Asianet Suvarna News Asianet Suvarna News

ಗಂಡಸರು ಕಾಮತೃಷೆ ತೀರಿಸಿಕೊಳ್ಳಲು ಬಲತ್ಕಾರ ಮಾಡಲ್ಲ, ಬದಲಿಗೆ... ಉರ್ಫಿ ಜಾವೇದ್​ ಹೇಳಿದ್ದೇನು?

ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿರುವುದಕ್ಕೆ ಕಾರಣ ಕಾಮತೃಷೆ ತೀರಿಸಿಕೊಳ್ಳುವ ಉದ್ದೇಶ ಮಾತ್ರ ಅಲ್ಲ ಎನ್ನುತ್ತಲೇ ನಟಿ ಉರ್ಫಿ ಜಾವೇದ್​ ಹೇಳಿದ್ದೇನು?
 

physical harassment committed due to power control anger not for lust says Urfi Javed
Author
First Published Sep 25, 2024, 5:57 PM IST | Last Updated Sep 25, 2024, 6:04 PM IST

 ಅತ್ಯಾಚಾರ ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಲೇ ಇವೆ. ದಶಕಗಳಿಂದಲೂ  ಮಹಿಳೆಯರ ಮೇಲಿನ ದೌರ್ಜನ್ಯ, ಕ್ರೌರ್ಯ, ಅತ್ಯಾಚಾರ ಪ್ರಕರಣಗಳಿಗೆ ಮಿತಿಯೇ ಇಲ್ಲವಾಗಿದೆ. ಇದಕ್ಕೆ ನಮ್ಮ ಕಾನೂನಿನ ವ್ಯವಸ್ಥೆಗಳು ಕಾರಣ ಎಂಬ ಬಗ್ಗೆ ಹಲವು ದಶಕಗಳಿಂದ ಕೂಗು ಕೇಳಿಬರುತ್ತಿದೆ.  ಹಸುಗೂಸಿನಿಂದ ಹಿಡಿದು ವಯೋವೃದ್ಧರವರೆಗೂ ಪುರುಷರ ತಮ್ಮ ಮೃಗೀಯತನವನ್ನು ತೋರಿಸುತ್ತಿದ್ದಾರೆ. ಒಂದೊಂದು ಅತ್ಯಾಚಾರ ಪ್ರಕರಣಗಳಂತೂ ಘನಘೋರವಾಗಿದ್ದು, ಕ್ರೂರ ಮೃಗಗಳಿಗಿಂತಲೂ ಹಿಂಸಾತ್ಮಕವಾಗಿರುತ್ತದೆ. ಇತ್ತೀಚೆಗೆ ಕೋಲ್ಕತಾದಲ್ಲಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರವೇ ಇದಕ್ಕೆ ಸಾಕ್ಷಿಯಾಗಿದೆ. 

