ಮದುವೆಯಾದ್ಮೇಲೆ ಗೊತ್ತಾಯ್ತು ಹೆಂಡತಿಯ ಮಾಜಿ ಬಾಯ್‌ಫ್ರೆಂಡ್‌ ಜತೆ ಲೈಂಗಿಕ ಸಂಬಂಧ

By Suvarna News  |  First Published May 9, 2022, 3:41 PM IST

ಪ್ರತಿಯೊಬ್ಬರ ಜೀವನದಲ್ಲಿ ಮಾಜಿಗಳಿರೋದು ಸಹಜ. ಆದ್ರೆ ಮದುವೆ ನಂತ್ರ ಇದಕ್ಕೆ ಮಹತ್ವ ನೀಡ್ಬಾರದು. ಒಂದ್ವೆಳೆ ಇದು ಪತಿ ಅಥವಾ ಪತ್ನಿಗೆ ಗೊತ್ತಾದ್ರೆ ತೊಂದರೆಯಾಗೋದು ಸಹಜ. 
 


ಮದುವೆ (Marriage) ಗಿಂತ ಮೊದಲು ನಡೆದ ಘಟನೆಗಳನ್ನು ಮರೆತು ಜೀವನ (Life) ನಡೆಸುವುದು ಸೂಕ್ತವಾಗುತ್ತದೆ. ಅನೇಕ ಬಾರಿ ನಾವು ಪ್ರಾಮಾಣಿಕರಾಗಿ ಸಂಗಾತಿ (Partner) ಮುಂದೆ, ಮದುವೆಗೆ ಮುನ್ನ ಏನಾಗಿತ್ತು ಎಂಬುದನ್ನು ಹೇಳ್ತೇವೆ. ಈ ಮಾಜಿಗಳ ವಿಷ್ಯವನ್ನು ಎಲ್ಲ ಸಂಗಾತಿ ಒಂದೇ ಸಮನೆ ಸ್ವೀಕರಿಸುವುದಿಲ್ಲ. ಅನೇಕರು ಕೋಪಗೊಂಡ್ರೆ ಮತ್ತೆ ಕೆಲವರು ಸಂಗಾತಿಯಿಂದ ದೂರವಾಗ್ತಾರೆ. ವ್ಯಕ್ತಿಯೊಬ್ಬನಿಗೆ ತನ್ನ ಪತ್ನಿ ಹಿಂದಿನ ಕಥೆ ತಿಳಿದಿದೆ. ಮಾಜಿ ಪ್ರೇಮಿಯ ಕಥೆ ಕೇಳಿದ ವ್ಯಕ್ತಿ, ಪತ್ನಿಯನ್ನು ಸ್ವೀಕರಿಸ್ಬೇಕಾ? ಬೇಡ್ವಾ ಎಂಬ ಗೊಂದಲದಲ್ಲಿದ್ದಾನೆ. ಅವನ ಕಥೆ ಏನು? ತಜ್ಞರು ಹೇಳೋದೇನು ಎಂಬುದನ್ನು ನಾವಿಂದು ಹೇಳ್ತೇವೆ. ಆತನಿಗೆ ಮದುವೆಯಾಗಿ 6 ತಿಂಗಳು ಕಳೆದಿದೆಯಂತೆ. ಇಬ್ಬರ ಮಧ್ಯೆ ಪ್ರೀತಿ, ಗೌರವವಿತ್ತಂತೆ. ಆದ್ರೆ ಕೆಲ ದಿನಗಳ ಹಿಂದೆ ಪತ್ನಿ ಹೇಳಿದ ವಿಷ್ಯವೊಂದು ಆತನ ಮನಸ್ಸು ಬದಲಿಸಿದೆಯಂತೆ. ಅದಾದ ನಂತ್ರ ಎಲ್ಲವೂ ಮೊದಲಿನಂತೆ ಇಲ್ಲ ಎನ್ನುತ್ತಾನೆ ಆತ. 

