ಮೇಲೆ ಯಾವುದೇ ಹಕ್ಕಿಲ್ಲ. ಅದನ್ನು ತನಗೆ ಬೇಕಾದವರಿಗೆ ಕೊಡಬಹುದು ಅಥವಾ ಯಾರಿಗೂ ಕೊಡದೆ ಟ್ರಸ್ಟ್ ಗೆ ಹಸ್ತಾಂತರಿಸಬಹುದು.
3. ಪತ್ನಿ ಮಾನಸಿಕ ಹಿಂಸೆ ನೀಡ್ತಿದ್ದರೆ ಪತಿ, ಪೊಲೀಸ್ ಅಥವಾ ಕೋರ್ಟ್ ಮೊರೆ ಹೋಗಿ ನ್ಯಾಯಪಡೆಯಬಹುದು. ಮನೆಯವರು, ಸ್ನೇಹಿತರ ಭೇಟಿಗೆ ಅವಕಾಶ ನೀಡದಿರುವುದು, ಪದೇ ಪದೇ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕುವುದು, ದೈಹಿಕ ಹಿಂಸೆ ನೀಡುವುದು, ಮನೆಯಿಂದ ಹೊರಹಾಕುವುದು, ಸಾರ್ವಜನಿಕ ನಿಂದನೆ ಇದೆಲ್ಲ ಮಾನಸಿಕ ಹಿಂಸೆ ಎನ್ನಿಸಿಕೊಳ್ಳುತ್ತದೆ. 
4. ಪತಿ ವಿಚ್ಛೇದನ ನೀಡಬಹುದು. ಪತ್ನಿಯಿಂದ ಜೀವನಾಂಶ ಕೇಳಬಹುದು. ಮಕ್ಕಳ ಪಾಲನೆ ಜವಾಬ್ದಾರಿಯನ್ನು ಹೊರಬಹುದು.  

click me!