ಆರೇಳು ದಶಕಗಳಲ್ಲಿ ಮದುವೆ ಎನ್ನುವುದೇ ಇರಲ್ಲ: ಅಧ್ಯಯನದಿಂದ ಬಯಲಾಗಿದೆ ಶಾಕಿಂಗ್​ ವಿಷಯ!

By Suchethana D  |  First Published Sep 27, 2024, 11:55 AM IST

ಮದುವೆ, ದಾಂಪತ್ಯ ಎನ್ನುವ ಪರಿಕಲ್ಪನೆ ದಿನದಿಂದ ದಿನಕ್ಕೆ ಬದಲಾಗುತ್ತಿರುವ ಹಿನ್ನೆಲೆಯಲ್ಲಿ 2100ರ ವೇಳೆಗೆ ಮದುವೆ ಎನ್ನುವುದೇ ಇರುವುದಿಲ್ಲ ಎನ್ನುವ ಶಾಕಿಂಗ್​ ವಿಷಯದ ಕುರಿತು ತಜ್ಞರು ಏನು ಹೇಳಿದ್ದಾರೆ ನೋಡಿ.
 


ಮದುವೆ ಎನ್ನುವ ಪರಿಕಲ್ಪನೆ ಬದಲಾಗುತ್ತಿದೆ. ಹಿಂದೆಲ್ಲಾ ಮದುವೆ ಎನ್ನುವುದಕ್ಕೆ ಅದರದ್ದೇ ಆದ ಪಾವಿತ್ರ್ಯತೆ ಇತ್ತು. ಒಮ್ಮೆ ಮದುವೆಯಾದ ಮೇಲೆ ಏನೇ ಆದರೂ ದಂಪತಿ ಬೇರೆಯಾಗುವ ಮಾತೇ ಇರಲಿಲ್ಲ. ಕಾಲ ಕ್ರಮೇಣ ಮದುವೆಯ ಜೊತೆಜೊತೆಗೆ ವಿಚ್ಛೇದನ ಹೆಚ್ಚುತ್ತಿದೆ. ಹಲವು ಪ್ರಕರಣಗಳಲ್ಲಿ ದಂಪತಿ ನಡುವೆ ಚಿಕ್ಕಪುಟ್ಟ ಭಿನ್ನಾಭಿಪ್ರಾಯ ಬಂದರೂ ಅದು ವಿಚ್ಛೇದನದೊಂದಿಗೆ ಅಂತ್ಯಗೊಳುತ್ತಿದೆ. ಅದೇ  ಇನ್ನೊಂದೆಡೆ, ಅಕ್ರಮ ಸಂಬಂಧ, ಲಿವ್​ ಇನ್​ ರಿಲೇಷನ್​, ಡೇಟಿಂಗ್​ ಶ್ರೀಮಂತ ವರ್ಗದವರಲ್ಲಿ ಪತ್ನಿಯಂದಿರ ಎಕ್ಸೇಂಜ್​... ಹೀಗೆ ವಿದೇಶಗಳಿಗಷ್ಟೇ ಸೀಮಿತವಾಗಿದ್ದ, ಭಾರತದಲ್ಲಿ ಅಸಹ್ಯ, ಅಸಭ್ಯ ಎಂದು ಪರಿಗಣಿಸಿರುವ ಏನೇನೋ ಪದ್ಧತಿಗಳು, ಸಂಬಂಧಗಳು ಭಾರತಕ್ಕೂ ಕಾಲಿಟ್ಟು ಅದೇಷ್ಟೋ ವರ್ಷಗಳೇ ಕಳೆದು ಹೋಗಿವೆ. ಇವುಗಳ ನಡುವೆಯೇ, ಮಹಿಳೆಯರು ಸ್ವತಂತ್ರರಾಗಿ ಇರಲು ಇಷ್ಟಪಡುತ್ತಿರುವ ಕಾರಣ, ಮದುವೆ ಬೇಡವೇ ಬೇಡ ಎನ್ನುವ ಮಟ್ಟಿಗೆ ಹೋಗಿದ್ದಾರೆ.