ಅಷ್ಟಕ್ಕೂ ಆಕೆ ಹೇಳಿದ್ದೇನು? : ಮದುವೆಗೆ ಮುನ್ನ ಆಕೆಗೆ ವ್ಯಕ್ತಿಯೊಬ್ಬನ ಜೊತೆ ಸಂಬಂಧವಿತ್ತು. ಕಾಲೇಜು ವಿದ್ಯಾರ್ಥಿನಿಯಾಗಿದ್ದಾಗ ಆಕೆ ಸಂಬಂಧ ಹೊಂದಿದ್ದಳಂತೆ. ಆಕೆಯ ಮಾಜಿ ವಿಚಿತ್ರವಾಗಿ ಆಡ್ತಿದ್ದನಂತೆ. ಪ್ರತಿಯೊಂದೂ ನಾನು ಹೇಳಿದಂತೆ ನಡೆಯಬೇಕೆಂದು ಆತ ಬಯಸುತ್ತಿದ್ದನಂತೆ. ಹುಡುಗಿ ಜೊತೆ ಶಾರೀರಿಕ ಸಂಬಂಧ ಬೆಳೆಸಲು ಆತ ಬಯಸಿದ್ದನಂತೆ. ಆತ ಹೇಳಿದಂತೆ ನಡೆಯುವುದು ಆಕೆಗೆ ಅನಿವಾರ್ಯವಾಗಿತ್ತಂತೆ. ನಾನು ಹೇಳಿದಂತೆ ಮಾಡಿಲ್ಲವೆಂದ್ರೆ ಆತ್ಮಹತ್ಯೆ ಮಾಡಿಕೊಳ್ತೇನೆಂದು ಬೆದರಿಸುತ್ತಿದ್ದನಂತೆ. ಮನಸ್ಸಿಲ್ಲದ ಮನಸ್ಸಿನಲ್ಲಿ ಆತನಿಗೆ ಈಕೆ ಸಹಕರಿಸಿದ್ದಳಂತೆ. ಆದ್ರೆ ಇಬ್ಬರ ಸಂಬಂಧ ಕಾಲೇಜು ಮುಗಿಯುತ್ತಿದ್ದಂತೆ ಮುಗಿದಿತ್ತಂತೆ. ಕಾಲೇಜು ಮುಗಿದ ನಂತ್ರ ಆತನ ಜೊತೆ ಸಂಬಂಧ ಮುರಿದುಕೊಂಡೆ. ತಂದೆ – ತಾಯಿ ಹೇಳಿದ ಹುಡುಗನನ್ನು ಮದುವೆಯಾದೆ ಎಂದಿದ್ದಾಳೆ ಪತ್ನಿ.

Tap to resize

Latest Videos

ಪತ್ನಿಯ ಈ ಮಾತು ಕೇಳಿದ ಪತಿ ಗೊಂದಲದಲ್ಲಿದ್ದಾನೆ. ಆಕೆ ಮಾತಿನಲ್ಲಿ ಎಷ್ಟು ಸತ್ಯವಿದೆ ಎಂಬ ಅನುಮಾನ ಆತನಿಗೆ ಕಾಡ್ತಿದೆ. ಆಕೆ ಸಂಪೂರ್ಣವಾಗಿ ಸತ್ಯ ಹೇಳ್ತಿಲ್ಲ. ನನಗೆ ಸರಿಯಾದ ಮಾಹಿತಿ ಬೇಕು ಎನ್ನುವ ಆತ, ಅಲ್ಲಿಯವರೆಗೆ ಆಕೆ ಜೊತೆ ಸಹಜ ಜೀವನ ಸಾಧ್ಯವಿಲ್ಲ ಎನ್ನುತ್ತಿದ್ದಾನೆ.