ಹೀಗೆ ರೇಪ್​ ನಡೆಯಲು ಹೆಣ್ಣುಮಕ್ಕಳು ಧರಿಸುವ ಬಟ್ಟೆಗಳೇ ಕಾರಣ ಎನ್ನುವ ವಾದವೂ ಇದೆ. ಚಿತ್ರನಟಿಯರು, ಅವರಿಂದ ಪ್ರೇರೇಪಿತವಾಗುವ ಶ್ರೀಮಂತ ಮಕ್ಕಳು ಧರಿಸುವ ಪ್ರಚೋದನಕಾರಿ ಬಟ್ಟೆಗಳಿಂದ ಪುರುಷರ ಮನಸ್ಸು ಕಾಮದ ಕಡೆ ಎಳೆಯುತ್ತದೆ. ಹೀಗೆ ಬಟ್ಟೆ ಧರಿಸುವವರಿಗೆ ಅವರ ಕೈಯಲ್ಲಿ ಏನೂ ಮಾಡಲು ಆಗುವುದಿಲ್ಲ. ಆದರೆ ಆ ಕಾಮಾಸಕ್ತಿ ಕೆರಳಿ ಸಿಕ್ಕ ಸಿಕ್ಕವರ ಮೇಲೆ, ಕೊನೆಗೆ ಯಾರೂ ಸಿಗದಿದ್ದಾಗ ಹಸುಗೂಸುಗಳ ಮೇಲೆ, ವಯೋವೃದ್ಧೆಯರ ಮೇಲೆ ರೇಪ್​ ಮಾಡುತ್ತಾರೆ ಎನ್ನುವ ಮಾತು ಕೇಳಿಬರುತ್ತಿದೆ. ಈ ಮಾತಿಗೆ ಹಲವಾರು ಮಂದಿ ಆಕ್ಷೇಪವನ್ನೂ ವ್ಯಕ್ತಪಡಿಸುವುದಿದೆ. ಇದು ಒಂದೆಡೆಯಾದರೆ ಸ್ಮಾರ್ಟ್​ಫೋನ್​ನಿಂದಾಗಿಯೂ ವಿಕೃತಿ ಹೆಚ್ಚಾಗಿದೆ ಎನ್ನುವ ವಾದವೂ ಇದೆ. ಒಟ್ಟಿನಲ್ಲಿ ಕಾರಣ ಏನೇ ಇರಲಿ, ಬರ್ಬರವಾಗಿ ನಡೆಯುವ ಮನುಕುಲವನ್ನೇ ನಡುಗಿಸುವ ಭಯಾನಕ ಕೃತ್ಯಗಳಂತೂ ನಡೆಯುತ್ತಲೇ ಇವೆ.

3 ವರ್ಷದಿಂದ ಸೆಕ್ಸೇ ಮಾಡಿಲ್ಲ ಅಂದ ಉರ್ಫಿ ಎದೆ ಮೇಲೆ ಉಡ ಬಿಟ್ಕೊಳೋದಾ? ಕಮೆಂಟಿಗರು ಸುಮ್ನೆ ಇರ್ತಾರಾ?

ಇದಕ್ಕೆ ಈಗ ನಟಿ ಉರ್ಫಿ ಜಾವೇದ್​ ತಮ್ಮದೇ ಆದ ವಿಶ್ಲೇಷಣೆ ನೀಡಿದ್ದಾರೆ. ಅತ್ಯಾಚಾರವನ್ನು ಪುರುಷರು ಯಾಕೆ ಮಾಡುತ್ತಾರೆ ಎಂದು ಅವರು ತಿಳಿಸಿದ್ದಾರೆ. ಅವರು ಹೇಳಿದ್ದೇನೆಂದರೆ, ರೇಪ್​ ಮಾಡುವುದು ಪುರುಷರು ತಮ್ಮ ಕಾಮತೃಷೆಯನ್ನು ತೀರಿಸಿಕೊಳ್ಳುವುದಕ್ಕೆ ಅಲ್ಲ, ಬದಲಿಗೆ ತಮ್ಮ ಪೌರುಷತ್ವವನ್ನು ತೋರಿಸಲು, ತನ್ನಿಂದ ಎಲ್ಲವೂ ಸಾಧ್ಯ ಎಂದು ಸಾಬೀತು ಮಾಡಲು, ಶಕ್ತಿ ಪ್ರದರ್ಶನ ಮಾಡಲು ಹಾಗೂ ಕೋಪವನ್ನು ಹೊರಹಾಕಲು  ಹೀಗೆ ಮಾಡುವವರ ಸಂಖ್ಯೆಯೇ ಹೆಚ್ಚಿದೆ. ಅವರಿಗೆ ಗೊತ್ತಿದೆ. ಹೀಗೆ ಮಾಡಿದರೆ ತಮ್ಮನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎನ್ನುವುದು ಎನ್ನುವ ಮೂಲಕ ಈಗಿನ ಕಾನೂನಿನ ಸ್ಥಿತಿ, ಪೊಲೀಸ್​ ವ್ಯವಸ್ಥೆಯ ಬಗ್ಗೆಯೂ ಪರೋಕ್ಷವಾಗಿ ನಟಿ ಹೇಳಿದ್ದಾರೆ. 