ಇವೆಲ್ಲವುಗಳ ಪರಿಣಾಮವಾಗಿ ಇನ್ನು ಆರೇಳು ದಶಕಗಳಲ್ಲಿ ಅಂದ್ರೆ ಸುಮಾರು 2100 ರ ಹೊತ್ತಿಗೆ, ಮದುವೆ ಎನ್ನುವ ಪರಿಕಲ್ಪನೆಯೇ ಇರಲ್ಲ. ಯಾರೂ ಮದುವೆಯಾಗಲ್ಲ ಎನ್ನುವ ಆತಂಕಕಾರಿ ವರದಿಯೀಗ ಬಹಿರಂಗಗೊಂಡಿದೆ. ಈ ಕುರಿತು ತಜ್ಞರು ಮಾತನಾಡಿರುವ ವಿಡಿಯೋ ವೈರಲ್​ ಆಗಿದೆ. ಮದುವೆ ಎಂಬ ಸಂಬಂಧ ಕ್ರಮೇಣ ಹೇಗೆ ರೂಪುಗೊಳ್ಳುತ್ತಾ ಸಾಗಿದೆ ಎಂಬ ಬಗ್ಗೆ ವಿಶ್ಲೇಷಿಸಲಾಗಿದ್ದು,  ಸಾಮಾಜಿಕ ಬದಲಾವಣೆಗಳು, ಹೆಚ್ಚುತ್ತಿರುವ ವೈಯಕ್ತಿಕತೆ ಮತ್ತು ವಿಕಸನಗೊಳ್ಳುತ್ತಿರುವ ಲಿಂಗ ಪಾತ್ರಗಳಿಂದಾಗಿ  ಸಾಂಪ್ರದಾಯಿಕ ವಿವಾಹವು ಇನ್ನು ಮುಂದೆ ಕಂಡುಬರುವುದಿಲ್ಲ ಎಂದು ಅವರು ವಿಶ್ಲೇಷಿಸಿದ್ದಾರೆ.  ಅದಕ್ಕೆ ಕೊಟ್ಟಿರುವ ಕೆಲವು ಉದಾಹರಣೆಗಳು ಎಂದರೆ, ಯುವ ಪೀಳಿಗೆಯವರು ವೃತ್ತಿ, ವೈಯಕ್ತಿಕ ಬೆಳವಣಿಗೆ ಮತ್ತು ಅನುಭವಗಳ ಮೇಲೆ ಹೆಚ್ಚು ಗಮನಹರಿಸುತ್ತಿರುವುದು ಆಗಿದೆ ಎಂದಿದ್ದಾರೆ.

Tap to resize

Latest Videos

undefined

ನಿಜವಾಗ್ಲೂ ಈ ಭೂಮಿ ಮೇಲೆ ಇಂಥ ಹೆಂಡ್ತಿ ಇರೋಕೆ ಸಾಧ್ಯನಾ ಅಂತಿರೋದ್ಯಾಕೆ ಭಾಗ್ಯಲಕ್ಷ್ಮಿ ಫ್ಯಾನ್ಸ್​!