RELATIONSHIP TIPS: ಹುಡ್ಗೀರು ಡ್ರಾಮಾ ಮಾಡಿದ್ರೆ ಹುಡುಗರಿಗೆ ಇಷ್ಟವಾಗೋದಿಲ್ಲ

ತಜ್ಞರು ಹೇಳೋದೇನು ? : ತಾನು ಪ್ರೀತಿಸುವ ವ್ಯಕ್ತಿ ಇನ್ನೊಂದು ಸಂಬಂಧ ಹೊಂದಿದ್ದರು ಎಂಬುದು ತಿಳಿದ್ರೆ ಸಾಮಾನ್ಯವಾಗಿ ಎಲ್ಲರಿಗೂ ನೋವಾಗುತ್ತದೆ. ಹಾಗೆಯೇ ನಿಮಗೂ ನೋವಾಗಿದೆ. ಆದ್ರೆ ನೀವು ಈ ಸಂದರ್ಭದಲ್ಲಿ ಪತ್ನಿ ಜೊತೆಗಿರುವುದು ಬಹಳ ಮುಖ್ಯ ಎನ್ನುತ್ತಾರೆ ತಜ್ಞರು. ಆಕೆ ಮೊದಲಿನಿಂದಲೂ ಪ್ರೀತಿಯ ಜೀವನ ಕಂಡಿಲ್ಲ. ಆರಂಭದಿಂದಲೂ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾಳೆ. ಧೈರ್ಯ ಮಾಡಿ ನಿನ್ನ ಮುಂದೆ ಎಲ್ಲವನ್ನೂ ಹೇಳಿದ್ದಾಳೆ ಅಂದ್ರೆ ನಿಮ್ಮ ಮೇಲೆ ಆಕೆಗೆ ನಂಬಿಕೆ, ವಿಶ್ವಾಸ,ಪ್ರೀತಿಯಿದೆ ಎಂದರ್ಥ. ನೀವೂ ಆಕೆಯ ಕೈ ಬಿಟ್ಟರೆ ಆಕೆ ಜೀವನ ಮತ್ತಷ್ಟು ಕಷ್ಟವಾಗುತ್ತದೆ. ಸತ್ಯವನ್ನು ತಿಳಿದುಕೊಳ್ಳಬೇಕೆಂಬ ಜಿದ್ದಿಗೆ ಬಿದ್ದರೆ ಮುಂದಿನ ಜೀವನ ಕಷ್ಟವಾಗುತ್ತದೆ. ಆಕೆ ಜೊತೆಗಿದ್ದರೆ, ಆಕೆ ಎಷ್ಟೆಲ್ಲ ಕಷ್ಟ ಅನುಭವಿಸಿದ್ದಳು ಎಂಬುದು ನಿಮಗೆ ಅರ್ಥವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ನನ್ನ ತಮ್ಮನಿಗೂ ನನ್ನ ಗೆಳತಿಗೂ ಲೈಂಗಿಕ ಸಂಬಂಧ, ಸಹಿಸಿಕೊಳ್ಳೋಕೆ ಆಗ್ತಿಲ್ಲ ಅಂತಿದ್ದಾಳೆ ಅಕ್ಕ

ಈ ಮದುವೆ ಸಂಬಂಧದಲ್ಲಿ ಮುಂದುವರೆಯಿರಿ : ಪತ್ನಿ ಹಿಂದಿನ ಜೀವನದ ಸಂಪೂರ್ಣ ಸತ್ಯ ತಿಳಿಯಬೇಕೆನ್ನುವ ಉದ್ದೇಶವಿದ್ದರೆ ಆಕೆ ಜೊತೆ ಮಾತನಾಡಿ. ಆದ್ರೆ ಈ ಮಾತು ಒಂದೇ ಬಾರಿ ಇರಲಿ. ಪದೇ ಪದೇ ಈ ವಿಷ್ಯವನ್ನು ಕೇಳ್ಬೇಡಿ. ಹಾಗೆ ನೀವಿನ್ನು ಮದುವೆಯಾಗಿ 6 ತಿಂಗಳು ಕಳೆದಿದೆ. ಪರಸ್ಪರ ಅರ್ಥ ಮಾಡಿಕೊಳ್ಳಲು ಸಮಯ ಬೇಕಾಗುತ್ತದೆ. ಪತ್ನಿ ಮೇಲೆ ಪ್ರೀತಿಯಿದೆ ಎಂದಾದ್ರೆ ಪತ್ನಿಯ ಹಳೆ ಜೀವನದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದಿದ್ದಾರೆ ತಜ್ಞರು.
 

click me!