ಇತ್ತೀಚೆಗಷ್ಟೇ ಬಾಲಕನೊಬ್ಬ ಸಾರ್ವಜನಿವಾಗಿಯೇ ತಮಗೆ What is your body count ಎಂದು  ಪ್ರಶ್ನಿಸಿದ್ದ ಬಗ್ಗೆ ನಟಿ ಹೇಳಿದ್ದರು.  ಇದರ ಅರ್ಥ ಎಷ್ಟು ಜನರ ಜೊತೆ ಮಲಗಿರುವೆ ಎಂದು, ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ, ಎಷ್ಟು ಮಂದಿಯ ಜೊತೆ ಸೆಕ್ಸ್‌ ಮಾಡಿರುವೆ ಎನ್ನುವುದು. ಇಂಥದ್ದೊಂದು ಪ್ರಶ್ನೆ ಹದಿನೈದು ವರ್ಷದ ಬಾಲಕನಿಂದ ಸಾರ್ವಜನಿಕವಾಗಿ ಬಂದಿರುವುದಕ್ಕೆ ನಟಿ ಆತಂಕ ವ್ಯಕ್ತಪಡಿಸಿದ್ದರು.  ನನ್ನ ಕುಟುಂಬದ ಜೊತೆಗೆ ಹೋಗುತ್ತಿರುವಾಗ ಎಲ್ಲರ ಎದುರೇ ಬಾಲಕ ಇಂಥ ಪ್ರಶ್ನೆ ಕೇಳಿದ್ದ ಎಂದಿದ್ದರು. ಆದರೆ ಆಗ ಎಲ್ಲರೂ  ಇಂಥ ಹೇಳಿಕೆಗಳನ್ನು ಕೇಳಿದ ಮೇಲೆ ಆದರೂ ವಿಚಿತ್ರ ವೇಷ ಬಿಡುವೆಯಾ ಎಂದು ಉರ್ಫಿಯವರನ್ನೇ ನೆಟ್ಟಿಗರು ಪ್ರಶ್ನಿಸಿದ್ದರು.  ಆದರೆ ಈಗ ನಟಿಯ ಮಾತಿಗೆ ಎಲ್ಲರೂ ಬೆಂಬಲ ಸೂಚಿಸುತ್ತಿದ್ದಾರೆ. ಗಂಡುಮಕ್ಕಳಿಗೆ  ಮನೆಯಲ್ಲಿಯೇ ಸಂಸ್ಕಾರ ನೀಡಬೇಕು ಎನ್ನುವ ಮಾತೂ ಕೇಳಿ ಬರುತ್ತಿದೆ. ಹೆಣ್ಣು ಮಕ್ಕಳು ಹಾಗಿರಬೇಕು, ಹೀಗಿರಬೇಕು ಎಂದು ಅಪ್ಪ-ಅಮ್ಮ ಕಲಿಸುವುದು ಸರಿಯೇ, ಆದರೆ ಅದಕ್ಕಿಂತಲೂ ಹೆಚ್ಚಾಗಿ ಗಂಡು ಮಕ್ಕಳಿಗೆ ಸಂಸ್ಕಾರ ನೀಡಿದರೆ ಅತ್ಯಾಚಾರದಂಥ ಪ್ರಕರಣಗಳನ್ನು ತಕ್ಕಮಟ್ಟಿಗೆ ತಪ್ಪಿಸಬಹುದು ಎಂದು ಕಮೆಂಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಉರ್ಫಿಗೆ ಸಾರ್ವಜನಿಕವಾಗಿ ಸೆಕ್ಸ್‌ ಪ್ರಶ್ನೆ ಕೇಳಿದ 15 ವರ್ಷದ ಬಾಲಕ! ಶಾಕಿಂಗ್‌ ಘಟನೆ ವಿವರಿಸಿದ ನಟಿ...

Latest Videos
Follow Us:
Download App:
  • android
  • ios