ಇದರ ಜೊತೆಗೆ,  ಸಹಬಾಳ್ವೆ ಅಂದ್ರೆ ಲಿವ್​ ಇನ್​ ರಿಲೇಷನ್​ ಮತ್ತು ಅಸಾಂಪ್ರದಾಯಿಕ ಸಂಬಂಧಗಳು ಏರಿಕೆ ಕಾಣುತ್ತಿದೆ. ಇದರಿಂದ  ಮದುವೆ ಅವರಿಗೆ ಬೇಡವಾಗಿದೆ.   ಇದರ ಜೊತೆಗೆ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಲ್ಲಿನ ಪ್ರಗತಿ ಕೂಡ ಕಾರಣವಾಗಿದೆ. ಇದರಿಂದಾಗಿ ಮಾನವ ಒಡನಾಟವು ಭವಿಷ್ಯದಲ್ಲಿ ವಿಭಿನ್ನವಾಗಿ ಕಾಣಿಸಬಹುದು ಎನ್ನುವುದು ಅವರ ಅಭಿಮತ. ಜೊತೆಗೆ,   ಜೀವನ ವೆಚ್ಚದಂತಹ ಆರ್ಥಿಕ ಅಂಶಗಳು ಮದುವೆಯತ್ತ  ಕಡಿಮೆ ಆಕರ್ಷಿತರನ್ನಾಗಿಸುತ್ತಿದೆ. ಅದರಲ್ಲಿಯೂ ಮಹಿಳೆಯರು ಈಗ ಸ್ವಾವಲಂಬಿ ಜೀವನ ಬಯಸುತ್ತಿದ್ದಾರೆ. ಮದುವೆಯ ಬಂಧ ಅವರಿಗೆ ಬೇಡವಾಗಿದೆ. ಮದುವೆ ಎನ್ನುವುದು ಬಂಧನ, ಅಲ್ಲಿ ತಮಗೆ ಸ್ವಾತಂತ್ರ್ಯವಿಲ್ಲ, ತಮಗೆ ಭವಿಷ್ಯವಿಲ್ಲ, ಕರಿಯರ್​ನಲ್ಲಿ ಮುಂದೆ ಬರಲು ಆಗುವುದಿಲ್ಲ ಎಂದು ಭಾವಿಸುತ್ತಿರುವವರ ಸಂಖ್ಯೆ ದಿನೇ ದಿನೇ ಏರುಮುಖದಲ್ಲಿ ಸಾಗುತ್ತಿರುವ ಕಾರಣ, ಮದುವೆಯಾಗಲು ಇದಾಗಲೇ ಹಲವರು ಒಪ್ಪುತ್ತಿಲ್ಲ. ಮದುವೆಯಾದರೂ ಮಗು ಮಾಡಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದೇ ಪ್ರವೃತ್ತಿ ಮುಂದುವರೆದರೆ 2100ರ ಹೊತ್ತಿಗೆ ಮದುವೆ ಎನ್ನುವ ಕಾನ್​ಸೆಪ್ಟೇ ಇರಲ್ಲ ಎಂದಿದ್ದಾರೆ. 
 
ಇದಾಗಲೇ, ಲ್ಯಾನ್ ಸೆಟ್  ಅಧ್ಯಯನ ಪ್ರಕಾರ ಭೂಮಿಯ ಮೇಲೆ ಪ್ರಸ್ತುತ 8 ಶತಕೋಟಿ ಜನರು ನೆಲೆಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆಯಲ್ಲಿ ಗಮನಾರ್ಹ ಬದಲಾವಣೆಯಾಗಲಿದೆ.  ಜಾಗತಿಕ ಮಟ್ಟದಲ್ಲಿ ಜನಸಂಖ್ಯಾ ಫಲವತ್ತತೆ ದರ ತೀವ್ರವಾಗಿ ಕುಸಿಯುತ್ತದೆ. ಈ ಬೆಳವಣಿಗೆ ಭವಿಷ್ಯತ್ ನಲ್ಲಿ ಮಾನವನ ಮೇಲೆ ಹೆಚ್ಚು ಪ್ರಭಾವ ಬೀರಲಿದೆ ಎನ್ನಲಾಗಿದೆ.  1950ರ ದಶಕದಿಂದ  ಎಲ್ಲಾ ದೇಶಗಳಲ್ಲಿ ಜನಸಂಖ್ಯೆಯ ದರ ಕುಸಿಯುತ್ತಿದೆ.   1950ರಲ್ಲಿ ಜನಸಂಖ್ಯಾ ಫಲವತ್ತತೆ ದರ ಶೇ.4.84 ರಷ್ಟಿತ್ತು. 2021ರ ವೇಳೆಗೆ ಶೇ.2.23ಕ್ಕೆ ಇಳಿಕೆ ಕಂಡಿದೆ. 2100ರ ವೇಳೆಗೆ ಶೇ.1.59ಕ್ಕೆ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದಿದೆ.   

ಪತ್ನಿಯ ಬಿಕಿನಿ ಆಸೆ ಈಡೇರಿಸಲು 418 ಕೋಟಿ ರೂ. ದ್ವೀಪ ಖರೀದಿಸಿದ ಪತಿ! ವಿಡಿಯೋ ನೋಡಿ ಸುಸ್ತಾದ ನೆಟ್ಟಿಗರು

 
 
 
 
 
 
 
 
 
 
 
 
 
 
 

A post shared by Podcast Pub (@podcast.pub)

click me!